Sunday, 26th May 2019

Recent News

7 days ago

ಅಪಘಾತಕ್ಕೆ ಸಿಲುಕಿ ಒದ್ದಾಡಿದ ನವಿಲು- ಯುವಕರಿಂದ ರಕ್ಷಣೆ

ದಾವಣಗೆರೆ: ವಾಹನ ಡಿಕ್ಕಿಯಾಗಿ ನವಿಲು ಗಂಭೀರ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ರಸ್ತೆಯಲ್ಲಿ ನಡೆದಿದೆ. ಗ್ರಾಮದ ಹೊರ ವಲಯದಲ್ಲಿ ನವಿಲು ರಸ್ತೆ ದಾಟುವಾಗ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾಲಿಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಅದೇ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಯುವಕರ ತಂಡ, ನವಿಲು ನರಳಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಯುವಕರೆಲ್ಲರು ಕಾರಿನಿಂದ ಇಳಿದು ನವಿಲಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಗಾಯಗೊಂಡ ನವಿಲನ್ನು ಯುವಕರು ಅರಣ್ಯ […]

1 week ago

ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

ಹೈದರಾಬಾದ್: ಮುಲುಗು ಕ್ಷೇತ್ರದ ಎಂಎಲ್‍ಎ ದನ್ಸಾರಿ ಅನುಸುಯಾ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ವಾರಂಗಲ್ ಜಿಲ್ಲೆಯ ಜೆಡಿವಾಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ತಂದೆ ಅರುಣ್ ಮತ್ತು ತಾಯಿ ವಿಜಯ ಜೊತೆ ಬೈಕಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಶ್ರಾವಂತಿ (3) ಮೃತಪಟ್ಟ ಕಂದಮ್ಮ. ಅಪಘಾತದಲ್ಲಿ ಬೈಕ್ ಸಂಪೂರ್ಣ...

ಲಕ್ಷಾಂತರ ಜನ ಓಡಾಡುವ ರೈಲ್ವೇ ಬ್ರಿಡ್ಜ್ ರೋಡ್‍ನಲ್ಲಿ ಮಹಾ ಬಿರುಕು!

3 weeks ago

ಬೆಂಗಳೂರು: ಚೋಳರಪಾಳ್ಯ ಪಾದರಾಯನಪುರದ ರೈಲ್ವೇ ಸೇತುವೆಯಲ್ಲಿ ದೊಡ್ಡ ಬಿರುಕು ಮೂಡಿದ್ದು, ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ. ದಿನಕ್ಕೆ ಲಕ್ಷಾಂತರ ಜನರು ವಾಹನದ ಮೂಲಕ ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ ಪೈಪ್‍ಲೈನ್, ಹೊಸಹಳ್ಳಿ, ಜೆಜೆಆರ್ ನಗರ, ಕೆಪಿ ಅಗ್ರಹಾರಕ್ಕೆ ಈಗ ಮಾರ್ಗವಾಗಿಯೇ ಸಾಗುತ್ತಿದ್ದಾರೆ. ಹಳೆಯ...

ಚಲಿಸುತ್ತಿರುವಾಗ್ಲೇ ದ್ವಿಚಕ್ರ ವಾಹನದಲ್ಲಿ ಬೆಂಕಿ!

3 weeks ago

ಬೆಂಗಳೂರು: ಚಲಿಸುತ್ತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಕರ್ನಾಟಕ-ತಮಿಳುನಾಡು ಗಡಿ ಸುಲಗಿರಿಯ ಬೈಪಾಸ್ ಬಳಿ ನಡೆದಿದೆ. ಸವಾರ ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸವಾರ ಬೈಕ್ ಬಿಟ್ಟು ಓಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಲೇ ದ್ವಿಚಕ್ರ...

ವಾಹನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್

3 weeks ago

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ಬುಧವಾರದಿಂದಲೇ ನಿಲ್ಲಿಸಲಾಗಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟನ್ನು ವಾಹನಗಳ ಮಾಹಿತಿ ಸಂಗ್ರಹಿಸುವ ಕೇಂದ್ರ ಸಾರಿಗೆ ಇಲಾಖೆಯ ವಾಹನ ಡಾಟಾಬೇಸ್‍ನಲ್ಲಿ ಜೋಡಣೆ ಮಾಡದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ನಿರ್ಧಾರದಿಂದ...

ಧರೆಗುರುಳಿದ ಬೃಹತ್ ಮರ – ಕ್ಷಣಾರ್ಧದಲ್ಲಿ ಮೂವರು ಪಾರು

1 month ago

-ಒಬ್ಬರ ಕೈಯನ್ನೊಬ್ಬರು ಹಿಡಿದು ಮರ ಹತ್ತಿಳಿದ ಪ್ರಯಾಣಿಕರು ಚಿಕ್ಕಮಗಳೂರು: ಮಳೆ-ಗಾಳಿ ಇಲ್ಲದಿದ್ದರೂ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ಒಂದು ಗಂಟೆಗೂ ಹೆಚ್ಚು ಸಮಯ ರಾಜ್ಯ ಹೆದ್ದಾರಿ ಬಂದ್ ಆಗಿದ್ದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ತಲ್ಲಮಕ್ಕಿ ಬಳಿ ನಡೆದಿದೆ. ಬೃಹತ್...

ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣ ಜಪ್ತಿ

1 month ago

ಹಾಸನ: ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಚನ್ನಾಂಬಿಕಾ ಚಿತ್ರಮಂದಿರ ಮುಂಭಾಗ ಹಣವನ್ನು ಜಪ್ತಿ ಮಾಡಲಾಗಿದೆ. ಚನ್ನಾಂಬಿಕಾ ಚಿತ್ರಮಂದಿರ ಸಚಿವ ಹೆಚ್.ಡಿ ರೇವಣ್ಣ ಮನೆಯ ಪಕ್ಕದಲ್ಲಿದ್ದು, ಚುನಾವಣಾಧಿಕಾರಿಗಳ...

ಏರ್‌ಪೋರ್ಟ್‌ಗೆ ಹೋಗುವವರ ಜೇಬಿಗೆ ಕತ್ತರಿ!

2 months ago

ಬೆಂಗಳೂರು: ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ ರಸ್ತೆಯಲ್ಲಿ ಸ್ವಂತ ವಾಹನದಲ್ಲಿ ಓಡಾಡೋರು ಜೇಬಿನಲ್ಲಿ ಸ್ವಲ್ಪ ಜಾಸ್ತಿನೆ ಹಣ ಇಟ್ಟುಕೊಳ್ಳಬೇಕಿದೆ. ಯಾಕೆಂದರೆ ಏಪ್ರಿಲ್ 1 ರಿಂದ ಟೋಲ್ ದರ ಏರಿಕೆಯಾಗಿದ್ದು, ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿದೆ. ಹೌದು. ಟೋಲ್ ದರ ಶೇ.5ರಷ್ಟು ಏರಿಕೆ...