Wednesday, 20th March 2019

Recent News

1 month ago

ಪ್ರೇಮಿಗಳ ದಿನದಂದು ತೃತೀಯ ಲಿಂಗಿಯನ್ನು ಮದುವೆಯಾದ ಪ್ರೇಮಿ

ಇಂದೋರ್: ಮಧ್ಯಪ್ರದೇಶ ಪ್ರೇಮಿಯೊಬ್ಬ ತೃತೀಯ ಲಿಂಗಿಯನ್ನು ಪ್ರೀತಿಸಿ ಪ್ರೇಮಿಗಳ ದಿನದಂದು ಮದುವೆಯಾಗಿದ್ದಾನೆ. ಇಂದೋರ್ ನ ಜುನೇದ್ ಖಾನ್ ತೃತೀಯ ಲಿಂಗಿ ಜಯ ಸಿಂಗ್ ಪರಮಾರ್ ರನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಜುನೇದ್ ಖಾನ್ ಅವರ ಪೋಷಕರು ವಿರೋಧಿಸಿದ್ದರು. ವಿರೋಧದ ನಡುವೆಯೂ ಈ ಜೋಡಿ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 14ರಂದು ಜುನೇದ್ ಹಾಗೂ ಜಯಾ ಸಿಂಗ್ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಬಳಿಕ ಮುಸ್ಲಿಂ ಸಂಪ್ರದಾಯದಂತೆ ನಿಕಾ ಮಾಡಿಕೊಳ್ಳಲು ಈ ಜೋಡಿ ನಿರ್ಧರಿಸಿತ್ತು. […]

1 month ago

ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

ಹೈದರಾಬಾದ್: ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದ ಪಾರ್ಕ್ ನಲ್ಲಿದ್ದ ಯುವಕ-ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ಅಂಗಡಿ, ಪಬ್ ಮತ್ತು ಕಚೇರಿಗಳನ್ನು ಮುಂಚಿತವಾಗಿ ಮುಚ್ಚಿಸಿ ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಹೈದರಾಬಾದಿನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ...

ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

1 month ago

ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಪ್ರೇಮಿಗಳ ದಿನದಂದು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೆ ಮುತ್ತು ನೀಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಿಪಾಶಾ ತಮ್ಮ ಪತಿ ಕರಣ್ ಬರೆದಿರುವ ಪ್ರೇಮ ಪತ್ರವನ್ನು ಓದುತ್ತಿದ್ದಾರೆ. ಬಳಿಕ ಖುಷಿಯಲ್ಲಿ...

ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

1 month ago

ಚೆನ್ನೈ: ಒಂದೇ ಹುಡುಗಿಗೆ ಪ್ರಪೋಸ್ ಮಾಡುವ ವಿಚಾರದಲ್ಲಿ ಜಗಳ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ತಮಿಳುನಾಡಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಕ್ಯಾಂಪಸ್ ನಲ್ಲಿ ನಡೆದಿದೆ. ಪ್ರಮೋದ್ ಕೌಶಿಕ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮನೋಜ್ ಸ್ನೇಹಿತನಿಗೆ...

ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ – ಹಸೆಮಣೆ ಏರಿದ ಐಎಎಸ್ ಅಧಿಕಾರಿಗಳು!

1 month ago

ದಾವಣಗೆರೆ: ಪ್ರೇಮಿಗಳ ದಿನವೇ ದಾವಣಗೆರೆ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ಹಸೆಮಣೆ ಏರಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್ ಅಶ್ವತಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರೇಮ ವಿವಾಹವಾಗಿದ್ದಾರೆ. ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ ಮೊಳಕೆಯೊಡೆದು...

ಅಗ್ನಿ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ಸೂರ್ಯ

1 month ago

ಬೆಂಗಳೂರು: ಕನ್ನಡ ಹೆಸರಾಂತ ಧಾರಾವಾಹಿಗಳಲ್ಲಿ ಒಂದಾದ ಅಗ್ನಿಸಾಕ್ಷಿಯ ಸಿದ್ದಾರ್ಥ್ ಖ್ಯಾತಿಯ ನಟ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ...

ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

1 month ago

ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ...

ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

1 month ago

ತುಮಕೂರು: ಇಂದು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು, ನಿನಗೆ ನಾನು ಎಂದು ಪ್ರೇಮಲೋಕದಲ್ಲಿ ತೇಲುತ್ತಿದ್ದರೆ, ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ. ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್‍ರ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ....