Tuesday, 26th March 2019

Recent News

2 weeks ago

ಫಾಲ್ಸ್‌ನಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ನೀರುಪಾಲು

ಕಾರವಾರ: ಪ್ರವಾಸಕ್ಕೆಂದು ತೆರಳಿದ್ದ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಪಾಲ್ಸ್ ನಲ್ಲಿ ನಡೆದಿದೆ. ಶಿರಸಿ ಮೂಲದ ಮುರಳಿ, ಸಿದ್ದಾಪುರದ ಅಭಿಷೇಕ್ ನಾಯ್ಕ, ಕೇರಳ ಮೂಲದ ಸಾಯಿ ಮೃತ ವೈದ್ಯಕೀಯ ವಿದ್ಯಾರ್ಥಿಗಳು. ಸಾವನ್ನಪ್ಪಿದ ವಿದ್ಯಾರ್ಥಿಗಳು ಸಿದ್ದಾಪುರ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ಇಂದು ರಜೆ ಇದ್ದಿದ್ದರಿಂದ ಮುರಳಿ, ಅಭಿಷೇಕ್ ಹಾಗೂ ಸಾಯಿ ಪ್ರವಾಸಕ್ಕೆ ಪ್ಲಾನ್ ಮಾಡಿಕೊಂಡಿದ್ದರು. ಹೀಗಾಗಿ ಕಾಲೇಜ್‍ನಿಂದ ಸುಮಾರು 35 ಕಿ.ಮೀ. ದೂರದ ಬುರುಡೆ ಪಾಲ್ಸ್ […]

3 weeks ago

ಎಸ್‍ಡಿಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಗುತ್ತಿಗೆದಾರನಿಗೆ ಬಿತ್ತು ಗೂಸಾ

ಕಾರವಾರ: ವಿಶ್ವ ಮಹಿಳಾ ದಿನದಂದೇ ಸರ್ಕಾರಿ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಹೋಗಿ ಗುತ್ತಿಗೆದಾರನೊಬ್ಬ ಗೂಸಾ ತಿಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ. ಮುಂಡಗೋಡದ ನಿವಾಸಿ ಪ್ರಕಾಶ್ ಅಜ್ಜಮ್ಮನವರ್ ಲೈಂಗಿಕ ಕಿರುಕುಳ ನೀಡಲು ಹೋಗಿ ಗೂಸಾ ತಿಂದ ಗುತ್ತಿಗೆದಾರ. ಮುಂಡುಗೋಡದ ತಹಶೀಲ್ದಾರ್ ಕಚೇರಿಯ ಬಳಿಯೇ ಮಹಿಳೆಯ ಸಂಬಂಧಿಕರು, ಸ್ಥಳೀಯರು ಸೇರಿ ಪ್ರಕಾಶ್‍ಗೆ ಹಿಗ್ಗಾಮುಗ್ಗಾ...

ಪಿಎಂ ಜೊತೆ ಪರೀಕ್ಷೆಯ ಚರ್ಚೆ ನಡೆಸಲಿದ್ದಾಳೆ ಉತ್ತರ ಕನ್ನಡದ ವಿದ್ಯಾರ್ಥಿನಿ

2 months ago

ಕಾರವಾರ: ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜನವರಿ 29ರಂದು ನಡೆಯುವ ‘ಪರೀಕ್ಷಾ ಕಿ ಬಾತ್ ಪಿಎಂ ಕೆ ಸಾಥ್’ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಪೂರ್ವಿ ಸುಂದರ್ ಶಾನಭಾಗ್ ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ....

ಭಾರತ್ ಬಂದ್ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವು

3 months ago

ಕಾರವಾರ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ. ಮುಂಡಗೋಡು ತಾಲೂಕಿನ ಶಿಡ್ಲಗುಂಡಿ ಗ್ರಾಮದ ಶಾಂತಾ ಬಸವಣ್ಣೆಪ್ಪ ಚಕ್ರಸಾಲಿ (57) ಸಾವನ್ನಪ್ಪಿದ ಅಂಗನವಾಡಿ...

10 ಕುಟುಂಬಗಳಿಗೆ ಸಮುದಾಯದಿಂದ ಬಹಿಷ್ಕಾರ ಹಾಕಿ ಕಿರುಕುಳ

3 months ago

ಕಾರವಾರ: ತಮ್ಮ ಧರ್ಮದಲ್ಲಿಯೇ ಬೇರೊಬ್ಬ ಗುರುಗಳನ್ನು ಅನುಸರಿಸಿದ್ದಕ್ಕೆ 10 ಕುಟುಂಬಗಳಿಗೆ ಜಮಾತ್‍ನಿಂದ ಬಹಿಷ್ಕಾರ ಹಾಕಿ ಕಿರುಕುಳ ನೀಡುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಇದು ಕಾರವಾರದ ಸದಾಶಿವಗಡ ಎಂಬ ಊರು. ಇಲ್ಲಿನ ಸುಮಾರು 10 ಕುಟುಂಬಗಳು ಮುಸ್ಲಿಂ ಧರ್ಮದ...

ನೀರಿನಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳ ದಾರುಣ ಸಾವು

3 months ago

ಸಾಂದರ್ಭಿಕ ಚಿತ್ರ ಕಾರವಾರ: ನದಿಯಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟು, ತಾಯಿ ಅಸ್ವಸ್ಥವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ನಳ್ಳಿ ಬಳಿ ನಡೆದಿದೆ. ತಂದೆ ಧೂಳು ಗಾವಡೆ (48) ಮಕ್ಕಳಾದ ಕೃಷ್ಣಾ ಧೂಳು ಗಾವಡೆ (6), ಗಾಯಿತ್ರಿ ಧೂಳು...

ಅಕ್ರಮವಾಗಿ 12 ಗೋವುಗಳ ಸಾಗಾಣಿಕೆ – ಇಬ್ಬರ ಬಂಧನ

3 months ago

ಕಾರವಾರ: ಕಂಟೈನರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12 ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಸಾದಿಕ್ ಜಾಫರ್ ಹಾಗೂ ಈರಪ್ಪ ಬಂಧಿತ ಆರೋಪಿಗಳು. ಕಂಟೈನರ್ ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು....

ಕಾಳಿನದಿಯಲ್ಲಿ ಮೊಸಳೆಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ಅಯ್ಯಪ್ಪ ಮಾಲಾಧಾರಿ

4 months ago

ಸಾಂದರ್ಭಿಕ ಚಿತ್ರ ಕಾರವಾರ: ಕಾಳಿನದಿಯಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ಮೊಸಳೆಯೊಂದಿಗೆ ಹೋರಾಡಿ ಬದುಕಿ ಬಂದಿದ್ದಾರೆ. ದಾಂಡೇಲಿಯ ನಿರ್ಮಲ ನಗರ ನಿವಾಸಿಯಾಗಿರುವ ನಾಗೇಶ್ ಈಶ್ವರ ಬಳ್ಳಾರಿ (43) ಅಯ್ಯಪ್ಪ ಮಾಲಾಧಾರಣೆಗಾಗಿ ಕಾಳಿ ನದಿ ನೀರಿನಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಸ್ನಾನ ಮಾಡುವಾಗ ಏಕಾಏಕಿ ಮೊಸಳೆಯನ್ನು...