Tag: UT Khader

  • ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

    ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

    – ಸ್ಪೀಕರ್ ಮಾತಿಗೆ ಆರಗ ಜ್ಞಾನೇಂದ್ರ ತಮಾಷೆ

    ಬೆಂಗಳೂರು: ವಿಧಾನಸೌಧದಲ್ಲೇ ಶಾಸಕರಿಗೆ (Vidhanasoudha MLA) ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಸ್ಪೀಕರ್ ಖಾದರ್ (UT Khader) ಅವರು ಇಂದು ಸದನದಲ್ಲಿ ಘೋಷಣೆ ಮಾಡಿದ್ದಾರೆ.

    ಈಗಾಗಲೇ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿರುವ ಸ್ಪೀಕರ್, ಇದೀಗ ತಿಂಡಿ ಜೊತೆಗೆ ಊಟವೂ ಫ್ರೀ ಎಂದು ಹೇಳಿದ್ದಾರೆ. ಶಾಸಕರಿಗೆ ಮಧ್ಯಾಹ್ನದ ಊಟಕ್ಕೂ ವಿಧಾನಸೌಧದಲ್ಲೇ ವ್ಯವಸ್ಥೆ ಮಾಡಲಾಗುವುದು. ನೀವು ಎಲ್ಲಿ ಹೋದರೂ ಇಲ್ಲಿಗಿಂತ ಬೆಸ್ಟ್‌ ಊಟ ನಿಮಗೆ ಸಿಗಲ್ಲ ಎಂದು ಖಾದರ್ ಹೇಳಿದ್ದಾರೆ. ಸ್ಪೀಕರ್ ಮಾತಿಗೆ ಮಾಜಿ ಸಚಿವ ಆರಗ ಜ್ಞಾನೆಂದ್ರ (Araga Jnanendra) ತಮಾಷೆ ಮಾಡಿದ್ದಾರೆ. ಜೊತೆಗೆ ಹಾಸಿಗೆ, ದಿಂಬು ಕೊಟ್ಬಿಡಿ, ಇಲ್ಲೇ ಸುಖವಾಗಿ ನಿದ್ದೇನೂ ಮಾಡಿಬಿಡ್ತೀವಿ ಎಂದು ಹೇಳುವ ಮೂಲಕ ಖಾದರ್ ಕಾಲೆಳೆದಿದ್ದಾರೆ.

    ಊಟದ ವ್ಯವಸ್ಥೆ ಯಾಕೆ?: ಶಾಸಕರು ಸಮಯಕ್ಕೆ ಸರಿಯಾಗಿ ಬರದೇ ಮಧ್ಯಾಹ್ನದ ಕಲಾಪ ಆರಂಭ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಈ ಘೋಷಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್

    ಈ ಹಿಂದೆಯೂ ಶಾಸಕರು ಲೇಟಾಗಿ ಬಂದಿದ್ದಾಗ ಸ್ಪೀಕರ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶಾಸಕರು ಬಾಲಿಶವಾದ ಉತ್ತರಗಳನ್ನು ನೀಡಿದ್ದರು. ಒಬ್ಬರು ಶರ್ಟ್ ಚೇಂಜ್ ಮಾಡಿ ಬರುವಾಗ ತಡವಾಯಿತು. ಮೀಟಿಂಗ್ ರೂಂನಲ್ಲಿ ಕಾಯ್ತಾ ಇದ್ದೆವು, ಹೀಗಾಗಿ ನಮಗೆ ಗೊತ್ತಾಗಿಲ್ಲ ಅಂತೆಲ್ಲ ಹೇಳಿದ್ದರು. ಹೀಗೆ ಶಾಸಕರು ಕಲಾಪಕ್ಕೆ ತಡವಾಗಿ ಬರುತ್ತಿರುವುದರಿಂದ ಬೇಸತ್ತು ಸ್ಪೀಕರ್ ಈ ನಿರ್ಧಾರಕ್ಕೆ ಬಂದಿದ್ದಾರೆ.

  • ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

    ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

    ಮಂಗಳೂರು: ಇಷ್ಟಾರ್ಥಸಿದ್ಧಿಗಾಗಿ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ (UT Khader) ಹರಕೆ ಕೋಲ ನೆರವೇರಿಸಿದ್ದಾರೆ.

    UT Khader 4

    ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲ (Daiva Kola) ನೆರವೇರಿಸಿದ್ದಾರೆ. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    UT Khader 2

    ಸ್ಥಳೀಯ ಮುಖಂಡರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದ ಖಾದರ್, ಸಂಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ-ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ.

    ಯು.ಟಿ ಖಾದರ್ ಅವರೊಂದಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜಾವ ಮತ್ತಿತ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು 

  • ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್

    ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್

    ಉಡುಪಿ: ಕೃಷ್ಣ ಮಠ (Krishna Mutt) ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡ ಕೇಂದ್ರ. ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ ಎಂದು ವಿಧಾನಸಭೆ ಸಭಾಪತಿ ಯು.ಟಿ ಖಾದರ್ (UT Khader) ಹೇಳಿದರು.

    Udupi Paryayotsava 1

    ಉಡುಪಿ (Udupi) ಕೃಷ್ಣ ಮಠದ ಪುತ್ತಿಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳಿಗೆ ಸಮಾಜವನ್ನು ತಿದ್ದುವ ಶಕ್ತಿಯಿದೆ. ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು. ಪುತ್ತಿಗೆ ಶ್ರೀಗಳು ಧಾರ್ಮಿಕವಾಗಿ ದೇಶ-ವಿದೇಶದಲ್ಲಿ ತೊಡಗಿಸಿಕೊಂಡವರು ಎಂದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ನೀಡಿದ್ದ SC ಒಳಮೀಸಲಾತಿಯನ್ನ ಪುನರ್ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್

    ರಾಜ್ಯ, ದೇಶದಲ್ಲಿ ಸಾಮರಸ್ಯ ಬೆಳೆಯಲು ಮಠಗಳು ದಾರಿದೀಪವಾಗಬೇಕು. ಹಿಂದಿನಿಂದಲೂ ನಾನು ಕೃಷ್ಣ ಮಠಕ್ಕೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಠ ಕೇವಲ ಧಾರ್ಮಿಕವಾಗಿ ಕಾರ್ಯಾಚರಿಸದೆ, ಶೈಕ್ಷಣಿಕ, ಸಾಮಾಜಿಕವಾಗಿ ಕೂಡಾ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆ

  • ಜಮೀರ್ ಒಬ್ಬ ಮತಾಂಧ, ಮುಸ್ಲಿಂ ಭೂತ ಹಿಡಿದಿದೆ: ಮುತಾಲಿಕ್ ಕಿಡಿ

    ಜಮೀರ್ ಒಬ್ಬ ಮತಾಂಧ, ಮುಸ್ಲಿಂ ಭೂತ ಹಿಡಿದಿದೆ: ಮುತಾಲಿಕ್ ಕಿಡಿ

    ಚಿಕ್ಕೋಡಿ: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ (Zameer Ahmed) ಒಬ್ಬ ಮತಾಂಧ ಎಂದು ಶ್ರೀರಾಮ ಸೇನಾ (Sri Ram Sena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.

    ಸಭಾಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ನೇಮಕ ಮಾಡಿದ್ದಕ್ಕೆ ಬಿಜೆಪಿ (BJP) ಶಾಸಕರು ಕೈ ಮುಗಿಯುತ್ತಾರೆ ಎನ್ನುವ ಜಮೀರ್ ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಬೇಕು. ಜಮೀರ್ ಅಹ್ಮದ್ ಅವರ ಹೇಳಿಕೆ ನಾನು ವಿರೋಧಿಸುತ್ತೇನೆ. ಸಭಾಧ್ಯಕ್ಷ ಸ್ಥಾನ ಅತ್ಯಂತ ಪವಿತ್ರವಾದದ್ದು. ಆ ಸ್ಥಾನದಲ್ಲಿ ಕೂತವರು ವ್ಯಕ್ತಿಯಲ್ಲ, ಅದೊಂದು ಶಕ್ತಿ. ಜಾತಿ, ಪಕ್ಷ, ಧರ್ಮ, ಭಾಷೆ ಬೇಧವಿಲ್ಲದೇ ಕುಳಿತಿರುವ ವ್ಯಕ್ತಿಯನ್ನು ಮುಸ್ಲಿಂ ಎಂದು ಗುರುತಿಸಿದ್ದು ಸಂವಿಧಾನ ವಿರೋಧಿ ಎಂದು ಹರಿಹಾಯ್ದರು. ಇದನ್ನೂ ಓದಿ: ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು- ನೆನಪು ಮೆಲುಕು ಹಾಕಿಕೊಂಡ ಸಿಎಂ

    ಜಮೀರ್ ಹೇಳಿಕೆ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗೆ ಹಾಕಬೇಕು. ಮತಾಂಧತೆಯ ಪ್ರವೃತ್ತಿ ಅತಿಯಾಗಿ ಜಮೀರ್ ಅಹ್ಮದ್‌ಗೆ ಮುಸ್ಲಿಂ ಭೂತ ಹಿಡಿದಿದೆ. ಈ ಭೂತ ಸರಿಯಲ್ಲ. ಭಾರತದಲ್ಲಿ ಈ ರೀತಿ ಹೇಳುವುದು ಸರಿಯಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಹೇಳಲಿ. ಸಂವಿಧಾನಬದ್ಧ ಸಭಾಧ್ಯಕ್ಷ ಪವಿತ್ರ ಸ್ಥಾನಕ್ಕೆ ಅಪಚಾರ ಮಾಡಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಬಿಜೆಪಿ ಅವರು ಸ್ವಲ್ಪ ಬಾಯಿ ತೆಗೆದು ವ್ಯಕ್ತಿ ವಿರುದ್ಧ ಹೋರಾಟ ನಡೆಸಲಿ. ಜಮೀರ್ ಅಹ್ಮದ್ ಅವರ ಶಾಸಕ ಸ್ಥಾನ ರದ್ದಾಗುವವರೆಗೂ ಬಿಜೆಪಿ ಅವರು ಹೋರಾಟ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?: ಸಿಎಂ ಕಿಡಿ

  • ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ

    ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ

    ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ (U.T Khader) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ (Zameer Ahmed Khan) ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ಸಮಾಜಕ್ಕೆ ಕೊಟ್ಟಿರುವ ಗೌರವದ ಬಗ್ಗೆ ಮಾತನಾಡಿದ್ದೇನೆ: ಜಮೀರ್

    ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡೋದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರು ಸಹ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದು ಹೇಳಿದರು.

    ಜಮೀರ್ ಹೇಳಿದ್ದೇನು..?: ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮುಸ್ಲಿಂ ಸ್ಪೀಕರ್ (Muslim Speaker) ಮುಂದೆ ಬಿಜೆಪಿಯವರು ನಮಸ್ಕಾರ ಸಾಬ್ ಎಂದು ಕೈ ಮುಗಿಯುತ್ತಾರೆ ಎಂದು ಜಮೀರ್ ಅಹಮದ್ ಹೇಳಿದ್ದರು.

  • ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

    ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

    ಬೆಂಗಳೂರು: ತೆಲಂಗಾಣದಲ್ಲಿ (Telangana) ಚುನಾವಣಾ ಭಾಷಣದ ವೇಳೆ ಸಚಿವ ಜಮೀರ್ ಅಹಮದ್ (Zameer Ahmed Khan) ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮುಸ್ಲಿಂ ಸ್ಪೀಕರ್ ಯುಟಿ ಖಾದರ್‌ಗೆ (UT Khader) ಈಗ ಬಿಜೆಪಿಯವರೂ (BJP) ನಮಸ್ಕರಿಸುತ್ತಾರೆನ್ನುವ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.

    ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿ ಭಾಷಣದ ವೇಳೆ ಹೇಳಿಕೆ ನೀಡಿದ ಜಮೀರ್, ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ ಎಂದು ಹೇಳಿದರು.

    Zameer Ahmed Khan

    ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯುಟಿ ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಕಳೆದ ಕೆಲ ದಿನಗಳ ಹಿಂದಷ್ಟೇ ಜಮೀರ್ ರಾಜಸ್ಥಾನದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಕಾಂಗ್ರೆಸ್ ಮುಸ್ಲಿಂ ಮತಗಳಿಂದಲೇ ಅಧಿಕಾರಕ್ಕೆ ಬಂದಿದೆ ಎಂದಿದ್ದರು. ಈ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಕರ್ನಾಟಕದ ಮಸೀದಿಗಳಲ್ಲಿ ನಾವು ಸಭೆ ಮಾಡಿ ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದ್ದೆವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜಸ್ಥಾನದಲ್ಲೂ ಇದೇ ಸೂತ್ರ ಅನುಸರಿಸಿ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

  • ವಿಧಾನಸಭೆಯೊಳಗೆ ಮಾತ್ರ ಗಲಾಟೆ, ಹೊರಗಡೆ ಎಲ್ಲರೂ ಸ್ನೇಹಿತರೇ ಆಗಿರ್ತಾರೆ: ಯು.ಟಿ. ಖಾದರ್

    ವಿಧಾನಸಭೆಯೊಳಗೆ ಮಾತ್ರ ಗಲಾಟೆ, ಹೊರಗಡೆ ಎಲ್ಲರೂ ಸ್ನೇಹಿತರೇ ಆಗಿರ್ತಾರೆ: ಯು.ಟಿ. ಖಾದರ್

    ಮಂಗಳೂರು: ವಿಧಾನಸಭೆಯಲ್ಲಿ (Vidhanasabhe) ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತೆ. ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ (U.T Khader) ಹೇಳಿದರು.

    ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಖಾದರ್ ಮಾತಾಡಿದರು.

    ಬಂಟರ ಯಾನೆ ನಾಡವರ ಮಾತೃಸಂಘದ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಬಂಟರು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ ನಡೆಯುವ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ. ಈ ಮೂಲಕ ಎಲ್ಲಾ ಜಾತಿ ಧರ್ಮಗಳ ಜನರ ಮಧ್ಯೆ ಪ್ರೀತಿ, ಸೋದರತೆ ಬೆಳೆದು ಸ್ವಸ್ಥ ಸಾಮರಸ್ಯದ ಸಮಾಜ ನಿರ್ಮಾಣವಾಗಲಿ. ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರ್ಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ಇದನ್ನೂ ಓದಿ: ಈಗಾಗ್ಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ: ಹಾಲಶ್ರೀ ಹೈಡ್ರಾಮಾ

    ಬಂಟ್ಸ್ ಹಾಸ್ಟೆಲ್ ನಲ್ಲಿ ಕೇವಲ ಬಂಟರು ಮಾತ್ರವಲ್ಲದೆ ಹಿಂದೂ-ಮುಸ್ಲಿಂ-ಕ್ರೈಸ್ತರು ಎಲ್ಲರೂ ವಾಸ್ತವ್ಯವಿದ್ದು ಕಲಿಯುತ್ತಿದ್ದಾರೆ. ಇದು ಇಡೀ ಸಮಾಜಕ್ಕೆ ಮಾದರಿ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಬಂಟ ಸಮಾಜಕ್ಕೆ ಇದ್ದು ಆ ಜವಾಬ್ದಾರಿಯನ್ನು ಬಂಟ ಸಮುದಾಯದ ಹಿರಿಯರು ತೆಗೆದುಕೊಳ್ಳಬೇಕು. ಗಣೇಶೋತ್ಸವ ಅನ್ನುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲಿ, ಗಣೇಶನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಶುಭ ಹಾರೈಸಿದರು.

    ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ.ನಾಗರಾಜ ಶೆಟ್ಟಿ, ಎಮ್ ಸಂಜೀವ ಶೆಟ್ಟಿ ಕಾಸರಗೋಡು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೋಲ್‌ನಿಂದ ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ: ಯುಟಿ ಖಾದರ್‌

    ಟ್ರೋಲ್‌ನಿಂದ ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ: ಯುಟಿ ಖಾದರ್‌

    ಬೆಂಗಳೂರು: ಟ್ರೋಲ್‌ನಿಂದ (Troll) ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ ಎಂದು ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ (UT Khader) ಹೇಳಿದ್ದಾರೆ.

    ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನನ್ನ ಕನ್ನಡದ (Kannada) ಬಗ್ಗೆ ಟ್ರೋಲ್ ಮಾಡುವವರು ಮಾಡಲಿ. ಸಹಜವಾಗಿ ಕರಾವಳಿ ಪ್ರದೇಶದವರಾದ ನಾವು ತುಳು (Tulu) ಭಾಷೆ ಮಾತನಾಡುವವರು ಸಿಕ್ಕಿದಾಗ ತುಳುವಿನಲ್ಲೇ ಮಾತಾಡುತ್ತೇವೆ. ಅವರ ಟ್ರೋಲ್‌ನಿಂದಾಗಿ ನನ್ನ ಕನ್ನಡ ಇನ್ನಷ್ಟು ಚೆನ್ನಾಗಿ ಸ್ಪಷ್ಟವಾಗಲಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮ ಬೌಲರ್‌ಗಳೇ – ರೋಹಿತ್‌ ಶರ್ಮಾ

     

    ಶಾಸಕರನ್ನು ಅಮಾನತು ಮಾಡಿದ್ದು ಸರಿಯೇ ಎಂದು ಕೇಳಲಾದ ಪ್ರಶ್ನೆಗೆ, ಸಂವಿಧಾನ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಸದನ ಮುಗಿಯುವ‌ ತನಕ ಶಾಸಕರ ಅಮಾನತು ಇತ್ತು. ಈಗ ಸದನ ಮುಗಿದಿದೆ. ಮತ್ತೆ ಚರ್ಚೆ ಬೇಡ ಎಂದರು.

    ಶಾಸಕರ ತರಬೇತಿ ಶಿಬಿರಕ್ಕೆ ರವಿಶಂಕರ್ ಗುರೂಜಿಗೆ (Ravi Shankar Guruji) ಆಹ್ವಾನ‌ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಡವೂ ಅಲ್ಲ, ಬಲವೂ ಅಲ್ಲ‌. ಕಷ್ಟದಲ್ಲಿರುವ ಎಡ, ಬಲ ಪರ ಇದ್ದೇನೆ. ಕಷ್ಟದಲ್ಲಿರುವ ಇಬ್ಬರನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಂದು ನೂತನ ಶಾಸಕರಿಗೆ ಯಾರಿಗೂ ವಿರೋಧ ಇರಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮಾಡಿದರು. ಹೊರಗೆ ಕೆಲವರು ವಿರೋಧ ಮಾಡಿದರು. ಈಗ ಶಿಬಿರವೂ ಮುಗಿದು ಹೋಯ್ತಲ್ಲ ಬಿಡಿ ಎಂದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ವಿರುದ್ಧ ಬಿಜೆಪಿ ಜಿಲ್ಲಾವಾರು ಪ್ರತಿಭಟನೆ – ಸರ್ಕಾರದ ಧೋರಣೆಗೆ ತೀವ್ರ ಖಂಡನೆ

    ಕಾಂಗ್ರೆಸ್ ವಿರುದ್ಧ ಬಿಜೆಪಿ ಜಿಲ್ಲಾವಾರು ಪ್ರತಿಭಟನೆ – ಸರ್ಕಾರದ ಧೋರಣೆಗೆ ತೀವ್ರ ಖಂಡನೆ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಇಂದು (ಶನಿವಾರ) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಬೃಹತ್ ಪ್ರತಿಭಟನೆ (Protest) ಹಮ್ಮಿಕೊಂಡಿತ್ತು. ಬೆಂಗಳೂರಿನಲ್ಲೂ (Bengaluru) ಫ್ರೀಡಂಪಾರ್ಕ್‌ನಲ್ಲಿ (Freedom Park) ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಕೂಡಾ ಬಿಜೆಪಿ ತನ್ನ ಹೋರಾಟ ಮುಂದುವರೆಸಿತ್ತು. ಅಧಿವೇಶನದಲ್ಲಿ (Session) ಶಾಸಕರು ಆರಂಭಿಸಿದ್ದ ಪ್ರತಿಭಟನೆ ಇಂದು ಜಿಲ್ಲಾ ಮಟ್ಟದಲ್ಲೂ ಪ್ರತಿಧ್ವನಿಸಿತು. ಬೆಂಗಳೂರಿನಲ್ಲೂ ಉತ್ತರ ಮತ್ತು ಕೇಂದ್ರ ಜಿಲ್ಲೆಗಳ ಬಿಜೆಪಿ ಘಟಕಗಳ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನಾಕಾರರು ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿದರು. ಇದನ್ನೂ ಓದಿ: ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ – ಬೆಲೆ ಏರಿಕೆ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಶಿಷ್ಟಾಚಾರ ಉಲ್ಲಂಘನೆ, ಶಾಸಕರ ಅಮಾನತು ಕ್ರಮ, ಅಸಮರ್ಪಕ ಕಾನೂನು ಸುವ್ಯವಸ್ಥೆ, ವರ್ಗಾವಣೆ ದಂಧೆಗಳ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದರು. ಸ್ಪೀಕರ್ ವಿರುದ್ಧ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್ (C.N.Ashwath Narayan), ಖಾದರ್ (U.T.Khader) ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸದಸ್ಯರ ಹಕ್ಕಗಳನ್ನು ದಮನ ಮಾಡಿ, ಶಾಸಕರನ್ನು ಅಮಾನತು ಮಾಡಿ ತಮ್ಮ ಮೊದಲ ಅಧಿವೇಶನದಲ್ಲಿ ಸದನದ ಗೌರವ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆ.1 ರಿಂದ ಹಾಲಿನ ದರ 3 ರೂ. ಹೆಚ್ಚಳ- ಯಾವುದಕ್ಕೆ ಎಷ್ಟು?

    ಅವರು ನಮ್ಮ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನವರು ವಚನ ಭ್ರಷ್ಟರು. ರಾಜ್ಯದ ಜನತೆಗೆ ಮೋಸ ಮಾಡಿದವರು ಕಾಂಗ್ರೆಸ್‌ನವರು. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಕೊಲೆ ಪ್ರಕರಣದಲ್ಲಿ ಸುನೀಲ್ ಬೋಸ್ ಬೆಂಬಲಿಗರ ಕೈವಾಡ ಇದೆ. ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು, ಇಳಿಸೋದು ಬಹಳ ಚೆನ್ನಾಗಿ ಗೊತ್ತಿದೆ: ಹರಿಪ್ರಸಾದ್ ಪರೋಕ್ಷ ವಾಗ್ದಾಳಿ

    ಮತ್ತೊಬ್ಬ ಎಮ್‌ಎಲ್‌ಸಿ ಛಲವಾದಿ ನಾರಾಯಣಸ್ವಾಮಿ (Chalavadi Nrayanaswami) ಮಾತನಾಡಿ, ಸ್ಪೀಕರ್ ಖಾದರ್ ಒಬ್ಬ ಅವಿವೇಕಿ. ಅವರ ಅವಿವೇಕತನದಿಂದ ಸದನದಲ್ಲಿ ಗಲಾಟೆ ಆಯಿತು. ಇದೊಂದು ಬದನೇಕಾಯಿ ಸರ್ಕಾರ. ಸ್ಪೀಕರ್ ಹುದ್ದೆಯಲ್ಲಿ ಖಾದರ್ ಅವರನ್ನು ಕೂರಿಸಿ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಂದೂ, ಸಿದ್ದರಾಮಯ್ಯದೂ ಫೋಟೋ ಜೊತೆಲೇ ಬರೋ ಹಾಗೆ ಮಾಡ್ರಯ್ಯ: ಡಿಸಿಎಂ

    ಎಮ್‌ಎಲ್‌ಸಿ ರವಿಕುಮಾರ್ (Ravikumar) ಮಾತನಾಡಿ, ಸಿದ್ದರಾಮಯ್ಯರಿಗೆ (Siddaramaiah) ನಿಜವಾಗಿಯೂ ದಲಿತರ ಮೇಲೆ ಪ್ರೀತಿ, ಪ್ರೇಮ ಇದ್ರೆ ಜಿ.ಪರಮೇಶ್ವರ್ (G.Parameshwara) ಅಥವಾ ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸಿಎಂ ಪೋಸ್ಟ್ ಬಿಟ್ಟುಕೊಡಲಿ ನೋಡೋಣ ಎಂದು ತಿವಿದರು. ಪ್ರತಿಭಟನೆಯಲ್ಲಿ ಶಾಸಕ ಸಿ.ಕೆ ರಾಮಮೂರ್ತಿ, ಪ್ರತಾಪ್ ಸಿಂಹ ನಾಯಕ್, ಕೇಶವ ಪ್ರಸಾದ್ ಸೇರಿದಂತೆ ಹಲವು ನಾಯಕರು, ಮಾಜಿ ಕಾರ್ಪೋರೇಟರ್‌ಗಳು ಭಾಗವಹಿಸಿದ್ದರು. ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸೂದೆಗಳ ಪ್ರತಿ ಹರಿದು ಡೆಪ್ಯುಟಿ ಸ್ಪೀಕರ್‌ನತ್ತ ತೂರಿದ ವಿಪಕ್ಷಗಳು – ಬಿಜೆಪಿಯ 10 ಶಾಸಕರು ಅಮಾನತು

    ಮಸೂದೆಗಳ ಪ್ರತಿ ಹರಿದು ಡೆಪ್ಯುಟಿ ಸ್ಪೀಕರ್‌ನತ್ತ ತೂರಿದ ವಿಪಕ್ಷಗಳು – ಬಿಜೆಪಿಯ 10 ಶಾಸಕರು ಅಮಾನತು

    ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆ ಸದನದ ಸ್ಪೀಕರ್ ಯುಟಿ ಖಾದರ್ (UT Khader) ಅವರು 318 ನಿಯಮದ ಹಕ್ಕನ್ನು ಚಲಾಯಿಸಿ 10 ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.

    ut khader 1

    ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಅರವಿಂದ ಬೆಲ್ಲದ್, ಸುನಿಲ್ ಕುಮಾರ್, ಉಮಾನಾಥ್ ಕೋಟ್ಯನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಸೇರಿ 10 ಸದಸ್ಯರನ್ನು ಸ್ಪೀಕರ್ ಖಾದರ್ ಅಮಾನತು ಮಾಡಿದ್ದಾರೆ.

    Session Rudrappa lamani

    ವಿಧಾನಸಭೆಯಲ್ಲಿ ಬಿಜೆಪಿ (BJP) ಸದಸ್ಯರಿಂದ ಭಾರೀ ಹೈಡ್ರಾಮಾ ನಡೆದಿದ್ದು, ಸ್ಪೀಕರ್ ಪೀಠವನ್ನು ಅಲಂಕರಿಸಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa lamani) ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಪ್ರಸಂಗ ನಡೆಯಿತು. ಈ ಹಿನ್ನೆಲೆ ಗದ್ದಲ ಸೃಷ್ಟಿಸಿದ ಶಾಸಕರನ್ನು ಸಸ್ಪೆಂಡ್ ಮಾಡುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು. ಇದನ್ನೂ ಓದಿ: ಸದನದಲ್ಲಿ ‘ಐಎಎಸ್’ ಕೋಲಾಹಲ – ಸ್ಪೀಕರ್ ಮೇಲೆ ಹರಿದ ಹಾಳೆ ಎಸೆದ ಬಿಜೆಪಿ, ಜೆಡಿಎಸ್ ಸದಸ್ಯರು

    ಇದೀಗ ಸದನದಲ್ಲಿ ಭಾರೀ ಗದ್ದಲ ನಡೆದ ಹಿನ್ನೆಲೆ ಬಿಜೆಪಿಯ 10 ಸದಸ್ಯರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಸಸ್ಪೆಂಡ್‌ ಆದ ಸದಸ್ಯರನ್ನು ಮಾರ್ಷಲ್‌ಗಳು ವಿಧಾನಸಭೆಯಿಂದ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]