Thursday, 17th October 2019

Recent News

2 years ago

ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

ಉಡುಪಿ: ಕಟಪಾಡಿಯಲ್ಲಿ ನಡೆದ ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಬೈಕ್‍ನ ಹಿಂಬದಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ 11 ವರ್ಷದ ಸುಶ್ಮಿತಾ ಮೃತಪಟ್ಟ ಬಾಲಕಿ. ಕಟೀಲಿನಿಂದ ತನ್ನ ದೊಡ್ಡಪ್ಪನ ಜೊತೆ ಬೈಕಿನಲ್ಲಿ ಉಡುಪಿಗೆ ಬರುತ್ತಿದ್ದಾಗ ಮುಂಭಾಗದಲಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಲಾರಿಯ ಬಂಪರ್ ಬೈಕಿಗೆ ಸಿಲುಕಿಕೊಂಡು ಬೈಕ್ ರಸ್ತೆಗೆ ಬಿದ್ದಿದೆ. ಮುಂಭಾಗದ ಲಾರಿಯ ಟಯರ್ […]

2 years ago

ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮೇರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ, ಬಣ್ಣ ಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು. ಮಾತೆ ಮೇರಿಯ ಜನ್ಮದಿನದ ಶುಭದಿನವನ್ನು ಕರಾವಳಿಯಲ್ಲಿ ತೆನೆ ಹಬ್ಬ ಅಂತಾನೂ ಕರೆಯುತ್ತಾರೆ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಅದ್ಧೂರಿಯಾಗಿ ಮೋತಿ ಫೆಸ್ಟ್ ನಡೆಯಿತು. ಉಡುಪಿ...

ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ

2 years ago

ಉಡುಪಿ: ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಅವರ ಹತ್ಯೆಯ ವಿಚಾರ ಕೇಳಿ ನನ್ನ ಎದೆಗೆ ಗುಂಡು ಹೊಡೆದಂತಾಗಿದೆ. ಮನಸ್ಸಿಗೆ ಬಹಳ ಬೇಸರವಾಗುತ್ತಿದೆ ಎಂದು ಸಾಹಿತಿ ವೈದೇಹಿ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಶಾಕಿಂಗ್ ನ್ಯೂಸ್,...

ಈ ಕಾರಣಕ್ಕಾಗಿ ಕಣ್ಣೀರು ಸುರಿಸಿದ್ರು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ!

2 years ago

ಉಡುಪಿ: ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಇಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದಾರೆ. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ...

ಬೈಕ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಮಾತನಾಡ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು ಇನ್ನೋವಾ! ಕಾರಿನಲ್ಲಿ ಏನಿತ್ತು ಗೊತ್ತಾ?

2 years ago

ಉಡುಪಿ: ಟೈಂ ಕೈಕೊಟ್ಟರೆ ಹಗ್ಗವೂ ಹಾವಾಗಿ ಕಡಿಯುತ್ತಂತೆ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು ಬೈಕ್ ರೈಡ್ ಮಾಡ್ತಾ ಫೋನ್ ನಲ್ಲಿ ಮಾತನಾಡೋದು ತಪ್ಪು ಹಾಗಂತ ಗಾಡಿ ಸೈಡಿಗೆ ಹಾಕಿ ಮಾತನಾಡಿದ್ದೇ ಇಲ್ಲಿ ತಪ್ಪಾಗಿದೆ. ಉಡುಪಿಯ ಉದ್ಯಾವರ ಸಮೀಪದ ಬಲೈಪಾದೆಯ ರಸ್ತೆ...

ಕಣ್ಣಿಗೆ ಖಾರದ ಪುಡಿ ಎರಚಿ, ಕೈಕಾಲು ಕಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ರು!

2 years ago

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಕೋಳಿ ಅಂಗಡಿ ಮಾಲೀಕನಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಗ್ರೇಶನ್ ಲೋಬೊ ಮಾಲೀಕತ್ವದ `ಲೋಬೊ ಚಿಕನ್...

ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

2 years ago

ಉಡುಪಿ: ಹೆಬ್ಬಾವಿನಿಂದ ಕಚ್ಚಿಸಿಕೊಂಡು ಹೆಬ್ಬಾವಿನ ಜೊತೆಗೇ ವ್ಯಕ್ತಿ ಆಸ್ಪತ್ರೆಗೆ ಬಂದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು....

ಉಡುಪಿಯಲ್ಲಿ ಬಕ್ರೀದ್ ಆಚರಣೆ – ನೂರಾನಿ ಮಸೀದಿಯಲ್ಲಿ ನಮಾಜ್

2 years ago

ಉಡುಪಿ: ಮುಸ್ಲಿಂ ಧರ್ಮೀಯರ ಪವಿತ್ರ ಬಕ್ರೀದ್ ಹಬ್ಬವನ್ನು ಉಡುಪಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ನಾಳೆ ಬಕ್ರೀದ್ ಆಚರಿಸಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ. ರಂಜಾನ್ ಸಂದರ್ಭ ಕರಾವಳಿ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲೂ ಚಂದ್ರದರ್ಶನಕ್ಕೆ ಅನುಸಾರವಾಗಿ ಹಬ್ಬ ಆಚರಿಸಲಾಗಿತ್ತು. ಕೇರಳದಲ್ಲಿ...