Tuesday, 10th December 2019

1 day ago

ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

– ಜೆಡಿಎಸ್‍ನ ಕಣ್ಣೀರಿಗೆ ಉತ್ತರ ಕೊಟ್ಟಿದ್ದೇವೆ ಉಡುಪಿ: ಉಪಚುನಾವಣೆ ಗೆಲುವು ನಮಗೆ ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಸಿಎಂ ಯಡಿಯೂರಪ್ಪನವರ ಅವಿರತ ಹೋರಾಟದಿಂದ 12 ಕಡೆ ಬಿಜೆಪಿ ಗೆದ್ದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ ಎಂದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, […]

2 days ago

ಶಿವಸೇನೆಗೆ ಸಚಿವ ಆರ್.ಅಶೋಕ್ ಎಚ್ಚರಿಕೆ

ಉಡುಪಿ: ಬೆಳಗಾವಿ ಗಡಿ ಕ್ಯಾತೆ ತೆಗೆದಿರುವ ಶಿವಸೇನೆಗೆ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಗಡಿಯ ತಂಟೆಗೆ ಬಂದರೆ ನಾವಂತೂ ಸುಮ್ಮನಿರಲ್ಲ. ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಬಗ್ಗೆ ಕ್ಯಾತೆ ತೆಗೆದು ರಾಜಕೀಯ ಮಾಡಬೇಡಿ. ಮಹಾರಾಷ್ಟ್ರಕ್ಕೆ ಹೇಗೆ ತಿರುಗೇಟು ಕೊಡಬೇಕು ಎಂದು...

ಶಿರ್ವ ಚರ್ಚ್ ಫಾದರ್ ಡೆನ್ನಿಸ್‍ಗೆ ಜೀವ ಬೆದರಿಕೆ, 15ಮಂದಿ ವಿರುದ್ಧ ದೂರು ದಾಖಲು

3 days ago

ಉಡುಪಿ: ಶಿರ್ವ ಚರ್ಚಿನ ಸಹಾಯಕ ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಸಂಬಂಧ ಚರ್ಚಿನ ಪ್ರಧಾನ ಫಾದರ್ ಡೆನ್ನಿಸ್ ಡೇಸಾ ಅವರಿಗೆ ಜೀವ ಬೆದರಿಕೆ ಬಂದಿದೆ. ಈ ಸಂಬಂಧ ಫಾದರ್ ಡೆನ್ನಿಸ್ ಅವರು 15 ಜನರ ವಿರುದ್ಧ ಶಿರ್ವ ಪೊಲೀಸ್ ಠಾಣೆಗೆ...

ಉಡುಪಿ, ಮಣಿಪಾಲದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 14 ಮಕ್ಕಳ ರಕ್ಷಣೆ

6 days ago

ಉಡುಪಿ: ನಗರದಲ್ಲಿ ಭಿಕ್ಷಾಟನೆ ನಿರತ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಮತ್ತು ಕಾರ್ಮಿಕಾ ಘಟಕ ಇಂದು ಜಂಟಿ ಕಾರ್ಯಾಚರಣೆ ಮಾಡಿತು. ಮಣಿಪಾಲ, ಉಡುಪಿ ಉದ್ಯಾವರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದೀಚೆ...

ಕೃಷ್ಣಮಠದಲ್ಲಿ ಎಡೆಸ್ನಾನವೂ ಇಲ್ಲ ಮಡೆಸ್ನಾನವೂ ಇಲ್ಲ- ಪಲಿಮಾರು ಶ್ರೀ

1 week ago

ಉಡುಪಿ: ದೇಶಾದ್ಯಂತ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಣೆ ಮಾಡಲಾಗುತ್ತಿದೆ. ಷಷ್ಠಿಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನವೋ.., ಮಡೆಸ್ನಾನ ಇರುತ್ತದೆ. ಆದರೆ ಈ ಬಾರಿ ನೂರಾರು ವರ್ಷದ ಸಂಪ್ರದಾಯವನ್ನು ಮುರಿದು ಕೃಷ್ಣಮಠದಲ್ಲಿ ಷಷ್ಠಿ ಆಚರಿಸಲಾಯಿತು. ಮಠದೊಳಗಿನ ನಾಗರಾಜ ಗುಡಿಯ ಸುತ್ತ ಪ್ರತಿ ವರ್ಷ ಎಂಜಲೆಲೆಯ ಮೇಲೆ...

ಪಟ್ಲ ಸತೀಶ್ ಕಟೀಲು ಮೇಳದಿಂದ ಹೊರಕ್ಕೆ – ಭೂಗತ ಲೋಕದಿಂದ ಉದ್ಯಮಿಗೆ ಕೊಲೆ ಬೆದರಿಕೆ

1 week ago

ಉಡುಪಿ: ಕಟೀಲು ಯಕ್ಷಗಾನ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಈ ಬಾರಿ ತಿರುಗಾಟದಿಂದ ಕೈಬಿಡಲಾಗಿದೆ. ಈ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಲೋಕದ ಎಂಟ್ರಿಯಾಗಿದೆ. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಭಾಗವತ ಸತೀಶ್ ಪಟ್ಲ ಅವರಿಗೆ ಈ...

ಕುಂದಾಪುರದಲ್ಲಿ ಬೋನಿಗೆ ಬಿತ್ತು ದೈತ್ಯ ಗಂಡು ಚಿರತೆ

2 weeks ago

ಉಡುಪಿ: ಕುಂದಾಪುರದ ಗುಡ್ಡಟ್ಟು ಪ್ರದೇಶದಲ್ಲಿ ಚಿರತೆ ಸೆರೆಯಾಗಿದೆ. ಕೆಲವು ತಿಂಗಳುಗಳಿಂದ ನಿರಂತರವಾಗಿ ಭಯದ ವಾತಾವರಣ ಸೃಷ್ಟಿಸಿದ್ದ ಈ ಚಿರತೆ ಕೊನೆಗೂ ಕಳೆದ ರಾತ್ರಿ ಬೋನಿಗೆ ಬಿದ್ದಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿಯ ಯಡ್ಯಾಡಿ ಮತ್ಯಾಡಿ ಗ್ರಾಮದಲ್ಲಿ ದಿನೇ ದಿನೇ...

ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

2 weeks ago

ಉಡುಪಿ: ಮಾನಸಿಕ ಖಿನ್ನತೆಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ದೇವಸ್ಥಾನದ ಬಾಣಸಿಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯ ಕುಂದಾಪುರದ ಗೋಳಿಯಂಗಡಿಯ ಈ ಘಟನೆ ನಡೆದಿತ್ತು. ಊರಿಗೆಲ್ಲಾ ಅಡುಗೆ ಮಾಡಿ ಬಡಿಸುತ್ತಿದ್ದ ಬಾಣಸಿಗ ಸೂರ್ಯನಾರಾಯಣ ಭಟ್ ಮನೆಯವರಿಗೆ ವಿಷ ಹಾಕಿ ಕೊಲೆ...