Friday, 23rd August 2019

2 days ago

ಸಿದ್ದಗಂಗಾ ಮಠಕ್ಕೆ ಸಿಎಂ ಭೇಟಿ – ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ

ತುಮಕೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದಿದ್ದಾರೆ. ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ 7ನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮ ಇತ್ತು. ಹಾಗಾಗಿ ಸಿಎಂ ಮಠಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ. ಮೊದಲು ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ಬಳಿಕ ಹೊಸ ಮಠದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಇದೇ ವೇಳೆ ಸಿದ್ದಗಂಗಾ ಮಠದ […]

3 days ago

ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವ ಇರೋದ್ರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡ್ತೀನಿ – ಮಾಧುಸ್ವಾಮಿ

ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಧುಸ್ವಾಮಿ ಅವರು ಕಂದಾಯ ಖಾತೆ ಅಥವಾ ಗ್ರಾಮೀಣ ಅಭಿವೃದ್ಧಿ ಖಾತೆಯಲ್ಲಿ ಕೆಲಸ ಮಾಡಲು ನನಗೆ ಆಸೆ ಇದೆ. ನಾನು ಒತ್ತಾಯ ಮಾಡಲ್ಲ, ಯಾವ ಖಾತೆ ಕೊಟ್ಟರೂ ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ...

ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

1 week ago

ತುಮಕೂರು: ಕಣ್ಣು, ಕಿಡ್ನಿ ಮಾರುತ್ತೇನೆ, ನನಗೆ ಸಾಲ ತೀರಿಸಲು ದುಡ್ಡು ಕೊಡಿ ಎಂದು ಬೋರ್ಡ್ ಹಿಡಿದು ಶಿರಾ ತಾಲೂಕಿನಲ್ಲಿ ರೈತರೊಬ್ಬರು ಬೀದಿ ಬೀದಿ ಅಲೆಯುತ್ತಿದ್ದಾರೆ. ಮೂರ್ನಾಲ್ಕು ಬೋರ್ ವೆಲ್ ಕೊರೆದರೂ ಕೂಡ ರೇಷ್ಮೆ ಬೆಳೆ ಕೈ ಹತ್ತದೆ ಸಾಲ ಮಾಡಿದ ರೈತ...

ಮಾನವೀಯತೆ ಮೆರೆದ ನಟ ಪ್ರೇಮ್

2 weeks ago

ತುಮಕೂರು: ಸ್ಯಾಂಡಲ್‍ವುಡ್ ಲವ್ಲಿ ಸ್ಟಾರ್ ಪ್ರೇಮ್ ಮಾನವೀಯತೆ ಮೆರೆದಿದ್ದಾರೆ. ನಟ ಪ್ರೇಮ್ ಅವರು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಭೇಟಿ ತೆರಳುತ್ತಿದ್ದರು. ಈ ವೇಳೆ ತುಮಕೂರಿನ ಶಿರಾದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ಬೈಕಿನಿಂದ ಕೆಳಗೆ ಬಿದಿದ್ದಾರೆ. ಬೈಕಿನಿಂದ...

ಸರ್ಕಾರಿ ಕೆಲಸಕ್ಕಾಗಿ ತಮ್ಮನನ್ನೇ ಕೊಂದ ಅಣ್ಣ

2 weeks ago

ತುಮಕೂರು: ತಂದೆಯ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ಸಿಗಲಿರುವ ಸರ್ಕಾರಿ ಕೆಲಸ ತಮ್ಮನಿಗೆ ಸಿಗಲಿದೆ ಎಂಬ ದ್ವೇಷದಿಂದ ಸ್ವತಃ ಅಣ್ಣನೇ ತಮ್ಮನನ್ನು ಕೊಂದ ಘಟನೆ ತುಮಕೂರು ನಗರದ ಸರಸ್ವತಿಪುರಂ ನಲ್ಲಿ ನಡೆದಿದೆ. ಕಿರಣ್ (17) ತಮ್ಮನನ್ನೇ ಕೊಂದ ಅಣ್ಣ. ಕಿರಣ್...

ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ – ರಾಜಣ್ಣ ವಿರುದ್ಧ ಸೇಡು?

1 month ago

ತುಮಕೂರು: ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ) ಅನ್ನು ಸರ್ಕಾರ ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿದೆ. ಸೂಪರ್ ಸೀಡ್ ಆದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸರ್ಕಾರದಿಂದ ಒಂದು ವರ್ಷ ಅವಧಿಗಾಗಿ ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ...

ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿರ ಪೂರ್ವಾಶ್ರಮದ ಸಹೋದರ ಶಿವೈಕ್ಯ

1 month ago

ರಾಮನಗರ: ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪೂರ್ವಾಶ್ರಮದ ಸೋದರ ಬಿ.ಎಸ್.ಚಂದ್ರಶೇಖರಯ್ಯ (72) ಶಿವೈಕ್ಯರಾಗಿದ್ದಾರೆ. ಮಾಗಡಿ ತಾಲೂಕಿನ ಬಂಡೇಮಠ ಗ್ರಾಮದ ನಿವಾಸಿಯಾಗಿದ್ದ ಬಿ.ಎಸ್.ಚಂದ್ರಶೇಖರಯ್ಯ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನೌಕರರಾಗಿ, ಬಂಡೇಮಠದ ಮ್ಯಾನೇಜರ್ ಆಗಿ ಸೇವೆಸಲ್ಲಿಸಿದ್ದರು. 10 ವರ್ಷದ ಹಿಂದೆ...

ಕ್ರಿಕೆಟ್ ನಂತ್ರ ಮಕ್ಕಳ ಜೊತೆ ವಾಲಿಬಾಲ್ ಆಡಿದ ಸಿದ್ದಲಿಂಗ ಶ್ರೀ

2 months ago

ತುಮಕೂರು: ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮತ್ತೊಮ್ಮೆ ಮಕ್ಕಳ ಜೊತೆ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸಿದ್ದಲಿಂಗ ಶ್ರೀಗಳು ಮಕ್ಕಳ ಜೊತೆ ವಾಲಿಬಾಲ್ ಆಡುವ ಮೂಲಕ ಅವರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಪ್ರತಿ ದಿನ ಮಕ್ಕಳು ಶಾಲೆ ಮುಗಿಸಿ ಮೈದಾನದಲ್ಲಿ ಆಟವಾಡುತ್ತಿದ್ದರು....