Tuesday, 16th July 2019

8 hours ago

ಎಚ್‌ಡಿಡಿ, ಸಿಎಂಗೆ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ನಾಯಕ ಸಮುದಾಯದ ನಾಯಕರನ್ನ ತುಳಿಯುವ ಪ್ರಯತ್ನ ಮಾಡಬಾರದು ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಹಾಗೂ ಸಿಎಂ ಅವರಿಗೆ ನಾಯಕ ಸಮುದಾಯದ ಮತ ಬೇಕು. ಹೀಗಾಗಿ ಕೆ.ಎನ್.ರಾಜಣ್ಣರಂತಹ ನಾಯಕರನ್ನು ತುಳಿಯುವ ಕೆಲಸಕ್ಕೆ ಕೈ ಹಾಕಬಾರದು ಎಂದು ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಒಂದು ಸರ್ಕಾರದಲ್ಲಿ ಏನಾದರೂ ಬದಲಾವಣೆಯಾಗುತ್ತದೆ ಎಂಬ ಲಕ್ಷಣಗಳು ಕಂಡು ಬಂದರೆ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಹೀಗಾಗಿ ಯಾವುದೇ ಸರ್ಕಾರ […]

1 day ago

ರೆಸಾರ್ಟ್ ರಾಜಕಾರಣ ವಿರುದ್ಧ ರೈತರಿಂದ ಛೀ.. ಥೂ.. ಚಳುವಳಿ

ತುಮಕೂರು: ರಾಜ್ಯದ ಜನತೆಯ ಹಿತಾಸಕ್ತಿಯನ್ನು ಮರೆತು ಅಧಿಕಾರಕೋಸ್ಕರ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರೈತರು ಛೀ…ಥೂ.. ಚಳುವಳಿ ಕೈಗೊಂಡಿದ್ದಾರೆ. ತುಮಕೂರು ಜಿಲ್ಲೆಯಾದ್ಯಂತ ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ರಾಜಕಾರಣ ಮಾಡುತಿರುವ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಛೀ…ಥೂ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ...

ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಸವಿದ ಪ್ರಜ್ವಲ್ ರೇವಣ್ಣ

2 weeks ago

ಹಾಸನ: ತುಮಕೂರು ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಮಾಡಿದ ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ, ಬಸವರಾಜ್ ಅವರು ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋವನ್ನು ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಟ್ವಿಟ್ಟರ್...

ರಸ್ತೆ ಜಾಗದಲ್ಲಿ ಮನೆ ನಿರ್ಮಾಣ- 1 ವರ್ಷದಿಂದ ಗ್ರಾಮಸ್ಥರ ಕಚ್ಚಾಟ

2 weeks ago

ತುಮಕೂರು: ಒಂದು ವರ್ಷದಿಂದ ಜಿಲ್ಲೆಯ ಶಿರಾ ತಾಲೂಕಿನ ದೇವರಹಳ್ಳಿಯ ಜನರು ನೆಮ್ಮದಿಯಿಂದ ಬದುಕುತ್ತಿಲ್ಲ. ಹಗಲು ರಾತ್ರಿ ಎನ್ನದೆ ಬರೀ ಜಗಳ, ಘರ್ಷಣೆಯಿಂಟ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಒಬ್ಬರ ಮುಖ ಇನ್ನೊಬ್ಬರು ನೊಡದಷ್ಟು ಕಡು ಕೋಪಿಷ್ಟರಾಗಿದ್ದಾರೆ. ಹೌದು. ದೇವರಹಳ್ಳಿಯಲ್ಲಿ ಲಕ್ಕಮ್ಮ ಕುದುರಪ್ಪ ಎಂಬವರಿಗೆ...

ಕುಣಿಗಲ್‍ನಲ್ಲಿ ಡಿವೈಡರ್ ಗೆ ಕಾರು ಡಿಕ್ಕಿ – 6 ಜನ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

3 weeks ago

ತುಮಕೂರು: ಇನ್ನೋವಾ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕುಣಿಗಲ್‍ನಲ್ಲಿ ನಡೆದಿದೆ. ಸಾವನ್ನಪ್ಪಿದವರು ಆಂಧ್ರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನಲೆಸಿದ್ದ ಸೆಲ್ವಿ, ನಿರ್ಮಲ, ಕಾಳಿದಾಸ್, ವೀರಮ್ಮ, ಪಾಂಜಾಲಮ್ಮ...

ಲಿಪ್‍ಸ್ಟಿಕ್ ಹಚ್ಚಂಗಿಲ್ಲ, ಮೇಕಪ್ ಮಾಡಂಗಿಲ್ಲ-ಉಪನ್ಯಾಸಕಿಗೆ ಪ್ರಿನ್ಸಿಪಾಲ್ ಕಿರಿಕ್

3 weeks ago

ತುಮಕೂರು: ಉಪನ್ಯಾಸಕಿಯೊಬ್ಬರು ಮೇಕಪ್ ಮಾಡಿಕೊಂಡು ಕಾಲೇಜಿಗೆ ಬಂದರೆ ಇಲ್ಲಿನ ಪ್ರಾಂಶುಪಾಲರಿಗೆ ಆಗಲ್ವಂತೆ. ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡ್ರೂ, ಪರಿಚಯದವರ ಬಳಿ ಬೈಕ್‍ನಲ್ಲಿ ಡ್ರಾಪ್ ತೆಗೆದುಕೊಂಡರೂ ಕೆಟ್ಟದಾಗಿ ಕಮೆಂಟ್ ಮಾಡ್ತಾರಂತೆ. ಇದ್ರಿಂದ ರೋಸಿಹೋದ ಉಪನ್ಯಾಸಕಿ ಈಗ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತುಮಕೂರಿನ...

ಇಬ್ಬರನ್ನು ನಂಬಿಸಿ ಮದ್ವೆಯಾಗಿ ಹಣ ಪಡೆದು ಮೂರನೇಯವಳೊಂದಿಗೆ ಎಸ್ಕೇಪ್

3 weeks ago

ತುಮಕೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮೂವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಒಬ್ಬಳ ಬಳಿ ಮದುವೆಯಾಗಿ 18 ಲಕ್ಷ ಪಡೆದು, ಮೊತ್ತೊಬ್ಬಳ ಬಳಿಯಿಂದ ಅನಾಥ ಎಂಬ ನಾಟಕವಾಡಿ ಮಗು ಕರುಣಿಸಿದ್ದಾನೆ. ಇನ್ನೊಬ್ಬಳ ಸಂಗ ಬೆಳೆಸಿದ್ದಾನೆ. ಇವನನ್ನ ನಂಬಿ ತಮ್ಮ ಜೀವನವನ್ನೇ ಅರ್ಪಿಸಿದ್ದ ಮೊದಲ ಇಬ್ಬರು...

ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿ – ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಸಾವು

3 weeks ago

ತುಮಕೂರು: ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದ್ದು, ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಇಂದು ಮೃತಪಟ್ಟಿದ್ದಾನೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದ. ಪರಿಣಾಮ...