Tag: Tristan Stubbs

  • ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ಗ್ಕೆಬರ್ಹಾ: ಟ್ರಿಸ್ಟನ್‌ ಸ್ಟಬ್ಸ್‌ (Tristan Stubbs) ಅಮೋಘ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ (Team India) ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.

    Varun Chakravarthy

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಟೀಂ ಇಂಡಿಯಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) 13ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ದೈತ್ಯ ಆಟಗಾರರಿಗೆ ಪೆವಿಲಿಯನ್‌ ದಾರಿ ತೋರಿದರು. ಇದರಿಂದ ಭಾರತದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ ಕೊನೇ ಮೂರು ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಜೆರಾಲ್ಡ್‌ ಕೋಟ್ಜಿ ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು. ಈ ಜೋಡಿ 17,18,19ನೇ ಓವರ್‌ನಲ್ಲೇ ಕ್ರಮವಾಗಿ 12, 12, 16 ರನ್‌ ಚಚ್ಚಿದ್ದರ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.

    IND vs SA

    ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 47 ರನ್‌, ರೀಝಾ ಹೆಂಡ್ರಿಕ್ಸ್‌ 24 ರನ್‌, ಜೆರಾಲ್ಡ್‌ ಕೋಟ್ಜಿ ಅಜೇಯ 19 ರನ್‌, ರಿಯಾನ್‌ ರಿಕ್ಲೆಂಟನ್‌ 13 ರನ್‌ ಗಳಿಸಿದರು.

    IND vs SA 2

    ಸೋತ ಪಂದ್ಯದಲ್ಲಿ ಮಿಂಚಿದ ವರುಣ್‌:
    ಭಾರತ ಸೋತ ದಕ್ಷಿಣ ಆಫ್ರಿಕಾ ವಿರುದ್ಧ ಸೋತರು ಸ್ಪಿನ್‌ ಮಾಂತ್ರಿಕ ವರುಣ್‌ ಚಕ್ರವರ್ತಿ ಪ್ರಮುಖ ವಿಕೆಟ್‌ ಕಿತ್ತು ಸೈ ಎನಿಸಿಕೊಂಡರು. 4 ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದರು. ಅರ್ಷ್‌ದೀಪ್‌ ಸಿಂಗ್‌, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಇನ್ನೂ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ, ದಕ್ಷಿಣ ಆಫ್ರಿಕಾಗೆ 125 ರನ್‌ಗಳ ಗುರಿ ನೀಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದಕೊಂಡು ಸಂಕಷ್ಟಕ್ಕೀಡಾದ ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ನೆರವಾಗಿದ್ದರು. 21 ಎಸೆತಗಳಲ್ಲಿ 27 ರನ್‌ ಬಾರಿಸಿ, ಉತ್ಸಾಹ ತುಂಬಿದ್ದರು. ಈ ವೇಳೆ ಹಾರ್ದಿಕ್‌ ಪಾಂಡ್ಯ ಹೊಡೆದ ಸ್ಟ್ರೈಟ್‌ಲೆಂತ್‌ ಬಾಲ್‌ ಬೌಲರ್‌ ಕೈಗೆ ತಾಕಿ ವಿಕೆಟ್‌ಗೆ ಬಡಿದು ರನೌಟ್‌ಗೆ ತುತ್ತಾದರು.

    ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಹೋರಾಟದಿಂದ ಭಾರತ 120 ರನ್‌ಗಳ ಗಡಿ ದಾಟಿತು. ಟೀಂ ಇಂಡಿಯಾ ಪರ ಹಾರ್ದಿಕ್‌ ಪಾಂಡ್ಯ 31 ರನ್‌ ಗಳಿಸಿದ್ರೆ, ಅಕ್ಷರ್‌ ಪಟೇಲ್‌ 27 ರನ್‌, ತಿಲಕ್‌ ವರ್ಮಾ 20 ರನ್‌ ಗಳಿಸಿದ್ರು, ಉಳಿದವರು ಅಲ್ಪ ಮೊತ್ತಕ್ಕೆ ಔಟಾದರು.

  • ಲಕ್ನೋ ವಿರುದ್ಧ ಡೆಲ್ಲಿಗೆ 19 ರನ್‌ಗಳ ಜಯ – ರಾಹುಲ್‌ ಪಡೆಗೆ ಪ್ಲೇ-ಆಫ್‌ ಹಾದಿ ಕಠಿಣ

    ಲಕ್ನೋ ವಿರುದ್ಧ ಡೆಲ್ಲಿಗೆ 19 ರನ್‌ಗಳ ಜಯ – ರಾಹುಲ್‌ ಪಡೆಗೆ ಪ್ಲೇ-ಆಫ್‌ ಹಾದಿ ಕಠಿಣ

    – ಪೊರೆಲ್‌ ಹಾಗೂ ಟ್ರಿಸ್ಟನ್ ಫಿಫ್ಟಿಗೆ ಒಲಿದ ಜಯ
    – 3 ವಿಕೆಟ್‌ ಕಿತ್ತು ಮಿಂಚಿದ ಇಶಾಂತ್‌ ಶರ್ಮಾ
    – ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥ

    ನವದೆಹಲಿ: ಅಭಿಷೇಕ್‌ ಪೊರೆಲ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಆಕರ್ಷಕ ಫಿಫ್ಟಿ ಹಾಗೂ ಇಶಾಂತ್‌ ಶರ್ಮಾ ಅಬ್ಬರದ ಬೌಲಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ಜಯ ಸಾಧಿಸಿತು. ಪ್ಲೇ-ಆಫ್‌ ಕನಸು ಕಂಡಿದ್ದ ರಾಹುಲ್‌ ಪಡೆಗೆ ಸೋಲಿನ ಹಾದಿ ಮತ್ತಷ್ಟು ಕಠಿಣವಾಗಿದೆ.

    ಇಲ್ಲಿ ನಡೆದ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿತು. 209 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    Abishek Porel

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಸ್ಫೋಟಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಡಕೌಟ್‌ ಆಗಿ ಪೆವಿಲಿಯನ್‌ ಸೇರಿದರು. ಆದರೂ ವಿಚಲಿತರಾಗದ ಡೆಲ್ಲಿ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಮತ್ತೊಬ್ಬ ಓಪನರ್‌ ಅಭಿಷೇಕ್‌ ಪೊರೆಲ್‌ ಅರ್ಧಶತಕ (58 ರನ್‌, 33 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಮಿಂಚಿದರು. ಶಾಯ್‌ ಹೋಪ್‌ 38 ಹಾಗೂ ನಾಯಕ ರಿಷಭ್‌ ಪಂತ್‌ 33 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಟ್ರಿಸ್ಟನ್‌ ಸ್ಟಬ್ಸ್‌ 57 ರನ್‌ ಬಾರಿಸಿ (25 ಬಾಲ್‌, 3 ಫೋರ್‌, 4 ಸಿಕ್ಸರ್‌) ಉತ್ತಮ ಮೊತ್ತಕ್ಕೆ ನೆರವಾದರು.

    ishant sharma

    ಲಕ್ನೋ ಪರ ನವೀನ್-ಉಲ್-ಹಕ್ 2 ವಿಕೆಟ್‌ ಕಿತ್ತರು. ಅರ್ಷದ್ ಖಾನ್ ಹಾಗೂ ರವಿ ಬಿಷ್ಣೋಯ್ ತಲಾ ಒಂದು ವಿಕೆಟ್‌ ಪಡೆದರು.

    ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 209 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಲಕ್ನೋ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು. ತಂಡದ ಮೊತ್ತ ಕೇವಲ 7 ರನ್‌ ಇದ್ದಾಗಲೇ ಲಕ್ನೋ ತಂಡದ ನಾಯಕ ಕೆ.ಎಲ್‌.ರಾಹುಲ್‌ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 59 ರನ್‌ ಗಳಿಸಿದ್ದ ಲಕ್ನೋ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

    Nicholas Pooran 1

    ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥವಾಯಿತು. ಪೂರನ್‌ 27 ಬಾಲ್‌ಗೆ 61 ರನ್‌ (6 ಫೋರ್‌, 4 ಸಿಕ್ಸರ್‌) ಹಾಗೂ ಖಾನ್‌ ಔಟಾಗದೇ 58 ರನ್‌ (33 ಬಾಲ್‌, 3 ಫೋರ್‌, 5 ಸಿಕ್ಸರ್‌) ಸಿಡಿಸಿ ಮಿಂಚಿದರೂ ಪ್ರಯೋಜನವಾಗಲಿಲ್ಲ. ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ತಂಡದ ಸೋಲನುಭವಿಸಿತು.

    ಕೃನಾಲ್ ಪಾಂಡ್ಯ 18, ಯುದ್ಧವೀರ್ ಸಿಂಗ್ 14 ಗಳಿಸಿದರು. ಡೆಲ್ಲಿ ಪರ 3 ವಿಕೆಟ್‌ ಕಬಳಿಸಿ ಇಶಾಂತ್ ಶರ್ಮಾ ಮಿಂಚಿದರು. ಖಲೀಲ್ ಅಹಮದ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್ ತಲಾ 1 ವಿಕೆಟ್‌ ಕಿತ್ತರು.

  • ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್‌ ಕನಸು ಜೀವಂತ!

    ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್‌ ಕನಸು ಜೀವಂತ!

    ಬೆಂಗಳೂರು: ರಿಷಭ್‌ ಪಂತ್‌ ಅವರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ವಿರುದ್ಧ ಅಖಾಡಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀನಾಯ ಸೋಲಿಗೆ ತುತ್ತಾಗಿದೆ. ಆದ್ರೆ ತವರಿನಲ್ಲೇ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

    ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಹೊಸ ನಾಯಕನ ನೇತೃತ್ವದಲ್ಲಿ ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 19.1 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು.

    188 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಸ್ಫೋಟಕ ಪ್ರದರ್ಶನ ನೀಡಲು ಮುಂದಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 1 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಅಭಿಷೇಕ್‌ ಪೋರೆಲ್‌ 2 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಇನ್ನೂ 8 ಎಸೆತಗಳಲ್ಲಿ 21 ರನ್‌ (2 ಸಿಕ್ಸರ್‌, 2 ಬೌಂಡರಿ) ಬಾರಿಸಿದ್ದ ಫ್ರೆಸರ್‌ ಮೆಕ್‌ಗಾರ್ಕ್‌ ಸಹ ವಿಕೆಟ್‌ ಒಪ್ಪಿಸಿದರು. ಮೊದಲ 6 ಓವರ್‌ಗಳಲ್ಲಿ 54 ರನ್‌ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಟ್ರಿಸ್ಟಾನ್ಸ್‌ ಸ್ಟಬ್ಸ್‌ ಬೂಸ್ಟ್‌ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ತಂಡ ಇತ್ತು. ಆದ್ರೆ ಅನಗತ್ಯವಾಗಿ ಒಂದು ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದು ಡೆಲ್ಲಿ ತಂಡಕ್ಕೆ ತುಂಬಲಾರದ ನಷ್ಟವಾಯಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್‌ ಪಂತ್‌ ಅವರ ಅನುಪಸ್ಥಿತಿ ಸಹ ಡೆಲ್ಲಿ ತಂಡವನ್ನು ಕಾಡಿತು.

    ಇನ್ನೂ ಏಕಾಂಗಿ ಹೋರಾಟ ನಡೆಸಿದ ನಾಯಕ ಅಕ್ಷರ್‌ ಪಟೇಲ್‌ 39 ಎಸೆತಗಳಲ್ಲಿ 57 ರನ್‌ (3 ಸಿಕ್ಸರ್‌, 5 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರು ಕ್ರೀಸ್‌ನಲ್ಲಿ ಉಳಿಯದ ಕಾರಣ ಆರ್‌ಸಿಬಿ ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನುಳಿದಂತೆ ಶಾಯ್‌ ಹೋಪ್‌ 29 ರನ್‌, ಕುಮಾರ್‌ ಕುಮಾರ್‌ ಕುಶಾರ್ಗ 2 ರನ್‌, ಸ್ಟಬ್ಸ್‌ 3 ರನ್‌, ರಸಿಕ್‌ ಸಲಾಮ್‌ 10 ರನ್‌, ಮುಕೇಶ್‌ ಕುಮಾರ್‌ 3 ರನ್‌, ಕುಲ್ದೀಪ್‌ ಯಾದವ್‌ 3 ರನ್‌ ಗಳಿಸಿ ಔಟಾದರು.

    ಇದಕ್ಕೂ ಮುನ್ನ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಆರ್‌ಸಿಬಿ ಆಟಗಾರರು 200 ರನ್‌ಗಳನ್ನು ತಲುಪುವಲ್ಲಿ ವಿಫಲರಾದರು. ರಜತ್ ಪಾಟೀದಾರ್ ಸ್ಫೋಟಕ ಅರ್ಧಶತಕ, ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ ಸ್ಫೋಟಲ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿತ್ತು. ಈ ಮೂಲಕ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತ್ತು.

    ಮೊದಲಿಗೆ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 6 ರನ್ ಗಳಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಕೇವಲ 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 27 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

    ಅಬ್ಬರಿಸಿದ ಪಾಟೀದಾರ್-ಜ್ಯಾಕ್ಸ್:
    ಕೇವಲ 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್‌ಸಿಬಿ ತಂಡಕ್ಕೆ 3ನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿಲ್ ಜ್ಯಾಕ್ಸ್ ಕೇವಲ 53 ಎಸೆತಗಳಲ್ಲಿ 88 ರನ್‌ಗಳ ಜೊತೆಯಾಟ ನೀಡುವ ಮೂಲಕ ಬಲ ತುಂಬಿದರು. ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಪಾಟೀದಾರ್ ಕೇವಲ 29 ಎಸೆತಗಳಲ್ಲೇ 5ನೇ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಪಾಟೀದಾರ್ 32 ಎಸೆತಗಳಲ್ಲಿ 52 ರನ್ (3 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್ ಜ್ಯಾಕ್ಸ್‌ 41 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸರ್) ಬಾರಿಸಿ ಪೆವಿಲಿಯನ್‌ ಹಾದಿ ಹಿಡಿದರು. ಬಳಿಕ ಕ್ರೀಸ್‌ಗಿಳಿದ ಕ್ಯಾಮರೂನ್‌ ಗ್ರೀನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 24 ಎಸೆತ ಎದುರಿಸಿದ ಗ್ರೀನ್‌ ಅಜೇಯ 32 ರನ್ (1 ಬೌಂಡರಿ, 2 ಸಿಕ್ಸರ್) ಬಾರಿಸಿದರು.

    ಇನ್ನು ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ಭರ್ಜರಿಯಾಗಿ ರನ್ ಗಳಿಸಿತಾದರೂ ಉತ್ತಮವಾಗಿ ಫಿನೀಶ್ ಮಾಡಲು ಸಾಧ್ಯವಾಗಲಿಲ್ಲ. ಮಹಿಪಾಲ್ ಲೋಮ್ರಾರ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿರ್ಣಾಯಕ ಘಟ್ಟದಲ್ಲಿ ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಬೀಳುವಂತೆ ಮಾಡಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌, ರಸಿಕ್‌ ಸಲಾಮ್‌ ತಲಾ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ, ಮುಕೇಶ್‌ ಕುಮಾರ್‌, ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೇ ಓವರ್ ಥ್ರಿಲ್ಲಿಂಗ್?
    ಕೊನೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಶೀದ್ ಖಾನ್ ಮೊದಲ 2 ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದರು. 3-4ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. 2 ಎಸೆತಗಳಲ್ಲಿ 11 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು, ಇದರಿಂದ ಕೊನೇ ಕ್ಷಣದವರೆಗೂ ಗುಜರಾತ್‌ಗೆ ಗೆಲುವಿನ ಆಸೆ ಜೀವಂತವಾಗಿತ್ತು. ಆದ್ರೆ ಕೊನೇ ಎಸೆತದಲ್ಲಿ ಬೌಂಡರಿಗೆ ಯತ್ನಿಸಿದ ರಶೀದ್ ಖಾನ್ ಒಂದು ರನ್ ಕದಿಯುವಲ್ಲಿ ಮಾತ್ರ ಸಫಲರಾದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ಗಳ ರೋಚಕ ಗೆಲುವು ಸಿಕ್ಕಿತು.

    GT vs DC

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಆರಂಭಿಸಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಕಲೆಹಾಕಿತ್ತು. ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿತ್ತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು.

    ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ (39 ಎಸೆತ, 2 ಸಿಕ್ಸರ್, 7 ಬೌಂಡರಿ), ಡೇವಿಡ್ ಮಿಲ್ಲರ್ 55 ರನ್ (23 ಎಸೆತ, 3 ಸಿಕ್ಸರ್, 6 ಬೌಂಡರಿ), ವೃದ್ಧಿಮಾನ್ ಸಾಹಾ 39 ರನ್, ಶುಭಮನ್ ಗಿಲ್ 6 ರನ್, ಅಜ್ಮತುಲ್ಲಾ ಒಮರ್ಜಾಯ್ 1 ರನ್, ಎಂ. ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 8 ರನ್, ಸಾಯಿ ಕಿಶೋರ್ 13 ರನ್, ರಶೀದ್ ಖಾನ್ 21 ರನ್ ಗಳಿಸಿದರು.

    GT vs DC 2

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ 200 ರನ್‌ಗಳ ಗಡಿ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ರಿಷಭ್ ಪಂತ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೇ 10 ಎಸೆತಗಳಲ್ಲಿ ಸ್ಟಬ್ಸ್ ಮತ್ತು ಪಂತ್ ಜೋಡಿ ಬರೋಬ್ಬರಿ 51 ರನ್ ಚಚ್ಚಿತ್ತು. ಇದರಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೂ ಸೇರಿದ್ದವು.

    Sai Sudharsan David Miller

    ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 88 ರನ್ (43 ಎಸೆತ, 8 ಸಿಕ್ಸರ್, 5 ಬೌಂಡರಿ), ಅಕ್ಷರ್ ಪಟೇಲ್ 66 ರನ್ (43 ಎಸೆತ, 4 ಸಿಕ್ಸರ್. 5 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 26 ರನ್ (2 ಸಿಕ್ಸರ್, 3 ಬೌಂಡರಿ), ಜೇಕ್ ಫ್ರೇಸರ್-ಮ್ಯಾಕ್‌ಗಾರ್ಕ್ 23 ರನ್, ಪೃಥ್ವಿ ಶಾ 11 ರನ್, ಶಾಯ್ ಹೋಪ್ 5 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಮಾರಕ ದಾಳಿ ನಡೆಸಿದ ಸಂದೀಪ್ ವಾರಿಯರ್ಸ್ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಸುಲಭ ತುತ್ತಾದ ಗುಜರಾತ್ – ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಅಮೋಘ ಜಯ; ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ!

    ಸುಲಭ ತುತ್ತಾದ ಗುಜರಾತ್ – ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಅಮೋಘ ಜಯ; ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ!

    – ತವರಿನಲ್ಲೇ ಗುಜರಾತ್‌ ಟೈಟಾನ್ಸ್‌ಗೆ ಹೀನಾಯ ಸೋಲು

    ಅಹಮದಾಬಾದ್: ಸಂಘಟಿತ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನದಿಂದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 9ನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ -0.074 ನೆಟ್‌ ರನ್‌ರೇಟ್‌ ಮತ್ತು 6 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ.

    Gujarat Titans

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. 90 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 8.5 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 92 ರನ್ ಸಿಡಿಸಿ ಗೆಲುವು ಸಾಧಿಸಿತು.

    90 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಅಬ್ಬರಿಸಿದ ಬ್ಯಾಟರ್‌ಗಳು ಪವರ್ ಪ್ಲೇ ಮುಗಿಯುವ ವೇಳೆಗೆ 67 ರನ್ ಬಾರಿಸಿದ್ದರು.

    DC vs GT

    ಆರಂಭಿಕ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮೊದಲ 10 ಎಸೆತಗಳಲ್ಲೇ 20 ರನ್ ಚಚ್ಚಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಪೃಥ್ವಿ ಶಾ ಸಹ 7 ರನ್‌ಗಳಿಗೆ ಔಟಾದರು. ಇದರಿಂದ ಗುಜರಾತ್ ಸಹ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಭಾವಿಸಲಾಗಿತ್ತು. ಆದ್ರೆ ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್ (Rishabh Pant) ಅವರ ಸ್ಫೋಟಕ ಪ್ರದರ್ಶನ ಡೆಲ್ಲಿ ತಂಡ ಸುಲಭ ಜಯ ಸಾಧಿಸುವಂತೆ ಮಾಡಿತು. ಡೆಲ್ಲಿ ಪರ ಅಭಿಷೇಕ್ ಪೋರೆಲ್ 7 ಎಸೆತಗಳಲ್ಲಿ 15 ರನ್, ಶಾಯ್ ಹೋಪ್ 19 ರನ್ ಗಳಿಸಿ ಔಟಾದರೆ, ರಿಷಭ್ ಪಂತ್ 16 ರನ್, ಸುಮಿತ್ ಕುಮಾರ್ 9 ರನ್ ಗಳಸಿ ಅಜೇಯರಾಗುಳಿದರು. ಗುಜರಾತ್‌ಟೈಟಾನ್ಸ್ ಪರ ಸಂದೀಪ್ ವಾರಿಯರ್ 2 ವಿಕೆಟ್ ಕಿತ್ತರೆ, ಸ್ಪೆನ್ಸರ್ ಜಾನ್ಸನ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

    Delhi Capitals 2 1

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಮೊದಲ 5 ಓವರ್‌ಗಳಲ್ಲೇ 30 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಭದ್ರವಾಗಿ ನೆಲೆಯೂರದೇ ಪೆವಿಲಿಯನ್ ಪರೇಡ್ ನಡೆಸಿದರು. ಈ ನಡುವೆ ರಶೀದ್ ಖಾನ್ ಅವರ ಸಾಧಾರಣ ಮೊತ್ತದ ಕೊಡುಗೆಯು ತಂಡವನ್ನು 90 ರನ್‌ಗಳ ಗಡಿ ತಲುಪುವಂತೆ ಮಾಡಿತು.

    Jake Fraser McGurk

    ಗುಜರಾತ್ ಪರ ಏಕಾಂಗಿ ಹೋರಾಟ ನಡೆಸಿದ ರಶೀದ್ ಖಾನ್ 31 ರನ್ (24 ಎಸೆತ, 1 ಸಿಕ್ಸರ್, 2 ಬೌಂಡರಿ) ಗಳಿಸಿದರು. ಉಳಿದಂತೆ ವೃದ್ಧಿಮಾನ್ ಸಾಹಾ 2 ರನ್, ಶುಭಮನ್ ಗಿಲ್ 8 ರನ್, ಸಾಯಿ ಸುದರ್ಶನ್ 12 ರನ್, ಡೇವಿಡ್ ಮಿಲ್ಲರ್ 2 ರನ್, ಅಭಿನವ್ ಮನೋಹರ್ 8 ರನ್, ರಾಹುಲ್ ತೆವಾಟಿಯಾ 10 ರನ್, ಮೋಹಿತ್ ಶರ್ಮಾ 2 ರನ್, ನೂರ್ ಅಹ್ಮದ್ 1 ರನ್, ಸ್ಪೆನ್ಸರ್ ಜಾನ್ಸನ್ 1 ರನ್ ಗಳಿಸಿದರೆ, ಶಾರೂಖ್‌ಖಾನ್ ಶೂನ್ಯಕ್ಕೆ ನಿರ್ಗಮಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ 2.3 ಓವರ್‌ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಹಾಗೂ ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

  • IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    – ಪಾಂಡ್ಯ ಫುಲ್‌ ಖುಷ್‌, ಟ್ರಿಸ್ಟಾನ್‌ ಸ್ಟಬ್ಸ್‌ ಸ್ಫೋಟಕ ಅರ್ಧಶತಕ ವ್ಯರ್ಥ

    ಮುಂಬೈ: ಕೊನೇ ಓವರ್‌ವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಖಾತೆ ತೆರೆದಿದೆ.

    MI vs DC

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3.4 ಓವರ್‌ಗಳಲ್ಲೇ ಡೇವಿಡ್‌ ವಾರ್ನರ್‌ (10 ರನ್‌) ಅವರ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 22 ಆಗಿತ್ತು. ಬಳಿಕ ಜೊತೆಗೂಡಿದ ಅಭಿಷೇಕ್‌ ಪೋರೆಲ್‌ ಹಾಗೂ ಪೃಥ್ವಿ ಶಾ ಜೋಡಿ ತಂಡಕ್ಕೆ ಚೇತರಿಕೆ ನೀಡಿತ್ತು. ಅಲ್ಲದೇ ಟ್ರಿಸ್ಟಾನ್ಸ್‌ ಸಬ್ಟ್‌ ಅವರ ಸ್ಫೋಟಕ ಪ್ರದರ್ಶನ ತಂಡದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. ಆದ್ರೆ ಇತರೆ ಬ್ಯಾಟರ್‌ಗಳ ಸಾಥ್‌ ನೀಡದೇ ತಂಡ ಸೋಲನುಭವಿಸಿತು.

    Mumbai Indians 2

    ಡೆಲ್ಲಿ ಪರ ಕೊನೇವರೆಗೂ ಹೋರಾಡಿದ ಸ್ಟಬ್ಸ್‌ 71 ರನ್‌ (25 ಎಸೆತ, 7 ಸಿಕ್ಸರ್‌, 3 ಬೌಂಡರಿ), ಪೃಥ್ವಿ ಶಾ 40 ಎಸೆತಗಳಲ್ಲಿ 66 ರನ್‌ (3 ಸಿಕ್ಸರ್‌, 8 ಬೌಂಡರಿ), ಅಭಿಷೇಕ್‌ 31 ಎಸೆತಗಳಲ್ಲಿ 41 ರನ್‌, ಡೇವಿಡ್‌ ವಾರ್ನರ್‌ 10 ರನ್‌, ರಿಷಭ್‌ ಪಂತ್‌ 1 ರನ್‌, ಅಕ್ಷರ್‌ ಪಟೇಲ್‌ 8 ರನ್‌, ಲಲಿತ್‌ ಯಾದವ್‌ 3 ರನ್‌, ಜೇ ರಿಚ್ಚರ್ಡ್‌ಸನ್‌ 2 ರನ್‌ ಗಳಿಸಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ 4 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ 2 ವಿಕೆಟ್‌ ಹಾಗೂ ಶೆಫರ್ಡ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಇಂಡಿಯನ್ಸ್‌ ಪರ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ 200 ರನ್‌ಗಳ ಗಡಿ ದಾಟುವಲ್ಲಿ ಮುಂಬೈ ಯಶಸ್ವಿಯಾಯಿತು.

    MI vs DC 2

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ 7 ಓವರ್‌ಗಳಲ್ಲಿ 80 ರನ್‌ ಬಾರಿಸಿತ್ತು. ನಂತರ ಕ್ರೀಸ್‌ಗಿಳಿದವರಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಹೊರತುಪಡಿಸಿದ್ರೆ ಉಳಿದ ಆಟಗಾರರು ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

    ಮುಂಬೈ ಪರ ರೋಹಿತ್‌ ಶರ್ಮಾ 49 ರನ್‌ (27 ಎಸೆತ, 3 ಸಿಕ್ಸರ್‌, 6 ಬೌಂಡರಿ), ಇಶಾನ್‌ ಕಿಶನ್‌ 42 ರನ್‌ (23 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 45 ರನ್‌ (21 ಎಸೆತ, 4 ಸಿಕ್ಸರ್‌, 2 ಬೌಂಡರಿ), ರೊಮಾರಿಯೋ ಶೆಫರ್ಡ್ ಸ್ಫೋಟಕ 39 ರನ್‌ (10 ಎಸೆತ, 4 ಸಿಕ್ಸರ್‌, 3 ಬೌಂಡರಿ), ಹಾರ್ದಿಕ್‌ ಪಾಂಡ್ಯ 39 ರನ್‌ ಚಚ್ಚಿದರೆ, ತಿಲಕ್‌ ವರ್ಮಾ 6 ರನ್‌, ಸೂರ್ಯಕುಮಾರ್‌ ಯಾದವ್‌ ಶೂನ್ಯ ಸುತ್ತಿದರು. ಹೆಚ್ಚುವರಿ 14 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್‌ ಕಿತ್ತರು, ಖಲೀಲ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

  • ಆಫ್ರಿಕಾ ತಂಡದಲ್ಲಿ ಇವರಿಬ್ಬರದ್ದೇ ಹವಾ

    ಆಫ್ರಿಕಾ ತಂಡದಲ್ಲಿ ಇವರಿಬ್ಬರದ್ದೇ ಹವಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

    ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

    ಇಂದೋರ್: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ 3ನೇ ಟಿ20 (T20) ಪಂದ್ಯದಲ್ಲಿ ರನ್ ಮಳೆ ಸುರಿದರೆ, ಇನ್ನೊಂದೆಡೆ ಟೀಂ ಇಂಡಿಯಾ ವೇಗಿ ದೀಪಕ್ ಚಹರ್ (Deepak Chahar) ಬೌಲಿಂಗ್ ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ (Tristan Stubbs) ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್‌ಗೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಔಟ್ ಮಾಡದೇ ಸ್ಟಬ್ಸ್‌ಗೆ ಎಚ್ಚರಿಕೆ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

    rohith sharma

    ಪಂದ್ಯದ 16ನೇ ಓವರ್‌ನಲ್ಲಿ ಸ್ಟಬ್ಸ್ ಅವರನ್ನು ಮಂಕಡ್ (Mankad) ರನೌಟ್ ಮೂಲಕ ಔಟ್ ಮಾಡುವ ಅವಕಾಶ ದೀಪಕ್ ಚಹರ್ ಮುಂದಿತ್ತು. 16ನೇ ಓವರ್‌ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್ ಬೌಲಿಂಗ್ ಮಾಡದೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಚಹರ್ ಔಟ್ ಮಾಡದೇ ಸ್ಟಬ್ಸ್‌ಗೆ ಕಣ್ಸನ್ನೆಯಲ್ಲೇ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಆಫ್ರಿಕಾಗೆ 49 ರನ್‌ಗಳ ಭರ್ಜರಿ ಜಯ – ಸರಣಿ ಗೆದ್ದ ಟೀಂ ಇಂಡಿಯಾ

    Tristan Stubbs And Deepak Chahar 1

    ಆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲದಿನಗಳಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ (Deepti Sharma) ಮಾಡಿದ್ದ ಮಂಕಡ್ ರನೌಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿಯ ನೂತನ ನಿಯಮದ ಪ್ರಕಾರ ಮಂಕಡ್ ರನೌಟ್‍ನ್ನು ಅಧಿಕೃತವಾಗಿ ರನೌಟ್ ಎಂದು ಪರಿಗಣಿಸಲಾಗಿದೆ. ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿಮ್ಮ ಸೇವೆ ತಂಡಕ್ಕೆ ಅಗತ್ಯವಿಲ್ಲ – ಹೆಟ್ಮೆಯರ್‌ರನ್ನು T20 ವಿಶ್ವಕಪ್‍ನಿಂದ ಹೊರಗಿಟ್ಟ CWI

    ಈ ಮಧ್ಯೆ ಚಹರ್ ಮಾತ್ರ ತಮಗೆ ಔಟ್ ಮಾಡುವ ಅವಕಾಶವಿದ್ದರೂ ಯುವ ಆಟಗಾರನಿಗೆ ಈ ಬಗ್ಗೆ ಎಚ್ಚರಿಕೆ ನೀಡಿ ತಮ್ಮಲ್ಲಿರುವ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ. ಇದೀಗ ಚಹರ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.‌

    dinesh kartik rishab pant

    ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್‍ನಿಂದ ಅಬ್ಬರಿಸಿದ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ 49 ರನ್‍ಗಳಿಂದ ಭರ್ಜರಿ ಜಯಗಳಿಸಿತು. ಗೆಲ್ಲಲು 228 ರನ್‍ಗಳ ಕಠಿಣ ಗುರಿಯನ್ನು ಪಡೆದ ಭಾರತ 18.3 ಓವರ್‌ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯವನ್ನು ಸೋತರೂ ಭಾರತ ಮಾಸ್ಟರ್ ಕಾರ್ಡ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

    Live Tv
    [brid partner=56869869 player=32851 video=960834 autoplay=true]