Saturday, 23rd February 2019

2 weeks ago

ಧೋನಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ – ವಿಡಿಯೋ ನೋಡಿ

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನ ಪ್ರವೇಶಿಸಿ ಧೋನಿ ಕಾಲಿಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ  ನೆಲಕ್ಕೆ ತಾಗುವ ಮುನ್ನವೇ ಧೋನಿ ಎಚ್ಚೆತ್ತು ಧ್ವಜ ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಭಿಮಾನಿಯಿಂದ ಪಡೆದ ಬಾವುಟವನ್ನು ಧೋನಿ ಭದ್ರತಾ ಸಿಬ್ಬಂದಿಗೆ ನೀಡಿದ ಬಳಿಕ ಆಟ ಮುಂದುವರಿಸಿದ್ದರು. ಧೋನಿ ಅವರು ತ್ರಿವರ್ಣ ಧ್ವಜಕ್ಕೆ ನೀಡಿದ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 14th time, […]

8 months ago

ಹಿಮಾಲಯ ಏರಿ ತ್ರಿವರ್ಣ ಧ್ವಜ ಹಾರಿಸಿ ಬಂದ ಮೈಸೂರಿನ ಗೃಹಿಣಿಯರು!

ಮೈಸೂರು: ನಗರದ ಗೃಹಿಣಿಯರ ತಂಡವೊಂದು ಹಿಮಾಲಯ ಪರ್ವತ ಏರಿ ಯಶಸ್ವಿಯಾಗಿ ಹಿಂದಿರುಗಿ ಬಂದಿದ್ದಾರೆ. ಮೈಸೂರಿನ 27 ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಹಿಮಾಲಯ ಪರ್ವತದ ಮೌಂಟ್ ಬರಾಟ್ ಪರ್ವತವನ್ನು ಮಹಿಳೆಯರು ಯಶಸ್ವಿಯಾಗಿ ಏರಿ ಇದೀಗ ವಾಪಾಸ್ ಆಗಿದ್ದಾರೆ. ಸುಮಾರು 14.500 ಸಾವಿರ ಅಡಿ ಎತ್ತರದ ಕಡಿದಾದ ಮೌಂಟ್ ಬರಾಟ್ ಪರ್ವತವನ್ನು ಏರಿದ್ದು, ಪರ್ವತದ ಮೇಲೆ ಗೃಹಿಣಿಯರು...