Saturday, 17th August 2019

1 week ago

ಬೆಂಗಳೂರಿನಲ್ಲೂ ಶುರುವಾಯ್ತು ವರುಣನ ಆರ್ಭಟ- ವಾಹನ ಸವಾರರ ಪರದಾಟ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಮಹಾಮಳೆ ಇಂದು ಸಿಲಿಕಾನ್ ಸಿಟಿಯಲ್ಲು ತನ್ನ ಆರ್ಭಟ ತೋರಿದೆ. ಬೆಂಗಳೂರಿನಲ್ಲಿ ಹಲವು ಕಡೆ ಸುರಿದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅವಂತರ ಸೃಷ್ಟಿ ಮಾಡಿರುವ ಮಳೆ ಬೆಂಗಳೂರಿಗೂ ಬರುವ ಮನ್ಸೂಚನೆ ನೀಡಿದೆ. ಇಂದು ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿ ಬೆಂಗಳೂರಿನ ಬಹುತೇಕ ಕಡೆ ಜೋರು ಮಳೆಯಾಗಿದೆ. ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮೀ ಲೇಔಟ್ ಮತ್ತು ಮೆಜೆಸ್ಟಿಕ್ ಸುತ್ತಮುತ್ತ ಮಳೆಯಿಂದಾಗಿ ಮನೆಗೆ ತೆರಳಲು ಆಗದೇ ಶಾಲಾ ಮಕ್ಕಳು […]

2 weeks ago

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ- ಒಂದೇ ಕುಟುಂಬದ 6 ಮಂದಿ ಸಾವು

ಧಾರವಾಡ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾಶೀಳ ಗ್ರಾಮ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲರೂ ಕರ್ನಾಟಕ ಮೂಲದ ಧಾರವಾಡ ನಿವಾಸಿ ನೀಜಾಮುದ್ದಿನ್ ಕುಟುಂಬದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರು ಚಾಲಕ ಮತ್ತು ಹೆಣ್ಣು ಮಗುವಿಗೆ ಗಂಭೀರವಾಗಿ ಗಾಯಗೊಂಡಿದ್ದು,...

ಕೆಎಂಸಿ ಆವರಣದಲ್ಲಿ ಬಿದ್ದ ಬೃಹತ್ ಮರ- ಇಬ್ಬರಿಗೆ ಗಾಯ

2 months ago

– ನಾಲ್ಕು ಕಾರು ಜಖಂ, ಅನಾಥವಾದ ಸಾವಿರಾರು ಬಾವಲಿಗಳು ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಮರ ಉರುಳಿ ಬಿದ್ದಿದೆ. ಮರದಡಿಯಲ್ಲಿದ್ದ ನಾಲ್ಕು ಕಾರುಗಳು ಜಖಂ ಆಗಿದ್ದು ಇಬ್ಬರಿಗೆ ಗಾಯವಾಗಿದೆ. ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ಕಟ್ಟಡದ ಮುಂಭಾಗದಲ್ಲೇ ದೊಡ್ಡ ಮರವೊಂದಿತ್ತು....

24 ಗಂಟೆಯಿಂದ ದರ್ಶನ್ ಮನೆ ಮುಂದೆಯಿದ್ದ ಮರ ಕೊನೆಗೂ ತೆರವು

2 months ago

ಬೆಂಗಳೂರು: ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಮರ ಧರೆಗುರುಳಿತ್ತು. ಆದರೆ ಎರಡು ದಿನಗಳಾದರೂ ಬಿಬಿಎಂಪಿ ಅವರು ಮರವನ್ನು ತೆರವು ಮಾಡಿರಲಿಲ್ಲ. ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ ಮರಗಳನ್ನು ತೆರವು ಮಾಡಿದ್ದಾರೆ....

ಬಿರುಗಾಳಿ ಸಹಿತ ಭಾರೀ ಮಳೆ – ಶಾಲೆಗೆ ಆಗಮಿಸಿದ ವಿದ್ಯಾರ್ಥಿ, ಶಿಕ್ಷಕರು ಶಾಕ್

2 months ago

– ಧರೆಗುರುಳಿತು 160 ವರ್ಷದ ಹಳೆಯ ಬೃಹತ್ ಆಲದ ಮರ ಬೆಂಗಳೂರು/ವಿಜಯಪುರ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ...

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೊಡಗಿನಲ್ಲಿ ಮರ ಕಡಿಯುವುದನ್ನು ನಿಲ್ಲಿಸಲು ಸಿಎಂ ಸೂಚನೆ

2 months ago

ಬೆಂಗಳೂರು: 800 ಮರಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ರೆಸಾರ್ಟ್ ನಿರ್ಮಾಣ ಮಾಡಲು ಕೊಡಗಿನಲ್ಲಿ ಬರೋಬ್ಬರಿ 800 ಮರಗಳನ್ನು ಕಡಿಯುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಇಂದು ಬೆಳಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡಿತ್ತು. ಈ ವರದಿ ನೋಡಿದ ಸಿಎಂ...

ಕೊಡಗಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಬರೋಬ್ಬರಿ 800 ಮರಗಳ ಕಡಿತ

2 months ago

ಮಡಿಕೇರಿ: ಕಾಡುಗಳ ನಾಶದಿಂದಲೇ ಕೊಡಗಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ಮನೆ, ತೋಟಗಳನ್ನೆಲ್ಲಾ ಕಳೆದುಕೊಂಡು ಆಘಾತ ಅನುಭವಿಸಿವೆ. ಈಗ ಮತ್ತೆ ಮುಂಗಾರು ಬಂದಿದೆ. ಆದರೆ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಸರ್ಕಾರ ಪಾಠ ಕಲಿತಂತ್ತಿಲ್ಲ. ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ...

ಜಿಲ್ಲೆಯಾದ್ಯಂತ ವರುಣನ ಆರ್ಭಟ – ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರೋರಾತ್ರಿ ಭರ್ತಿ

2 months ago

-ಫ್ಲೈಓವರ್ ಮೇಲೆ 2 ಅಡಿಯಷ್ಟು ನೀರು -ಬಿಸಿಲಿಗೆ ಬೆಂದಿದ್ದ ಜನರ ಮೊಗದಲ್ಲಿ ಹರ್ಷ ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೀಗಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ...