Tuesday, 16th July 2019

Recent News

2 weeks ago

ವರುಣನ ಅಬ್ಬರಕ್ಕೆ ಕದಂಬ ನೌಕಾನೆಲೆಯ ಸುತ್ತಮುತ್ತ ಮಳೆ ನೀರು

ಕಾರವಾರ: ರಾತ್ರಿಯಿಂದ ಬೆಳಗ್ಗಿನವರೆಗೆ ಸುರಿದ ಅಬ್ಬರದ ಮಳೆಯಿಂದಾಗಿ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆಯ ಸುತ್ತಮುತ್ತ ಮಳೆ ನೀರು ಆವರಿಸಿದ್ದು, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ನಿರಂತರ ಮಳೆಯಿಂದಾಗಿ ನೌಕಾನೆಲೆ ಭಾಗದ 10 ಎಕರೆಗೂ ಹೆಚ್ಚು ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿಯೂ ಸಹ ನೀರು ಹರಿದಿದ್ದು, ಅಲ್ಪ ಸಮಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, 54 ಮಿಲೀ ಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಇತ್ತ ಕಳೆದ ಎರಡು ಮೂರು […]

2 months ago

ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ

ಬೆಂಗಳೂರು: ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಇನ್ನೂ ಎರಡು ದಿನ ವರುಣನ ಅಬ್ಬರ ಜೋರಾಗಲಿದೆ. ಗುಡುಗು, ಮಿಂಚು ಸಹಿತ ಇಂದು ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಸ್ಸಾಂ, ಓಡಿಶಾ, ತೆಲಂಗಾಣ ಮೂಲಕ ಕರ್ನಾಟಕಕ್ಕೆ ವಾಯುಭಾರ ಕುಸಿತದಿಂದ ಮಳೆಯಾಗುತ್ತಿದೆ. ಗಾಳಿ ಸಹಿತ ರಾಜ್ಯ ರಾಜಧಾನಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ...

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

3 months ago

ಅಹಮಾದಾಬಾದ್: ಯುವಕನೊಬ್ಬ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು, ಆತ ಪ್ರೀತಿಸುವ ಯುವತಿ ಜೊತೆಗೆ ಮದುವೆ ಆಗಲು ದಾರಿ ಮಾಡಿ ಕೊಟ್ಟಂತಾಗಿದೆ. ವತ್ಸಲ್ ಪಾರೇಕ್ ನಿಯಮ ಉಲ್ಲಂಘಿಸಿ ಮದುವೆಯಾದ ಯುವಕ. ವತ್ಸಲ್ ತನ್ನ ಪ್ರೇಯಸಿ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆತ ಟ್ರಾಫಿಕ್...

ಬೆಂಗ್ಳೂರಿನಲ್ಲಿ ಬಿಜೆಪಿ ಸಮಾವೇಶ- ಮಾರ್ಗ ಬದಲಾಯಿಸಿದ ಟ್ರಾಫಿಕ್ ಪೊಲೀಸರು

3 months ago

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಮಾರ್ಗ ಬದಲಾಯಿಸಿದ್ದಾರೆ. ಸಮಾವೇಶಕ್ಕೆ ಬರುವ ರಾಜಕೀಯ ನಾಯಕರು, ಆಹ್ವಾನಿತರಿಗೆ ತ್ರಿಪುರವಾಸಿನಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 1. ದಕ್ಷಿಣ ಬೆಂಗಳೂರಿನಿಂದ ವಿಮಾನ ನಿಲ್ದಾಣ: ಬಸವೇಶ್ವರ ಸರ್ಕಲ್- ಹಳೆ...

ಆಂಧ್ರ, ತೆಲಂಗಾಣಕ್ಕೆ ಹೊರಟ ಮತದಾರರಿಗೆ ತಟ್ಟಿದ ಟ್ರಾಫಿಕ್ ಬಿಸಿ

3 months ago

ಬೆಂಗಳೂರು: ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಲೋಕಸಭಾ-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಹಾಕಲು ಮತದಾರರು ಆಂಧ್ರ ಹಾಗೂ ತೆಲಂಗಾಣಕ್ಕೆ ಹೊರಟ ಮತದಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಬರೋಬ್ಬರಿ 3-4 ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಬೆನ್ನಿಗಾನ ಹಳ್ಳಿಯಿಂದ ಕೆಆರ್ ಪುರಂವರೆಗೆ,...

ಓಲಾ ಬ್ಯಾನ್ ವಾಪಸ್ – ಎಲೆಕ್ಷನ್ ಫಂಡ್ ಬಂತಾ ಎಂದು ಖರ್ಗೆ ಕಾಲೆಳೆದ ಟ್ವೀಟಿಗರು!

4 months ago

ಬೆಂಗಳೂರು: ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದೆ ಎಂದು ಟ್ವೀಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ನಯವಾಗಿಯೇ ಕಾಲೆಳೆಯುತ್ತಿದ್ದಾರೆ. ಚುನಾವಣೆಗೆ ಫಂಡ್ ಬಂದಿರಬೇಕು ಅದಕ್ಕಾಗಿ ಎರಡೇ ದಿನದಲ್ಲಿ ಆದೇಶ ವಾಪಸ್ ಆಗಿದೆ ಎಂದು ಟ್ವೀಟ್ ಗಳು...

ಸಿಎಂ ಕಾರಿನ ಮೇಲೆ ಬಿತ್ತು 2 ಕೇಸ್: ಇನ್ನೂ ಕಟ್ಟಿಲ್ಲ ದಂಡ

4 months ago

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸಂಬಂಧ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಕಾರಿನ ಮೇಲೆ ಎರಡು ದೂರು ದಾಖಲಾಗಿದೆ. ಅತಿ ವೇಗ ಹಾಗೂ ಕಾರು ಚಾಲನೆ ವೇಳೆ ಮೊಬೈಲ್ ಬಳಕೆ ಹಿನ್ನೆಲೆ ಎರಡು ಕೇಸ್ ದಾಖಲಾಗಿದ್ದು, ಕೆಎ 42 ಪಿ...

ಎಂಎಲ್‍ಎ ಮಗನಿಗೆ ಮದುವೆ ಸಂಭ್ರಮ -ಸಂಚಾರ ದಟ್ಟಣೆಯಲ್ಲಿ ಒದ್ದಾಡಿ ಹೋದ ಜನ

5 months ago

ಬೆಂಗಳೂರು: ಯಲಹಂಕದ ಬಿಜೆಪಿ ಶಾಸಕ ವಿಶ್ವನಾಥ್ ಮಗನ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಆದರೆ ದೊಡ್ಡವರ ಮದುವೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಹಾಗೂ ಪಲ್ಲವಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ...