Sunday, 17th November 2019

7 days ago

ಹೊಗೇನಕಲ್‍ಗೆ ಹೋಗೋ ಪ್ರವಾಸಿಗರೇ ಎಚ್ಚರ- 2 ವರ್ಷದ ನಂತ್ರ ಕೋಡಿ ಹರಿದ ಗೋಪಿನಾಥಂ ಡ್ಯಾಂ

ಚಾಮರಾಜನಗರ: ಸತತ ಮಳೆಗೆ ಮೈದುಂಬಿ ಗೋಪಿನಾಥಂ ಡ್ಯಾಂ ಕೋಡಿ ಬಿದ್ದಿರುವುದರಿಂದ ಹೊಗೇನಕಲ್‍ಗೆ ತೆರಳಲು ಪ್ರವಾಸಿಗರು ಪ್ರಯಾಸ ಪಡುವಂತಾಗಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಿನಾಥಂ ಡ್ಯಾಂ ಎರಡು ವರ್ಷದ ಬಳಿಕ ತುಂಬಿದೆ. ಶುಕ್ರವಾರ ಬಿದ್ದ ಜೋರು ಮಳೆಗೆ ಜಲಾಶಯದ ನೀರು, ಹಳ್ಳಕೊಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ‘ತೇಂಗಾಕೋಂಬು’ ಎಂಬಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ವಾರಾಂತ್ಯದ ಮೋಜಿಗಾಗಿ ಹೊಗೇನಕಲ್‍ಗೆ ತೆರಳುವ ಪ್ರವಾಸಿಗರು ತೆರಳಲಾಗದೇ ಮೂರು 3 ತಾಸುಗಳಿಂದ ರಸ್ತೆತುದಿಯಲ್ಲೇ ನಿಂತಿದ್ದರು. ಬೈಕ್ ಸವಾರರಂತೂ 3-4 ಮಂದಿಯ ಸಹಾಯದಿಂದ ಬೈಕನ್ನು ಒಂದು […]

1 month ago

ಚಾರ್ಮಾಡಿಯಲ್ಲಿ ಅರಳಿ ನಿಂತ ನೀಲಾಂಜನಿ ಕುರಂಜಿ

-12 ವರ್ಷಗಳಿಗೊಮ್ಮೆ ಅರಳುವ ಹೂವು ಚಿಕ್ಕಮಗಳೂರು: ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಹಾಡು ಕಾಫಿನಾಡಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರು ಉಳಿದದೆಲ್ಲವು ನಶ್ವರವೇ ಸರಿ ಎನಿಸುವಂತೆ ಕಾಫಿನಾಡಲ್ಲಿ ಅಪರೂಪದ ಹೂವೊಂದು ಅರಳಿ ನಿಂತು, ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. ಹೌದು. 12 ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಕಾಫಿನಾಡಿನ...

ಅಯ್ಯನಕೆರೆಯಲ್ಲಿ ಸಂಭ್ರಮ- ಮಳೆ ಅಬ್ಬರಕ್ಕೆ ಪ್ರವಾಸಿ ತಾಣವಾದ ಸಖರಾಯಪಟ್ಟಣ

1 month ago

ಚಿಕ್ಕಮಗಳೂರು: ಮಲೆನಾಡಿನ ಜಲಪ್ರಳಯಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾದ್ರೆ, ಬಯಲುಸೀಮೆ ಜನರಿಗೆ ಬದುಕುವ ಚೈತನ್ಯ ತಂದಿದೆ. ಅಲ್ಲಿ ಅಲ್ಲೋಲ-ಕಲ್ಲೋಲ, ಇಲ್ಲಿ ಹರ್ಷೋದ್ಘಾರ ಎನ್ನುವಂತೆ ಒಂದೆಡೆ ನೀರಿಂದಲೇ ಬದುಕು ಬೀದಿಗೆ ಬಂದಿದ್ದರೆ, ಇನ್ನೊಂದೆಡೆ ಅದೇ ನೀರು ಬದುಕುವ ಆಸೆ ತಂದಿದೆ. ಹೌದು. ಮೂರು ಹವಾಗುಣ...

ಮೈದುಂಬಿದ ಭದ್ರೆಯ ಒಡಲಲ್ಲಿ ಮೊದಲ ಬಾರಿ ​​ರ‍್ಯಾಫ್ಟಿಂಗ್‌ ಆಯೋಜನೆ

2 months ago

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬರಿ ಕಾರ್ ರ‍್ಯಾಲಿಯಲ್ಲ. ಮಲೆನಾಡಿನ ಗ್ರಾಮೀಣ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಮೈದುಂಬಿ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಮೊದಲ ಬಾರಿಗೆ ಸಾಹಸಮಯ ​​ರ‍್ಯಾಫ್ಟಿಂಗ್‌ ಆಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಭದ್ರ ನದಿ ತುಂಬ ವೇಗವಾಗಿ...

ಪ್ರಕೃತಿಯೇ ನಾಚುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

2 months ago

ಚಿಕ್ಕಮಗಳೂರು: ಹಸಿರು ಮುತ್ತೈದೆ ಮುಡಿಗೆ ದುಂಡು ಮಲ್ಲಿಗೆ ಸೊಬಗು ಎನ್ನುವಂತೆ, ಮೋಡವೇ ಗಿರಿಗೆ ಮುತ್ತಿಕುತ್ತಿರುವಂತೆ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೇ ನಾಚುವ ಸೌಂದರ್ಯ ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಹೌದು. ಪ್ರಕೃತಿ ಪ್ರಿಯರು, ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡುವ...

ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ

2 months ago

-ಚುಮುಚುಮು ಚಳಿಯಯಲ್ಲಿ ಮಿಂದೆದ್ದ ಪ್ರವಾಸಿಗರು ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಬೆಟ್ಟ ಬರದ ನಡುವೆಯೂ ಪ್ರವಾಸಿಗರ ಪಾಲಿಗೆ ರಸದೌತಣ ಉಣಬಡಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಪ್ರವಾಸಿಗರ ದಂಡು ಈಗ ಬರದನಾಡಿನ ಪ್ರವಾಸಿತಾಣದತ್ತ ಲಗ್ಗೆ ಇಡುತ್ತಿದ್ದು ಇಡೀ ಸ್ಥಳ ಪ್ರವಾಸಿಗರಿಂದ ತುಂಬಿ...

ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

2 months ago

ಹೈದರಾಬಾದ್: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 63 ಪ್ರಯಾಣಿಕರಿದ್ದ ಪ್ರವಾಸಿ ಬೋಟ್ ಅಪಘಾತಕ್ಕೀಡಾಗಿ, 13 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೋಟ್...

ಜೋಗ ಜಲಪಾತಕ್ಕೆ ವರ್ಷ ವೈಭವ- ಲಿಂಗನಮಕ್ಕಿ ಅಣೆಕಟ್ಟಿನ 11 ಗೇಟ್ ಓಪನ್

2 months ago

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲೂ ಕೇವಲ ಅರ್ಧ ಅಡಿಯಷ್ಟು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಡ್ಯಾಮಿನ 11 ಗೇಟ್‍ಗಳನ್ನು ತೆರೆಯಲಾಗಿದ್ದು, ಜೋಗ ಜಲಪಾತದ ವೈಭವ ಜೋರಾಗಿದೆ. ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಕಾರಣಕ್ಕೆ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು,...