Tag: TD Rajegowda

  • ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಚಿಕ್ಕಮಗಳೂರು: ರಸ್ತೆ ದುರಸ್ತಿ (Road Repair) ಮಾಡಿಸಿದ್ದು ಪಟ್ಟಣ ಪಂಚಾಯತ್‌ನ (Panchayat) ಹಣದಲ್ಲಿ. ಆದರೆ, ಬ್ಯಾನರ್ ಹಾಕಿಸಿಕೊಂಡಿದ್ದು ಶಾಸಕರು. ಇಂತಹದ್ದೊಂದು ನಗೆಪಾಟಲಿನ ಘಟನೆಗೆ ಜಿಲ್ಲೆಯ ಕೊಪ್ಪ (Koppa) ಪಟ್ಟಣ ಸಾಕ್ಷಿಯಾಗಿದೆ.

    ಕೊಪ್ಪ ಪಟ್ಟಣದಲ್ಲಿ ರಸ್ತೆ ಸಾಕಷ್ಟು ಹಾಳಾಗಿತ್ತು. ಆದರೆ, ಶಾಸಕರು ರಸ್ತೆ ದುರಸ್ತಿಯನ್ನು ಮಾಡಿಸಿರಲಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯತ್ ರಸ್ತೆಗೆ ಪ್ಯಾಚ್ ಹಾಕಿಸಿ ದುರಸ್ತಿ ಮಾಡಿಸಿತ್ತು. ಆದರೆ, ರಸ್ತೆಗೆ ಪ್ಯಾಚ್ ಹಾಕಿಸಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟರೆಂದು ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ.ರಾಜೇಗೌಡ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಕೊಪ್ಪ ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಅಯೋಮಯವಾಗಿತ್ತು. ಟಿ.ಡಿ.ರಾಜೇಗೌಡ (TD Rajegowda) 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರು ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ, ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ಯಾವುದೇ ಬಿಲ್ ಪಾವತಿ ಮಾಡಿರುವುದಿಲ್ಲ. 2023ರಲ್ಲಿ ಪಟ್ಟಣ ಪಂಚಾಯತ್ ಜನರ ತೆರಿಗೆ ಹಣದಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಅದಾದ ನಂತರವೂ 2-3 ಬಾರಿ ರಸ್ತೆಗೆ ಪ್ಯಾಚ್ ಕೆಲಸ ಮಾಡಲಾಗಿದೆ. ಆದರೆ, ಶಾಸಕರ ನಿಧಿಯಿಂದ ಈವರೆಗೂ ಯಾವುದೇ ಅನುದಾನ ನೀಡಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ಪಟ್ಟಣ ಪಂಚಾಯತ್ ರಸ್ತೆ ದುರಸ್ತಿ ಮಾಡಿಸಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಳ್ಳುವುದು ಎಷ್ಟು ಸರಿ ಎಂದು ಕೊಪ್ಪ ಪಟ್ಟಣ ಪಂಚಾಯತ್ ಸದಸ್ಯರು ಶಾಸಕರನ್ನು ಪ್ರಶ್ನಿಸಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಂಡಿರುವುದನ್ನು ಕಂಡ ಕೊಪ್ಪ ನಿವಾಸಿಗಳು ಶಾಸಕರನ್ನು ಕಂಡು ನಗುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ದಲಿತಾಸ್ತ್ರ ಹೂಡಲು ಮುಂದಾಯ್ತಾ I.N.D.I.A- ಖರ್ಗೆ ಪ್ರಧಾನಿ ಅಭ್ಯರ್ಥಿ?

  • ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

    ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

    ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೃಂಗೇರಿ ಕ್ಷೇತ್ರವ್ಯಾಪ್ತಿಯಲ್ಲಿನ 300ಕ್ಕೂ ಅಧಿಕ ಕಾರ್ಯಕರ್ತರು ಏಕಾ-ಏಕಿ ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ಸೇರ್ಪಡೆಗೊಂಡಿದ್ದಾರೆ.

    ಇದರಿಂದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡಗೆ (TD Rajegowda) ಸ್ವ-ಹೋಬಳಿಯಲ್ಲೇ ಶಾಕ್ ಕೊಟ್ಟಂತಾಗಿದೆ. ಶಾಸಕನ ವರ್ತನೆಯಿಂದ 300ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ದ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್

    bjp join 1

    ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಕಾರ್ಯಕರ್ತರು, ಅವರೇ ಶಾಮಿಯಾನ ಹಾಕಿ, ಕಾರ್ಯಕ್ರಮ ಮಾಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ, ಮೀಸಲಾತಿ (Reservation) ಹೆಚ್ಚಿಸಿದ ಬಿಜೆಪಿಗೆ ಜಿಂದಾಬಾದ್ ಕೂಗಿ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    BJP - CONGRESS

    ನೂತನ ಕಾರ್ಯಕರ್ತರನ್ನು ಬಿಜೆಪಿ ಮಾಜಿ ಸಚಿವ ಜೀವರಾಜ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್

    ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್

    ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಅತಿವೃಷ್ಟಿಯ ಹಿನ್ನೆಲೆ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರು ಶೃಂಗೇರಿ ಜಗದ್ಗುರುಗಳ ಮೊರೆ ಹೋಗಿದ್ದಾರೆ.

    ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಬಳಿಗೆ ಕಾಂಗ್ರೆಸ್, ಬಿಜೆಪಿ ಪಕ್ಷದಿಂದ ಒಟ್ಟಾಗಿ ತೆರಳಿದ್ದು, ಶಾರದಾಂಬೆಗೆ ಪೂಜೆ ಸಲ್ಲಿಸಿ ಮಳೆ ನಿಲ್ಲುವಂತೆ ಪ್ರಾರ್ಥನೆ ನಡೆಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಮಳೆಯ ಆರ್ಭಟ – 10 ದಿನಗಳಲ್ಲಿ 30 ಕೋಟಿ ನಷ್ಟ

    Sringeri

     

    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ವಾಡಿಕೆಗಿಂದ ದುಪ್ಪಟ್ಟು ಮಳೆ ಸುರಿದ ಪರಿಣಾಮ ಇದೀಗ ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆ ರಾಜಕಾರಣಿಗಳು ಕೊನೆಯದಾಗಿ ಮಳೆ ನಿಯಮಿತವಾಗಿ ಬೀಳುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಾರದ ನಂತರ ಉಡುಪಿಯಲ್ಲಿ ಶಾಲೆ ಶುರು – ನೆರೆ ಲೆಕ್ಕಿಸದೇ ದೋಣಿ ಹತ್ತಿದ ವಿದ್ಯಾರ್ಥಿಗಳು

    Live Tv
    [brid partner=56869869 player=32851 video=960834 autoplay=true]

  • ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಚಿಕ್ಕಮಗಳೂರು: ಅತೃಪ್ತ ಶಾಸಕರೆಲ್ಲಾ ಅನರ್ಹವಾಗಿರೋದು ಬಿಜೆಪಿಗೆ ವರವಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವ ವೇಳೆ ಯಾವುದೇ ಪಕ್ಷದವರು ಶೇ.51ರಷ್ಟು ಮತ ಹೊಂದಿರಬೇಕು. ಅದನ್ನು ಪಟ್ಟಿ ಸಮೇತ ರಾಜ್ಯಪಾಲರಿಗೆ ತೋರಿಸಬೇಕು. ಅದು ಸಂವಿಧಾನದ ನಿಯಮ ಎಂದು ತಿಳಿಸಿದ್ದಾರೆ.

    BSY YEDDY

    ಸದನ ಪ್ರಾರಂಭವಾದ ಮೇಲೆ ಯಾರು ಹೆಚ್ಚು ಮತ ಗಳಿಸುತ್ತಾರೋ ಅವರು ವಿಶ್ವಾಸ ಮತ ಗಳಿಸುತ್ತಾರೆ, ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜ್ಯಪಾಲರು ಯಡ್ಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಾಗ ಇವರಿಗೆ ಶೇ.51ರಷ್ಟು ಮತ ಇದೆಯಾ ಎಂದು ಯೋಚಿಸಬೇಕಿತ್ತು. ಆದರೆ, ಅವರು ಕೇಳಿದ ತಕ್ಷಣ ಅವಕಾಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    BJP FINAL 1

    ಅದೃಷ್ಟ ಎಂಬಂತೆ ಅತೃಪ್ತರು ಅನರ್ಹವಾಗಿದ್ದಾರೆ. ಈಗ ಅವರಿಗೆ ಅವಕಾಶ ಇದೆ. ಇದನ್ನು ನಾವು ಒಪ್ಪುತ್ತೇವೆ. ಆದರೆ, ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಆಗುವುದಕ್ಕಿಂತ ಮೊದಲೇ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿರೋದು ಸಂವಿಧಾನ ವಿರೋಧ. ರಾಜ್ಯಪಾಲರ ನಡೆ ನಮಗೆ ನೋವು ತಂದಿದೆ. ಸಂವಿಧಾನ ಕಾಪಾಡಬೇಕಾದವರೆ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

  • ಕರ್ಕೊಂಡ್ ಹೋಗಿ ಸಿಎಂ ಮಾಡ್ತೀನಿ ಅಂದ್ರು ಬಿಜೆಪಿ ಸೇರಲ್ಲ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

    ಕರ್ಕೊಂಡ್ ಹೋಗಿ ಸಿಎಂ ಮಾಡ್ತೀನಿ ಅಂದ್ರು ಬಿಜೆಪಿ ಸೇರಲ್ಲ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

    ಚಿಕ್ಕಮಗಳೂರು: ನನ್ನನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುತ್ತೇನೆ ಅಂದ್ರು ನಾನು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಶೃಂಗೇರಿ ಕಾಂಗ್ರೆಸ್ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

    ಬಿಜೆಪಿ ಅವರು ಎಲ್ಲ ಅಧಿಕಾರ, ಹಣ ಕೊಡುತ್ತೇನೆ ಎಂದು ಆಮೀಷ ಒಡ್ಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಖುದ್ದಾಗಿ ಕರೆ ಮಾಡಿ ನನ್ನನ್ನು ಸಂಪರ್ಕಿಸಿದ್ದಾರೆ. ನನಗೆ ಪರಿಚಯಸ್ಥರ ಮೂಲಕವೂ ಪಕ್ಷ ತೊರೆಯುವಂತೆ ಹೇಳಿಸುತ್ತಿದ್ದಾರೆ. ಆದ್ರೆ ಎಂದಿಗೂ ನಾನು ಕಾಂಗ್ರೆಸ್ ಪಕ್ಷ ತೊರೆಯಲ್ಲ ಎಂದು ಟಿ.ಡಿ.ರಾಜೇಗೌಡ ಸ್ಪಷ್ಟನೆ ನೀಡಿದರು.

    bjp flag

    ಬೆಂಗಳೂರಿನಲ್ಲಿ ನಡೆದ ಶಾಸಕಾಂಗದ ಸಭೆಗೆ ತೆರಳಲು ನಾಲ್ಕು ಗಂಟೆ ತಡವಾಗಿದ್ದರಿಂದ ನಾನು ಸುದ್ದಿಯಲ್ಲಿದ್ದೇನೆ. ನಾನು ಯಾವತ್ತು ಸುದ್ದಿಯನ್ನು ಮಾಡುವಂತಹ ವ್ಯಕ್ತಿ ಅಲ್ಲ. ಕಳೆದ 34 ವರ್ಷಗಳಲ್ಲಿ ಆಗದಷ್ಟು ದೊಡ್ಡ ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ಸಾಕಷ್ಟು ಪ್ರಾಣಹಾನಿ, ಸಾವಿರ ಕೋಟಿಗೂ ಅಧಿಕ ಬೆಳೆಹಾನಿಯಾಗಿದೆ. ಸರ್ಕಾರ ಎಲ್ಲ ಹಾನಿಗೂ ಪರಿಹಾರ ನೀಡಿದ್ದು, ಅದನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ನಾನು ಯಾವುದೇ ಗೊಂದಲದ ರಾಜಕಾರಣದಲ್ಲಿ ಇಲ್ಲ ಅಂತಾ ಮಾಧ್ಯಮಗಳಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv