Friday, 21st February 2020

4 months ago

ಕೊನೆಗೂ ಬದುಕಿ ಬರಲಿಲ್ಲ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ

ಚೆನ್ನೈ: ಬೋರ್‌ವೆಲ್‌ನಲ್ಲಿ ಬಿದ್ದು ಕಳೆದ ನಾಲ್ಕು ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕ ಸುಜಿತ್(2) ಇನ್ನಿಲ್ಲ. ಕಾರ್ಯಾಚರಣೆ ವಿಫಲವಾಗಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್‌ವೆಲ್‌ಗೆ ಶುಕ್ರವಾರ ಸಂಜೆ ಸುಜಿತ್ ಆಯಾತಪ್ಪಿ ಬಿದ್ದಿದ್ದನು. ಸುಮಾರು 600 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಿದ್ದ ಸುಜಿತ್ 100 ಅಡಿ ಆಳದಲ್ಲಿ ಸಿಲುಕಿದ್ದನು. ಕಳೆದ ನಾಲ್ಕು ದಿನಗಳಿಂದ ಸುಜಿತ್ ನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ ಹರಸಾಹಸ ಪಟ್ಟರೂ ಬಾಲಕನ ಜೀವ ಉಳಿಸಲು ಆಗಲಿಲ್ಲ. ಜಿಲ್ಲಾಡಳಿತ […]

4 months ago

ತಮಿಳುನಾಡಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕ ಪರದಾಟ

ಚೆನ್ನೈ: 2 ವರ್ಷದ ಬಾಲಕನೊಬ್ಬ ಕೊಳವೆಬಾವಿಗೆ ಬಿದ್ದಿರುವ ಘಟನೆ ತಮಿಳುನಾಡಿನ ತಿರಚ್ಚಿ ಜಿಲ್ಲೆಯ ನಡುಕಟ್ಟುಪಟ್ಟಿಯಲ್ಲಿ ನಡೆದಿದೆ. ಬಾಲಕನನ್ನು ಸುಜಿತ್ ವಿಲ್ಸನ್ ಎಂದು ಗುರುತಿಸಲಾಗಿದೆ. ಈತ 25 ಅಡಿ ಆಳಕ್ಕೆ ಬಿದ್ದಿದ್ದಾನೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದಾಗ 7 ವರ್ಷದ ಹಿಂದೆ ತೆರೆದಿದ್ದ ಬೋರ್‍ವೆಲ್‍ಗೆ ಸುಜಿತ್ ವಿಲ್ಸನ್ ಬಿದ್ದಿದ್ದಾನೆ. ಬಾಲಕ ಕೊಳವೆ ಬಾವಿಗೆ...

ಪತಿಯಿಂದಾಗಿ ಮೂವರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ಳು

5 months ago

ಚೆನ್ನೈ: ತಾಯಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 29 ವರ್ಷದ ಸತ್ಯವತಿ ಎಂದು ಗುರುತಿಸಲಾಗಿದೆ. ಈಕೆ ತನ್ನ ಮೂವರು ಹೆಣ್ಣು ಮಕ್ಕಳಾದ 6 ವರ್ಷದ...

ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

5 months ago

ಚೆನ್ನೈ: ಇತ್ತೀಚೆಗಷ್ಟೇ ಅಂಕಲ್ ಹಾಗೂ ವೈದ್ಯರೊಬ್ಬರು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ತಮಿಳುನಾಡಿನ ಟೂರ್ ಗೈಡ್ ಹಾಕಿರುವ ಸ್ಟೆಪ್ಸ್ ಕೂಡ ಸಖತ್ ವೈರಲ್ ಆಗಿದೆ. ಟೂರ್ ಗೈಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು...

19 ವರ್ಷದಿಂದ ಶೌಚಾಲಯದಲ್ಲೇ ಜೀವನ ನಡೆಸ್ತಿದ್ದಾರೆ 65ರ ವೃದ್ಧೆ

6 months ago

– ಪಿಂಚಣಿಗಾಗಿ ಜಿಲ್ಲಾಧಿಕಾರಿ ಭೇಟಿಯಾದ್ರೂ ಪ್ರಯೋಜನವಿಲ್ಲ ಚೆನ್ನೈ: 65 ವರ್ಷದ ವೃದ್ಧೆಯೊಬ್ಬರು ಕಳೆದ 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿರುವ ಮನಕಲಕುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ವಾಸಿಸಲು ಮನೆ ಇಲ್ಲದ ಕಾರಣದಿಂದಾಗಿ ಕರುಪ್ಪಾಯಿ ಅವರು ಶೌಚಾಲಯದ ಕೋಣೆಯಲ್ಲೇ ವಾಸವಾಗಿದ್ದಾರೆ....

ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಯ ವಿಡಿಯೋ ವೈರಲ್

6 months ago

ಚೆನ್ನೈ: ವೃದ್ಧ ದಂಪತಿ ದರೋಡೆಕೋರರೊಂದಿಗೆ ಹೋರಾಡಿದ ಸಾಹಸಮಯ ಘಟನೆಯೊಂದು ತಮಿಳುನಾಡಿನ ತಿರುವನ್ವೇಲಿಯಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ. 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದ ವೃದ್ಧ ದಂಪತಿಯಾಗಿದ್ದಾರೆ. ಇವರು ಇಬ್ಬರು...

2.5 ಮಿಲಿಯನ್ ಲೀಟರ್ ನೀರು ಹೊತ್ತು ಚೆನ್ನೈ ತಲುಪಿದ ವಿಶೇಷ ರೈಲು

7 months ago

ಚೆನ್ನೈ: 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತುಕೊಂಡು ಬಂದು ವಿಷೇಶ ರೈಲು ಇಂದು ಚೆನ್ನೈ ತಲುಪಿದ್ದು, ಈ ಮೂಲಕ ನೀರಿಲ್ಲದೆ ಪರದಾಡುತ್ತಿರುವ ಅಲ್ಲಿನ ನಿವಾಸಿಗಳ ಮೊಗದಲ್ಲಿ ಕೊಂಚ ನಗು ಮೂಡಿಸಿದೆ. ಸದ್ಯ ಚೆನ್ನೈನಲ್ಲಿ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ಹನಿ ನೀರಿಗಾಗಿ...

ಪತ್ನಿ ಬಿಟ್ಟು ಮಂಗಳಮುಖಿ ಜೊತೆ ಸ್ನೇಹ- 3 ವರ್ಷದ ಬಳಿಕ ಟಿಕ್‍ಟಾಕ್‍ನಲ್ಲಿ ಸಿಕ್ಕ

8 months ago

ಚೆನ್ನೈ: ನಾಪತ್ತೆಯಾದ ವ್ಯಕ್ತಿಯೊಬ್ಬ ಟಿಕ್‍ಟಾಕ್ ಮೂಲಕ ಪತ್ತೆಯಾಗಿದ್ದು, ಇದೀಗ ಒತ್ತಾಯಪೂರ್ವಕವಾಗಿ ಆತ ಮತ್ತೆ ತನ್ನ ಮನೆ ಸೇರಿದ ಘಟನೆಯೊಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ. ಕೃಷ್ಣಗಿರಿ ನಿವಾಸಿ ಸುರೇಶ್ ಎಂಬಾತ ಜಯಪ್ರದಾ ಎಂಬಾಕೆಯನ್ನು ವಿವಾಹವಾಗಿದ್ದನು. ಬಳಿಕ ದಂಪತಿಗೆ ಇಬ್ಬರು ಮಕ್ಕಳೂ ಹುಟ್ಟಿದವು....