Sunday, 26th May 2019

Recent News

11 months ago

ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

ಬೆಂಗಳೂರು: ನಗರದಲ್ಲಿ ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ. ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತಾದ ಪೊಲೀಸ್ ಪೇದೆಗಳಾಗಿದ್ದಾರೆ. ಇವರೆಲ್ಲರೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರಾಗಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ವೇಳೆ ಸಾರ್ವಜನಿಕರು ರೈಫಲ್ ಗಳನ್ನು ಠಾಣೆಗೆ ಸರೆಂಡರ್ ಮಾಡಿದ್ದರು. ಇದರಲ್ಲಿ ಪೊಲೀಸ್ ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್ ಕದ್ದಿದ್ದರು. ರೈಫಲ್ ಗಳು ಕುಮಾರಸ್ವಾಮಿ ಲೇಔಟ್ […]

11 months ago

ಪಕ್ಷ ವಿರೋಧಿ ಚಟುವಟಿಕೆ – ಬಿಜೆಪಿ ಕಾರ್ಪೊರೇಟರ್ ಅಮಾನತು

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ ವಿಚಾರವಾಗಿ ಬಿಜೆಪಿ ಪಕ್ಷದ ಕಾರ್ಪೊರೇಟರ್ ವಿರುದ್ಧ ಕ್ರಮಕೈಗೊಂಡು ಅಮಾನತು ಮಾಡಿದೆ. ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಭೈರಸಂದ್ರ ವಾರ್ಡ್ ಬಿಬಿಎಂಪಿ ಕಾರ್ಪೊರೇಟರ್ ನಾಗರಾಜ್ ಅವರನ್ನು ಅಮಾನತು ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ನಾಗರಾಜ್ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ...

ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ

12 months ago

ಚಿಕ್ಕಬಳ್ಳಾಪುರ: ದಂಧೆಕೋರರ ಪರವಾಗಿ ನಿಂತ ಸಿಪಿಐಗೆ ಕಾನೂನು ಪಾಠ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಈಗ ಅಮಾನತುಗೊಂಡಿದ್ದಾರೆ. ಹಿರಿಯ ಅಧಿಕಾರಿಯ ಜೊತೆ ಅಸಭ್ಯ ವರ್ತನೆ ಆರೋಪದಡಿಯಲ್ಲಿ ಪಿಎಸ್‍ಐ ಶ್ರೀನಿವಾಸ್‍ರವರನ್ನು ಅಮಾನತುಗೊಳಿಸಲಾಗಿದೆ...

ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

1 year ago

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಪರ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ. ರಾಣೇಬೆನ್ನೂರು ನಗರ ಠಾಣೆಯ ಜಯಂತ ಬಳಿಗಾರ ಅಮಾನತಾದ ಹೆಡ್ ಕಾನ್ಸ್ ಸ್ಟೇಬಲ್. ಜಯಂತ ಬಳಿಗಾರ ಅವರನ್ನು...

ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

1 year ago

ಕೊಚ್ಚಿ: ದೇಶದೆಲ್ಲೆಡೆ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ಕೇರಳ ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅಮಾನತು...

ನ್ಯಾಯಾಲಯ ವಿಧಿಸಿದ್ದ ದಂಡದ ಹಣವನ್ನೇ ಗುಳುಂ ಮಾಡಿದ ಆರ್ ಪಿಎಫ್ ಅಧಿಕಾರಿಗಳ ಅಮಾನತು

1 year ago

ಕೋಲಾರ: ದಂಡದ ಹಣವನ್ನು ಗುಳುಂ ಮಾಡಿ ಕೇಂದ್ರ ರೈಲ್ವೇ ಇಲಾಖೆಯನ್ನೇ ವಂಚಿಸಿದ ಮೂವರು ಆರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ಬಂಗಾರಪೇಟೆ ರೈಲ್ವೇ ನಿಲ್ದಾಣದ ಅರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಿರುವ ರೈಲ್ವೇ ಇಲಾಖೆ, 3 ಜನ ಅಧಿಕಾರಿಗಳ ವಿರುದ್ಧ...

ಲೈಂಗಿಕ ಕಿರುಕುಳ ನೀಡಿದ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಭಾರಿಸಿದ ಯುವತಿ

1 year ago

ರೋಹ್ಟಕ್: ಟ್ರಾಫಿಕ್ ಪೊಲೀಸ್ ಒಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಆಕೆಯಿಂದ ಹೊಡೆತ ತಿಂದಿರುವ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದಲ್ಲಿ ನಡೆದಿದೆ. ಕರಾಟೆ ತರಬೇತಿ ತರಗತಿಯಿಂದ ಆಟೋದಲ್ಲಿ ಮನೆಗೆ ಹಿಂದಿರುವ ವೇಳೆ ಘಟನೆ ನಡೆದಿದ್ದು, ಪೊಲೀಸ್ ಆಕೆಯ ಫೋನ್ ನಂಬರ್...

ದೇವರಿಗೆ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದ ಅರ್ಚಕರು ಅಮಾನತು

1 year ago

ಚೆನ್ನೈ: ಮೈಲಾಡುತುರೈ ಜಿಲ್ಲೆಯ ದೇವಾಲಯದ ದೇವಿ ವಿಗ್ರಹಕ್ಕೆ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದ ಇಬ್ಬರು ಅರ್ಚಕರನ್ನು ಅಮಾನತು ಮಾಡಲಾಗಿದೆ. ಮಯೂರನಾಥಸ್ವಾಮಿ ದೇಗುಲದ ಅಬಯಂಬೈಗೈ ದೇವತೆ ವಿಗ್ರಹಕ್ಕೆ ಇಬ್ಬರು ಅರ್ಚಕರು ಚೂಡಿದಾರ ತೊಡಿಸಿದ್ದು, ಈಗ ಅಲಂಕೃತ ದೇವಿಯ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ....