Monday, 24th June 2019

Recent News

6 days ago

ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

ಪಾಟ್ನಾ: ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ. ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ […]

2 weeks ago

ಕಂಪನಿಯಲ್ಲಿ ನೀರಿನ ಸಮಸ್ಯೆ-ಮನೆಯಿಂದಲೇ ಕೆಲಸ ಮಾಡಿ ಟೆಕ್ಕಿಗಳಿಗೆ ಸೂಚನೆ

ಚೆನ್ನೈ: ಕಂಪನಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ (Work From Home)ಎಂದು ಸೂಚಿಸಿವೆ. ಚೆನ್ನೈನ ಓಲ್ಡ್ ಮಹಾಬಲಿಪುರಂ (ಓಎಂಆರ್) ಇಲಾಖೆಯ ಎಲ್ಲ ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿವೆ. ಕಚೇರಿಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಾಗದ ಹಿನ್ನೆಲೆಯಲ್ಲಿ ಓಎಂಆರ್ ವ್ಯಾಪ್ತಿಯ ಬಹುತೇಕ ಕಂಪನಿಗಳು ಈ ನಿರ್ಧಾರಕ್ಕೆ...

ವಿಜಯಪುರದಲ್ಲಿ ನೀರು ಕಳ್ಳರ ಗ್ಯಾಂಗ್

1 month ago

ವಿಜಯಪುರ: ಸಾಮಾನ್ಯವಾಗಿ ಸರಗಳ್ಳರು, ಮನೆಗಳ್ಳರು, ಡೀಸೆಲ್ ಕಳ್ಳರು ಸೇರಿದಂತೆ ಅನೇಕ ಕಳ್ಳತನ ನೋಡಿರುತ್ತೇವೆ. ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ ಹೊಸದೊಂದು ಕಳ್ಳತನವನ್ನ ಖದೀಮರ ಗ್ಯಾಂಗ್ ಪ್ರಾರಂಭಿಸಿದೆ. ಈ ಕಳ್ಳತನದಿಂದ ಜಿಲ್ಲೆಯ ಜನರು ಪರದಾಡುವಂತಾಗಿದೆ. ಬೇಸಿಗೆಗಾಲ ಬಂದರೆ ಸಾಕು ಕುಡಿಯುವ ನೀರು ಸಮಸ್ಯೆ ನಿವಾರಣೆಗೆ...

ಒಂದೆಡೆ ಉಪಚುನಾವಣೆ ಇನ್ನೊಂದೆಡೆ ಹನಿ ನೀರಿಗಾಗಿ ನರಕಯಾತನೆ!

2 months ago

ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಒಂದೆಡೆ ಉಪಚುನಾವಣೆಯ ಕಾವು ಏರುತ್ತಿದ್ದರೆ, ಇತ್ತ ಅದೇ ಕ್ಷೇತ್ರದ ರುಮ್ಮನಗುಡ ತಾಂಡಾದ ಜನ ಹನಿ ನೀರಿಗಾಗಿ ನರಕಯಾತನೆ ಪಡುತ್ತಿದ್ದಾರೆ. ಹೌದು. ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುವುದರ ಮಧ್ಯೆ ಬಿಸಿಲ ಕಾವು ಕೂಡ ಜೋರಾಗಿಯೇ ಇದೆ. ಆದ್ದರಿಂದ ಈ...

ಹೈ-ಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳ – ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್

2 months ago

ಕಲಬುರಗಿ: ಜಿಲ್ಲೆ ಸೇರಿದಂತೆ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸೂರ್ಯನ ಹೊಡೆತಕ್ಕೆ ಪುಟ್ಟ ಕಂದಮ್ಮಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಹೈ-ಕ ಭಾಗದ 6 ಜಿಲ್ಲೆಯಲ್ಲಿ ಅಕ್ಷರಶಃ ಬಿಸಲಿನ ತಾಪ ಕಾದ...

ಕುಡಿಯುವ ನೀರಿನ ಬ್ಯಾರಲ್‍ಗಳಿಗೆ ಬೀಗ

2 months ago

ವಿಜಯಪುರ: ಜಿಲ್ಲೆಯಲ್ಲಿ ಈ ಬಾರಿ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದೆ. ತಿಕೋಟ ತಾಲೂಕಿನ ಕಳ್ಳಕವಟಗಿ ತಾಂಡಾದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ 2 ಕಿ.ಮೀ ದೂರ ತೆರಳಿ ನೀರು ತರಬೇಕಾಗಿದೆ. ಹೀಗೆ ತಂದ ನೀರನ್ನು ಬ್ಯಾರಲ್‍ಗಳಲ್ಲಿ ಸಂಗ್ರಹಿಸಿ, ಕೆಲಸಕ್ಕೆ ಹೋದಾಗ ನೀರನ್ನು...

ನೀರಿಲ್ಲದೇ ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡ್ತಾರೆ- ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ಸ್ವಚ್ಛತೆ

2 months ago

ಬಳ್ಳಾರಿ: ಬೇಸಿಗೆ ಕಾಲ ಎಂದರೆ ನೀರಿನ ಸಮಸ್ಯೆ ಬರೋದು ಸಹಜ. ಆದರೆ ಈ ಊರಲ್ಲಿ ಎಷ್ಟರ ಮಟ್ಟಿಗೆ ನೀರಿನ ಬರ ಇದೆ ಎಂದರೆ ಊಟಕ್ಕೆ ತಟ್ಟೆ ಬಳಸಿದ್ರೇ, ತೊಳೆಯ- ಬೇಕಾಗುತ್ತದೆ ಎಂದು ಪ್ಲಾಸ್ಟಿಕ್ ಪ್ಲೇಟ್‍ಗಳನ್ನು ಬಳಸುತ್ತಿದ್ದಾರೆ. ಕುಡಿಯೋಕು ಜಗಳವಾಡಿ ನೀರು ತರೋ...

ಕಳೆದ ವರ್ಷ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ

2 months ago

ರಾಯಚೂರು: ಹೈದರಾಬಾದ್ ಕರ್ನಾಟಕದ ತುಂಬು ಗರ್ಭಿಣಿಯರೆಲ್ಲಾ ನೋಡಲೇ ಬೇಕಾದ ಸ್ಟೋರಿ ಇದು. ಏಕೆಂದರೆ ಈ ಬಾರಿಯ ಬಿಸಿಲು ಜೀವಮಾರಕವಾಗಿದೆ. ಬಿಸಿಲನಾಡು ರಾಯಚೂರಿನಲ್ಲಂತೂ ಮಾರ್ಚ್ ತಿಂಗಳಿನಿಂದಲೇ ನವಜಾತ ಶಿಶುಗಳು ಸರತಿ ಸಾಲಿನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿವೆ. ವೈದ್ಯರ ಪ್ರಕಾರ ಬಿಸಿಲಿನಿಂದ ಗರ್ಭದಲ್ಲೇ ಜೀವಗಳು ಸಾವನ್ನಪ್ಪುತ್ತಿವೆ....