Thursday, 14th November 2019

3 years ago

ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು. ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಿಯ ಮೀನುಗಾರರ ಸಹಾಯದಿಂದ ಕಡವೆಯನ್ನು ರಕ್ಷಿಸಿದ್ದಾರೆ. ಮೂರು ವರ್ಷದ ಪ್ರಾಯದ ಕಡವೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಅದನ್ನು ಮರಳಿ ಕಾಡಿಗೆ ಬಿಡಲಾಗಿದೆ.   […]

3 years ago

ಚಿಕ್ಕಮಗಳೂರು: ನಾಯಿ ದಾಳಿಗೆ ಕಡವೆ ಬಲಿ- ಕೊಂಬನ್ನು ಕದ್ದೊಯ್ದ ಕಿಡಿಗೇಡಿಗಳು

ಚಿಕ್ಕಮಗಳೂರು: ನೀರು ಹುಡುಕಿಕೊಂಡು ನಾಡಿಗೆ ಬಂದಿದ್ದ ಕಡವೆಯೊಂದು ನಾಯಿ ದಾಳಿಗೆ ಸಿಲುಕಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಚಿಕ್ಕಮಗಳೂರು ಸಮೀಪದ ಚುರ್ಚೆಗುಡ್ಡದಿಂದ ಬಂದಿದ್ದ ಕಡವೆ ಮೇಲೆ ನಾಯಿಗಳು ದಾಳಿ ಮಾಡಿದ್ರಿಂದ ಕಡವೆ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಕೂಡಲೇ ಸ್ಥಳಿಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಅಧಿಕಾರಿಗಳು ಕಡವೆಗೆ...