Tag: ST

  • SC, ST ಮೀಸಲಾತಿ ಸುಗ್ರೀವಾಜ್ಞೆ ಮೂಲಕ ಜನರನ್ನು ಬಿಜೆಪಿ ಬೇಕುಫ್ ಮಾಡುತ್ತಿದೆ: ಸುರ್ಜೆವಾಲಾ

    SC, ST ಮೀಸಲಾತಿ ಸುಗ್ರೀವಾಜ್ಞೆ ಮೂಲಕ ಜನರನ್ನು ಬಿಜೆಪಿ ಬೇಕುಫ್ ಮಾಡುತ್ತಿದೆ: ಸುರ್ಜೆವಾಲಾ

    ನವದೆಹಲಿ: ಎಸ್‍ಸಿ (SC) ಎಸ್‍ಟಿ (ST) ಮೀಸಲಾತಿ (Reservation) ವಿಚಾರದಲ್ಲಿ ರಾಜ್ಯ ಬಿಜೆಪಿ (BJP) ಸರ್ಕಾರ ಕರ್ನಾಟಕದ (Karnataka) ಜನರನ್ನು ಬೇಕುಫ್ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್‌ ಸುರ್ಜೆವಾಲಾ (Randeep Singh Surjewala) ವಾಗ್ದಾಳಿ ನಡೆಸಿದ್ದಾರೆ.

    BJP 2

    ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಅಧಿಕೃತಗೊಳಿಸಬೇಕು. ಎಸ್‍ಸಿ, ಎಸ್‍ಟಿಗೆ ಮೀಸಲಾತಿ ನೀಡಿರುವುದನ್ನು ಕಾಂಗ್ರೆಸ್ (Congress) ಬೆಂಬಲಿಸುತ್ತದೆ. ನಮ್ಮ ಸರ್ಕಾರ ಇದ್ದಾಗಲೆ ನಾಗಮೋಹನ್ ದಾಸ್ ವರದಿಗೆ ಸೂಚಿಸಲಾಗಿತ್ತು, ಆದರೆ ಬಿಜೆಪಿ ಸುಗ್ರೀವಾಜ್ಞೆ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವರದಿಯನ್ನು ಬಿಜೆಪಿ ಯಾಕೆ ಅನುಷ್ಠಾನಕ್ಕೆ ತರಲಿಲ್ಲ? ಮುಂದಿನ ಐದು ತಿಂಗಳಲ್ಲಿರುವ ಚುನಾವಣಾ ಆಧರಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    BASAVARAJ BOMMAI 5

    ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿದೆ. ಮೋದಿ (Narendra Modi) ಸರ್ಕಾರದ ಜೊತೆಗೆ ಮಾತನಾಡಿ, ಶೆಡ್ಯೂಲ್ ಒಂಭತ್ತರಲ್ಲಿ ತಂದು ಅನುಷ್ಠಾನಕ್ಕೆ ತರಲಿ. ಇದಕ್ಕೆ ಸಂಸತ್‍ನಲ್ಲಿ ಕಾಂಗ್ರೆಸ್ ಬೆಂಬಲ ಇರಲಿದೆ. ಇದನ್ನು ಬಿಟ್ಟು ಸುಗ್ರೀವಾಜ್ಞೆ ಮೂಲಕ ಜನರ ಕಣ್ಣೊರೆಸುವ ಪ್ರಯತ್ನ ಬೇಡ, ಸುಗ್ರೀವಾಜ್ಞೆಯ ಶಕ್ತಿ ಎಷ್ಟು ಎಂದು ಜನರಿಗೆ ತಿಳಿದಿದೆ ಎಂದರು. ಇದನ್ನೂ ಓದಿ: ಗೂಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ತಿಂಗಳಲ್ಲಿ 3ನೇ ದುರ್ಘಟನೆ

    Reservation

    ಬಿಜೆಪಿ ಜಾತಿಗಳನ್ನು ಒಡೆದು ಅಧಿಕಾರಕ್ಕೆ ಬರುತ್ತಿದೆ. ಲಿಂಗಾಯತ, ಕುರುಬ, ಒಕ್ಕಲಿಗ, ಮುಸ್ಲಿಂ ಹೀಗೆ ಒಂದೊಂದು ಜಾತಿಯ ವಿರುದ್ಧ ಮತ್ತೊಂದು ಜಾತಿ ಧರ್ಮವನ್ನು ಎತ್ತಿ ಕಟ್ಟಿ ರಾಜಕೀಯ ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಇದೇ ತಂತ್ರ ಬಳಸುತ್ತಿದೆ. ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನು ಎಂಬ ಬಗ್ಗೆ ತಿಳಿಸಲಿ, ನಂತರ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ(SC-ST Reservation) ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇಂದು ನಡೆದ ಕ್ಯಾಬಿನೆಟ್(Cabinet) ನಲ್ಲಿ ಸುಗ್ರೀವಾಜ್ಞೆ(Ordinance) ಹೊರಡಿಸಲು ಒಪ್ಪಿಗೆ ನೀಡಿದೆ.

    ಸಭೆ ಬಳಿಕ ಮಾತನಾಡಿದ ಮಾಧುಸ್ವಾಮಿ(Madhuswamy), ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಇನ್ನೆರಡು ದಿನಗಳಲ್ಲಿ ರಾಜ್ಯಪಾಲರ ಸಹಿಗೆ ಕಳಿಹಿಸುತ್ತೇವೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ದೀಪಾವಳಿಗೆ ಪ್ರಧಾನಿಯಿಂದ ಸಿಕ್ತು ಬಂಪರ್ ಆಫರ್- 75,000 ಯುವಕರಿಗೆ ಉದ್ಯೋಗ

    ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಆದರೆ ಹೆಚ್ಚುವರಿ ಮೀಸಲಾತಿ ಎಲ್ಲಿಂದ ಕೊಡಲಾಗುತ್ತದೆ ಎಂಬುದಕ್ಕೆ ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಮೀಸಲಾತಿಗೆ ಅರ್ಹವಾಗಿರುವ ಜಾತಿಗಳ ಸಂಖ್ಯೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳು ಆಗಿವೆ. ಪರಿಶಿಷ್ಟ ಪಂಗಡದಲ್ಲಿ 57 ಜಾತಿಗಳು ಆಗಿವೆ.ಮೀಸಲಾತಿ ಹೆಚ್ಚಳದ ಫಲ EWS (Economically weaker Section) ಮಾದರಿಯಲ್ಲಿ ಇರಲಿದೆ. ಆದರೆ ಅದಕ್ಕೆ ಸಂವಿಧಾನಾತ್ಮಕ ಇರಲಿದೆ. ನಾವು ಸುಗ್ರೀವಾಜ್ಞೆ ತರುವಾಗ ಸಂವಿಧಾನದ ಪ್ರಕಾರವೇ ಕ್ರಮ ಜರುಗಿಸುತ್ತೇವೆ. ಕೋರ್ಟ್ ನಲ್ಲೂ ನಮಗೆ ರಕ್ಷಣೆ ಸಿಗುವ ವಿಶ್ವಾಸವಿದೆ. ಸಮುದಾಯಗಳ ಹೆಚ್ಚಳವೇ ನಮ್ಮ ಪ್ರಯತ್ನಕ್ಕೆ ಪೂರಕ ಆಗಲಿದೆ ಎಂದರು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ. ಆದರೆ 9ನೇ ಶೆಡ್ಯೂಲ್ಡ್‌ಗೆ ತಿದ್ದುಪಡಿ ತರದೇ ಮೀಸಲಾತಿ ಹೆಚ್ಚಳ ಸಾಧ್ಯವೇ ಎಂಬ ಪ್ರಶ್ನೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • SC, ST ಮೀಸಲಾತಿ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ: ಬೊಮ್ಮಾಯಿ

    SC, ST ಮೀಸಲಾತಿ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ: ಬೊಮ್ಮಾಯಿ

    ಬೆಂಗಳೂರು: ಮೀಸಲಾತಿ ಸಂಬಂಧಿತ ಜನರ ಹಲವು ದಶಕಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಶಿಕ್ಷಣ ವಂಚಿತರು ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶದ ಅವಕಾಶ ನೀಡಿ ಸ್ವಾವಲಂಬನೆಯ-ಸ್ವಾಭಿಮಾನಿ ಬದುಕಿಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

    Reservation

    ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಲವಾರು ದಶಕಗಳ ಕಾಲ ಅಧಿಕಾರದಲ್ಲಿತ್ತು. ಯಾಕೆ ಮೀಸಲಾತಿ (Reservation) ವಿಚಾರದಲ್ಲಿ ಇಂಥ ದಿಟ್ಟ ನಿರ್ಧಾರ ಮಾಡಿಲ್ಲ? ಕಾಂಗ್ರೆಸ್ ಪಕ್ಷದವರು ದೀನ ದಲಿತರು ಮತ್ತು ಎಸ್‍ಸಿ (SC), ಎಸ್‍ಟಿ (ST) ಸಮುದಾಯದವರ ವಿರೋಧಿಗಳು ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು

    CONGRESS 2

    ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಮೊದಲ ಬಾರಿಗೆ ಕೊಡಲಾಗಿದೆ. ರೈತ ಕೃಷಿ ಕೂಲಿಕಾರರು ಸೇರಿ ಅನೇಕ ಸಮುದಾಯಗಳಿಗೆ ಇದನ್ನು ವಿಸ್ತರಿಸಲಾಗಿದೆ. ಉದ್ಯೋಗ ಹೆಚ್ಚಳಕ್ಕೆ ನಾವು ಆದ್ಯತೆ ಕೊಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ, 5 ಲಕ್ಷ ಯುವಕರಿಗೆ ಕೆಲಸ ಸಿಗುವಂತೆ ಮಾಡುತ್ತಿದ್ದೇವೆ ಎಂದು ವಿವರಿಸಿದ ಅವರು, ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ (BJP) ಮಾಡುತ್ತಿದೆ ಎಂದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯವು ಕೇವಲ ಭಾಷಣದ ಸರಕಾಗಿತ್ತು ಹಾಗೂ ಮತಬ್ಯಾಂಕ್ ಮಾಡಲು ಇದನ್ನು ಬಳಸಲಾಗುತ್ತಿತ್ತು ಎಂದು ಆಕ್ಷೇಪಿಸಿದರು. ಕನಕದಾಸರ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಅನುದಾನ ಕೊಟ್ಟಿದೆ ಎಂದು ತಿಳಿಸಿದ್ದಾರೆ.

    sonia ghandi

    ಸೋನಿಯಾ ಗಾಂಧಿ (SoniaGandhi) ಅವರಿಗೆ ಬಳ್ಳಾರಿ ಕ್ಷೇತ್ರವು ರಾಜಕೀಯವಾಗಿ ಮರುಜನ್ಮ ಕೊಟ್ಟಿತ್ತು. ಆಗ ಕಾಂಗ್ರೆಸ್ (Congress) ಸರ್ಕಾರವು ಈ ಭಾಗಕ್ಕೆ ಸಾವಿರಾರು ಕೋಟಿ ಅನುದಾನದ ಭರವಸೆ ಕೊಟ್ಟಿತ್ತು. ಆದರೆ, ಅದನ್ನು ಈಡೇರಿಸಲಿಲ್ಲ ಎಂದು ವಿವರಿಸಿದರು. ಈಗ ಮತ್ಯಾಕೆ ಬಂದಿದ್ದೀರಿ? ಏನು ಸುಳ್ಳು ಹೇಳಲು ಬಂದಿದ್ದೀರಿ? ಎಂದು ಪ್ರಶ್ನಿಸಿದರು. ನಾವೆಲ್ಲರೂ ಜಾಗೃತರಾಗಿದ್ದೇವೆ. ನಿಮ್ಮ ಸುಳ್ಳನ್ನು ನಂಬುವುದಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ಸಿಗರಿಗೆ ರವಾನಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡಿತ್ತು. ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಪೇಟಿಎಂ ಮಾಡಿಕೊಂಡಿದ್ದರು. ಅದೇ ಸಂಬಂಧ ಕಾಂಗ್ರೆಸ್ ಪಕ್ಷದ ರಾಜ್ಯದ ಅಧ್ಯಕ್ಷರು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಅವರನ್ನು ನೋಡಿದರೆ ಕನಿಕರ ಎನಿಸುತ್ತದೆ; ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಅವರು ತಿಳಿಸಿದರು. ರಾಜ್ಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ಹಳೆಯ ನಾಟಕಗಳನ್ನು ಕರ್ನಾಟಕದ ಜನರು ನಂಬುವುದಿಲ್ಲ. ನುಡಿದಂತೆ ನಡೆದವರಿಗೆ ಮಾತ್ರ ಅವಕಾಶ ಸಿಗಲಿದೆ. ಈ ಭಾಗ್ಯ ಆ ಭಾಗ್ಯ ಎಂದು ತಿಳಿಸಿದರೂ ನಿಮ್ಮನ್ನು ಜನರು ಯಾಕೆ ಮನೆಗೆ ಕಳಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಹಾಕಿದರು. ಇದನ್ನೂ ಓದಿ: ಶಾಸಕ ಉದಯ್ ಗರುಡಾಚಾರ್‌ಗೆ ಜೈಲು ಶಿಕ್ಷೆ- ಅದೇ ಕೋರ್ಟ್‍ನಿಂದ ಜಾಮೀನು

    BASAVARAJ BOMMAI AND YEDIYURAPPA

    ಅನ್ನಭಾಗ್ಯದಲ್ಲಿ ಕನ್ನ:
    ಅನ್ನ ಭಾಗ್ಯದಲ್ಲಿ ಕನ್ನ ಭಾಗ್ಯ ಇತ್ತು. ಎಸ್‍ಸಿ, ಎಸ್‍ಟಿ ಜನಾಂಗದವರಿಗೆ ಬೋರ್‌ವೆಲ್‌ ವಿಚಾರದಲ್ಲೂ ಹಗರಣ ಮಾಡಿದ್ದೀರಿ. ಕಾಂಗ್ರೆಸ್ ತಪ್ಪು ಲೆಕ್ಕಾಚಾರ-ಭ್ರಷ್ಟಾಚಾರದಿಂದ ಕರ್ನಾಟಕದ ಅಭಿವೃದ್ಧಿಗೆ ಹಿನ್ನೆಡೆ ಆಗಿತ್ತು ಎಂದು ತಿಳಿಸಿದರು. ಇಲ್ಲಿನ ಜನಸ್ತೋಮ ನೋಡಿದಾಗ ಇಲ್ಲಿ ಕಮಲದ ಹೂವು ಅರಳುವುದು ಖಚಿತ ಎಂದು ವಿಶ್ವಾಸವಾಗಿದೆ ಎಂದು ನುಡಿದರು. ಒಗ್ಗಟ್ಟಿನಿಂದ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

    ನಮ್ಮ ನಾಯಕರಾದ ಯಡಿಯೂರಪ್ಪ (B.S Yediyurappa) ಅವರ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದರು. 100 ಕೋಟಿ ರೂಪಾಯಿ ಅನುದಾನ ಕೊಟ್ಟರು. ನಾನು ಈ ನಿಗಮಕ್ಕೆ ಈ ಬಾರಿ 100 ಕೋಟಿ ನೀಡಲಿದ್ದೇನೆ. ಎಸ್‍ಸಿ, ಎಸ್‍ಟಿ ಸಮುದಾಯಗಳ ಅಭಿವೃದ್ಧಿಗೆ 28 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕೊಡಲಾಗಿದೆ ಎಂದು ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ರೂಪಾಯಿ ಕೊಡಲಾಗಿದೆ. ಹೂವಿನಹಡಗಲಿಯ ಜನರು ಹೂವಿನಂಥವರು ಎಂದು ಮೆಚ್ಚುಗೆ ಸೂಚಿಸಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಇಲ್ಲಿನ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಅವಕಾಶ ಲಭಿಸಿದೆ. ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ಬಿಜೆಪಿ ನೀಡಿದೆ ಎಂದು ವಿವರಿಸಿದರು.

    ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳ ಗಿಮಿಕ್ – ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಲ್ಲ: ಪ್ರಣಾವಾನಂದ ಸ್ವಾಮೀಜಿ

    SC-ST ಮೀಸಲಾತಿ ಹೆಚ್ಚಳ ಗಿಮಿಕ್ – ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಲ್ಲ: ಪ್ರಣಾವಾನಂದ ಸ್ವಾಮೀಜಿ

    ನವದೆಹಲಿ: SC – ST ಸಮುದಾಯಗಳಿಗೆ ಮೀಸಲಾತಿ (Reservation) ಹೆಚ್ಚಿಸುವ ಸರ್ಕಾರದ ನಿರ್ಧಾರ ಕೇವಲ ರಾಜಕೀಯ ಗಿಮಿಕ್ ಎಂದು ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ಆದೇಶ ಸುಪ್ರೀಂಕೋರ್ಟ್ (Supreme Court) ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.

    ಎಸ್ಸಿ – ಎಸ್ಟಿ ಮೀಸಲಾತಿ ಹೆಚ್ಚಳ ಸರ್ಕಾರದ ನಿರ್ಧಾರ, ಅದು ಏನೇ ಇರಲಿ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಈ ಸಮಯದಲ್ಲಿ ಈಡೀಗ, ಬಿಲ್ಲವ ಸಮುದಾಯದ ಬಗ್ಗೆಯೂ ಸರ್ಕಾರ ಯೋಚನೆ ಮಾಡಬೇಕು. ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

    BJP

    ಸಿಎಂ ಎಸ್ಟಿ ಎಸ್ಸಿಗೆ ಹೊಸ ಮೀಸಲಾತಿ ಘೋಷಣೆ ಮಾಡಿದ್ದಾರೆ. ಸಂಪುಟದಲ್ಲಿ ಅನುಮತಿಯೂ ಸಿಕ್ಕಿದೆ ಹೊಸ 7% ಮೀಸಲಾತಿ ಎಲ್ಲಿಂದ ತರುತ್ತೀರಿ. ಈ ನಿರ್ಧಾರ ಸುಪ್ರೀಂಕೋರ್ಟ್ ಆದೇಶದಂತೆ 50% ಕ್ಯಾಪ್ ಮೀರಿದೆ 2Aಯಿಂದ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ಇದು ಚುನಾವಣೆಗಾಗಿ (Election) ಕೈಗೊಂಡ ನಿರ್ಧಾರವಾಗಿದೆ ಎಂದರು.

    ಈಡೀಗ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡುತ್ತಿದೆ. ಪ್ರವರ್ಗ 1 ಸೇರಿಸಲು ಮನವಿ ಮಾಡಿದೆ. ಕುಲಕಸಬು ಮುಂದುವರಿಸಲು ಅನುಮತಿ ಕೊಡಲು ಕೇಳಿದೆ. ನಾರಾಯಣ ಗುರು ನಿಗಮ ಮಂಡಳಿ ಮಾಡಲೂ ಮನವಿ ಮಾಡಿದ್ದೇವು. ಈವರೆಗೂ ಸರ್ಕಾರ ಯಾವ ಕೆಲಸ ಮಾಡಿಲ್ಲ. ಈ ಮೂಲಕ ಸರ್ಕಾರ ನಮಗೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.

    ಮೊನ್ನೆ ವಾಲ್ಮೀಕಿ ಜಯಂತಿ ಸರ್ಕಾರ ಮಾಡಿತು. ಯಾಕೆ ನಾರಾಯಣ ಗುರುಗಳ ಜಯಂತಿ ಮಾಡಿಲ್ಲ, ಸಚಿವ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ ಇದಕ್ಕೆ ನೇರ ಹೊಣೆ, ಡಿ.ಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಮಾಡಿದರು. ಆದರೆ ಆ ಕಾರ್ಯಕ್ರಮಕ್ಕೆ ಡಿಸಿ ಕೂಡಾ ಬರಲಿಲ್ಲ. ನಮ್ಮ ಸಮುದಾಯದ 7 ಜನ ಶಾಸಕರು ಇದ್ದಾರೆ. ಆದರೆ ಯಾರು ಕೂಡಾ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.

    DK SHIVAKUMAR 3

    ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಮೇಲೂ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಇದನ್ನು ಸಮುದಾಯ ಗಮನಿಸುತ್ತಿದೆ. ನಮ್ಮನ್ನು ಪ್ರವರ್ಗ 1 ಸೇರಬೇಕು, ಮಂಡಳಿ ಘೋಷಣೆ ಮಾಡಬೇಕು ಇಲ್ಲವಾದರೇ ಜ. 6ರಿಂದ ಕುದ್ರೊಳಿ ಗೋಕರ್ಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಫೆ. 15ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ. ಬಳಿಕ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ. ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡು ಕೈಬಿಡಲಾಗುತ್ತದೆ. ಸಿಎಂ ಬೊಮ್ಮಾಯಿ, ಬಿಎಸ್‍ವೈಗೂ ಮನವಿ ಮಾಡಿದೆ. ಸಮುದಾಯದ ಏಳು ಜನ ಶಾಸಕರಿಗೂ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

    ದಕ್ಷಿಣ ಕನ್ನಡ (Dakshina Kannada) ಸೇರಿ ಹಲವು ಕಡೆ ನಮ್ಮ ಸಮುದಾಯ ಹೆಚ್ಚಿದೆ. ರಾಜಕೀಯ ಪ್ರಾತಿನಿಧ್ಯ ಕೊಡದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಕಾಂಗ್ರೆಸ್ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಇನ್ನು ಕೆಲವು ದಿನಗಳಲ್ಲಿ ಇದು ಪ್ರಣಾಳಿಕೆ ಸೇರಲಿದೆ. ಒಂದು ವೇಳೆ ಬಿಜೆಪಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೇ ನಾವು ಕಾಂಗ್ರೆಸ್ (Congress) ಜೊತೆಗೆ ರಾಜಕೀಯವಾಗಿ ಕೈಜೋಡಿಸಬೇಕಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    Congress

    ಹಿಂದುಳಿದ ವರ್ಗಗಳಿಗೆ ಬಿಜೆಪಿ (BJP) ಸರ್ಕಾರದಲ್ಲಿ ನ್ಯಾಯ ಸಿಕ್ಕಲ್ಲ, ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಇಡೀ ಮೀಸಲಾತಿ ವ್ಯವಸ್ಥೆ ಪರಿಷ್ಕರಣೆಯಾಗಬೇಕು. ಎಲ್ಲ ಸಮುದಾಯ ಮುಖಂಡರ ಜೊತೆ ಮಾತನಾಡಿಕೊಂಡು ನಿರ್ಧಾರ ಮಾಡಬೇಕು. ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಬದಲಾವಣೆಯಾಗಬೇಕು. ಈ ಬಗ್ಗೆ ದೆಹಲಿಯಲ್ಲಿ ಕೆಲವು ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆಯೂ ಮಾಡಲಿದ್ದೇನೆ ಎಂದರು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ಮೀಸಲಾತಿ ಪ್ರಮಾಣ ಹೆಚ್ಚಳ ದಿಟ್ಟ ನಿರ್ಧಾರ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

    ಮೀಸಲಾತಿ ಪ್ರಮಾಣ ಹೆಚ್ಚಳ ದಿಟ್ಟ ನಿರ್ಧಾರ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರವು ಎಸ್‌ಸಿ(SC), ಎಸ್‌ಟಿ(ST) ಮೀಸಲಾತಿ(Reservation) ಪ್ರಮಾಣ ಹೆಚ್ಚಿಸಿರುವುದು ದಿಟ್ಟ ನಿರ್ಧಾರ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ತಿಳಿಸಿದರು.

    ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ರಾಜ್ಯ ಬಿಜೆಪಿ ಸರಕಾರದ ನಿರ್ಧಾರವನ್ನು ಸ್ವಾಗತಿಸಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ಸರ್ವಸ್ಪರ್ಶಿ ಸರ್ವವ್ಯಾಪಿ ಎಂಬಂತೆ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಅವರ ಸಂಪುಟವು ಈ ನಿರ್ಧಾರ ಮಾಡಿದೆ. ಈ ನಿರ್ಧಾರ ಮಾಡಿದ ಮುಖ್ಯಮಂತ್ರಿಗಳಿಗೆ ಶತ ಕೋಟಿ ನಮನಗಳು ಎಂದು ತಿಳಿಸಿದರು.

    ಈ ನಿರ್ಧಾರವನ್ನು ಸ್ವಾಗತಿಸಿ ನಾಳೆ ವಾಲ್ಮೀಕಿ ಜಯಂತಿಯನ್ನು(Valmiki Jayanti) ವಿಜಯೋತ್ಸವದ ರೀತಿಯಲ್ಲಿ ಆಚರಿಸಬೇಕು. ತನ್ಮೂಲಕ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

    ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಎಸ್.ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ನರಸಿಂಹ ನಾಯಕ್ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅಸ್ತು

    SC-ST ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅಸ್ತು

    ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡಗಳ (Schedule Tribes) ಮೀಸಲಾತಿ (Reservation) ಹೆಚ್ಚಳಕ್ಕೆ ಇಂದು ವಿಶೇಷ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

    ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಮೀಸಲಾತಿ ಸಂಬಂಧ ಕಾನೂನಾತ್ಮಕ ವಿಚಾರಗಳ ಬಗ್ಗೆ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದೆ. ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಘೋಷಣೆ

    basavaraj bommai 6

    ಮೀಸಲಾತಿ ಹೆಚ್ಚಳ ಸಂಬಂಧ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಸರ್ವ ಪಕ್ಷಗಳ ಸಭೆ ನಡೆದಿತ್ತು. ಸಭೆಯಲ್ಲಿ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್ (Justice Nagamohan Das) ನೀಡಿರುವ ವರದಿ ಯಥಾವತ್ತಾಗಿ ಜಾರಿಗೆ ತರಲು ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು. ಶನಿವಾರ ಕ್ಯಾಬಿನೆಟ್‌ನಲ್ಲಿ ವಿಷಯ ಮಂಡಿಸಿ ಅಧಿಕೃತ ಆದೇಶ ಹೊರಡಿಸುವುದಾಗಿ ಸಿಎಂ ಬೊಮ್ಮಾಯಿ ನಿನ್ನೆ ಘೋಷಣೆ ಮಾಡಿದ್ದರು. ಅದರಂತೆ ಇಂದು ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ.

    ಸದ್ಯ ಪರಿಶಿಷ್ಟ ಜಾತಿಗೆ 15% ಮತ್ತು ಪರಿಶಿಷ್ಟ ಪಂಗಡಕ್ಕೆ 3% ಮೀಸಲಾತಿ ಇದೆ. ನ್ಯಾ.ನಾಗಮೋಹನ್ ದಾಸ್ ಸಮಿತಿ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ ಮೀಸಲಾತಿ 15% ನಿಂದ 17%ಗೆ ಹಾಗೂ ಎಸ್‌ಟಿ ಮೀಸಲಾತಿ 3% ನಿಂದ 7%ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    Live Tv
    [brid partner=56869869 player=32851 video=960834 autoplay=true]

  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಘೋಷಣೆ

    ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಘೋಷಣೆ

    ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ.

    ಇಂದು ನಗರದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮೋಹನ್‌ ದಾಸ್‌ ವರದಿ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ. ನಾಳೆಯೇ ಸಂಪುಟ ಸಭೆ ಕರೆಯಲಾಗುವುದು. ಸರ್ಕಾರಿ ಮೀಸಲಾತಿ ಹೆಚ್ಚಳಕ್ಕೆ ನಾಳೆ ಅಧಿಕೃತ ಆದೇಶದ ಮುದ್ರೆ ಹಾಕಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

    bommai1

    ಈಗ ಇರುವ ಯಾವುದೇ ಮೀಸಲಾತಿ ಕಡಿಮೆ ಮಾಡಲ್ಲ. ಶೇ.50ಕ್ಕೂ ಮೇಲೆ ಮೀಸಲಾತಿ ಕೊಡುತ್ತೇವೆ. EWS ಕೋಟಾ ಈಗಾಗಲೇ ಇದೆ. ಅದು ಸುಪ್ರೀಂಕೋರ್ಟ್‌ (Supreme Court) ನಲ್ಲಿ ಇದೆ. ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಜಾತಿಗೂ ಸಮಸ್ಯೆ ಆಗದಂತೆ, ಅನ್ಯಾಯ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಎಂದು ಭರವಸೆ ನೀಡಿದ್ದಾರೆ.

    ನ್ಯಾ.ನಾಗಮೋಹನ್‌ದಾಸ್‌ ವರದಿ ಆಧರಿಸಿ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹಾಗೂ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಲು ಒತ್ತಾಯ ಕೇಳಿಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದರಾಮಯ್ಯ

    ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದ ಬೆಟ್ಟಕುರುಬ(Betta Kuruba) ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ(ST) ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸಂತಸ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಸಮುದಾಯದ ಬಹುಕಾಲದ ಬೇಡಿಕೆಯಂತೆ ನಮ್ಮ ಸರ್ಕಾರ ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಅದರ ಶಿಫಾರಸಿನ ಆಧಾರದಲ್ಲಿ ಕಾಡು ಕುರುಬ ಜಾತಿ ಸೂಚಕಕ್ಕೆ ಸಮನಾರ್ಥ ಹೊಂದಿರುವ ಬೆಟ್ಟಕುರುಬರನ್ನು ಕೂಡಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ

    SIDDARAMAIAH

    ಸುಮಾರು ಎರಡೂವರೆ ವರ್ಷಗಳ ನಂತರ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಬೆಟ್ಟಕುರುಬ ಸಮುದಾಯದ ಜನರು ಇನ್ನು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ ಲಾಭ ಪಡೆದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶ-ಪ್ರಾತಿನಿಧ್ಯ ಪಡೆದು ಬೆಳೆಯಲಿ ಎಂದು ಸಿದ್ದರಾಮಯ್ಯ ಆಶಿಸಿದರು. ಇದನ್ನೂ ಓದಿ: ಕೆಪಿಸಿಸಿ ಚುನಾವಣೆ- ಪಕ್ಷದ ತೀರ್ಮಾನಕ್ಕೆ ಬದ್ಧ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ಬೆಂಗಳೂರು: ಇನ್ಮುಂದೆ ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿಗೆ ಸೇರಿದ ಕುಟುಂಬ ಸದಸ್ಯರಿಗೂ ಸರ್ಕಾರಿ ನೌಕರಿ ನೀಡುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ.

    PRSS RELEASE

    ಇತ್ತೀಚೆಗಷ್ಟೇ ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದಿದ್ದ ನಿಯಮವನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    PRSS RELEASE 2

    ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

  • ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    ದಾವಣಗೆರೆ: ನಕಲಿ ಎಸ್‍ಟಿ ಸರ್ಟಿಫಿಕೇಟ್ ಪಡೆದ ಆರೋಪದಿಂದ ಹೊರಬರಲು ದಲಿತರ ಓಲೈಕೆಗಾಗಿ ಎಂ.ಪಿ.ರೇಣುಕಾಚಾರ್ಯ ಅವರು ಬೃಹತ್ ಎಸ್‍ಸಿ, ಎಸ್‍ಟಿ ಸಮಾವೇಶ ಮಾಡಲಾಯಿತು. ಇದೇ ವೇಳೆ ಸಾಕಷ್ಟು ಮಹಿಳೆಯರೊಂದಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್ ಹಾಕಿದರು.

    Renukacharya Davangere SC ST 3

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರೇಣುಕಾಚಾರ್ಯ ತಮ್ಮ ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ಸಮಾವೇಶವನ್ನು ಆಯೋಜನೆ ಮಾಡಿದ್ದರು. ಈ ವೇಳೆ ದಲಿತರಲ್ಲಿ ಸಂದೇಶ ರವಾನಿಸಿದರು. ಇದಲ್ಲದೆ ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮುನ್ನವೇ ಮಹಿಳೆಯ ಜೊತೆ ಸಖತ್ ಸ್ಟೆಪ್ ಹಾಕಿದರು. ಇದನ್ನೂ ಓದಿ:  ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್ 

    Renukacharya Davangere SC ST 4

    ರೇಣುಕಾಚಾರ್ಯ ಪುತ್ರಿ ಎಸ್‍ಸಿ ಜಾತಿ ಪ್ರಮಾಣ ಪತ್ರ ಪಡೆದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಕೆಲ ದಿನಗಳ ಹಿಂದೆ ರೇಣುಕಾ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಇದು ಹೊನ್ನಾಳಿಯಲ್ಲಿ ಎಸ್‍ಸಿ, ಎಸ್‍ಟಿ ಸಮಾವೇಶವನ್ನು ರೇಣುಕಾಚಾರ್ಯ ಮಾಡಿದ್ದಾರೆ. ಈ ವೇಳೆ ಸಾಕಷ್ಟು ಜನ ಹಿಂದುಳಿದ ಸಮುದಾಯದವರನ್ನು ಸೇರಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದರು.

    Renukacharya Davangere SC ST 1

    ಈ ವೇಳೆ ಸಮಾವೇಶಕ್ಕೆ ಆಗಮಿಸುವ ಮೊದಲು ಬೃಹತ್ ಮೆರವಣೆಗೆ ಮಾಡಿ ಮೆರವಣಿಗೆಯಲ್ಲಿ ಮಹಿಳೆಯರನ್ನು ಎಳೆದುಕೊಂಡು ಸ್ಟೇಪ್ ಹಾಕಿದ್ದು, ಎಲ್ಲರನ್ನೂ ಉಬ್ಬೇರಿಸುವಂತಿತ್ತು. ಇದನ್ನೂ ಓದಿ: ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ