Tag: ST Somashekar

  • ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ, ಜಾಗೃತಿ : ಸೋಮಶೇಖರ್

    ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ, ಜಾಗೃತಿ : ಸೋಮಶೇಖರ್

    – ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪರ ನಾನಿದ್ದೇನೆ
    – ಕಗ್ಗಲಿಪುರ ಸಮೀಪ ಶೀಘ್ರದಲ್ಲಿ ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಸೆಂಟರ್

    ಬೆಂಗಳೂರು: ಮುಂದಿನ 2 ವಾರದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತೇನೆ. ಆರೋಗ್ಯಾಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್  ಜೊತೆ ಹೋಗಿ ಆರೋಗ್ಯ ವಿಚಾರಿಸುವ ಹಾಗೂ ಜನತೆಗೆ ಧೈರ್ಯ ತುಂಬವ ಕೆಲಸವನ್ನು ಮಾಡಲಿದ್ದೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.

    ತರಳು, ನೆಲಗುಳಿ, ಸೋಮನಹಳ್ಳಿ, ಕಗ್ಗಲಿಪುರ ಮತ್ತು ಅಗರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯಿತಿಗಳ ಕೋವಿಡ್ – 19 ನಿರ್ವಹಣೆಗಾಗಿ ರಚಿಸಲಾಗಿರುವ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಗಳ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವರು, ಕೋವಿಡ್ 2ನೇ ಅಲೆ ಭೀಕರವಾಗಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಕೋವಿಡ್ ಬಗ್ಗೆ ಧೈರ್ಯವನ್ನು ಹೇಳಬೇಕಿದೆ. ಈ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಭೇಟಿ ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸುತ್ತೇನೆ. ಅಗತ್ಯವಿದ್ದವರಿಗೆ ನೆರವು ನೀಡುತ್ತೇನೆ ಎಂದು ತಿಳಿಸಿದರು.

    ಕೋವಿಡ್ ವಾರಿಯರ್ಸ್ ಗಳಾಗಿ ಮುಂದೆ ನಿಂತು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಧೈರ್ಯವನ್ನು ಕಳೆದುಕೊಳ್ಳುವುದು ಬೇಡ. ನಿಮ್ಮ ಪರವಾಗಿ ನಾನು ಸದಾ ಇದ್ದೇನೆ. ನಿಮಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಅಗತ್ಯ ಸೌಲಭ್ಯ, ವ್ಯವಸ್ಥೆ ಮಾಡುತ್ತೇನೆ ಎಂದು ಸಚಿವರು ಅಭಯ ನೀಡಿದರು.

    st somashekar 1

    ಕೋವಿಡ್ 19 ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಸೋಂಕು ತಗುಲಿದರೆ ಯಾವುದೇ ಹಿಂಜರಿಕೆ ಇಲ್ಲದೇ ಹೇಳಿಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ನಮ್ಮ ಕ್ಷೇತ್ರದಲ್ಲಿ ಈವರೆಗೆ ಸುಮಾರು 7500ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವರಲ್ಲಿ 6500 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ, ನಮಗೆ ಜ್ವರ ಬಂದರೆ ಕಷಾಯ ಕುಡಿದರೆ ಹೋಗುತ್ತದೆ, ಬಿಸಿ ನೀರಿನ ಆವಿ ತೆಗೆದುಕೊಂಡರೆ ಹೋಗುತ್ತದೆ ಎಂಬಿತ್ಯಾದಿಗಳು ತಪ್ಪು ಕಲ್ಪನೆಗಳು. ಆದರೆ, ಇದ್ಯಾವುದನ್ನೂ ಮಾಡದೆ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದರೆ ಮಾತ್ರ ಗುಣಮುಖರಾಗಬಹುದು ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

    ಕಗ್ಗಲಿಪುರ ಸಮೀಪ ಕೇರ್ ಸೆಂಟರ್:
    ಕಗ್ಗಲಿಪುರ ಸುತ್ತಮುತ್ತ ಸಹ ಇನ್ನೆರಡು ದಿನದಲ್ಲಿ ಒಂದು ಕೋವಿಡ್ ಕೇರ್ ಸೇಂಟರ್ ಹಾಗೂ ಟ್ರಯಾಜ್ ಸೆಂಟರ್ ಅನ್ನು ತೆರೆಯಲಿದ್ದೇವೆ. ಹೀಗಾಗಿ ಜನರು ಆತಂಕಗೊಳ್ಳುವುದು ಬೇಡ. ಜನರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ಹಾಗೂ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.

    somashekar ravishankar guruji

    ಗೂಂಡಾಗಿರಿ ಸಹಿಸಲ್ಲ:
    ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೇ ಪ್ರತ್ಯೇಕ ವಾರ್ ರೂಂ ಹಾಗೂ 17 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರತ್ಯೇಕ ವಾರ್ ರೂಂ ವ್ಯವಸ್ಥೆಯನ್ನು ಮಾಡಿದ್ದೇವೆ. ಅದಕ್ಕೆ ಒಬ್ಬ ವೈದ್ಯರು, ನೋಡಲ್ ಅಧಿಕಾರಿಗಳ ಸಹಿತ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಮಾಹಿತಿ ಲಭ್ಯವಾಗುತ್ತಿದ್ದು, ಕೆಲಸ ಮಾಡುವ ಸಿಬ್ಬಂದಿಗೆ ಹಾಗೂ ಕಾರ್ಯಕರ್ತರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನಿಮಗೆ ಅವಹೇಳನ ಮಾಡಿದರೆ ನನಗೆ ಮಾಡಿದಂತೆ ಎಂದು ಭಾವಿಸುವವನು ನಾನು. ಯಾವುದೇ ಕಾರಣಕ್ಕೂ ಗೂಂಡಾಗಿರಿ ಮಾಡುವುದನ್ನು ನಾನು ಸಹಿಸುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಾನು ಸೂಚನೆ ಕೊಟ್ಟಿದ್ದೇನೆ. ಇದು ನನ್ನ ಕ್ಷೇತ್ರವಾಗಲಿ ಇಲ್ಲವೇ ಉಸ್ತುವಾರಿ ಹೊತ್ತಿರುವ ಮೈಸೂರು ಜಿಲ್ಲೆಯಾಗಲಿ, ಎಲ್ಲ ಕಡೆಯೂ ಪಾಲನೆಯಾಗಲಿದೆ. ತೊಂದರೆ ಕೊಟ್ಟವರು ಯಾರೇ ಆಗಿರಲಿ, ನನ್ನ ಹತ್ತಿರದವರಾಗಿರಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.

    muruga shree somashekar 1

    ಕಠಿಣ ಕ್ರಮ:
    ಪಾಸಿಟಿವ್ ಬಂದವರು ಕೆಲಸಕ್ಕೆ ಹೋಗುತ್ತಿದ್ದರೆ ಅಂಥವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕಾರಣ, ಅವರಿಂದ ನೂರಾರು ಜನರಿಗೆ ಹರಡುತ್ತದೆ. ಆದರೆ, ಕೆಲವು ಜನರಿಗೆ ಇನ್ನೂ ಇದರ ತೀವ್ರತೆ ಅರಿವಾಗಿಲ್ಲ. ಈ ಕಾರಣಕ್ಕೆ ಪ್ರತಿ ಹಳ್ಳಿಗಳಿಗೆ ಟಾಸ್ಕ್ ಫೋರ್ಸ್ ಜೊತೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಿದ್ದೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

    ಟ್ರಯಾಜ್ ಸೆಂಟರ್ ಕಾರ್ಯನಿರ್ವಹಣೆ ಹೇಗೆ? ಅಲ್ಲಿ ಯಾವ ರೀತಿ ಸಲಹೆಗಳನ್ನು ಕೊಡಲಾಗುತ್ತದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗಳು ಹಾಗೂ ಟ್ರಯಾಜ್ ಸೆಂಟರ್ ಗಳಲ್ಲಿನ ಚಿಕಿತ್ಸಾ ವಿಧಾನ, ಬೆಡ್, ಆಕ್ಸಿಜನ್ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಆರೋಗ್ಯಾಧಿಕಾರಿಗಳು 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಗಳ ಸದಸ್ಯರಿಗೆ ತಿಳಿವಳಿಕೆ ಮೂಡಿಸಿದರು.

    muruga shree somashekar 2

    ಬೆಂಗಳೂರು ದಕ್ಷಿಣ ಉಪ ವಿಭಾಗ ವಿಭಾಗಾಧಿಕಾರಿ ಶಿವಣ್ಣ, ದಕ್ಷಿಣ ತಾಲ್ಲೂಕು ವೈದ್ಯಾಧಿಕಾರಿ ಧನ್ಯ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗವೇಣಿ, ಮಹಿಳಾ ಶಿಶು ಅಭಿವೃದ್ಧಿಕಾರಿ ರಜನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

    ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ಸೋಮನಹಳ್ಳಿ ಗ್ರಾಮದ ರಮೇಶ್ ನಗರ ಆಶ್ರಯ ಬಡಾವಣೆಯಲ್ಲಿ ಪಡಿತರ ಕಿಟ್ ವಿತರಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು. ಮನೆಯಿಂದ ಯಾರೂ ಅನವಶ್ಯಕವಾಗಿ ಹೊರಗೆ ಬರಬೇಡಿ, ಎಲ್ಲರೂ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಿ ಎಂದು ಸಚಿವರಾದ ಸೋಮಶೇಖರ್ ಅವರು ಈ ಸಂದರ್ಭದಲ್ಲಿ ನಾಗರಿಕರಿಗೆ ಕಿವಿಮಾತು ಹೇಳಿದರು.

  • ಸಮಾಜಕ್ಕೆ ತುಡಿಯುವ, ಮಿಡಿಯುವ ಹೃದಯವಂತ ಸೋಮಶೇಖರ್ – ಶಿವಮೂರ್ತಿ ಮುರುಘಾ ಶರಣರಿಂದ ಶ್ಲಾಘನೆ

    ಸಮಾಜಕ್ಕೆ ತುಡಿಯುವ, ಮಿಡಿಯುವ ಹೃದಯವಂತ ಸೋಮಶೇಖರ್ – ಶಿವಮೂರ್ತಿ ಮುರುಘಾ ಶರಣರಿಂದ ಶ್ಲಾಘನೆ

    – ಕೊರೊನಾವನ್ನು ಮುಚ್ಚಿಡಬೇಡಿ; ಸಚಿವ ಸೋಮಶೇಖರ್ ಕಿವಿಮಾತು
    – ಕೋವಿಡ್ ಮಾಹಿತಿಗೆ ಟ್ರಯಾಜ್ ಸೆಂಟರ್: ಎಸ್ ಟಿ ಎಸ್
    – ನಾವು.. ನಾವು ಎಂಬ ಎಸ್ ಟಿ ಎಸ್ ಸೇವೆ ಶ್ಲಾಘನೀಯ: ಶ್ರೀ ಶ್ರೀ ರವಿಶಂಕರ್ ಗುರೂಜಿ

    ಬೆಂಗಳೂರು: ಇಂದು ಸಹಾಯಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಸಹಾಯ ಮಾಡುವವರ ಸಂಖ್ಯೆ ಕಡಿಮೆ ಇದೆ. ಇದು ಕೊರೋನಾ ಸಂದಿಗ್ದ ಕಾಲವಾಗಿದ್ದು, ಸ್ಪಂದನೆಯನ್ನು ನೀಡುವಂತಹ ಕಾಲವಾಗಿದೆ. ಇಂಥ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಮೃತಪಟ್ಟ ಕುಟುಂಬದವರಿಗೆ 1 ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡುತ್ತಿರುವ ಕ್ರಮ ಮಾದರಿಯಾಗಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಸ್ವಾಮೀಜಿ ರವರು ಹೇಳಿದರು.

    ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡ್‍ನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟವರ 27 ಕುಟುಂಬದವರಿಗೆ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮೀಜಿಯವರು ಮಾತನಾಡಿ, ಸಚಿವರಾದ ಸೋಮಶೇಖರ್ ಅವರದ್ದು, ಸಮಾಜಕ್ಕೆ ತುಡಿಯುವಂತಹ ಹಾಗೂ ಮಿಡಿಯುವಂತಹ ಹೃದಯ ಎಂದು ಬಣ್ಣಿಸಿದರು.

    muruga shree somashekar 2

    ಸೋಮಶೇಖರ್ ಅವರು ಸಚಿವರಾಗುವ ಮೊದಲಿನಿಂದಲೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದಿನಿಂದಲೂ ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮನ್ನು ಚಾಲನೆಗೆ ಕರೆಸಿಕೊಳ್ಳುತ್ತಿದ್ದರು. ಇಂತಹ ಸಮಾಜಮುಖಿ ಗುಣ ಇರುವ ಅವರದ್ದು ಸೇವಾ ಮನೋಭಾವ ಎಂದು ಸ್ವಾಮೀಜಿಗಳು ಶ್ಲಾಘನೆ ವ್ಯಕ್ತಪಡಿಸಿದರು.

    ಯಾರೂ ಸಹ ಖಿನ್ನತೆಗೊಳಗಾಬಾರದು. ಆದರೆ, ಇಂದು ಕೊರೋನಾ ರೋಗಕ್ಕಿಂತ ಭಯಕ್ಕೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಭಯವನ್ನು ಇಟ್ಟುಕೊಂಡವರು ಬದುಕನ್ನು ಕಳೆದುಕೊಳ್ಳುತ್ತಾರೆ. ಎಲ್ಲರೂ ತಮ್ಮಲ್ಲಿರುವ ಶಿಕ್ಷಣ, ಹಣ, ಅಂತಸ್ತು ಸೇರಿದಂತೆ ಯಾವುದೇ ಇದ್ದರೂ ಸರಿ, ಅವುಗಳಲ್ಲಿ ಒಂದನ್ನು ಬಳಸಿಕೊಂಡು ಪ್ರಾಣವನ್ನು ಉಳಿಸಿಕೊಂಡರೆ ಸಾಕು. ಮಾನವ ಎಲ್ಲವನ್ನೂ ಸಂಪಾದಿಸಿಕೊಳ್ಳಬಹುದು. ಆದರೆ, ನಮ್ಮ ಪ್ರಾಣವಿದ್ದರೆ ಮಾತ್ರ. ನಮ್ಮ ಪ್ರಾಣವನ್ನು ನಾವೇ ಉಳಿಸಿಕೊಂಡು ಬೇರೆಯವರ ಪ್ರಾಣವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸ್ವಾಮೀಜಿಗಳು ತಿಳಿಸಿದರು.

    muruga shree somashekar 1

    ಮೊದಲನೇ ಅಲೆಗಿಂತ ಎರಡನೇ ಅಲೆ ಭೀಕರವಾಗಿದೆ. ಇದಕ್ಕಾಗಿ ಜನತೆ ಜಾಗ್ರತೆ ವಹಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಕಂಡುಹಿಡಿಯಲಾದ ಕೊರೋನಾ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವ ಮುಖಾಂತರ ಕೊರೋನಾವನ್ನು ಜಯಿಸಬೇಕು. ಲಸಿಕೆಯನ್ನು ಹಾಕಿಸಿಕೊಂಡರೆ ಏನಾಗುತ್ತದೆ ಎಂಬ ಭಯ ಬೇಡ. ಹೀಗೆ ಮಾಡುವವರಿಗೆ ಹೆಚ್ಚಾಗಿ ಸೋಂಕು ತಗುಲುತ್ತಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ತಾವು ಸಹ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಹಾಕಿಸಿಕೊಳ್ಳುವ ಮುಂಚೆಯೇ ಹಾಕಿಸಿಕೊಂಡಿದ್ದಾಗಿ ಸ್ವಾಮೀಜಿಗಳು ತಿಳಿಸಿದರು.

    ಮುಕ್ತ ಶಿಕ್ಷಣ :
    ಚಿತ್ರದುರ್ಗದಲ್ಲಿ ಶ್ರೀಮಠದ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗಾಗಿಯೇ 200 ಬೆಡ್ ಗಳನ್ನು ಬಿಟ್ಟುಕೊಟ್ಟಿದ್ದೇವೆ. ಅನಾಥಾಶ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಮ್ಮ ಚಿತ್ರದುರ್ಗ ಮಠ ಹಮ್ಮಿಕೊಳ್ಳುತ್ತಿದ್ದು, ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ಮಕ್ಕಳಿಗೆ ಸಹ ಮುಕ್ತವಾಗಿ ಶಿಕ್ಷಣವನ್ನು ಶ್ರೀಮಠ ಕೊಡಲಿದೆ ಎಂದು ಸ್ವಾಮೀಜಿಯವರು ತಿಳಿಸಿದರು.

    somashekar ravishankar guruji

    ಕೊರೋನಾವನ್ನು ಮುಚ್ಚಿಡಬೇಡಿ:
    ಕೊರೋನಾ ಬಂದರೆ ಹೇಳಿಕೊಳ್ಳಲು ನಾಚಿಕೆ ಪಡುವ ಸನ್ನಿವೇಶಗಳು ಬಂದಿದೆ. ಜನರು ಭಯಪಡುತ್ತಿದ್ದು, ಮುಚ್ಚಿಡುತ್ತಿದ್ದಾರೆ. ನಾವು ಆಹಾರ ಕಿಟ್ ಗಳನ್ನು ಕೊಡಲು ಹೋದಂತಹ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಅಕ್ಕಪಕ್ಕದವರಿಗೆ ಗೊತ್ತಾದರೆ ಎಂಬ ಆತಂಕವನ್ನು ಹೊಂದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಆ ಆತಂಕ ಬೇಡ. ಕೊರೋನಾ ಇಡೀ ವಿಶ್ವಕ್ಕೇ ಆವರಿಸಿದೆ. ಹೀಗಾಗಿ ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

    ಟ್ರಯಾಜ್ ಸೆಂಟರ್:
    ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿ ಸುಮಾರು 100 ಬೆಡ್ ಗಳ ವ್ಯವಸ್ಥೆ ಮಾಡಿದ್ದೇವೆ. ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸುಮಾರು 370 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 45 ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿವೆ. ಕೆಂಗೇರಿ ಮತ್ತು ಹೇರೋಹಳ್ಳಿಯಲ್ಲಿ ಟ್ರಯಾಜ್ ಸೆಂಟರ್ ಗಳನ್ನು ತೆರೆಯಲಾಗಿದೆ. ಇಲ್ಲಿ ಪಾಸಿಟಿವ್ ಬಂದವರು ತಕ್ಷಣ ಭೇಟಿ ಕೊಟ್ಟರೆ, ಯಾವ ಪ್ರಮಾಣದಲ್ಲಿ ಸೋಂಕಿದೆ, ಚಿಕಿತ್ಸೆಯನ್ನು ಮನೆಯಲ್ಲಿ ತೆಗೆದುಕೊಳ್ಳಬೇಕಾ? ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕಾ? ಇಲ್ಲವೇ ಆಸ್ಪತ್ರೆಗೆ ದಾಖಲಿಸಬೇಕಾ ಎಂಬ ಬಗ್ಗೆ ತಿಳಿಸಿಕೊಡುತ್ತಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

    ನೀವಿದ್ದಲ್ಲಿಗೆ ಸೌಲಭ್ಯ:
    ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಗೆ ಮುಕ್ತವಾಗಿ ಪ್ರವೇಶ ಪಡೆಯಬಹುದಾಗಿದ್ದು, ಯಾವುದೇ ಪ್ರಭಾವವನ್ನು ಬಳಸುವುದ ಸಹ ಬೇಡ. ಅಲ್ಲಿಗೆ ನೇರವಾಗಿ ಹೋಗಿ ದಾಖಲಾದರೆ, 10 ದಿನಗಳ ಕಾಲ ಅಗತ್ಯ ಔಷೋಧಪಾರಗಳು ಲಭ್ಯವಾಗಿ ಗುಣಮುಖರಾಗಿ ಹಿಂದಿರುಗಬಹುದು. ಇನ್ನು ಹೋಂ ಐಸೋಲೇಶನ್ ನಲ್ಲಿರುವವರು, ಆಸ್ಪತ್ರೆಗಳಿಗೆ ದಾಖಲಿದ್ದರೆ ತಮಗೆ ಮಾಹಿತಿ ನೀಡಿದರೆ ಮನೆಗೆ ಆಹಾರ ಕಿಟ್ ಗಳನ್ನು ತಂದುಕೊಡಲಾಗುವುದು. ಆಸ್ಪತ್ರೆಗಳಿಗೆ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

    somashekar ravishankar guruji 2

    ಯಾರೂ ಭಯ ಪಡಬೇಡಿ:
    ತಾವು ನಮ್ಮ ಕ್ಷೇತ್ರಕ್ಕೆ ಬಂದು ಜನತೆಗೆ ಸಂದೇಶವನ್ನು ಕೊಡಬೇಕು. ಆ ಮೂಲಕ ಕೊರೋನಾ ಬಗ್ಗೆ ಧೈರ್ಯವನ್ನು ಹೇಳಬೇಕು ಎಂಬ ನಿಟ್ಟಿನಲ್ಲಿ ಕೋರಿಕೊಂಡಿದ್ದೆ. ಈ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಆಗಮಿಸಿ ಜನತೆಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಯಾರೂ ಸಹ ಭಯಗೊಳ್ಳಬೇಡಿ ಎಂದು ಸಚಿವರು ತಿಳಿಸಿದರು.

    ಜೊತೆಗಿದ್ದವರೇ ಇರುತ್ತಿಲ್ಲ:
    ನನ್ನ ಜೊತೆಗೆ 10-20 ವರ್ಷಗಳಿಂದ ಕೆಲಸ ಮಾಡಿದ ಅನೇಕ ಆಪ್ತರು ಕೋವಿಡ್ ಗೆ ಬಲಿಯಾಗುತ್ತಿದ್ದಾರೆ. ಹಿಂದಿನ ದಿನ ರಾತ್ರಿ ಕರೆ ಮಾಡಿ ಗುಣಮುಖನಾಗಿದ್ದೇನೆ. ಅನ್ನುವವರು ಮರುದಿನ ಇರುವುದಿಲ್ಲ. ಇದು ನನ್ನನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ನನ್ನ ಕ್ಷೇತ್ರದ ಜನರಿಗೆ ಕೈಲಾದಷ್ಟು ಸಹಾಯವನ್ನು ಮಾಡುವ ಮೂಲಕ ಅವರಿಗೆ ಸ್ಪಂದಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

    ಎಸ್‍ಟಿಎಸ್ ಸೇವೆ ಶ್ಲಾಘನೀಯ: ರವಿಶಂಕರ್ ಗುರೂಜಿ
    ನಾನು.. ನಾನು ಎಂದು ಕುಳಿತುಕೊಳ್ಳದೆ, ನಾವು.. ನಾವು ಎಂದು ನಾವುಗಳು ಬದುಕಬೇಕಿದೆ. ಈ ನಿಟ್ಟಿನಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿದರು.

    somashekar ravishankar guruji 1

    ಕಗ್ಗಲೀಪುರ ಗ್ರಾಮ ಪಂಚಾಯಿತಿ ಮತ್ತು ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟವರ 20 ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಶ್ರೀ ರವಿಶಂಕರ್ ಗುರೂಜಿ ಅವರು ಚಾಲನೆ ನೀಡಿ ಮಾತನಾಡಿದರು.

    ನಮ್ಮ ದೇಶಕ್ಕೆ ಎಷ್ಟೋ ಕಷ್ಟಗಳು ಎದುರಾಗಿವೆ. ಈಗ ಬಂದಿರುವ ಕಷ್ಟ ನಮ್ಮ ದೇಶಕ್ಕೆ ಮಾತ್ರವಲ್ಲಿ ಇಡೀ ಪ್ರಪಂಚಕ್ಕೆ ಎದುರಾಗಿದೆ. ಶರೀರವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕಿದ್ದು, ಮನೋಬಲವನ್ನು ಕಳೆದುಕೊಳ್ಳಬಾರದು. ಇದು ಸ್ವಾರ್ಥಕ್ಕೆ ಸಮಯವಲ್ಲ. ನಮ್ಮಿಂದ ಇನ್ನೊಬ್ಬರಿಗೆ ಎಷ್ಟು ಸಹಾಯ ಮಾಡಲು ಸಾಧ್ಯ ಎಂಬುದನ್ನು ನಾವು ನೋಡಬೇಕಿದೆ. ಹೀಗಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿದರು.

    ನಾವು ಎಲ್ಲದಕ್ಕೂ ಸರ್ಕಾರವನ್ನು ಬೈಯುವುದಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸೋಣ. ನಾಡಿನ ಜನತೆ ಮುಂಜಾಗ್ರತೆಯನ್ನು ಪಡೆದುಕೊಂಡು, ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಿದೆ ಎಂದು ಶ್ರೀ ರವಿಶಂಕರ್ ಗುರೂಜಿಯವರು ಕಿವಿಮಾತು ಹೇಳಿದರು.

  • ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಿದ – ಎಸ್.ಟಿ ಸೋಮಶೇಖರ್

    ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಿದ – ಎಸ್.ಟಿ ಸೋಮಶೇಖರ್

    ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಕೆ.ಆರ್.ನಗರದ ವಿಧಾನ ಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೊರೊನಾ ಸೋಂಕಿತರನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    someshkar 1

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್, ಬೆಂಗಳೂರು ಬಿಟ್ಟರೆ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದೇ ಮೈಸೂರು ಜಿಲ್ಲೆಯಲ್ಲಿ. ಹೀಗಾಗಿ ಕೆ.ಆರ್.ನಗರದ ವೈದ್ಯಾಧಿಕಾರಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಹಾಗೂ ಕಡ್ಡಾಯವಾಗಿ ಸ್ವಾಬ್ ಟೆಸ್ಟ್ ಮಾಡಿಸಿ. ಕೆ.ಆರ್.ನಗರಕ್ಕೂ ಅನಿರೀಕ್ಷಿತ ಭೇಟಿ ನೀಡುವೆ. ಹೀಗಾಗಿ ನೀವೂ ಸಹ ಮನೆ ಮನೆ ಸರ್ವೆಮಾಡಿ ಮೇ31 ರೊಳಗಾಗಿ ಮುಗಿಸಬೇಕು. ಆರೋಗ್ಯ ಕೇಂದ್ರದಲ್ಲಿ ಯಾರಿಗೂ ಯಾವ ಸಮಸ್ಯೆಗಳು ಉಂಟಾಗದಂತೆ ನೋಡಿಕೊಂಡಿರುವ ಸಾ.ರಾ.ಮಹೇಶ್ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

    ಕೋವಿಡ್ ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಗಳಿಗೆ ಸಹಾಯ ಮಾಡಿದವರ ಹೆಸರನ್ನು ಬರೆದುಕೊಳ್ಳಿ ಅಂತಹವರಿಗೆ ಜಿಲ್ಲಾಡಳಿದಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಅವರಿಗೆ ಪ್ರಶಸ್ತಿ ಪತ್ರವನ್ನೂ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    st someshakr 1

     

    ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಳೆದ ಒಂದು ತಿಂಗಳಲ್ಲಿ ಎರೆಡೆರಡು ಬಾರಿ ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಭೇಟಿ ಮಾಡಿ ಸಕ್ರಿಯವಾಗಿ ಇಲ್ಲಿನ ಪರಿಸ್ಥಿತಿಯನ್ನು ಹಾಗೂ ಇಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ನಗರದಲ್ಲಿ ಹೆಚ್ಚಾಗುತ್ತಿದ್ದ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ವ್ಯವಸ್ಥಿತವಾದಂತಹ ಪ್ರಯತ್ನದಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯು ಹೆಚ್ಚಳವಾಗುತ್ತಿದ್ದು, ಹಲವಾರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶೀಲ್ದಾರ್ ಮಂಜುಳಾ, ತಾಲ್ಲೂಕು ಆರೋಗ್ಯಾಧಿಕಾರಿ ಮಹೇಂದ್ರಪ್ಪ, ಎ.ಹೇಮಂತ್ ಕುಮಾರ್ ಗೌಡ ಸೇರಿದಂತೆ ಇತರರು ಹಾಜರಿದ್ದರು.

  • ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು- ಸಂಸದರ ಹೇಳಿಕೆ ಶೇ 100ರಷ್ಟು ಸರಿ ಇದೆ ಎಸ್.ಟಿ.ಸೋಮಶೇಖರ್

    ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು- ಸಂಸದರ ಹೇಳಿಕೆ ಶೇ 100ರಷ್ಟು ಸರಿ ಇದೆ ಎಸ್.ಟಿ.ಸೋಮಶೇಖರ್

    -ಕೋವಿಡ್ ಸಂತ್ರಸ್ತ ಮಕ್ಕಳಿಗೆ ಸುತ್ತೂರು ಮಠದಲ್ಲಿ ಉಚಿತ ಶಿಕ್ಷಣ, ಆಶ್ರಯ

    ಮೈಸೂರು: ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ಮಾಡುವುದರಿಂದ ಅಲ್ಲಿನ ಸಮಸ್ಯೆ ತಿಳಿಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    st someshakar

    ಪೋಸ್ಟ್ ಕೋವಿಡ್ ಸೆಂಟರ್ ಸ್ಥಾಪಿಸುವ ಬಗ್ಗೆ ಸುತ್ತೂರು ಮಠದಲ್ಲಿ ಶ್ರೀಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿಗಳು, ಡಿ.ಎಚ್.ಒ. ಮುಂತಾದ ಅಧಿಕಾರಿಗಳು ಕೇವಲ ವೀಡಿಯೋ ಕಾನ್ಫರೆನ್ಸ್, ಸಭೆಗಳನ್ನು ಮಾಡಿದರೆ ಸಾಲದು, ಹಳ್ಳಿಗಳಿಗೆ ಹೋಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತ್ರಕರ್ತರು ಕೇಳಿದಾಗ, ಸಂಸದರು ಹೇಳಿರುವುದು ಶೇ. 100 ರಷ್ಟು ಸರಿ ಇದೆ ಜಿಲ್ಲಾಧಿಕಾರಿಯಾಗಲಿ, ಬೇರೆ ಯಾವ ಅಧಿಕಾರಿಗಳಾಗಲಿ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲಿನ ಶಾಸಕರ ಜೊತೆ ಮಾತನಾಡಿದಾಗ ಅಲ್ಲಿನ ಸಮಸ್ಯೆ ತಿಳಿಯುತ್ತದೆ ಎಂದರು.

    someshakr 1

    ಕೋವಿಡ್ ಚಿಕಿತ್ಸೆ ಪಡೆದು ಹೊರಬಂದವರ ಮೇಲೆ ನಿಗಾ ವಹಿಸಲು ಪೋಸ್ಟ್ ಕೋವಿಡ್ ಸೆಂಟರ್ (ಸ್ಟೆಪ್ ಡೌನ್ ಸೆಂಟರ್) ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಸುತ್ತೂರು ಮಠದ ಶಾಲೆಗಳು, ಹಾಸ್ಟೆಲ್, ಸಮುದಾಯ ಭವನಗಳನ್ನು ಬಳಸಿಕೊಳ್ಳಲು ಸುತ್ತೂರು ಶ್ರೀಗಳು ಸಹಕಾರ ನೀಡಿದ್ದಾರೆ ಎಂದರು. ಕೋವಿಡ್ ಚಿಕಿತ್ಸೆ ಪಡೆದು ಹೊರಬಂದವರ ಮೇಲೆ ಇನ್ನೂ ಸ್ವಲ್ಪ ದಿನ ನಿಗಾವಹಿಸಬೇಕಾಗುತ್ತದೆ ಹಾಗೂ ಕೆಲವರ ಮನೆಯಲ್ಲಿ ಮಕ್ಕಳಿರುವುದರಿಂದ ಅವರನ್ನು ಪ್ರತ್ಯೇಕವಾಗಿ ಇರಿಸುವ ಸಲುವಾಗಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರೆಯಬೇಕಾಗುತ್ತದೆ ಎಂದು ಹೇಳಿದರು.

    ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಟ್ಟ ಪೋಷಕರ ಮಕ್ಕಳು ಶಿಕ್ಷಣದಿಂದ ವಚಿಂತವಾಗಬಾರದು ಹಾಗೂ ಅವರಿಗೆ ಅನಾಥಭಾವ ಮೂಡಬಾರದೆಂಬ ದೃಷ್ಟಿಯಿಂದ ಸುತ್ತೂರು ಸ್ವಾಮೀಜಿಯವರು ಅಂತಹ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದು, ಇದಕ್ಕಾಗಿ ಶ್ರೀಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಇತರೆ ಕಡೆ ಇರುವ ಸುತ್ತೂರು ಮಠದ ಶಾಲೆಗಳನ್ನು ಹಾಗೂ ಹಾಸ್ಟೆಲ್ ಗಳನ್ನು ಬಳಸಿಕೊಳ್ಳಲು ಸೂಚಿಸಿದ್ದು, ಮಠದ ವತಿಯಿಂದ ಊಟದ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಿದ್ದಾರೆ ಎಂದರು.

    someshakr

    ಕೋವಿಡ್ ಪಾಸಿಟಿವ್ ಬಂದು ಗುಣವಾದ ನಂತರ ವಿಶ್ರಾಂತಿ ವ್ಯವಸ್ಥೆಗೆ ಜೆ.ಎಸ್.ಎಸ್ ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳನ್ನು ಬಳಸಿಕೊಳ್ಳಲು ಸೂಚಿಸಿದ್ದಾರೆ. ಒಟ್ಟು ಆರು ಸಾವಿರ ಜನರಿಗೆ ವ್ಯವಸ್ಥೆ ಮಾಡ ಬಹುದು. ಇದಕ್ಕೆ ಊಟ ವಸತಿ ಎಲ್ಲಾ ವ್ಯವಸ್ಥೆ ಮಠದಿಂದಲೆ ಮಾಡಿಕೊಡುತ್ತಾರೆ. ಕೋವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೂ 6 ಲೋಡ್ ಸೌದೆಗಳನ್ನು ನೀಡಿದ್ದಾರೆ. ಹೀಗೆ ಸ್ವಾಮೀಜಿಯವರು ಸಣ್ಣಪುಟ್ಟ ವಿಷಯಗಳಿಗೂ ಸ್ಪಂದಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

    ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

  • ಎಸ್.ಟಿ.ಸೋಮಶೇಖರ್ ಕಾರ್ಯ ಶ್ಲಾಘನೀಯ: ನಟ ಉಪೇಂದ್ರ

    ಎಸ್.ಟಿ.ಸೋಮಶೇಖರ್ ಕಾರ್ಯ ಶ್ಲಾಘನೀಯ: ನಟ ಉಪೇಂದ್ರ

    – ಸಚಿವರ ವೈಯಕ್ತಿಕ 1 ಲಕ್ಷ ರೂ. ಆರ್ಥಿಕ ಸಹಾಯಕ್ಕೆ ಮೆಚ್ಚುಗೆ
    – ಎರಡನೇ ಅಲೆ ಬಗ್ಗೆ ಎಚ್ಚರವಹಿಸಿ- ಸೋಮಶೇಖರ್ ಕರೆ

    ಬೆಂಗಳೂರು: ಕೋವಿಡ್-19ನ ಈ ಸಂದರ್ಭದಲ್ಲಿ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಖ್ಯಾತ ನಟ, ನಿರ್ದೇಶಕರಾದ ಉಪೇಂದ್ರ ಅವರು ಹೇಳಿದರು.

    upendra 4

    ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃಪಪಟ್ಟ ಕುಟುಂಬಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕವಾಗಿ ಕೊಡಮಾಡುವ ತಲಾ ರೂ.1 ಲಕ್ಷಗಳ ಪರಿಹಾರವನ್ನು ನೀಡಿ ಮಾತನಾಡಿದ ಉಪೇಂದ್ರ ಅವರು, ಸೋಮಶೇಖರ್ ಅವರು ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಮಾತನ್ನು ಸುಳ್ಳು ಮಾಡುತ್ತಿದ್ದಾರೆ. ಅವರು ಯಾವುದನ್ನೂ ಬಚ್ಚಿಡುತ್ತಿಲ್ಲ. ತಮ್ಮಲ್ಲಿರುವುದನ್ನು ಎಲ್ಲರಿಗೂ ಹಂಚುವ ಮೂಲಕ ಎಲ್ಲರಿಗೂ ಮಾದರಿಯಾಗಿ ನಡೆಯುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

    ಇಂದು ಜಗತ್ತಿಗೇ ಕೊರೋನಾ ಮಹಾಮಾರಿ ಬಂದಿದ್ದು, ಮಾನವೀಯತೆಗೆ ಮತ್ತು ಮನುಷ್ಯತ್ವಕ್ಕೆ ನಾವು ಬೆಲೆ ಕೊಡಬೇಕಿದೆ. ಮನುಷ್ಯತ್ವವನ್ನು ಪರೀಕ್ಷೆ ಮಾಡುವ ಸಮಯ ಇದಾಗಿದೆ. ಈ ನಿಟ್ಟಿನಲ್ಲಿ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಬಗ್ಗೆ ಯಾರಿಗೂ ಭಯ ಬೇಡ, ಎಲ್ಲರೂ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಬೇಕು. ಇದರಿಂದ ನಿಮಗೆ ಧೈರ್ಯಬರುವುದಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಶುಚಿಯಾಗಿರುವುದಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸದಾ ಧನಾತ್ಮಕ ಚಿಂತನೆಯನ್ನು ಮಾಡಬೇಕು. ಯಾರೂ ಸಹ ಎದೆಗುಂದಬಾರದು ಎಂದು ಉಪೇಂದ್ರ ಅವರು ಸಲಹೆ ನೀಡಿದರು.

    upendra 3 1

    ಎರಡನೇ ಅಲೆ ಬಗ್ಗೆ ಎಚ್ಚರವಹಿಸಿ-ಸೋಮಶೇಖರ್ ಕರೆ
    ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಟಿ. ಸೋಮಶೇಖರ್ ಅವರು, ಈ ಬಾರಿ ಕೊರೊನಾ ಎರಡನೇ ಅಲೆ ಬಹಳ ವೇಗವಾಗಿ ಬೆಳೆಯುತ್ತಿದೆ. ಮೊದಲ ಅಲೆಗಿಂತ ಹೆಚ್ಚಾಗಿ ಸಾವು-ನೋವುಗಳಾಗುತ್ತಿದೆ. ಇದಕ್ಕಾಗಿ ನಾವು ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ಮೂರ್ನಾಲ್ಕು ಕಡೆ ಟ್ರಯಾಜ್ ಸೆಂಟರ್ ಅನ್ನು ತೆರೆದಿದ್ದೇವೆ. ಇಲ್ಲಿಗೆ ಸೋಂಕಿತರು ಭೇಟಿ ನೀಡಿದರೆ, ಅಲ್ಲಿ ವೈದ್ಯರು ಯಾವ ರೀತಿಯ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬುದನ್ನು ಸೂಚಿಸುತ್ತಾರೆ. ಮನೆಯಲ್ಲಿದ್ದು ಚಿಕಿತ್ಸೆ ಪಡೆಯಬಹುದಾ ? ಆಸ್ಪತ್ರೆಗೆ ದಾಖಲಾಗಬೇಕಾ? ಆಕ್ಸಿಜನ್ ಅಗತ್ಯವಿದೆಯೇ? ಎಂಬಿತ್ಯಾದಿಗಳನ್ನು ಪರೀಕ್ಷಿಸಿ ಮಾಹಿತಿಯನ್ನು ಕೊಡಲಿದ್ದಾರೆ ಎಂದು ತಿಳಿಸಿದರು.

    ಜನಸೇವಾ ಕೇಂದ್ರದಲ್ಲಿ ನಿರ್ಮಲ್ ಜೀ ಅವರು 100 ಬೆಡ್ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನದ ಊಟ, ಮೆಡಿಸಿನ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಇಲ್ಲಿ ಮಾಡಲಾಗಿದ್ದು, ಇನ್ನು ಮನೆಯಲ್ಲಿ ಯಾರಾದರೊಬ್ಬರಿಗೆ ಸೋಂಕು ತಗುಲಿದರೆ, ಮನೆಯವರಿಗೆ ಬರಬಾರದು ಎಂಬ ದೃಷ್ಟಿಯಿಂದ ಇಲ್ಲಿಗೆ ಬಂದು ದಾಖಲಾಗಬಹುದು. ಇಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲರೂ ಇಲ್ಲಿ ಗುಣಮುಖರಾಗಿ ವಾಪಸ್ ಬರುತ್ತಿದ್ದಾರೆ ಎಂದು ತಿಳಿಸಿದರು.

    swamiji

    ಕೋವಿಡ್ ಯಾರಿಗೇ ಬಂದರೂ ಮುಚ್ಚಿಡಬೇಡಿ. ಧೈರ್ಯವಾಗಿ ಹೇಳಿಕೊಳ್ಳಿ, ಕೋವಿಡ್ ಬಂದು ವಿಕೋಪಕ್ಕೆ ಹೋದರೆ ಯಾರೂ ರಕ್ಷಣೆ ಮಾಡಲಾಗದು. ಹೀಗಾಗಿ ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಗಳನ್ನು ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಂದಲೂ ಸರ್ಕಾರಿ ಬೆಡ್ ಗಳನ್ನು ಪಡೆಯುತ್ತಿದ್ದೇವೆ. ಐಸಿಯುಗಳಲ್ಲಿ ವೆಂಟಿಲೇಟರ್ ಗಳು, ಆಕ್ಸಿಜನ್ ಕೊರತೆ ಇತ್ತು. ಆದಿಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಅವರ ಬಳಿ ಮನವಿ ಮಾಡಿಕೊಂಡು ಬಿಜಿಎಸ್ ಆಸ್ಪತ್ರೆಯಿಂದ 210 ಬೆಡ್ ಅನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. 43 ವೆಂಟಿಲೇಟರ್ ಬೆಡ್ ಗಳ ಸೌಲಭ್ಯವೂ ಸಿಕ್ಕಿದೆ. ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆಯನ್ನು ಇಡಲಾಗಿದ್ದು, ಅದೂ ಸಹ ಪೂರೈಕೆಯಾಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ನಾನು ವೈಯಕ್ತಿಕ ನೆರವು ನೀಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

    ನಾವೂ ಸಹ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಉಚಿತವಾಗಿ ಕೊಡುತ್ತಿದ್ದೇವೆ. ನಾಗರಿಕರು ಧೈರ್ಯವಾಗಿರಬೇಕು. ಸರ್ಕಾರ ಸಹ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಇದನ್ನು ಕೋವಿಡ್ ಸಂಬಂಧಪಟ್ಟಂತೆ ಖರ್ಚು ಮಾಡಲು ಬಳಸಬಹುದಾಗಿದೆ. ಜೊತೆಗೆ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಲು ಸಹ ಸರ್ಕಾರ ಅನುಮತಿ ನೀಡಿದೆ. ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನು ಸಹ ಚುರುಕುಗೊಳಿಸಲಾಗುತ್ತಿದೆ. 2 ಡೋಸ್ ಪಡೆದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಮುಂದೆ ಅಷ್ಟಾಗಿ ಪರಿಣಾಮ ಬೀರದು. ನಮ್ಮ ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಿ, 2ನೇ ಡೋಸ್ ಗೆ ಪ್ರಾಧಾನ್ಯತೆ ನೀಡುತ್ತಿದ್ದೇವೆ. ಎಲ್ಲರೂ ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಗುರೂಜಿಯವರಾದ ಡಾ. ಚಂದ್ರಶೇಖರನಾಥ ಸ್ವಾಮೀಜಿ ಮತ್ತು ಜನಸೇವಾ ಕೇಂದ್ರದ ಅಧ್ಯಕ್ಷರಾದ ನಿರ್ಮಲ್ ಜೀ ಅವರು ಜೊತೆಗಿದ್ದರು.

    ಮಠಾಧೀಶರಿಂದ ಸಿಕ್ಕಿತ್ತು ಚಾಲನೆ
    ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಡಾ||ನಿರ್ಮಲಾನಂದನಾಥ ಸ್ವಾಮೀಜಿರವರು ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸಾಮೀಜಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಕೋವಿಡ್ 19 ನಿಂದ ಮೃತಪಟ್ಟ 83 ಕುಟುಂಬಗಳಿಗೆ ಸ್ಥಳೀಯ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ರವರು ವೈಯುಕ್ತಿಕವಾಗಿ ನೀಡುತ್ತಿರುವ ತಲಾ ರೂ.1 ಲಕ್ಷಗಳ ಪರಿಹಾರಧನ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ.

    swamiji 1

    > ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 09 ಹಳ್ಳಿಗಳು ಬರುತ್ತವೆ.
    > ಈಗಾಗಲೇ ಕುಂಬಳಗೋಡು ಗ್ರಾಮ ಪಂಚಾಯತಿಯಲ್ಲಿ ಕೋವಿಡ್ 19 ನಿಂದ ಮೃತಪಟ್ಟ 05 ಕುಟುಂಬಗಳಿಗೆ ತಲಾ ರೂ.1 ಲಕ್ಷಗಳ ಪರಿಹಾರವನ್ನು ನೀಡಲಾಗಿದೆ.
    > ಇಂದು ಕೋವಿಡ್ 19 ನಿಂದ ಮೃತಪಟ್ಟ 08 ಕುಟುಂಬಗಳಿಗೆ ತಲಾ ರೂ.1 ಲಕ್ಷ ಗಳ ವಿತರಣೆ ಮಾಡಲಾಗಿದೆ.
    > ಆಶಾ ಕಾರ್ಯಕರ್ತರಿಗೆ, ವಾಟರ್‍ಮನ್‍ಗಳಿಗೆ ಹಾಗೂ ಕುಂಬಳಗೋಡು ಗ್ರಾಮ ಪಂಚಾಂತಿಯಲ್ಲಿ “ಡಿ”ಗ್ರೂಪ್ ನೌಕರರಿಗೆ ಇಂದು ಫುಡ್ ಕಿಟ್ ವಿತರಣೆ ಮಾಡಲಾಗುತ್ತಿದೆ.
    > ಈಗಾಗಲೇ ಹೋಂ ಐಸೋಲೇಷನ್‍ನಲ್ಲಿರುವ 250 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಗಿದೆ.
    > ಹಳ್ಳಿಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
    > ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇವುಗಳ ಬಗ್ಗೆ ಇಲವು ಮೂಡಿಸಲಾಗುತ್ತಿದೆ
    > ಕೊರೊನಾ ಬಗ್ಗೆ ಜನರಲ್ಲಿ ಧೈರ್ಯ ತುಂಬುವ ಮೂಲಕ ನಾವಿದ್ದೇವೆ ಎಂದು ಭರವಸೆ ನೀಡುವುದರ ಜೊತೆ ವೈಯಕ್ತಿಕ ನೆರವು ನೀಡುತ್ತಿದ್ದೇವೆ
    >  ವಯಸ್ಕರು ಮುನ್ನೆಚ್ಚರಿಕೆ ವಹಿಸುವ ಸಂಬಂಧ ಅರಿವು ಮೂಡಿಸಲಾಗುತ್ತಿದೆ
    > ಮಹಿಳೆಯರು, ಯುವಜನರು ಹಾಗೂ ಜನಪ್ರತಿನಿಧಿಗಳು ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಜನಾಂದೋಲನ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ

  • ನೀವು ಎಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ- ಸೋಮಶೇಖರ್‌ಗೆ ಕಾಂಗ್ರೆಸ್‌ ಪ್ರಶ್ನೆ

    ನೀವು ಎಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ- ಸೋಮಶೇಖರ್‌ಗೆ ಕಾಂಗ್ರೆಸ್‌ ಪ್ರಶ್ನೆ

    ಬೆಂಗಳೂರು: ಸಿಡಿ ಮಾಡಿದ್ದು ಕಾಂಗ್ರೆಸ್‌ನವರೇ, ನಾನೂ ಕಾಂಗ್ರೆಸ್‌ನಲ್ಲಿದ್ದವನೇ ಎಂದಿರುವ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

    ಬಾಂಬೆಯ ಹೋಟೆಲ್‌ನಲ್ಲಿ ಕ್ವಾರೆಂಟೈನ್ ಆಗಿದ್ದಿರಲ್ಲ. ಆಗ ನಿಮ್ಮ ಸಿಡಿ ಯಾರು ಮಾಡಿದ್ದು? ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಿದಿರಿ ಎಂದು ಸೋಮಶೇಖರ್‌ ಮತ್ತು ಬಿಜೆಪಿ ನಾಯಕರನ್ನು ಪ್ರಶ್ನಿಸಿ ಸರಣಿ ಟ್ವೀಟ್‌ ಮಾಡಿ ಕುಟುಕಿದೆ.

    Yatnal 1

    ಟ್ವೀಟ್‌ನಲ್ಲಿ ಏನಿದೆ?
    ಕಾಂಗ್ರೆಸ್ ಮೇಲೆ ಆರೋಪಿಸುವ ಸೋಮಶೇಖರ್ ಅವರೇ ನಿಮ್ಮ ಕಳ್ಳ ಮನಸೇಕೆ ಹುಳ್ಳುಳ್ಳಗೆ ಆಡುತ್ತಿದೆ? ಹೆಗಲು ಮುಟ್ಟಿ ನೋಡಿಕೊಂಡವರಂತೆ ಓಡಿ ಹೋಗಿ ತಡೆಯಾಜ್ಞೆ ಅರ್ಜಿ ಏಕೆ ಸಲ್ಲಿಸಿದಿರಿ?

    ಮನೆಹಾಳು ಕೆಲಸ ಯಾರು ಮಾಡುವವರು ಎನ್ನುವುದನ್ನ ಬಸನ ಗೌಡ ಪಾಟೀಲ್‌ ಯತ್ನಾಳ್‌ ಬಳಿ ವಿಚಾರಿಸಿ ಅವರು ಹೇಳುತ್ತಾರೆ. ವಿಜಯೇಂದ್ರ ಅವರು ಸಿಡಿ ತಯಾರಿಕಾ ಘಟಕವನ್ನು ಹೊಂದಿರುವ ಬಗ್ಗೆ ಘಂಟಾಘೋಷವಾಗಿ ಹೇಳಿದ್ದಾರೆ. ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ನಿಮ್ಮವರೇ ಸಾರಿ ಸಾರಿ ಹೇಳಿದ್ದಾರೆ.

    ಸಿಡಿ ಬಾಂಬ್ ಸಿಡಿಯುವ ಹಲವು ದಿನಗಳ ಮೊದಲೇ ಯತ್ನಾಳ್ ಸತ್ಯ ಸಿಡಿಸಿದ್ದರು. ನಿಮ್ಮ ಮನೆಯ ಒಳ ಸತ್ಯ ನಿಮ್ಮವರಿಗಲ್ಲದೆ ಇನ್ಯಾರಿಗೆ ತಿಳಿದೀತು?

    ಕಾಮಿಡಿ ಕಿಂಗ್ ಕಟೀಲ್‌ ಅವರೇ, ಒಬ್ಬರ ಸಿಡಿ ಹೊರಬಂದಿದೆ. 6 ಜನ ಗೋಳಾಡಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 13 ಜನ ಅರ್ಜಿ ಸಲ್ಲಿಸಲು ಕಾದಿದ್ದಾರೆ. ನಿಮ್ಮ ಮನೆಯೇ ಸಿಡಿ ಸುನಾಮಿಗೆ ಸಿಡಿದು ಹೋಗಿದೆ!

    ಬಿಜಪಿ ಬ್ಲೂ ಬಾಯ್ಸ್‌ಗಳ ರಾಜೀನಾಮೆ ಪಡೆದು, ಉಚ್ಛಾಟಿಸಿ ನಿಮ್ಮ ಬೆನ್ನು ಮೂಳೆಯ ಗಟ್ಟಿತನ ಹಾಗೂ ನಿಮ್ಮ ಪಕ್ಷದ ನೈತಿಕತೆ ಪ್ರದರ್ಶಿಸಿ.

    ಸೋಮಶೇಖರ್‌ ಅವರೇ, ಬಿ ವೈ ವಿಜಯೇಂದ್ರ ತಮ್ಮ ವಿರೋಧಿಗಳ ಸಿಡಿ ತಯಾರಿಸುತ್ತಾರೆ ಎಂದಿದ್ದ ಬಸನಗೌಡ ಪಾಟೀಲ್‌ ಅವರು ಇಂದು ಮತ್ತೊಮ್ಮೆ ಇನ್ನೂ 23 ಸಿಡಿಗಳಿವೆ ಎಂದಿದ್ದಾರೆ. ಸರ್ಕಾರ ಸಿಡಿ ತನಿಖೆಯನ್ನು ವಿಜಯೇಂದ್ರರವರಿಂದಲೇ ಏಕೆ ಶುರು ಮಾಡಬಾರಾದು? ಸರ್ಕಾರ ಉನ್ನತ ಮಟ್ಟದ ತನಿಖೆಗೆ ಏಕೆ ವಹಿಸುತ್ತಿಲ್ಲ? ತಮ್ಮದೇ ಬುಡಕ್ಕೆ ಬರುವ ಭಯದಲ್ಲಿದೆಯೇ?

  • ರಾಜರಾಜೇಶ್ವರಿ ನಗರ ಉಪಚುನಾವಣೆ – ಮುನಿರತ್ನಗೆ ಬಿಜೆಪಿಯಿಂದ ಟಿಕೆಟ್‌

    ರಾಜರಾಜೇಶ್ವರಿ ನಗರ ಉಪಚುನಾವಣೆ – ಮುನಿರತ್ನಗೆ ಬಿಜೆಪಿಯಿಂದ ಟಿಕೆಟ್‌

    ನವದೆಹಲಿ: ರಾಜ್ಯದ ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ‌ ಅಭ್ಯರ್ಥಿಗಳನ್ನು ಬಿಜೆಪಿ ಮಂಗಳವಾರ ಘೋಷಿಸಿದೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರ ಕ್ಷೇತ್ರದಿಂದ ಅನರ್ಹ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದಿಂದ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ‌.

    ಪಕ್ಷದ ರಾಷ್ಟ್ರೀಯ ಅಧ್ಯಕ್ಷ‌ ಜೆ.ಪಿ.‌ನಡ್ಡಾ ನಿರ್ದೇಶನದ ಮೇರೆಗೆ ಪಕ್ಷದ ಕೇಂದ್ರ ಚುನಾವಣೆ ಸಮಿತಿಯು ಈ ಅಭ್ಯರ್ಥಿಗಳನ್ನು ಘೋಷಿಸಿ ಆದೇಶ ಹೊರಡಿಸಿದೆ. ಈ ಎರಡೂ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ.

    ರಾಜರಾಜೇಶ್ವರಿ ಕ್ಷೇತ್ರ ಉಪ ಚುನಾವಣೆಯ ಸಂಬಂಧ  ನಾಳೆ ಬೆಳಗ್ಗೆ 11ಗಂಟೆಗೆ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಹಕಾರ ಖಾತೆಯ ಸಚಿವ ಎಸ್‌ಟಿ ಸೋಮಶೇಖರ್‌ ಇಂದು ಮಧ್ಯಾಹ್ನ ಹೇಳಿದ್ದರು.

    BJP SULLAI

    ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ9.30ಕ್ಕೆ ಮುನಿರತ್ನ ಅವರನ್ನು ಪಕ್ಷದ ಕಚೇರಿಗೆ ಬರಲು ಹೇಳಿದ್ದಾರೆ. 11 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಸುತ್ತಾರೆ. ಸಿಎಂ ಯಡಿಯೂರಪ್ಪನವರೇ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತಾರೆ. ಅಭ್ಯರ್ಥಿ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

    ತಾಜ್ ಹೋಟೆಲಿನಲ್ಲಿ ಸಿಎಂ  ಬಿಎಸ್‌ವೈ  ಆಪ್ತ ಸಚಿವರ ಜೊತೆ ಮಧ್ಯಾಹ್ನ ಭೋಜನ ಮಾಡಿದರು. ಸಿಎಂಗೆ ಸಚಿವ ಸೋಮಣ್ಣ , ಆರ್ ಅಶೋಕ್,  ಬಸವರಾಜ್ ಬೊಮ್ಮಾಯಿ, ಮುನಿರತ್ನ, ಎಸ್.ಟಿ.ಸೋಮಶೇಖರ್ ಸಾಥ್ ನೀಡಿದ್ದರು.

  • ನಾಳೆ ಬೆಳಗ್ಗೆ 11ಕ್ಕೆ ಮುನಿರತ್ನರಿಂದ ನಾಮಪತ್ರ ಸಲ್ಲಿಕೆ – ಎಸ್‌ಟಿ ಸೋಮಶೇಖರ್‌

    ನಾಳೆ ಬೆಳಗ್ಗೆ 11ಕ್ಕೆ ಮುನಿರತ್ನರಿಂದ ನಾಮಪತ್ರ ಸಲ್ಲಿಕೆ – ಎಸ್‌ಟಿ ಸೋಮಶೇಖರ್‌

    ಬೆಂಗಳೂರು:  ರಾಜರಾಜೇಶ್ವರಿ ಕ್ಷೇತ್ರ ಉಪ ಚುನಾವಣೆಯ ಸಂಬಂಧ  ನಾಳೆ ಬೆಳಗ್ಗೆ 11ಗಂಟೆಗೆ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಹಕಾರ ಖಾತೆಯ ಸಚಿವ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ.

    ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ9.30ಕ್ಕೆ ಮುನಿರತ್ನ ಅವರನ್ನು ಪಕ್ಷದ ಕಚೇರಿಗೆ ಬರಲು ಹೇಳಿದ್ದಾರೆ. 11 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಸುತ್ತಾರೆ. ಸಿಎಂ ಯಡಿಯೂರಪ್ಪನವರೇ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತಾರೆ. ಅಭ್ಯರ್ಥಿ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

    MUNIRATNA

    ಈ ವಿಚಾರದ ಬಗ್ಗೆ ಮುನಿರತ್ನ ಪ್ರತಿಕ್ರಿಯಿಸಿ, ಎಸ್.ಟಿ.ಸೋಮಶೇಖರ್ ಹೇಳಿಕೆಯ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದಿಂದ ನನಗೆ ಯಾವುದೇ ಮಾಹಿತಿ ಇಲ್ಲ. ಸೋಮಶೇಖರ್ ಹೇಳಿಕೆ ಬಗ್ಗೆ ಅವರ ಜತೆಯೇ ಮಾತಾಡುತ್ತೇನೆ ಎಂದು ತಿಳಿಸಿದರು.

    ಊಟದ ಸಮಯ, ಊಟಕ್ಕಾಗಿ ಸಿಎಂ ಯಡಿಯೂರಪ್ಪನವರ ಜತೆ ಬಂದಿದ್ದೆವು. ನಾಳೆ ಬಿಜೆಪಿ ಕಚೇರಿಗೆ ಬರುವಂತೆ ಹೇಳಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.  ಇದನ್ನೂ ಓದಿ: ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

    ತಾಜ್ ಹೋಟೆಲಿನಲ್ಲಿ ಸಿಎಂ ಬಿಎಸ್‌ವೈ ಆಪ್ತ ಸಚಿವರ ಜೊತೆ ಮಧ್ಯಾಹ್ನ ಭೋಜನ ಮಾಡಿದರು. ಸಿಎಂಗೆ ಸಚಿವ ಸೋಮಣ್ಣ , ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ, ಮುನಿರತ್ನ, ಎಸ್.ಟಿ.ಸೋಮಶೇಖರ್ ಸಾಥ್ ನೀಡಿದ್ದರು.

  • ಇದೇ ಲಾಸ್ಟ್‌ ಲಾಕ್‌ಡೌನ್‌, ಇನ್ಮುಂದೆ ಮನೆ ಸೀಲ್‌ಡೌನ್‌ ಮಾತ್ರ – ಎಸ್‌.ಟಿ. ಸೋಮಶೇಖರ್‌

    ಇದೇ ಲಾಸ್ಟ್‌ ಲಾಕ್‌ಡೌನ್‌, ಇನ್ಮುಂದೆ ಮನೆ ಸೀಲ್‌ಡೌನ್‌ ಮಾತ್ರ – ಎಸ್‌.ಟಿ. ಸೋಮಶೇಖರ್‌

    ಬೆಂಗಳೂರು: ಇದು ಕೊನೆಯ ಲಾಕ್‌ಡೌನ್‌. ಇನ್ಮುಂದೆ ರಾಜ್ಯದಲ್ಲಿ ಎಲ್ಲೂ ಲಾಕ್‌ಡೌನ್ ಮಾಡುವುದಿಲ್ಲ. ಪಾಸಿಟಿವ್‌ ಬಂದ ಮನೆಯನ್ನು ಮಾತ್ರ ಸೀಲ್‌ ಡೌನ್‌ ಮಾಡುತ್ತೇವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ.

    ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಇನ್ನು ಮುಂದೆ ಲಾಕ್‌ಡೌನ್ ಇರುವುದಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪಾಸಿಟಿವ್ ಬಂದ ಮನೆ ಮಾತ್ರ ಸೀಲ್‌ಡೌನ್ ಮಾಡುತ್ತೇವೆ ಎಂದು ತಿಳಿಸಿದರು.

    ಒಟ್ಟಿಗೆ ಎರಡ್ಮೂರು ಮನೆಯವರಿಗೆ ಕೋವಿಡ್‌ 19 ಪಾಸಿಟಿವ್ ಬಂದರೆ ರಸ್ತೆ ಮಾತ್ರ ಸೀಲ್‌ಡೌನ್ ಆಗಲಿದೆ‌. ಅಲ್ಲಿ ಮಾತ್ರ ಸೀಲ್‌ಡೌನ್ ಇರತ್ತದೆ. ಆದರೆ ಲಾಕ್‌ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಮೈಸೂರಿನಲ್ಲಿ ನಾಲ್ಕೈದು ದಿನದಿಂದ ಕೊರೊನಾ ಹೆಚ್ಚಾಗುತ್ತಿದೆ. ಈ ಸಂಬಂಧ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ‌. ಮೈಸೂರಿನಲ್ಲಿ ಟಾಸ್ಕ್ ಫೋರ್ಸ್ ತಂಡ ನೇಮಕ ಮಾಡಿ ಅವರ ಸೂಚನೆಯಂತೆ ಕೆಲಸ ಮಾಡಲು ಅಧಿಕಾರಿಗಳು ಇರುತ್ತಾರೆ. ಶಾಸಕ ತನ್ವೀರ್ ಸೇಠ್‌ಗೆ ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ವಿಶೇಷ ಗಮನ ಹರಿಸಿದ್ದೇವೆ ಎಂದರು.

    Mysuru Lockdown 3

    ನರಸಿಂಹರಾಜ ಕ್ಷೇತ್ರಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿದ್ದು ಅವರ ಕೆಳಗೆ ಅಧಿಕಾರಿಗಳ ಕಾರ್ಯಪಡೆ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

    ಎನ್.ಆರ್.ಕ್ಷೇತ್ರದಲ್ಲಿ ಸಾರ್ವಜನಿಕರ ಸಹಕಾರ ನಿರೀಕ್ಷೆ ಮಾಡಿದ್ದೇವೆ. ಒಂದು ವೇಳೆ ಸಹಕಾರ ನೀಡದಿದ್ದರೆ ಪೊಲೀಸರನ್ನು ಬಳಕೆ ಮಾಡಿಕೊಂಡು ನಿಯಂತ್ರಣಕ್ಕೆ ತರುತ್ತೇವೆ ಎಂದು ಪ್ರತಾಪ್‌ ಸಿಂಹ ಹೇಳಿದರು.

    Mysuru Lockdown 6

    ಸೋಂಕಿತರನ್ನ ಯಾರೂ ಕೂಡಾ ಒಳಗೆ ಬಚ್ಚಿಟ್ಟುಕೊಳ್ಳಬೇಡಿ. ಇದರಿಂದ ನಿಮಗೂ ಅಪಾಯ ಎದುರಾಗಲಿದೆ. ಎಲ್ಲರೂ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಾರ್ಯಾಚರಣೆ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಮನವಿಗೆ ಸ್ಪಂದಿಸದೇ ಇದ್ದರೆ ಪೊಲೀಸರ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.

  • ಅಶೋಕ್, ಶೆಟ್ಟರ್‌, ರವಿ ಸಭೆ ನಡೆಸಿರುವುದು ನಿಜ, ವಿಶೇಷ ಅರ್ಥ ಬೇಡ : ಸೋಮಶೇಖರ್

    ಅಶೋಕ್, ಶೆಟ್ಟರ್‌, ರವಿ ಸಭೆ ನಡೆಸಿರುವುದು ನಿಜ, ವಿಶೇಷ ಅರ್ಥ ಬೇಡ : ಸೋಮಶೇಖರ್

    ಮಡಿಕೇರಿ : ಚಿಕ್ಕಮಗಳೂರಿನ ರೆಸಾರ್ಟ್ ಒಂದರಲ್ಲಿ ನಡೆದಿರುವ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಭೆ ನಡೆದಿರುವುದನ್ನು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ.

    ಸಚಿವ ಆರ್ ಅಶೋಕ್, ಜಗದೀಶ್ ಶೆಟ್ಟರ್ ಮತ್ತು ಸಿ ಟಿ ರವಿ ಅವರು ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್ ಸಭೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

    ashok copy

    ಅವರರೆಲ್ಲರೂ ನಾವೂ ಯಾವುದೇ ಸಭೆ ನಡೆಸಿಲ್ಲ ಎಂದು ಹೇಳುತ್ತಿದ್ದರೆ, ಇತ್ತ ಸಚಿವ ಸೋಮಶೇಖರ್ ಮಾತ್ರ ಅವರು ಯಾವುದೋ ಲ್ಯಾಂಡ್ ವಿಚಾರಕ್ಕೆ ಸಭೆ ನಡೆಸಿದ್ದಾರೆ ಅಷ್ಟೇ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳುವ ಮೂಲಕ ಸಭೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

    H Vishwanath App

    ಎಚ್ ವಿಶ್ವನಾಥ್ ಅವರಿಗೆ ಪರಿಷತ್‌ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್ ಈಗಾಗಲೇ ಎಂಟಿಬಿ ನಾಗರಾಜ್, ಆರ್ ಶಂಕರ್ ಅವರಿಗೂ ಅವಕಾಶ ಕಲ್ಪಿಸಿದ್ದಾರೆ. ಮುನಿರತ್ನ ಮತ್ತು ಪ್ರತಾಪ್ ಗೌಡ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗಲಿದೆ. ಇನ್ನು ವಿಶ್ವನಾಥ್ ಒಬ್ಬರು ಮಾತ್ರವೇ ಉಳಿದಿದ್ದಾರೆ. ಈ ವಿಷಯವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ದೊರೆಯಲಿದೆ ಎಂದರು.

    ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿರುವ ಮತ್ತು ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಅದೆಲ್ಲವೂ ಬೇಕಾಗಿರಲಿಲ್ಲ ಎಂದರು.