Tag: sode mutt

  • ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಉಡುಪಿ: ಶೀರೂರು ಮಠಕ್ಕೆ ನೂತನ ಪೀಠಾಧಿಕಾರಿ ಆಯ್ಕೆ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಶೀರೂರು ಮತ್ತು ಸೋದೆ ಮಠದ ಭಕ್ತರು ರಥಬೀದಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.

    UDP SWAMIJI 1

    ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮೀಜಿ ಬಾಲವಟುವನ್ನು ಆಯ್ಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಚಟುಚಟಿಕೆ ಎಂದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವೃಂದಾವನಸ್ಥ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಪಾದರು ಸಹೋದರ ಲಾತವ್ಯ ಆಚಾರ್ಯ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೋದೆ ಮಠದ ನಡೆ ಮತ್ತು ವಾದವನ್ನು ಪುರಸ್ಕರಿಸಿದೆ. ಇದನ್ನೂ ಓದಿ: ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

    UDP SWAMIJI 3

    ಅರ್ಜಿ ವಜಾವಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿಯ ಶಿರೂರು ಮಠದ ಮುಂಭಾಗದಲ್ಲಿ ಮಠದ ಭಕ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸೋದೆ ಮಠಾಧೀಶರಿಗೆ ಜೈಕಾರ ಕೂಗಿದರು. ಸೋದೆ ಮಠದ ಪರವಾಗಿ ರತ್ನಕುಮಾರ್ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಸೋದೆ ಸ್ವಾಮೀಜಿಯವರು ಶೀರೂರು ಮಠಕ್ಕೆ ಸನ್ಯಾಸತ್ವ ದೀಕ್ಷೆಯನ್ನು ಕೊಟ್ಟಿದ್ದರು. ವೇದ ವರ್ಧನ ತೀರ್ಥ ಸ್ವಾಮೀಜಿ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡಿದ್ದರು. ದಾಖಲಾದ ರಿಟ್ ಅರ್ಜಿ ವಜಾ ಆಗಿದೆ. ಬಾಲ ಸನ್ಯಾಸ ಮತ್ತು ಸೋದೆ ಸ್ವಾಮೀಜಿ ಕೊಟ್ಟ ಸನ್ಯಾಸತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದರು.

    UDP SWAMIJI 2

  • ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    – ಪೂರ್ವಾಶ್ರಮದ ಸಹೋದರರ ಆಕ್ರೋಶ

    ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಒಳಪಟ್ಟ ಜಮೀನಿಗೆ ಸೋದೆ ಮಠದವರು ಜೆಸಿಬಿ ನುಗ್ಗಿಸಿದ್ದಾರೆ. ಏಕಾಏಕಿ ಜೆಸಿಬಿ ನುಗ್ಗಿಸಿ ಮರಗಳನ್ನು ಉರುಳಿಸಿರುವ ವಿರುದ್ಧ ಶೀರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    SHIROORU SHREE 2

    ಎರಡು ಎಕರೆ ಜಮೀನಿನಲ್ಲಿ ಸೋದೆ ಮಠ ಲೇಔಟ್ ಮಾಡಲು ಮುಂದಾಗಿದೆ ಎಂಬೂದು ಅವರು ಆರೋಪ. ಶೀರೂರು ಸ್ವಾಮೀಜಿ ಮೃತರಾಗಿ ಎರಡು ವರ್ಷ ಕಳೆದಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕವಾಗದೇ ಸೋದೆ ಮಠ ಶಿರೂರು ಮಠದ ಆಸ್ತಿಯಲ್ಲಿ ಕೈಯಾಡಿಸಬಾರದು. ಶಿರೂರು ಮಠದ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಸ್ವಚ್ಛತಾ ಕಾರ್ಯ ನಡೆಸಬಾರದು ಎಂದು ಪೂರ್ವಾಶ್ರಮದವರು ತಾಕೀತು ಮಾಡಿದ್ದಾರೆ.

    UDP 1 5

    ಇಷ್ಟಾಗುತ್ತಲೇ ಮಾಧ್ಯಮಗಳ ಕ್ಯಾಮೆರಾಗಳು ಸ್ಥಳಕ್ಕಾಗಮಿಸಿದ್ದನ್ನು ಕಂಡು ಜೆಸಿಬಿ ತನ್ನ ಕೆಲಸ ನಿಲ್ಲಿಸಿದೆ. ಗಿಡಗಂಟಿಗಳ ಸ್ಚಚ್ಛತಾ ಕಾರ್ಯ ಮಾಡಲು ಜೆಸಿಬಿ ಕರೆಸಿರುವುದಾಗಿ ಸೋದೆ ಮಠ ಸ್ಪಷ್ಟಪಡಿಸಿದೆ. ಶಿರೂರು ಮಠದ ಲಕ್ಷ್ಮೀವರತೀರ್ಥರು ಸಂಶಯಾಸ್ಪದ ಸಾವನ್ನಪ್ಪಿ ಒಂದು ಮುಕ್ಕಾಲು ವರ್ಷ ಕಳೆಯಿತು. ಇನ್ನು ಕೂಡ ಶೀರೂರು ಮಠದ ಉತ್ತರಾಧಿಕಾರಿ ಆಯ್ಕೆ ನಡೆದಿಲ್ಲ. ದ್ವಂದ್ವ ಸೋದೆ ಮಠದವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    Lathavya 1

    ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರರಿಗೆ ದೂರು ನೀಡಿದ್ದು, ಮಠದ ವಿಚಾರ ಆಗಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಎರಡು ಮಠದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಲಾತವ್ಯ ಆಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

  • ಶಿರೂರು ಮಠಕ್ಕೆ ಯೋಗ್ಯವಟು ಉತ್ತರಾಧಿಕಾರಿ -ಸೋದೆ ಮಠಾಧೀಶರಿಂದ ಸ್ಪಷ್ಟನೆ

    ಶಿರೂರು ಮಠಕ್ಕೆ ಯೋಗ್ಯವಟು ಉತ್ತರಾಧಿಕಾರಿ -ಸೋದೆ ಮಠಾಧೀಶರಿಂದ ಸ್ಪಷ್ಟನೆ

    ಉಡುಪಿ: ಶೀರೂರು ಮಠಕ್ಕೆ ಯೋಗ್ಯ ವಟುವೊಬ್ಬರು ಉತ್ತರಾಧಿಕಾರಿಯಾಗುತ್ತಾರೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಉಡುಪಿಯ ಶೀರೂರು ಶ್ರೀಗಳ ವೃಂದಾವನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಶೀರೂರು ಮಠದ ಸ್ವತ್ತುಗಳ ಸ್ವಾಧೀಕರಣ ಆಗಬೇಕು. ಈಗ ಎಲ್ಲವೂ ಪೊಲೀಸರ ಸುಪರ್ಧಿಯಲ್ಲಿದೆ. ಪೊಲಿಸರ ಮೂಲಕ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತೇವೆ. ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಆಗಬೇಕು. ಒಬ್ಬ ಯೋಗ್ಯ ವಟುವನ್ನು ನೋಡಿ ಉತ್ತರಾಧಿಕಾರಿ ಮಾಡ್ತೇವೆ. ಈ ಬಗ್ಗೆ ಹಿರಿಯ ಯತಿಗಳ ಅಭಿಪ್ರಾಯವನ್ನು ಪಡೆಯುತ್ತೇವೆ. ಶೀರೂರು- ಹಿರಿಯಡ್ಕದ ಎರಡು ಮಠದಲ್ಲಿ ಹಿಂದಿನವರೇ ಪೂಜೆ ಮಾಡ್ತಾರೆ ಅಂತ ಹೇಳಿದ್ರು.

    ಸ್ವಾಮೀಜಿಗಳಿಗೆ ವಿಷಪ್ರಾಶನ ಆಗಿತ್ತು ಎಂದು ಮಾಧ್ಯಮದ ಮೂಲಕವೇ ವಿಚಾರ ತಿಳಿಯಿತು. ವೈದ್ಯರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ವಿಷಪ್ರಾಶನ ಮಾಡುವಂತಹ ಉದ್ದೇಶ ಇಲ್ಲ. ಪಟ್ಟದ ದೇವರ ವಿಚಾರದಲ್ಲಿ ಚರ್ಚೆ ಮಾಡಿದ್ದೇವೆ ಅಷ್ಟೇ. ವಿಷಪ್ರಾಶನ ಎಲ್ಲ ಮಾಡೋಕೆ ಸಾಧ್ಯವಿಲ್ಲ ಅಂದ್ರು.

    ಗುಪ್ತ ಸಭೆ ಆಗಿರೋ ಮಾಹಿತಿ ಇಲ್ಲ. ಈಗ ಶಿರೂರು ಶ್ರೀಗಳ ಬೃಂದಾವನ ದರ್ಶನಕ್ಕೆ ಬಂದಿದ್ದೇವೆ. ಕಿರಿಯ ಯತಿಗಳು ಶಿರೂರು ಶ್ರೀಗಳ ದರ್ಶನ ಪಡೆದಿದ್ದೇವೆ. ಶಿರೂರು ಶ್ರೀಗಳಿಗಿಂತ ಹಿರಿಯ ಯತಿಗಳು ದರ್ಶನ ಪಡಿಬೇಕೆಂದು ಇಲ್ಲ ಅಂತ ಅವರು ಸ್ಪಷ್ಟಪಡಿಸಿದ್ರು.

    https://www.youtube.com/watch?v=oIVAFQigp0M

    https://www.youtube.com/watch?v=mBcWLA7VQJM