Monday, 22nd July 2019

5 days ago

ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆ – ವಾರ್ಡಿಗೆ ಮಾಂತ್ರಿಕನನ್ನು ಕರೆತಂದ ಪತಿ

ಭೋಪಾಲ್: ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿದ್ದು, ಆಕೆಯ ಪತಿ ವಾರ್ಡಿನಲ್ಲೇ ಮಾಂತ್ರಿಕನಿಂದ ಚಿಕಿತ್ಸೆ ಕೊಡಿಸಿದ ಘಟನೆ ಭಾನುವಾರ ಮಧ್ಯಪ್ರದೇಶದ ದಾಮೋದಲ್ಲಿ ನಡೆದಿದೆ. ಇರ್ಮತಿ ದೇವಿ(25) ಆಸ್ಪತ್ರೆಗೆ ದಾಖಲಾದ ಮಹಿಳೆ. ಇರ್ಮತಿ ದೇವಿ ದಾಮೋ ಜಿಲ್ಲೆಯ ಬಟಿಯಾಗರ್ ನಿವಾಸಿಯಾಗಿದ್ದು, ಹಾವು ಕಚ್ಚಿದ್ದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಹಿಳೆ ಆಸ್ಪತ್ರೆಗೆ ದಾಖಲಾದ ದಿನವೇ ಅದೇ ರಾತ್ರಿ ಪತಿ ಹಾಗೂ ಆಕೆಯ ಸಂಬಂಧಿಕರು ವಾರ್ಡಿಗೆ ಮಾಂತ್ರಿಕನನ್ನು ಕರೆ ತಂದಿದ್ದಾರೆ. ವಾರ್ಡಿನಲ್ಲಿ ಮಾಂತ್ರಿಕ ಇರುವುದನ್ನು ನರ್ಸ್ ಗಮನಿಸಿದರೂ ಸಹ ಆಕೆ […]

1 week ago

ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಬಲಿಯಾಯ್ತು ಸರ್ಪ

ಬೆಂಗಳೂರು: ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಸರ್ಪವೊಂದು ಬಲಿಯಾದ ಘಟನೆ ರಮಡ ರೆಸಾರ್ಟ್ ಮುಂದಿನ ಹೊನ್ನೆನಹಳ್ಳಿ ರಸ್ತೆಯಲ್ಲಿ ನಡೆದಿದೆ. ರಮಡ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಇನೋವಾ ಕಾರು ಹೊರಬಂದಿತ್ತು. ಅದರಲ್ಲಿ ಶಾಸಕರೊಬ್ಬರು ಕೂಡ ಇದ್ದರು. ಈ ವೇಳೆ ರೆಸಾರ್ಟ್ ಮುಂದಿನ ರಸ್ತೆಯಲ್ಲಿ ಹಾವು ದಾಟುತ್ತಿತ್ತು. ನಿಧಾನವಾಗಿ ಸಾಗುತ್ತಿದ್ದ...

ಶೂ ಒಳಗೆ ಸೈಲೆಂಟಾಗಿ ಕೂತ ಪುಟಾಣಿ ನಾಗ!

2 months ago

-ಬೆಳಗ್ಗೆ ಬಾಗಿಲು ತೆರೆದವರಿಗೆ ದರ್ಶನ ಕೊಟ್ಟ ಹಾವು ಬೆಂಗಳೂರು: ಮನೆ ಹೊರಗಡೆ ಇರಿಸಲಾಗಿದ್ದ ಶೂ ಒಳಗೆ ಸೈಲೆಂಟಾಗಿ ಕೂತಿದ್ದ ಪುಟಾಣಿ ಹಾವಿನ ಮರಿಗಳನ್ನು ಕಂಡು ಮನೆಮಂದಿಯಲ್ಲ ಗಾಬರಿಗೊಂಡಿದ್ದಾರೆ. ಶೂ ಧರಿಸುವಾಗ ಎಚ್ಚರವಹಿಸಿ ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿರತ್ತೋ ಎಂಬ ಮಾತಿನಂತೆ...

ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

2 months ago

ತುಮಕೂರು/ಚಾಮರಾಜನಗರ: ನಾಗರಹಾವೊಂದು ಕೆರೆ ಹಾವನ್ನು ನುಂಗಿದ ಘಟನೆ ತುಮಕೂರಿನ ರಂಗಾಪುರದಲ್ಲಿ ನಡೆದಿದೆ. ನಾಗರ ಹಾವೊಂದು ಕೆರೆ ಹಾವನ್ನು ಬೆನ್ನತ್ತಿದ್ದು, ಇದರಿಂದ ಬೆದರಿದ ಕೆರೆ ಹಾವು ಈರುಳ್ಳಿ ಅಂಗಡಿಗೆ ನುಗ್ಗಿದೆ. ಈ ವೇಳೆ ನಾಗರಹಾವು ಕೆರೆ ಹಾವನ್ನು ಸೆಣಸಿ ಅದನ್ನು ನುಂಗಿದೆ. ವಿಷಯ ತಿಳಿದು...

ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

2 months ago

ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು...

ಕಪ್ಪೆ ಕಚ್ಚಿಕೊಂಡು ಮರ ಏರಿದ ಹಾವು – ವಿಡಿಯೋ ನೋಡಿ

2 months ago

ಚಿಕ್ಕಮಗಳೂರು: ಹಾವು ಕಪ್ಪೆಗಳನ್ನ ತಿಂದು ಬದುಕುದು ಸಾಮಾನ್ಯ. ಆದರೆ ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತುವ ದೃಶ್ಯ ನೋಡಲು ಸಿಗುವುದು ಪ್ರಕೃತಿಯಲ್ಲಿ ತುಂಬಾ ವಿರಳ. ಅಂತಹ ಅಪರೂಪದ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ. ಶೃಂಗೇರಿ ತಾಲೂಕಿನ ಸಸಿಮನೆ ಗ್ರಾಮದ ಶಿವಶಂಕರ್ ಎಂಬವರು ಅಂತಹ ಅಪರೂಪದ...

ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

2 months ago

ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ. ಆದರೆ ಯುಎಸ್‍ಎನಲ್ಲಿ ಒಂದು ಅಚ್ಚರಿ ನಡೆದಿದೆ. ಇಲ್ಲಿ ಅಳಿಲೊಂದು ಹಾವನ್ನು ತಿಂದು ಸದ್ಯ ಸಖತ್ ಸುದ್ದಿಯಲ್ಲಿದೆ. ಹೌದು. ಹೀಗೆ ಹಾವೊಂದನ್ನು ಅಳಿಲು ಹಿಡುದು ತಿನ್ನುತ್ತಿರುವ...

ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

2 months ago

ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ...