Wednesday, 17th July 2019

Recent News

4 weeks ago

ಬಿಜೆಪಿಯವರು ಪಾದಯಾತ್ರೆ ಮಾಡಲಿ ಏನಾದ್ರು ರೋಗವಿದ್ರೆ ಹೋಗುತ್ತೆ: ಶಾಮನೂರು ಟೀಕೆ

ದಾವಣಗೆರೆ: ಬಿಜೆಪಿ ಅವರು ಜಿಂದಾಲ್ ವಿರುದ್ಧ ಪಾದಯಾತ್ರೆ ಮಾಡಲಿ, ಅವರಿಗೆ ಯಾವುದಾದರೂ ರೋಗವಿದ್ದರೆ ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಮಲ ನಾಯಕರನ್ನು ಟೀಕಿಸಿದ್ದಾರೆ. ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರು ಪಾದಯಾತ್ರೆ ಮಾಡಲಿ ಯಾರು ಬೇಡ ಅನ್ನುತ್ತಾರೆ. ಅವರಿಗೇನಾದರೂ ರೋಗವಿದ್ದರೆ ಪಾದಯಾತ್ರೆ ಮಾಡುವುದರಿಂದ ದೂರವಾಗುತ್ತೆ ಬಿಡಿ ಎಂದು ಬಿಜೆಪಿ ಅವರ ಕಾಲೆಳೆದಿದ್ದಾರೆ. ಅಲ್ಲದೆ ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡುವ ಬಗ್ಗೆ ಮಾತನಾಡಿ, ಇದು ಹಿಂದೆ ಇದ್ದ […]

2 months ago

ಮೈತ್ರಿ ಸರ್ಕಾರದ ಭವಿಷ್ಯ ಎರಡು ದಿನಗಳಲ್ಲಿ ಗೊತ್ತಾಗಲಿದೆ: ಶಾಮನೂರು

ದಾವಣಗೆರೆ: ಮೈತ್ರಿ ಸರ್ಕಾರದ ಬಗ್ಗೆ ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಮೈತ್ರಿ ಪಕ್ಷದ ಅಳಿವು ಉಳಿವಿನ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟಕ್ಕೆ ಕಡಿಮೆ ಸ್ಥಾನಗಳು ಬಂದಿದೆ. ಜನಾದೇಶ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು. ಅಲ್ಲದೇ...

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಣಕ್ಕೆ ಇಳಿದ ತಂದೆ!

4 months ago

ದಾವಣಗೆರೆ: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕ ಕಣಕ್ಕೆ ಧುಮುಕಲು ತಂದೆ ಸಿದ್ಧರಾಗಿದ್ದು, ಲೋಕಸಭಾ ಅಖಾಡಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಫೈನಲ್ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ...

ನಾವೇ ಸೋತಿದ್ದೇವೆ, ನಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ – ಎಂಬಿಪಿಗೆ ಶಾಮನೂರು ಪುತ್ರರಿಂದ ಕ್ಲಾಸ್

4 months ago

ದಾವಣಗೆರೆ: ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ, ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಅಂತ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಗೃಹ ಸಚಿವ ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ...

ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದ: ಶಾಮನೂರು ಕಿಡಿ

5 months ago

ದಾವಣಗೆರೆ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದ. ಮುಂಚಿತವಾಗಿಯೇ ದುಡ್ಡು ಪಡೆದಿದ್ದ ಅದಕ್ಕಾಗಿಯೇ ರಾಜೀನಾಮೆ ನೀಡಿದ್ದಾನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಜಾಧವ್ ಮೊದಲೇ ಬಿಜೆಪಿ...

ರಾಹುಲ್‍ಗಿಂತ ಖರ್ಗೆಗೆ ಮೋದಿಯನ್ನ ಎದುರಿಸುವ ಶಕ್ತಿ ಇದೆ: ಶಾಮನೂರು

5 months ago

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆ ಛಲವಾದಿ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ...

ಎಂಬಿಪಿಯನ್ನು ನಿರ್ಲಕ್ಷ್ಯಿಸಬೇಕು, ಆತನಿಗೆ ಕೆಲ ವಿಚಾರ ಗೊತ್ತಿಲ್ಲ : ಶಾಮನೂರು

6 months ago

ಧಾರವಾಡ: ತನ್ನ ವಿರುದ್ಧ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಮತ್ತೆ ಕಿಡಿಕಾರಿ ತಿರುಗೇಟು ನೀಡಿದ್ದಾರೆ. ಎಂ.ಬಿ ಪಾಟೀಲ್‍ಗೆ ಕೆಲವು ವಿಚಾರಗಳು ಗೊತ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾನೆ. ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಅಂತ...

ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ

6 months ago

ಹುಬ್ಬಳ್ಳಿ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರು ನನ್ನ ತಂದೆಗೆ ಸಮಾನ. ನಾನು ಯಾರಿಗೂ ಹೆದರುವ ಮಾತಿಲ್ಲ. ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನನಗೆ ಯಾರದ್ದು ಅಂಜಿಕೆ ಇಲ್ಲ. ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದ್ರೆ ಉತ್ತಮ. ನನಗೆ ಎಲ್ಲವೂ ಗೊತ್ತಿದೆ....