Saturday, 25th May 2019

Recent News

5 days ago

ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೆ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ ಏನೇ ಹರಸಾಹಸ ಪಟ್ಟರೂ, ಹಾವಿಗೆ ತಲೆಯನ್ನ ಬಾಟಲಿನಿಂದ ತೆಗೆಯಲು ಸಾಧ್ಯವಾಗಿಲ್ಲ. ಇದೇ ವೇಳೆ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ […]

3 weeks ago

ಬೆಂಗಳೂರಲ್ಲಿ ವರುಣನ ಅವಾಂತರ -ನದಿಯಂತಾಯ್ತು ರಸ್ತೆ, ಅಡಿಯುದ್ದ ನೀರು

– ಇಲಾಖೆಯಿಂದ ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರು: ಮಂಗಳವಾರ ಸುರಿದ ಗುಡುಗು, ಸಿಡಿಲು ಸಹಿತ ಮಳೆ ಗಾಳಿಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಶುರುವಾದ ಮಳೆ ರಾತ್ರಿ ಸುಮಾರು 11 ಗಂಟೆವರೆಗೂ ಎಡೆಬಿಡದೆ ಧಾರಾಕಾರವಾಗಿ ಸುರಿದಿದೆ. ಯಶವಂತಪುರ, ಮಲ್ಲೇಶ್ವರಂ, ನವರಂಗ್, ವಿಜಯನಗರ, ರಾಜಾಜಿನಗರ, ಸದಶಿವನಗರ, ಹೆಬ್ಬಾಳ, ನಾಗವಾರ, ಮೆಜೆಸ್ಟಿಕ್, ಇಂದ್ರನಗರ, ನೆಲಮಂಗಲ ಸೇರಿದಂತೆ...

ಕೆರೆಯಂತಾದ ರಸ್ತೆ, ಮನೆ – ದಕ್ಷಿಣದಲ್ಲಿ ಇನ್ನೆರೆಡು ದಿನ ಮಳೆ

1 month ago

ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಗುರುವಾರ ಚುನಾವಣೆ ಮುಗಿಯುತ್ತಿದ್ದಂತೆ ಸಂಜೆ ಹೊತ್ತಿಗೆ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಕಳೆದ ದಿನ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ವಿಜಯನಗರ, ಮಾಗಡಿರೋಡ್, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಕಾರ್ಪೊರೇಷನ್...

ರಾತ್ರೋರಾತ್ರಿ 1.75 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ – ಬೆಳಗ್ಗೆ ರೊಟ್ಟಿಯಂತೆ ಎದ್ದ ಡಾಂಬರು!

2 months ago

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭ್ಯರ್ಥಿಗಳು ತಮ್ಮ ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಈಗ ಜಿಲ್ಲೆಯಲ್ಲಿ ಮತದಾರರ ಮನ ಸೆಳೆಯಲು ರಾತ್ರೋರಾತ್ರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಚಿಕ್ಕಮಗಳೂರಿನ ಎನ್‍ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಒಂದೇ...

ರಸ್ತೆ ದಾಟುತಿದ್ದ ಬಾಲಕನ ಮೇಲೆ ಹರಿದ KSRTC ಬಸ್!

2 months ago

ಸಾಂದರ್ಭಿಕ ಚಿತ್ರ ಹಾಸನ: ರಸ್ತೆ ದಾಟುತಿದ್ದ ಬಾಲಕನೊಬ್ಬನ ಮೇಲೆ ಬಸ್ಸೊಂದು ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಳೇನರಸೀಪುರದ ಯಡೆಗೌಡನ ಹಳ್ಳಿಯಲ್ಲಿ ನಡೆದಿದೆ. ಗಿರೀಶ್(7) ಮೃತ ಬಾಲಕ. ಇಂದು ತಾಯಿಯೊಂದಿಗೆ ಆಟೋ ರಿಕ್ಷಾ ಇಳಿದು ರಸ್ತೆ ದಾಟುವಾಗ ಕೆಎಸ್‌ಆರ್‌ಟಿಸಿ ಬಸ್...

ಬೆಂಗ್ಳೂರಲ್ಲಿ ಗೆಳೆಯನನ್ನು ಅಟ್ಟಾಡಿಸಿಕೊಂಡು ಗೂಸ ಕೊಟ್ಟ ಯುವತಿ

2 months ago

ಬೆಂಗಳೂರು: ರಸ್ತೆಯಲ್ಲಿ ವಿದೇಶಿ ಪ್ರೇಮಿಗಳಿಬ್ಬರು ರಂಪಾಟ ಮಾಡುತ್ತ, ಗೆಳೆಯನನ್ನು ಅಟ್ಟಾಡಿಸಿಕೊಂಡು ಯುವತಿ ಹೊಡೆದು ಹೈಡ್ರಾಮ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ನಡೆದಿದೆ. ವಿದೇಶಿ ಪ್ರೇಮಿಗಳ ಬೀದಿ ಗುದ್ದಾಟಕ್ಕೆ ಮೂಕ ಪ್ರೇಕ್ಷಕರಾದ ಜನ ನೋಡುತ್ತ ನಿಂತಿದ್ದರು. ಯುವತಿ...

ಕಾರಿಗೆ ಡಿಕ್ಕಿಯಾಗಿ, ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟರೂ, ಅಪಾಯದಿಂದ ಪಾರಾದ ಮಹಿಳೆಯರು

2 months ago

ಮಂಗಳೂರು: ಮಹಿಳೆಯರಿಬ್ಬರು ಹೈವೇ ರಸ್ತೆಗೆ ಸ್ಕೂಟರ್ ನುಗ್ಗಿಸುವ ಯತ್ನದಲ್ಲಿ ಇನ್ನೋವಾ ಕಾರಿಗೆ ಡಿಕ್ಕಿಯಾಗಿ, ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟರೂ ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಪೇಟೆ ಬಳಿಯ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಅಪಘಾತದ ದೃಶ್ಯ...

ಬೂಟ್‍ನಿಂದ ಹೊಡಿತೀನಿ ಎಂದು ಬಿಜೆಪಿ ಶಾಸಕ ಧಮ್ಕಿ..!

3 months ago

ಕಲಬುರಗಿ: ಆಳಂದ ಶಾಸಕ ಸುಭಾಷ್ ಗುತ್ತೇದಾರ್ ದರ್ಪ ತೋರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅವಾಚ್ಯ ಶಬ್ಧಗಳಿಂದ ಪುರಸಭೆ ಮುಖ್ಯಾಧಿಕಾರಿಗೆ ನಿಂದಿಸಿದ್ದಾರೆ. ಆಳಂದ ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ್ ಪಾಟೀಲ್ ಅವರಿಗೆ ಶಾಸಕರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಬಿ.ಆರ್ ಪಾಟೀಲ್ ಶಾಸಕರಾಗಿದ್ದಾಗ...