Tuesday, 16th July 2019

1 day ago

ಶಾಸಕತ್ವವೇ ಬೇಡ ಎಂದವರಿಗೆ ವಿಪ್ ಅನ್ವಯಿಸುವುದಿಲ್ಲ: ಬಿ.ವಿ.ಆಚಾರ್ಯ

ಬೆಂಗಳೂರು: ಬಂಡಾಯ ಶಾಸಕರ ವಿಪ್ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊಂದಿರಬಹುದು. ಆದರೆ ನನ್ನ ಪ್ರಕಾರ ನಿಮ್ಮ ಶಾಸಕತ್ವವೇ ಬೇಡ ಎಂದವರಿಗೆ ವಿಪ್ ಅನ್ವಯಿಸುವುದಿಲ್ಲ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾ ಈಸ್ ನಾಟ್ ಎ ಮ್ಯಾಥ್‍ಮೆಟಿಕ್ಸ್. 2+2:4 ಎಂದು ಕೆಲವರು ಹೇಳಬಹುದು. ಅದೇ ರೀತಿ ಬಂಡಾಯ ಶಾಸಕರ ವಿಪ್ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊಂದಿರಬಹುದು. ಆದರೆ ನನ್ನ ಪ್ರಕಾರ ನಿಮ್ಮ ಶಾಸಕತ್ವವೇ ಬೇಡ […]

1 day ago

ನಾರಾಯಣಗೌಡ ರಾಜೀನಾಮೆಗೆ ಕಾರ್ಯಕರ್ತರ ಆಕ್ರೋಶ – ಕಚೇರಿ ಮುಂದಿದ್ದ ಬೋರ್ಡ್ ಧ್ವಂಸ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತರು ಅಣಕು ಶವಯಾತ್ರೆ ನಡೆಸಿದ್ದಾರೆ. ಇಂದು ಶಾಸಕರ ರಾಜೀನಾಮೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಯಾತ್ರೆಯನ್ನ ನಡೆಸಿದ್ದರು. ಈ ಸಂದರ್ಭದಲ್ಲಿ ಶಾಸಕ ನಿವಾಸದ ಬಳಿ ಆಗಮಿಸಿದ ಕಾರ್ಯಕರ್ತರು ಕಚೇರಿ ಮುಂದೆ ಹಾಕಿದ್ದ ಬೋರ್ಡ್ ಧ್ವಂಸಗೊಳಿಸಿದರು....

ಸಿಎಂ ತನ್ನ ಹೆಸ್ರು ಉಳಿಸಿಕೊಳ್ಳಲು ರೇವಣ್ಣನ ಹೆಸ್ರಿಗೆ ಡ್ಯಾಮೇಜ್ ಮಾಡ್ತಿದ್ದಾರೆ: ಚಲುವರಾಯಸ್ವಾಮಿ

2 days ago

ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ತನ್ನ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ಆದರೆ ರೇವಣ್ಣ ಅವರಿಂದ ಈ ರೀತಿ...

ರಾಜೀನಾಮೆ ನೀಡಿರೋದಕ್ಕೆ ಕಾರಣ ಬಿಚ್ಚಿಟ್ಟ ಶಿವರಾಂ ಹೆಬ್ಬಾರ್

2 days ago

ಕಾರವಾರ: ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಅವರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಪೇಸ್‍ಬುಕ್‍ನಲ್ಲಿ ಒಂದು ಸುರ್ದೀಘವಾದ ಪತ್ರ ಬರೆದಿದ್ದಾರೆ. ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ...

ಎಂಟಿಬಿ ಮನವೊಲಿಸಲು ಬಂದಿಲ್ಲ, ನಮ್ಮೊಂದಿಗಿರಲು ಬಂದಿದ್ದಾರೆ: ಎಸ್.ಟಿ.ಸೋಮಶೇಖರ್

2 days ago

ಮುಂಬೈ: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರು ನಮ್ಮನ್ನು ಮನ ಒಲಿಸಲು ಬಂದಿದ್ದಾರೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದದ್ದು. ಅವರು ನಮ್ಮ ಜೊತೆಯೇ ಇರುತ್ತಾರೆ. ನಾವ್ಯಾರೂ ಯಾರ ಮಾತಿಗೂ ಬಗ್ಗಲ್ಲ ಎಂದು ರೆಬಲ್ ಶಾಸಕರು ಒಕ್ಕೂರಲಿನಿಂದ ಸ್ಪಷ್ಟಪಡಿಸಿದ್ದಾರೆ. ಎಲ್ಲ ಶಾಸಕರ ಪರವಾಗಿ...

ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

2 days ago

ಬೆಂಗಳೂರು: ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರ ಕಸರತ್ತು ಮಾಡಿದ್ದಾರೆ. ಆದರೆ ರೆಡ್ಡಿ ಅವರು ಯಾವುದೇ ಖಚಿತ ಭರವಸೆಯನ್ನು ನೀಡಲಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಲಕ್ಕಸಂದ್ರದ ರಾಮಲಿಂಗಾರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ನಾಯಕರಾದ ಈಶ್ವರ ಖಂಡ್ರೆ ಹಾಗೂ...

ಸುಧಾಕರ್, ಎಂಟಿಬಿಯನ್ನು ಸ್ವಾಗತಿಸಿದ ಜಾರಕಿಹೊಳಿ, ನಾಗೇಶ್

2 days ago

ಬೆಂಗಳೂರು: ಮೈತ್ರಿ ನಾಯಕರ ಮನವೊಲಿಕೆಗೂ ಜಗ್ಗದೇ ಅಂತೂ ಎಂಟಿಬಿ ನಾಗರಾಜ್ ಮುಂಬೈನ ಹೋಟೆಲ್‍ನಲ್ಲಿರುವ ಶಾಸಕರನ್ನು ಸೇರಿದ್ದು, ಬಿಜೆಪಿ ಮುಖಂಡ ಆರ್.ಅಶೋಕ್ ಸಹ ಅವರಿಗೆ ಸಾಥ್ ನೀಡಿದ್ದಾರೆ. ಶಾಸಕ ಸುಧಾಕರ್ ಅವರೊಂದಿಗೆ ಎಂಟಿಬಿ ನಾಗರಾಜ್ ಅತೃಪ್ತರ ತಂಡ ಸೇರಿದ್ದು, ಮುಂಬೈ ವಿಮಾನ ನಿಲ್ದಾಣದಿಂದ...

ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

3 days ago

ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಸಿಧು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರಾಜೀನಾಮೆ...