Saturday, 22nd February 2020

Recent News

3 weeks ago

ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದ ಬಾಲಕನಿಗೆ ಕಾರು ಡಿಕ್ಕಿ

– ಚಿಕಿತ್ಸೆ ಫಲಕಾರಿಯಾಗದೇ ಸಾವು ರಾಮನಗರ: ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಒಂದನೆಯ ತರಗತಿ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹರ್ಷ(6) ಮೃತಪಟ್ಟ ಬಾಲಕ. ನಾಯಕನಹಳ್ಳಿ ಗ್ರಾಮದ ಕಂಬಯ್ಯ ಎಂಬವರ ಪುತ್ರನಾಗಿದ್ದ ಹರ್ಷ ವೀರೇಗೌಡನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದನು. ಜನವರಿ 26ರಂದು ಶಾಲೆ ಮುಗಿಸಿ ಮನೆಗೆ ಹೋಗುವಾಗ ಬಾಲಕನಿಗೆ ಕಾರು […]

4 weeks ago

ಮಾತು ಬಾರದಿದ್ದರೂ ಗಣರಾಜ್ಯೋತ್ಸವದ ಭಾಷಣ ಮಾಡಿದ ಬಾಲಕ

– ಸೆಲ್ಯೂಟ್ ಹೊಡೆದು ಭಾಷಣ ಮುಗಿಸಿದ ಬಾಲಕ ಹಾವೇರಿ: ಇವತ್ತು ಗಣರಾಜ್ಯೋತ್ಸವ ದಿನ. ಆತನ ಸ್ನೇಹಿತರು ಭಾಷಣ ಮಾಡಿದ್ದಾರೆ. ಆದರೆ ದೇಶಾಭಿಮಾನ ಅನ್ನೋದು ಎಲ್ಲರಲ್ಲೂ ಇರುತ್ತೆ ಅಲ್ವಾ ಆದ್ದರಿಂದ ಮಾತು ಬಾರದ ಮೂಗ ಬಾಲಕ 71ನೇ ಗಣರಾಜ್ಯೋತ್ಸವದಲ್ಲಿ ನಾನೂ ಭಾಷಣ ಮಾಡುತ್ತೇನೆಂದು ಹಠ ಹಿಡಿದು ಭಾಷಣ ಮಾಡಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೊಲ್ಲಾಪುರ...

71ನೇ ಗಣರಾಜ್ಯೋತ್ಸವ- ರಾಷ್ಟ್ರಪತಿಯಿಂದ ಧ್ವಜಾರೋಹಣ

4 weeks ago

ನವದೆಹಲಿ: 71ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್‍ಪಥ್‍ನಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಬಾರಿಯ ಗಣತಂತ್ರ ಹಬ್ಬಕ್ಕೆ ಬ್ರೆಜಿಲ್‍ನ ಅಧ್ಯಕ್ಷ ಜೈರ್ ಬೋಲ್ಸೋನಾರೊ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಅಮರ್ ಜವಾನ್ ಜ್ಯೋತಿ ಬಳಿ ಭಾರತದ ಹೆಮ್ಮೆಯಾಗಿರುವ...

ಮಾಣಿಕ್ ಷಾ ಮೈದಾನದಲ್ಲಿ ಗಣತಂತ್ರದ ಸಂಭ್ರಮ

4 weeks ago

– ರಾಜ್ಯಪಾಲರಿಂದ ಧ್ವಜಾರೋಹಣ ಬೆಂಗಳೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಅವರು ಧ್ವಜಾರೋಹಣ ಮಾಡಿದ್ದಾರೆ. ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲ ವಿ.ಆರ್ ವಾಲಾ ಅವರನ್ನು ಸಿಎಂ ಬಿ.ಎಸ್.ಯಡಿಯೂಪ್ಪ ಅವರು...

ಗಣರಾಜ್ಯೋತ್ಸವಕ್ಕೆ ಬಾರದ ಪಾಲಿಕೆ ಅಧಿಕಾರಿಗಳು-ಮೇಯರ್ ಫುಲ್ ಗರಂ

4 weeks ago

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರಾಸಕ್ತಿ ಮತ್ತೆ ಎದ್ದು ಕಾಣುತ್ತಿದೆ. ಇಂದು ಪಾಲಿಕೆಯ ಆವರಣದಲ್ಲಿ ನಡೆದ ಗಣರಾಜೊತ್ಸವ ಆಚರಣೆಗೆ ಪಾಲಿಕೆಯ ಅಧಿಕಾರಿಗಳು ಭಾಗಿಯಾಗದೇ ನಿರಾಸಕ್ತಿ ತೋರಿಸಿದ್ದಾರೆ. ಪ್ರತಿ ವರ್ಷದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗದೇ ಪಾಲಿಕೆ ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಇದು ಸರಿಯಾದ ಕ್ರಮವಲ್ಲ....

ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ- ರಾಜ್‍ಪಥ್‍ನಲ್ಲಿ ಪರೇಡ್ ವೀಕ್ಷಿಸಲಿದ್ದಾರೆ ಬ್ರೆಜಿಲ್ ಅಧ್ಯಕ್ಷ

4 weeks ago

ನವದೆಹಲಿ: ಭಯೋತ್ಪಾದನೆಯ ಭೀತಿ, ಸಿಎಎ ಹೋರಾಟದ ನಡುವೆ ಇಂದು 71ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶವೇ ಸಿದ್ಧಗೊಂಡಿದೆ. ದೆಹಲಿ ಸೇರಿ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳು ಜರುಗಲಿದೆ. ಜನವರಿ 26 ಭಾರತೀಯರ ಪಾಲಿಗೆ ಮಹತ್ವದ ದಿನ. ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ...

300 ವಿದ್ಯಾರ್ಥಿಗಳಿಂದ ರಂಗೋಲಿಯಲ್ಲಿ ಮೂಡಿದೆ ತ್ರಿವರ್ಣ ಧ್ವಜ

4 weeks ago

ಬೆಂಗಳೂರು: ಭಾನುವಾರ ಜನವರಿ 26ರಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶವೇ ಸಿದ್ಧವಾಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ನಗರದಲ್ಲಿ ರಂಗೋಲಿ ಸ್ಪರ್ಧೆ ಕೂಡ ನಡೆದಿದೆ. ಒಂದೇ ರಂಗೋಲಿಯನ್ನ 300 ವಿದ್ಯಾರ್ಥಿಗಳು ಸೇರಿ ಮೂಡಿಸಿದ್ದಾರೆ. ನಮ್ಮ ರಾಷ್ಟ್ರ ಧ್ವಜವನ್ನ ರಂಗೋಲಿ ಮೂಲಕ ವಿದ್ಯಾರ್ಥಿಗಳು ಬಿಡಿಸಿದ್ದಾರೆ....

ಗಣರಾಜ್ಯೋತ್ಸವ- ದೆಹಲಿಯಲ್ಲಿ ಹೈ ಅಲರ್ಟ್

4 weeks ago

ನವದೆಹಲಿ : 71ನೇ ಗಣರಾಜೋತ್ಸವ ಆಚರಣೆ ಹಿನ್ನೆಲೆ ದೆಹಲಿಯಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಕೇಂದ್ರ ಬಿಂದು ರಾಜಪಥ್ ರಸ್ತೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈ ವರ್ಷದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗವಹಿಸಲಿದ್ದು, ರಾಷ್ಟ್ರಪತಿ ರಮನಾಥ್ ಕೋವಿಂದ್,...