Tag: Randeep Singh Surjewalaa

  • ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಆರೋಗ್ಯ ಸಚಿವ ಸುಧಾಕರ್ ತೀರುಗೇಟು ನೀಡಿದ್ದಾರೆ.

    BOMMAi 1

    ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಸಂಚಲನ ಸೃಷ್ಟಿಸಿದೆ. ಶನಿವಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    randeep surjewala

    ಈ ಕುರಿತಂತೆ ಸುಧಾಕರ್ ಅವರು, ಅನೇಕ ವರ್ಷಗಳಿಂದ ಡ್ರಗ್ ಮೇನಸ್ ಏನಾಗುತ್ತಿದೆ ಎಂದು ಕಂಡು ಹಿಡಿಯಬೇಕೆಂದು ನಮ್ಮ ಆಡಳಿತದಲ್ಲಿಯೇ ಇದನ್ನು ಮಟ್ಟ ಹಾಕಬೇಕೆಂದು ಅಂದಿನ ಸರ್ಕಾರದಲ್ಲಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿದರು. ಇಂದು ತನಿಖೆಗೆ ಆದೇಶ ಸೂಚಿಸಿ, ಅದರಲ್ಲಿ ಶ್ರೀಕಿ ಸಿಕ್ಕಿಹಾಕಿಕೊಂಡು ಇನ್ನಷ್ಟು ತೀವ್ರವಾಗಿ ತನಿಖೆ ಮಾಡಿಸುತ್ತಿದ್ದಾರೆ. ಇವತ್ತು ಅವರು ನಟರಾ? ಇದರಲ್ಲಿ ಯಾರು ಕೂಡ ನಟರಿಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹಸಚಿವರಾಗಿದ್ದವರು ಇಂದು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದಿದ್ದಾರೆ.

    Bitcoin

    ನಮ್ಮ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಅಧಿಕಾರಿಗಳು ಚಾರ್ಜ್‍ಶೀಟ್‍ನಲ್ಲಿ ಏನು ತಿಳಿಸಿದ್ದರೋ ಅದನ್ನೇ ನಿಮ್ಮ ಮುಂದೆ ಓದಿದ್ದಾರೆ. ಬೇರೆ ಏನನ್ನೋ ಕಂಡು ಹಿಡಿದು ಯಾವುದೋ ಸ್ಪಷ್ಟವಾಗಿರುವ ಸಾಕ್ಷಿ ಇಟ್ಟುಕೊಂಡು ಅದನ್ನು ತೋರಿಸುವಂತಹ ಕೆಲಸವನ್ನು ಅವರು ಮಾಡಿಲ್ಲ. ಪೊಲೀಸಿನವರು, ಪೊಲೀಸ್ ಇಲಾಖೆ ಅವರು ಅತ್ಯಂತ ಪಾರಾದರ್ಶಕತೆಯಿಂದ ಇಂದು ನಡೆದುಕೊಂಡಿದ್ದಾರೆ. ಯಾರನ್ನು ರಕ್ಷಣೆಯಾಗಲಿ, ಮಾಹಿತಿಯನ್ನು ಬಚ್ಚಿಡುವ ಪ್ರಯತ್ನವನ್ನು ಎಲ್ಲೂ ಕೂಡ ಮಾಡಿಲ್ಲ. ಈ ಎಲ್ಲಾ ಅಪಾಧನೆ, ಸ್ಪೀಕರ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿರುವ ಮಾತುಗಳಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

    delhi sudhakar

    ಸುಳ್ಳನ್ನು ನಿಜ ಮಾಡಲು ಹೊರಟಿದ್ದೀರಾ. ಅದು ಸಾಧ್ಯವಾಗುವುದಿಲ್ಲ. ಇದರಿಂದ ನೀವೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಾ. ನಮ್ಮ ಸರ್ಕಾರ ಸ್ಪಷ್ಟವಾಗಿದ್ದು, ನಾವು ಯಾರನ್ನು ರಕ್ಷಿಸುವುದಿಲ್ಲ. ನಾವೇ ಇದನ್ನು ಬೆಳಕಿಗೆ ತಂದಿದ್ದೇವೆ. ಹಾಗಾಗಿ ಈ ಕುರಿತಂತೆ ಯಾವ ಹಂತದಲ್ಲಿ ತನಿಖೆ ಮಾಡಿಸಬೇಕು ಎಂಬುವುದನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಿತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

    ಇದರ ನಡುವೆ ಇಂದು ಕೂಡ ರಣದೀಪ್ ಸಿಂಗ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಭಾಗವಹಿಸಲಿದ್ದಾರೆ. ಈ ವೇಳೆ ಮಹತ್ವದ ದಾಖಲೆ ಏನಾದರು ಬಿಡುಗಡೆ ಮಾಡುತ್ತಾರಾ ಎಂದು ಕುತೂಹಲ ಮೂಡಿಸಿದೆ.