Tuesday, 16th July 2019

3 days ago

ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

ರಾಮನಗರ: ಆಷಾಢ ಮಾಸದಲ್ಲಿ ನೂತನ ದಂಪತಿಗಳನ್ನು ಬೇರೆ ಮಾಡಿ, ಹೆಣ್ಣನ್ನು ತವರು ಮನೆಗೆ ಕಳಿಸುವುದು ವಾಡಿಕೆ. ಯಾಕೆಂದರೆ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡಿದರೆ ಕೇಡಾಗುತ್ತೆ ಎನ್ನಲಾಗುತ್ತದೆ. ಆದರೆ ದಂಪತಿಗಳನ್ನು ಆಷಾಢದಲ್ಲಿ ಒಂದೆಡೆ ಸೇರಿಸುವಂತಹ ಜಾತ್ರಾ ಮಹೋತ್ಸವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತದೆ. ನೂತನ ದಂಪತಿಗಳನ್ನು ಒಂದೆಡೆ ಸೇರಿಸುವ ಸಂಜೀವರಾಯಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು. ದೇವರ ಹೊಸಹಳ್ಳಿಯ ಪುರಾತನವಾದ ಸಂಜೀವರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಹೊಸ ದಂಪತಿಗಳು ಇಲ್ಲಿಗೆ ಬಂದು […]

4 days ago

ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

ರಾಮನಗರ: ಜಮೀನಿನ ಮಾಲೀಕರು ಬದುಕಿದ್ದರೂ ಸಾವನ್ನಪ್ಪಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿರುವ ಘಟನೆ ರಾಮನಗರ ತಾಲೂಕಿನ ಭೈರಮಂಗಲದಲ್ಲಿ ನಡೆದಿದೆ. ಭೈರಮಂಗಲ ಗ್ರಾಮದ ಸಹೋದರರಾದ ಬಿಳಿಗಿರಿಯಪ್ಪ ಹಾಗೂ ಸ್ವಾಮಿ ವಂಚನೆಗೆ ಒಳಗಾದ ಮಾಲೀಕರು. ಅದೇ ಗ್ರಾಮದ ರಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿ. 2001ರಲ್ಲಿ ಜಮೀನು ಮಾರಾಟವಾಗಿದ್ದರೂ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ. ಬಿಳಿಗಿರಿಯಪ್ಪ ಹಾಗೂ...

ಮಗಳನ್ನ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣ- ನಡು ರಸ್ತೆಯಲ್ಲಿ ಥಳಿಸಿದ ವಿಡಿಯೋ ವೈರಲ್

2 weeks ago

– ನಾಲ್ವರು ಆರೋಪಿಗಳು ಅಂದರ್ ರಾಮನಗರ: ಮಗಳನ್ನ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾನಗಲ್ ನಿವಾಸಿ ರವಿ (27) ಕೊಲೆಯಾದ ಯುವಕ. ರವಿ ಗೆಳತಿಯ...

ಡೊನೇಷನ್ ಕಟ್ಟದ್ದಕ್ಕೆ ಆರ್‌ಟಿಇ ಅಡಿ ಸೇರಿದ್ದ ವಿದ್ಯಾರ್ಥಿನಿ ಶಾಲೆಯಿಂದಲೇ ಔಟ್

2 weeks ago

ರಾಮನಗರ: ಆರ್‌ಟಿಇ ಕಾಯ್ದೆಯಡಿ ನಾಲ್ಕು ವರ್ಷಗಳ ಕಾಲ ಶಾಲೆಯಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯೋರ್ವಳನ್ನು ಡೊನೇಷನ್ ಕಟ್ಟಲಿಲ್ಲವೆಂದು ಶಾಲೆಯಿಂದ ಹೊರಹಾಕಿದ ಅಮಾನವೀಯ ಘಟನೆ ರಾಮನಗರದಲ್ಲಿ ನಡೆದಿದೆ. ನಗರದ ಖಾಸಗಿ ಶಾಲೆ ಶರತ್ ಮೆಮೋರಿಯಲ್ ಆಂಗ್ಲ ಶಾಲೆಯಲ್ಲಿ ಐದನೇ ತರಗತಿ ವ್ಯಸಂಗ ಮಾಡುತ್ತಿರುವ ವಿದ್ಯಾರ್ಥಿನಿ...

ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

3 weeks ago

ರಾಮನಗರ: ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಮಶಾನದ ಜಾಗಕ್ಕೆ ಬೇಲಿ ಹಾಕಿರುವುದರಿಂದ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದಲಿತರಿಗೆ ಸ್ಮಶಾನಕ್ಕೆ ಜಾಗವಿದ್ದರೂ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಸಮೀಪದ ಕರಿಕಲ್ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು...

ಯಾವುದೋ ಒತ್ತಾಸೆಗೆ ಮಣಿದು ಸಿಎಂ ಉತ್ತರ ಕರ್ನಾಟಕಕ್ಕೆ ಹೋಗಿದ್ದಾರೆ : ಯೋಗೇಶ್ವರ್

3 weeks ago

ರಾಮನಗರ: ನಾನು ಸಿಎಂ ಬಗ್ಗೆ ಟೀಕೆ ಮಾಡುವುದಿಲ್ಲ, ಆದರೆ ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿ ನಾನು ಸಿಎಂ ನಡವಳಿಕೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್, ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿ ನಾನು ಸಿಎಂ ನಡವಳಿಕೆಯನ್ನು...

ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

3 weeks ago

ರಾಮನಗರ: ನಿನ್ನೆ ಬಂಧಿಸಿದ ಹಬೀಬುರ್ ರೆಹಮಾನ್ ಅವರನ್ನು ವಿಚಾರಣೆ ನಡೆಸಿದ ವೇಳೆ ಆತನ ಹೇಳಿಕೆಯ ಆಧಾರದ ಮೇಲೆ ಎನ್‍ಐಎ ಎರಡು ಐಇಡಿಗಳನ್ನು ಇಂದು ವಶಪಡಿಸಿಕೊಂಡಿದೆ. ಬಾಂಬ್ ನಿಷ್ಕ್ರೀಯ ದಳದ ಸಹಾಯದಿಂದ ರಾಮನಗರದ ಬಳಿಯ ರೇಲ್ವೆ ಹಳಿಯ ರಾಜಕಾಲುವೆಯಲ್ಲಿದ್ದ ಎರಡು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,...

ಮರಕ್ಕೆ ಕಾರು ಡಿಕ್ಕಿ – ಮದ್ವೆ ಮುಗಿಸಿ ಬರ್ತಿದ್ದ ಮೂವರ ದುರ್ಮರಣ

3 weeks ago

ರಾಮನಗರ: ಚಾಲಕನ ಅಜಾಗರೂಕತೆಯಿಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಗಡಿ – ಕುಣಿಗಲ್ ರಸ್ತೆಯ ಹುಚ್ಚನುಮೆಗೌಡನ ಪಾಳ್ಯದ ಬಳಿ ನಡೆದಿದೆ. ಶ್ರೀಪತಿಹಳ್ಳಿಯ ನರಸಮ್ಮ (65), ತಾಳೆಕೆರೆಯ ಜಯಲಕ್ಷ್ಮಮ್ಮ (42) ಮತ್ತು ಕಾಮಸಾಗರದ ಕುಮಾರ್...