Recent News

2 weeks ago

ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿ ಗಾಂಧಿ ಜಯಂತಿ ಆಚರಿಸಿದ ಸಂಚಾರಿ ಪೊಲೀಸರು

ರಾಯಚೂರು: ದೇಶದ ಪಿತಾಮಹಾ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ರೀತಿಯಲ್ಲಿ ಅರಿವು ಮೂಡಿಸಿದ್ದು, ಸಂಚಾರಿ ಪೊಲೀಸರು ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ಹಾಕುವ ಜೊತೆಗೆ ಉಚಿತ ಹೆಲ್ಮೆಟ್ ನೀಡಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಗೆ ಬುದ್ಧಿ ಹೇಳಿ, ಉಚಿತವಾಗಿ ಹೆಲ್ಮೆಟ್ ಕೊಟ್ಟು ಧರಿಸಲು ಎಚ್ಚರಿಕೆ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಸಂತೋಷ್ […]

2 weeks ago

ನೆರೆ ನಿಂತ್ರೂ ನಿಲ್ಲದ ಅವಾಂತರ- ಮನೆಗಳಲ್ಲಿ ಬೀಳುತ್ತಿವೆ 20 ಅಡಿ ಆಳದ ಗುಂಡಿಗಳು

ರಾಯಚೂರು: ಒಂದೆಡೆ ನೆರೆಹಾವಳಿಯಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯ ಜನ ಈಗ ಮಳೆಯಿಂದ ಕಂಗಾಲಾಗಿದ್ದಾರೆ. ನೆರೆ ಹಾವಳಿಯಿಂದ ಕಳೆದುಕೊಂಡ ಆಸ್ತಿಪಾಸ್ತಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ, ಸರ್ಕಾರ ಕಷ್ಟಗಳಿಗೆ ಕಿವಿ ಕೊಡುತ್ತಿಲ್ಲ ಎನ್ನುವಾಗಲೇ ಜನ ಮತ್ತಷ್ಟು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ನೀರಿನ ಬಸಿಯುವಿಕೆಯಿಂದ ಮನೆಗಳಲ್ಲಿ ನೀರಿನ ಗುಂಡಿಗಳು ಬೀಳುತ್ತಿದ್ದು ಜನ ಜೀವಭಯದಲ್ಲಿ ಗ್ರಾಮಗಳನ್ನೇ ಬಿಡಬೇಕಾದ ಪರಿಸ್ಥಿತಿ ಇದೆ. ನೆರೆಯ ಮಹಾರಾಷ್ಟ್ರದಲ್ಲಿ...

ಭಾಗಮಂಡಲ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ – ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ

1 month ago

– ದೇವದುರ್ಗ- ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್ – ಕೂಡಲಸಂಗಮದಲ್ಲಿ ಪ್ರವಾಹ ಭೀತಿ ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ಈ ನದಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ...

ರಾಮ್-ರಹೀಮ್ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ರಾಯಚೂರು ಯುವಕರು

1 month ago

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಯುವಕರು ರಾಮ್ ರಹೀಮ್ ಗಣೇಶನನ್ನ ಪ್ರತಿಷ್ಠಾಪಿಸಿ, ಗಣೇಶ ಉತ್ಸವದಲ್ಲಿ ಭಾವೈಕ್ಯತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಪಟ್ಟಣ ರಾಮ್ ರಹೀಮ್ ಯುವಕ ಮಂಡಳಿಯ ಹಿಂದೂ, ಮುಸ್ಲಿಂ ಯುವಕರು ಕಳೆದ ಮೂರು ವರ್ಷಗಳಿಂದ ಭಾವೈಕತೆಯ ಗಣೇಶನನ್ನು ಗಣಪತಿ ಹಬ್ಬದ ಪ್ರಯುಕ್ತ...

ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

1 month ago

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿದ ನದಿಗಳಲ್ಲಿ ತುಂಗಭದ್ರಾ ನದಿ ಕೂಡ ಒಂದು. ಆದರೆ ನದಿ ಮೈತುಂಬಿ ಹರಿಯುತ್ತಿದ್ದರೂ ಕಾಲುವೆಗೆ ಮಾತ್ರ ನೀರಿಲ್ಲ. ಜಲಾಶಯದಿಂದ ಟಿಎಲ್‍ಬಿಸಿ ಕೆಳಭಾಗದ ಕಾಲುವೆಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿದೆ....

ಮುಂದುವರಿದ ಮಹಾಮಳೆಯ ಆರ್ಭಟ – ಮಲೆನಾಡಿನ ಶಾಲಾ, ಕಾಲೇಜುಗಳಿಗೆ ರಜೆ

2 months ago

– ಎಲ್ಲೆಲ್ಲಿ ಏನೇನು ಅನಾಹುತವಾಗಿದೆ? ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳು ಹಾಗೂ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಭಾಗಗಳಲ್ಲಿ ಮಳೆಯ ಅರ್ಭಟ ಇಂದು ಕೂಡ ಮುಂದುವರಿದಿದೆ. ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಲಭಿಸಿರುವುದರಿಂದ ಮುಂಜಾಗೃತಾ...

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಉತ್ತರ ಕರ್ನಾಟಕ ತತ್ತರ- ಭೀಮಾತೀರದಲ್ಲಿ ನೀರಿಗಾಗಿ ಹಾಹಾಕಾರ

2 months ago

ರಾಯಚೂರು/ಬಾಗಲಕೋಟೆ/ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಅದರಲ್ಲೂ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳು ಅಕ್ಷರಶಃ ಜಲಾವೃತಗೊಂಡು, ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ....

ಜಮೀನಿನಲ್ಲಿ ರಾಜಾರೋಷವಾಗಿ ಓಡಾಡಿದ ಬೃಹತ್ ಮೊಸಳೆ ನೋಡಿ ಹೌಹಾರಿದ ಜನ

2 months ago

ರಾಯಚೂರು: ಜಿಲ್ಲೆಯ ಕೆಲ ಗ್ರಾಮಗಳ ಜನರ ಪಾಡು ಮಳೆಬಂದರೂ ಕಷ್ಟ, ಬರದಿದ್ದರೆ ನಷ್ಟ ಎನ್ನುವಂತಾಗಿದೆ. ಹಿಂದೆ ಮಳೆಯಿಲ್ಲದೆ ಆಹಾರ ಅರಸಿ ಜಮೀನುಗಳಿಗೆ ನುಗ್ಗುತ್ತಿದ್ದ ಮೊಸಳೆಗಳು ಈಗ ಮಳೆ ಬಂದು ನದಿಯಲ್ಲಿ ನೀರು ಹೆಚ್ಚಾದ ಕಾರಣಕ್ಕೆ ಹೊಲಗಳಿಗೆ ನುಗ್ಗುತ್ತಿರುವುದು ರೈತನಿಗೆ ತಲೆನೋವಾಗಿದೆ. ರಾಯಚೂರಿನ...