Tag: Raghu Bhat

  • ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ಬೆಂಗಳೂರು: ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ್ದ ನಟ ರಘು ಭಟ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸನ್ಮಾನಿ ಅಭಿನಂದಿಸಿದರು.

    ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ ಚೈನ್ ಪಡೆದು ಪರಾರಿಯಾಗುತ್ತಿದ್ದರು. ಕಿರುಚಾಡುತ್ತಿದ್ದ ಚಾಲಕ ಧ್ವನಿ ಕೇಳಿಸಿಕೊಂಡ ರಘು ಅವರು  ದರೋಡೆಕೋರರನ್ನು ಚೇಸ್ ಮಾಡಲು ಆರಂಭಿಸಿದಾಗ, ದರೋಡೆಕೋರರು ಬೈಕ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದರು. ಸುಮಾರು 2 ಕಿ.ಮೀ ಚೇಸ್ ಮಾಡಿದ ಬಳಿಕ  ಭಾರತಿ ನಗರದ ಸೇಂಟ್ ಜಾನ್ಸ್ ವೃತ್ತದಲ್ಲಿ ರಘು, ದರೋಡೆಕೋರರನ್ನು ಹಿಡಿದಿದ್ದರು. ನಂತರ ಇಬ್ಬರನ್ನೂ, ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು.

    Raghu Bhat A

    ಬಂಧಿತ ಆರೋಪಿಗಳಲ್ಲಿ ಖಾಜಾ ಮೋಹಿನ್ ವಿರುದ್ಧ ದರೋಡೆ, ಸರ ಕಳ್ಳತನ, ಕಳ್ಳತನ ಸೇರಿದಂತೆ ಒಟ್ಟು 27 ಪ್ರಕರಣಗಳಿವೆ. ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲು ಆದೇಶಿಸಲಾಗಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಮೋಹಿಮ್‍ನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ದರೋಡೆ ಮಾಡಿದ್ದ ಮೊಬೈಲ್, ಹಣ, ಚೈನ್‍ಗಳನ್ನು ಪೊಲೀಸರು ಚಾಲಕನಿಗೆ ತಲುಪಿಸಿದ್ದಾರೆ.

  • ಕಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಸ್ಯಾಂಡಲ್‍ವುಡ್ ನಟ

    ಕಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಸ್ಯಾಂಡಲ್‍ವುಡ್ ನಟ

    ಬೆಂಗಳೂರು: ಕ್ಯಾಬ್ ಡ್ರೈವರ್‌ ಬಳಿ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ಇಬ್ಬರು ಕಳ್ಳರನ್ನು ಸ್ಯಾಂಡಲ್‍ವುಡ್ ನಟರೊಬ್ಬರು ಚೇಸ್ ಮಾಡಿ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಟ ರಘುಭಟ್ ಗುರುವಾರ ರಾತ್ರಿ ‘ಅವನೇ ಶ್ರೀಮನ್ನಾರಾಯಣ’ ಪ್ರೀಮಿಯರ್ ಶೋ ನೋಡಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಹಲಸೂರಿನ RMZ ಸರ್ಕಲ್ ಬಳಿ ಇಬ್ಬರು ದುಷ್ಕರ್ಮಿಗಳು ಕ್ಯಾಬ್ ಡ್ರೈವರ್ ರಘುನಾಥ್ ಎಂಬವರ ಬಳಿ ಹಣ, ಮೊಬೈಲ್ ಕಸಿದು ಎಸ್ಕೇಪ್ ಆಗುತ್ತಿದ್ದರು.

    BNG 9

    ಇದನ್ನು ನೋಡಿದ ನಟ ರಘುಭಟ್ ಬೈಕನ್ನು ಹಿಂಬಾಲಿಸಿದ್ದಾರೆ. ಆದರೆ ವೇಗವಾಗಿ ತಪ್ಪಿಸಿಕೊಳ್ಳುವ ಬರದಲ್ಲಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಕಳ್ಳರು ಕೆಳಗಿಬಿದ್ದಿದ್ದಾರೆ. ಈ ವೇಳೆ ನಟ ರಘುಭಟ್ ಆರೋಪಿ ಅಬ್ದುಲ್‍ನನ್ನು ಸೆರೆಹಿಡಿದ್ದಾರೆ. ಮತ್ತೊಬ್ಬ ಆರೋಪಿ ಮೋಯಿನ್‍ಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ನಟ ರಘುಭಟ್ ಪೊಲೀಸರಿಗೆ ಮಾಹಿತಿ ತಿಳಿಸಿ, ಆರೋಪಿಗಳನ್ನು ಹಲಸೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

    ನಟನ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ರಘುಭಟ್ ‘ಅನ್ವೇಷಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಪ್ರೀತಿಸಿದ ಹುಡುಗಿಯೊಂದಿಗೆ ನಟ ರಘು ಭಟ್ ವಿವಾಹ ಬಂಧನ!

    ಪ್ರೀತಿಸಿದ ಹುಡುಗಿಯೊಂದಿಗೆ ನಟ ರಘು ಭಟ್ ವಿವಾಹ ಬಂಧನ!

    ಬೆಂಗಳೂರು : ನಟ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಹಲವಾರು ವರ್ಷಗಳಿಂದ ಪ್ರೀತಿಸಿದ್ದ ಹುಡುಗಿ ಸುಗುಣರನ್ನು ಮದುವೆಯಾಗಿರೋ ರಘು ಭಟ್ ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ಚಿತ್ರರಂಗದ ನಟ ನಟಿಯರು, ತಂತ್ರಜ್ಞರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಈ ಸಂಭ್ರಮದಲ್ಲಿ ಉಪಸ್ಥಿತರಿದ್ದು ಈ ಜೋಡಿಗೆ ಶುಭ ಕೋರಿದ್ದಾರೆ.

    ಸರ್ವಸ್ವ ಚಿತ್ರದ ಮೂಲಕವೇ ನಾಯಕ ನಟನಾಗಿ ಅಡಿಯಿರಿಸಿದ್ದ ರಘು ಭಟ್ ಬಾಲ್ಯ ಕಲಾವಿದರಾಗಿ ಬಣ್ಣ ಹಚ್ಚಿದ್ದವರು. ಶಿವರಾಜ್ ಕುಮಾರ್ ಅಭಿನಯದ ಕೃಷ್ಣಲೀಲೆ ಚಿತ್ರದ ಮೂಲಕ ನಟನೆ ಆರಂಭಿಸಿದ್ದ ಅವರು ಕಲೆಯ ವ್ಯಾಮೋಹದಿಂದಲೇ ಇಂದು ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಹೀಗೆ ತಮ್ಮ ವೃತ್ತಿ ಜೀವನವನ್ನು ಹೊಳಪಾಗಿಸಿಕೊಂಡಿರೋ ರಘು ಭಟ್ ಅವರಿಗೆ ಸುಗುಣಾ ಪರಿಚಯವಾದದ್ದು ಸಮಾರಂಭವೊಂದರಲ್ಲಂತೆ. ಅಲ್ಲಿಂದಲೇ ಸ್ನೇಹ ಮೂಡಿಕೊಂಡು, ಅದು ಪ್ರೀತಿಯಾಗಿ ಈ ಮದುವೆಯ ಮೂಲಕ ಅವರಿಬ್ಬರೂ ಶಾಶ್ವತವಾಗಿ ಒಂದಾಗಿದ್ದಾರೆ.

    RaghuBhat Marriage 18 copy

    ದಾದಾ ಈಸ್ ಬ್ಯಾಕ್, ಅನ್ವೇಷಿ, ಕರ್ವ ಮುಂತಾದ ಚಿತ್ರಗಳಲ್ಲಿ ಗಮನಾರ್ಹವಾದ ಅಭಿನಯ ನೀಡಿದ್ದ ರಘು ಭಟ್ ಇದೀಗ ನಾಯಕ ನಟನಾಗಿಯೂ ನೆಲೆ ನಿಲ್ಲುತ್ತಿದ್ದಾರೆ. ಅವರ ಮುಂದೆ ಹಲವಾರು ಚಿತ್ರಗಳ ಅವಕಾಶಗಳೂ ಇವೆ. ಈ ಹೊತ್ತಿನಲ್ಲಿಯೇ ಪ್ರೀತಿಸಿದ ಹುಡುಗಿ ಸುಗುಣಾರೊಂದಿಗೆ ಹೊಸ ಬದುಕಿಗೆ ಅಡಿಯಿರಿಸಿರುವ ರಘು ಭಟ್ ಅವರಿಗೆ ಒಳಿತಾಗಲೆಂದು ಹಾರೈಸೋಣ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv