Tag: Puneet Rajkumar

  • ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ನಾಡಿನ ಖ್ಯಾತ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ತಾವು ಕಂಡಂತೆ ಅಪ್ಪು, ನಟನೊಂದಿಗಿನ ಒಡನಾಟವನ್ನೂ ಸ್ಮರಿಸಿದ್ದಾರೆ. ನಟ ಸುದೀಪ್, ಬಾಲ್ಯದಿಂದಲೂ ನಾನೊಬ್ಬ ಸ್ಟಾರ್ ನಟನನ್ನು ನೋಡಿದ್ದೇನೆ. ಹುಟ್ಟುತ್ತಲೇ ಸ್ಟಾರ್ ಆಗಿದ್ದ ಅಪ್ಪು. ಇಂದು ಆತನಿಲ್ಲದಿರುವುದು ಭರಿಸಲಾಗದ ಶೂನ್ಯ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

    PUNEET RAJKUMAR

    ಸುದೀಪ್ ಟ್ವೀಟ್‍ನಲ್ಲೇನಿದೆ..?;

    ಅದು ಬಾಲ್ಯಜೀವನದ ಪಯಣ. ನಾನು ಅಪ್ಪುನನ್ನು ಮೊದಲು ಭೇಟಿಯಾಗಿದ್ದು ಶಿವಮೊಗ್ಗದಲ್ಲಿ. ಆಗಲೇ ಅಪ್ಪು ಸ್ಟಾರ್ ಆಗಿದ್ದರು. ಬಾಲನಟನಾಗಿ ಅಭಿನಯಿಸಿದ್ದ “ಭಾಗ್ಯವಂತರು” ಸಿನಿಮಾ ಹಿಟ್ ಆಗಿದ್ದ ಸಂಭ್ರಮಕ್ಕೆ ಪುನೀತ್ ಪ್ರವಾಸ ಕೈಗೊಂಡಿದ್ದರು. ಆಗ ಸಿನಿಮಾರಂಗದಲ್ಲಿ ನಮ್ಮ ತಂದೆಯ ಹೆಸರೂ ಚಿರಪರಿಚಿತ. ಈ ವೇಳೆ ಪುನೀತ್‍ರನ್ನು ಪೋಸ್ಟರ್ ಬಿಡುಗಡೆ ಮಾಡಲು ಮನೆಗೆ ಕರೆತರಲಾಗಿತ್ತು. ಅದೇ ಮೊದಲು ನಾನು ಅವರನ್ನು ಭೇಟಿಯಾಗಿದ್ದು. ಆ ವೇಳೆ ನನ್ನ ಆಟಿಕೆಗಳನ್ನು ಕಂಡ ಪುನೀತ್‍ಗೆ ಬಹಳ ಕುತೂಹಲ ಮೂಡಿತ್ತು. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

    PUNEET RAJKUMAR

    ನಾವಿಬ್ಬರೂ (ಪುನೀತ್-ಸುದೀಪ್) ಆಟವಾಡುತ್ತಿದ್ದಾಗ ಮಹಿಳೆಯೊಬ್ಬರು ತಟ್ಟೆಯಲ್ಲಿ ಊಟ ಹಾಕಿಕೊಂಡು ಪುನೀತ್ ತಿನ್ನಿಸಲು ಓಡಿಬಂದ ಪ್ರಸಂಗ ನನಗೀಗಲೂ ನೆನಪಿದೆ. ಆತನನ್ನು ನೋಡಿ ಅವರು ತುಂಬಾ ಭಾವುಕರಾದರು. ಈ ಚಿತ್ರಣವನ್ನು ಕಂಡು ನಾನು ಕೂತು ಭಾವುಕನಾಗಿದ್ದೆ.

    PUNEET

    ಆ ದಿನ ನೆರೆಹೊರೆಯವರು, ಮಕ್ಕಳೆಲ್ಲ ನಮ್ಮ ಮನೆಯಲ್ಲಿ ದಂಡುದಂಡಾಗಿ ನೆರೆದಿದ್ದರು. ಬೇರೆ ಮಕ್ಕಳಿದ್ದಾರೆಂದಲ್ಲ, ಚಿತ್ರರಂಗದ ದಂತಕಥೆ ಡಾ. ರಾಜ್‍ಕುಮಾರ್ ಅವರ ಪುತ್ರ ಬಾಲಕ ಸ್ಟಾರ್ ಪುನೀತ್ ಬಂದಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಮಂದಿ ಅಂದು ಮನೆಯಲ್ಲಿ ನೆರೆದಿದ್ದರು.

    ಅದಾದ ಬಳಿಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಕಾರಣ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೇವೆ. ಪುನೀತ್ ನನಗೆ ಸ್ನೇಹಿತ ಮಾತ್ರವಲ್ಲ, ಅತ್ಯುತ್ತಮ ಸ್ಪರ್ಧಿಯೂ ಹೌದು. ಅಪ್ಪು ಒಬ್ಬ ಅದ್ಭುತ ನಟ, ಡ್ಯಾನ್ಸರ್, ಫೈಟರ್, ಅತ್ಯುತ್ತಮ ವ್ಯಕ್ತಿ ಕೂಡ ಹೌದು. ನನ್ನ ನಟನೆಯನ್ನೂ ಉತ್ತಮಗೊಳಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಅವರ ನಟನಾ ಸ್ಪರ್ಧೆಯನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೆ. ಅಂತಹ ಅದ್ಭುತ ನಟನ ಪರಂಪರೆಯಲ್ಲಿ ಜೊತೆಗಾರನಾಗಿ ಗುರುತಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ನಟ ಕಿಚ್ಚ ಸುದೀಪ್ ಅವರು ಪುನೀತ್ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದ್ದಾರೆ.

    SUDEEP

    ಚಿತ್ರರಂಗ ಇಂದು ಅಪೂರ್ಣವಾಗಿದೆ. ಕತ್ತಲಾವರಿಸಿದೆ. ಕಾಲ ನಿಜಕ್ಕೂ ಕ್ರೂರಿ. ಈ ನೆಲ ದುಃಖದಿಂದ ಆವರಿಸಿದೆ. ಪ್ರಕೃತಿಯೇ ದುಃಖಿಸುತ್ತಿರುವಂತೆ ನಿನ್ನೆಯ ಸಂದರ್ಭ ಭಾಸವಾಯಿತು. ಮಂಕಾದ ದಿನವದು. ಕಾರ್ಮೋಡ ಕವಿದಂತಹ ಅನುಭವ. ನಾನು ಬೆಂಗಳೂರಿಗೆ ಬಂದ ತಕ್ಷಣ ಪುನೀತ್‍ನನ್ನು ಇರಿಸಿದ್ದ ಜಾಗಕ್ಕೆ ತಕ್ಷಣ ಹೊರಟೆ. ನನ್ನ ಉಸಿರಿನ ಏರಿಳಿತ ಹೆಚ್ಚಾಗಿತ್ತು. ಆ ಸಂದರ್ಭ ವಾಸ್ತವವಾಗಿದ್ದರೂ ಅದನ್ನು ಅರಗಿಸಿಕೊಳ್ಳಲು ನನ್ನಿಂದಾಗಲಿಲ್ಲ.

    ಅಪ್ಪು ಮಲಗಿರುವುದನ್ನು ಕಂಡು ಎಲ್ಲರೆದೆಯ ಮೇಲೆ ಪರ್ವತವೇ ಬಿದ್ದಂತೆ ಭಾಸವಾಯಿತು. ಯಾಕೆ.. ಹೇಗೆ!!!! ಎಂಬಂತಹ ಹಲವು ಪ್ರಶ್ನೆಗಳು, ಮಾತುಗಳು ಹೊರಡುತ್ತಿದ್ದವು. ನಾನು ಸರಿಯಾಗಿ ಉಸಿರಾಡಲು ಸಾಧ್ಯವಾಗದೇ ಹೋದದ್ದು ಅದೇ ಮೊದಲು. ನನ್ನ ಸಹದ್ಯೋಗಿ, ಗೆಳೆಯ, ಬಾರದ ಲೋಕಕ್ಕೆ ಹೋಗಿದ್ದಾನೆ. ಆ ಸ್ಥಿತಿಯಲ್ಲಿ ಆತನನ್ನು ಹೆಚ್ಚು ಸಮಯ ನನ್ನಿಂದ ನೋಡಲಾಗಲಿಲ್ಲ. ಆ ನೋಟ ನನ್ನನ್ನು ಕೊಲ್ಲುತ್ತಿತ್ತು.

    PUNEET

    ಆ ವೇಳೆ ಶಿವಣ್ಣನ ಕಡೆಗೆ ನೋಡಿದೆ. ಆಗ ಶಿವಣ್ಣ ನನ್ನೊಂದಿಗೆ ಹೇಳಿದ, “ಅಪ್ಪು ನನಗಿಂತ 13 ವರ್ಷ ಚಿಕ್ಕವನು. ನನ್ನ ತೋಳುಗಳಲ್ಲಿ ಆತನನ್ನು ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಆತನನ್ನು ನೋಡಿಕೊಂಡು ಬಂದಿದ್ದೇನೆ. ಈಗ ನಾನು ಇನ್ಯಾರನ್ನು ನೋಡಲು ಸಾಧ್ಯ…!. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

    ಶಿವಣ್ಣನ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ, ನೊಂದಿದ್ದಾರೆ, ಛಿದ್ರರಾಗಿದ್ದಾರೆ. ಇದನ್ನು ಸ್ವೀಕರಿಸಲು ಎಲ್ಲರಿಗೂ ಬಹುಕಾಲ ಬೇಕಾಗುತ್ತದೆ. ಖಾಲಿತನ ನಮ್ಮನ್ನು ಆವರಿಸಿದೆ. ಅಪ್ಪುವಿನ ಜಾಗವನ್ನು ಯಾರಿಂದಲೂ ತುಂಬಲಾಗುವುದಿಲ್ಲ. ಒಬ್ಬ ಮಹಾನ್ ವ್ಯಕ್ತಿಗೆ ಸೇರಿದ ಜಾಗವದು. “ಪುನೀತ್”,,,, ನನ್ನ ಪ್ರೀತಿ “ಅಪ್ಪು”. ಶಾಂತನಾಗಿ ಹೋಗು, ಚಿರಶಕ್ತಿ ದೊರೆಕಲಿ ನನ್ನ ಸ್ನೇಹಿತನೇ.

  • ಅಪ್ಪು ಉಸಿರು ನಿಲ್ಲೋ ಕ್ಷಣದಲ್ಲಿ ಹೇಗಿದ್ರು, ಕೊನೆಯದಾಗಿ ಮಾತಾಡಿದ್ದೇನು? – ಕೊನೆ ಕ್ಷಣ ಬಿಚ್ಚಿಟ್ಟ ಡಾ.ರಮಣ ರಾವ್

    ಅಪ್ಪು ಉಸಿರು ನಿಲ್ಲೋ ಕ್ಷಣದಲ್ಲಿ ಹೇಗಿದ್ರು, ಕೊನೆಯದಾಗಿ ಮಾತಾಡಿದ್ದೇನು? – ಕೊನೆ ಕ್ಷಣ ಬಿಚ್ಚಿಟ್ಟ ಡಾ.ರಮಣ ರಾವ್

    – ಅಪ್ಪು ಜೊತೆ ಯಾರೆಲ್ಲ ಆಸ್ಪತ್ರೆಗೆ ಬಂದಿದ್ರು..?
    – ಕೊಂಚವೂ ಸೂಚನೆ ಇಲ್ದೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು ಯಾಕೆ?
    – ರಾಜ್‍ಕುಮಾರ್‍ಗೂ ಹೀಗೆ ಆಗಿತ್ತು

    ಬೆಂಗಳೂರು: ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ ಪುನೀತ್ ರಾಜ್‍ಕುಮಾರ್ ಅವರು ಊಹೆಗೂ ನಿಲುಕದಂತೆ ಕೊನೆಯುಸಿರೆಳೆದಿದ್ದು ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದೆ. ಪುನೀತ್ ಎಂದಿನಂತೆ ಶುಕ್ರವಾರ ಬೆಳಿಗ್ಗೆ ವರ್ಕೌಟ್ ಮಾಡಿದ್ದಾರೆ. ಯಾಕೋ ಸ್ವಲ್ಪ ವೀಕ್ ಆಗಿದ್ದೇನೆ ಎಂದೆನಿಸಿ ತಮ್ಮ ಕುಟುಂಬದ ವೈದ್ಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಪ್ಪು ಆರೋಗ್ಯ ಹೇಗಿತ್ತು, ಮುಂದೇನಾಗಿರಬಹುದು, ಅವರ ಆರೋಗ್ಯ ಕಾಳಜಿ ಎಷ್ಟರಮಟ್ಟಿಗಿತ್ತು ಎಂಬ ಬಗ್ಗೆ ಫ್ಯಾಮಿಲಿ ವೈದ್ಯರಾದ ಡಾ. ರಮಣ ರಾವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    PUNEET

    ಅಪ್ಪು ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೆಳಿದ್ದು ಹೀಗೆ:

    ನಿನ್ನೆ ಬೆಳಗ್ಗೆ ಅಪ್ಪು ಮತ್ತು ಅಶ್ವಿನಿ ಒಟ್ಟಿಗೆ ನಮ್ಮ ಕ್ಲಿನಿಕ್‍ಗೆ ಬಂದರು. ನಾನು ಅಪ್ಪುನನ್ನು ಕ್ಲಿನಿಕ್ ಒಳಗಡೆ ಕರೆದುಕೊಂಡು ವಿಚಾರಿಸಿದೆ. ಆಗ ಅಪ್ಪು, “ನಾನು ಈಗ ತಾನೆ ವರ್ಕೌಟ್ ಮುಗಿಸಿದ್ದೇನೆ, ಬಾಕ್ಸಿಂಗ್ ರೌಂಡ್ ಮುಗಿಸಿದ್ದೇನೆ, ಸ್ಟೀಮ್ ಕೂಡ ತೆಗೆದುಕೊಂಡಿದ್ದೇನೆ. ಆದರೆ ನನಗೆ ಯಾಕೊ ವೀಕ್‍ನೆಸ್ ಅನ್ನಿಸುತ್ತಿದೆ” ಎಂದು ಹೇಳಿದರು. ಅಪ್ಪು ಯಾವತ್ತೂ ನಾನು ವೀಕ್ ಆಗಿದ್ದೇನೆ ಎಂದು ಹೇಳಿರಲಿಲ್ಲ. ಮೊದಲ ಬಾರಿಗೆ ನಿನ್ನೆ ಹಾಗೆ ಹೇಳಿದರು. ಇದನ್ನೂ ಓದಿ: ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    PUNEET RAJKUMAR

    ತಕ್ಷಣ ನಾನು ಅಪ್ಪುವನ್ನು ಪರೀಕ್ಷೆಗೊಳಪಡಿಸಿದಾಗ ತುಂಬಾ ಬೆವರುತ್ತಿದ್ದರು. ಅಪ್ಪು ಯಾಕಿಷ್ಟು ಬೆವರುತ್ತಿದ್ದೀಯಾ ಎಂದು ನಾನು ಕೇಳಿದೆ. ಅದಕ್ಕೆ ಅಪ್ಪು, ನಾನು ಈಗ ತಾನೆ ಜಿಮ್ ಮುಗಿಸಿ ನೇರವಾಗಿ ಕ್ಲಿನಿಕ್‍ಗೆ ಬಂದಿದ್ದೇನೆ. ಹೀಗಾಗಿ ಬೆವರುವುದು ಸಾಮಾನ್ಯ ಎಂದು ಹೇಳಿದರು. ಅದೇಕೊ ನನಗೆ ಅನುಮಾನ ಮೂಡಿತು. ತಕ್ಷಣ ಇಸಿಜಿ ಮಾಡಿಸುವಂತೆ ಸಲಹೆ ನೀಡಿದೆ. ಇಸಿಜಿಯಲ್ಲಿ ಸ್ಟ್ರೇಯ್ನ್ (ದಣಿಯುವುದು) ಬರುತ್ತಿತ್ತು, ಆದರೆ ಹೃದಯಾಘಾತವಾಗಿರಲಿಲ್ಲ. ಒಂದೆರಡು ನಿಮಿಷದಲ್ಲಿ ಪರೀಕ್ಷೆ ಮುಗಿಸಿ ಕೂಡಲೇ ಆಸ್ಪತ್ರೆಗೆ ಹೋಗುವಂತೆ ತಿಳಿಸಿದೆ. ತಕ್ಷಣ ನಾವು ವಿಕ್ರಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಂಡವನ್ನು ಸಿದ್ಧಗೊಳಿಸಿದ್ದೆವು. ಪುನೀತ್ ಆಸ್ಪತ್ರೆ ತಲುಪಿದ ಕೂಡಲೇ ವೈದ್ಯರ ತಂಡ ಸೂಕ್ತ ಚಿಕಿತ್ಸೆಗೆ ಮುಂದಾಗಿತ್ತು.

    PUNEET

    ಇದು ಹೃದಯಾಘಾತದಂತೆ ಕಾಣುತ್ತಿಲ್ಲ. ಹೃದಯಾಘಾತವಾಗಿದ್ದರೆ ನೋವಿರುತ್ತೆ, ಕೆಲವು ಲಕ್ಷಣಗಳಿರುತ್ತವೆ. ಇಸಿಜಿಯಲ್ಲಿ ಹೃದಯಕ್ಕೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ ಗೊತ್ತಾಗುತ್ತೆ. ನನ್ನ ಪ್ರಕಾರ ಇದು ಕಾರ್ಡಿಯಾಕ್ ಅರೆಸ್ಟ್ (ಹೃದಯದ ಬಡಿತವೇ ನಿಲ್ಲುವುದು). ಈ ಸಮಸ್ಯೆ ಎದುರಾದರೆ ಅವರನ್ನು ಬದುಕುಳಿಸುವುದು ತುಂಬಾ ಕಷ್ಟ. ಅಪ್ಪುಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಇದನ್ನೂ ಓದಿ: ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

    ಅಪ್ಪು ಸಾಮಾನ್ಯ ವ್ಯಕ್ತಿಯಲ್ಲ. ದೇಹ ದಂಡನೆ, ವ್ಯಾಯಾಮ, ಆರೋಗ್ಯ ಕಾಳಜಿ ಜಾಸ್ತಿಯೇ ಇತ್ತು. ಆರೋಗ್ಯದ ವಿಚಾರದಲ್ಲಿ ಅವರೆಂದೂ ನಿರ್ಲಕ್ಷ್ಯ ತೋರಿದವರಲ್ಲ. ಅವರಿಗೆ ಇಂತಹ ಸಮಸ್ಯೆ ಇರಬಹುದು ಎಂದು ಶಂಕಿಸಲೂ ಆಗುತ್ತಿರಲಿಲ್ಲ, ಅಷ್ಟು ಆರೋಗ್ಯವಾಗಿದ್ದರು. ಆದರೆ ಈ ಸಮಸ್ಯೆ ದಿಢೀರ್ ಅಂತ ಎದುರಾಗಿದೆ.

    ನಮ್ಮ ಕ್ಲಿನಿಕ್‍ನಲ್ಲಿ ಅವರು ಕುಸಿದು ಬಿದ್ದಿಲ್ಲ. ಇಸಿಜಿಯಲ್ಲಿ ಪರೀಕ್ಷಿಸಿದಾಗ ಹೃದಯದ ಬಡಿತ ಸರಿಯಾಗಿಯೇ ದಾಖಲಾಗಿದೆ. ಪರೀಕ್ಷೆ ನಂತರ ಆತ ನಡೆಯಲು ಕಷ್ಟಪಡುತ್ತಿದ್ದ, ಆಗ ಕಾರಿನಲ್ಲಿ ಕರೆದುಕೊಂಡು ಹೋಗಲು ಸಹಾಯ ಮಾಡಿ ಎಂದು ಸಲಹೆ ನೀಡಿದ್ದೆ. ನನ್ನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದ. ಆದರೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆತನ ಆರೋಗ್ಯದಲ್ಲಿ ತೊಂದರೆಗಳು ಎದುರಾಗುವ ಸೂಚನೆಗಳು ಕಂಡಿದ್ದವು.

    PUNEET FAMILY DOCTOR

    ತಂದೆ ಡಾ. ರಾಜ್‍ಕುಮಾರ್‍ಗೆ ಆದಂತೆಯೇ ಅಪ್ಪುಗೂ ಆಗಿದೆ. ರಾಜ್‍ಕುಮಾರ್ ಅವರು ಸೋಫಾ ಮೇಲೆ ಕುಳಿತು ಚೆನ್ನಾಗಿಯೇ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಗೂ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟರು. ಅವರಿಗೆ ತೊಂದರೆ ಆಗಿರುವುದನ್ನು ತಿಳಿಯುತ್ತಿದ್ದಂತೆ ಮನೆಗೆ ತೆರಳಿ ಚಿಕಿತ್ಸೆ ನೀಡಿದೆವು. ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯ ರಮಣ ರಾವ್ ನೆನಪಿಸಿಕೊಂಡರು.

  • ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ: ಆರಗ ಜ್ಞಾನೇಂದ್ರ

    ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ: ಆರಗ ಜ್ಞಾನೇಂದ್ರ

    – ಈವರೆಗೂ 6 ಲಕ್ಷಕ್ಕೂ ಹೆಚ್ಚು ಜನರಿಂದ ಪುನೀತ್ ಅಂತಿಮ ದರ್ಶನ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅಗಲಿಕೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ಅವರು ಸಾಮಾಜಿಕ ಕಾರ್ಯಕರ್ತ ಮತ್ತು ನಟರಾಗಿದ್ದರು. ಅವರ ನಿಧನ ನಮಗೆ ದೊಡ್ಡ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯೇ ನಟ  ಪುನೀತ್ ಅಂತ್ಯಕ್ರಿಯೆ

    puneeth rajkumar 4 1

    ಇದೇ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಜನ ಸಹಕಾರ ನೀಡಬೇಕು. ನಮ್ಮ ಪೊಲೀಸ್ ತಂಡ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಜನರು ಅಶಾಂತಿ ತರುವ ಕೆಲಸ ಮಾಡಬಾರದು. ಈಗಾಗಲೇ 20 ಸಾವಿರ ಪೊಲೀಸರು ಬೆಂಗಳೂರಿನಲ್ಲಿ ನಿಯೋಜನೆ ಮಾಡಲಾಗಿದೆ. 1,500 ಸಿಬ್ಬಂದಿಯನ್ನು ಜಿಲ್ಲೆಗಳಿಂದ ಕರೆಸಲಾಗಿದೆ. ಎರಡು ಸೆಂಟ್ರಲ್ ಫೋರ್ಸ್ ತರಿಸಲಾಗಿದೆ ಮತ್ತು 50 ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಈವರೆಗೂ 6 ಲಕ್ಷಕ್ಕೂ ಹೆಚ್ಚು ಜನರು ಪುನೀತ್ ಅಂತಿಮ ದರ್ಶನ ಮಾಡಿದ್ದು, ಜನರು ಶಾಂತಿಯುತವಾಗಿ ಇರಬೇಕು ಹಾಗೂ ನಮಗೆ ಸಹಕಾರ ನೀಡಬೇಕು ಎಂದಿದ್ದಾರೆ.

  • ಇಂದು ಸಂಜೆಯೇ ನಟ  ಪುನೀತ್ ಅಂತ್ಯಕ್ರಿಯೆ

    ಇಂದು ಸಂಜೆಯೇ ನಟ  ಪುನೀತ್ ಅಂತ್ಯಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ. ಇದೀಗ ಇಂದು ಸಂಜೆಯೇ ಪುನೀತ್ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟೇಡಿಯಂನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    puneeth rajkumar 2 1

    ಚಂದನವನದ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ನೆಚ್ಚಿನ ನಟನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 3 ಗಂಟೆಯವರಿಗೂ ವ್ಯವಸ್ಥೆಗೊಳಿಸಲಾಗಿದ್ದು, ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ.  ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    puneeth 2

    ಹೀಗಾಗಿ ಕುಟುಂಬಸ್ಥರು 3 ಗಂಟೆಯ ಬಳಿಕ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬರದಂತೆ ಮನವಿ ಮಾಡಿದ್ದಾರೆ. ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

  • ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿತಾರೆಯರು

    ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿತಾರೆಯರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಸ್ಯಾಂಡಲ್‍ವುಡ್ ಸಿನಿಮಾರಂಗವಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.

    FotoJet 2 22

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಇಡೀ ಚಂದನವನ ಸ್ತಬ್ದವಾಗಿದೆ. ಇದು ಕೇವಲ ಕನ್ನಡ ಚಿತ್ರಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಎಂದು ಪರಭಾಷಾ ಸ್ಟಾರ್‌ಗಳು ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

    kamal hassan web 1

    ಡಾ. ರಾಜ್‍ಕುಮಾರ್ ಕುಟುಂಬದೊಂದಿಗೆ ಅಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಪುನೀತ್ ಇಷ್ಟು ಬೇಗ ಹೋಗಿದ್ದು, ಆಘಾತಕಾರಿ, ಅರಗಿಸಿಕೊಳ್ಳಲು ಆಗದಂತಹ ಮತ್ತು ಹೃದಯ ವಿದ್ರಾವಕ ಸುದ್ದಿಯಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ನನ್ನ ಸಂತಾಪ. ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಇದು ಒಂದು ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಎಲ್ಲರಿಗೂ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

    ಪುನೀತ್‍ಗೆ ಬಹಳ ಅಚ್ಚುಮೆಚ್ಚಿನ ಗೆಳೆಯರಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಳ್ಳುವುದರ ಜೊತೆಗೆ, ಸಂಪೂರ್ಣವಾಗಿ ಶಾಕ್ ಆಗಿದೆ. ಪದಗಳಲ್ಲಿ ನಷ್ಟವನ್ನು ಹೇಳಲಾಗುವುದಿಲ್ಲ. ನನ್ನ ಬಹುಕಾಲದ ಗೆಳೆಯ ಪುನೀತ್ ಇನ್ನಿಲ್ಲ. ನಾವು ಪರಸ್ಪರ ಗೌರವ ಮತ್ತು ಪ್ರೀತಿ ಹೊಂದಿದ್ದೇವೆ. ಈಗಲೂ ನಂಬಲು ಆಗುತ್ತಿಲ್ಲ. ಅವರ ವಿನಮ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಹಲವಾರು ಸಮಾರಂಭಗಳಲ್ಲಿ ಪುನೀತ್ ಅವರ ಡ್ಯಾನ್ಸ್ ಎಂದರೆ ನನಗೆ ಬಹಳ ಇಷ್ಟ ಎಂದು ಅಲ್ಲು ಅರ್ಜುನ್ ಹೇಳಿದ್ದರು. ಇದನ್ನೂ ಓದಿ: ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ

    ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಪುನೀತ್ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ, ಎದೆ ಗುಂದಿದೆ. ನೀವು ಇಷ್ಟು ಬೇಗ ಹೋಗಿದ್ದೀರಾ ಎಂದು ನಂಬಲು ಆಗುತ್ತಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಪುನೀತ್ ಹಾಗೂ ಎನ್‍ಟಿಆರ್ ಅತ್ಯುತ್ತಮ ಗೆಳೆಯರಾಗಿದ್ದು, ಪುನೀತ್ ಅಭಿನಯದ ಚಕ್ರವ್ಯೂಹ ಸಿನಿಮಾದಲ್ಲಿ ಅಪ್ಪುವಿಗಾಗಿ ಗೆಳೆಯ, ಗೆಳೆಯ ಹಾಡನ್ನು ಹಾಡಿದ್ದರು.

    ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು, ಪುನೀತ್ ರಾಜ್‍ಕುಮಾರ್ ಅವರ ನಿಧನದ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಸಂವಹನ ನಡೆಸಿದ ಅತ್ಯಂತ ವಿಶಾಲ ಹೃದಯದ ವ್ಯಕ್ತಿಗಳಲ್ಲಿ ಪುನೀತ್ ಒಬ್ಬರು. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಮತ್ತೊಂದೆಡೆ ಕಾಲಿವುಡ್ ನಟ ಕಮಲ್ ಹಾಸನ್ ಅವರು ನನ್ನ ಪ್ರೀತಿಯ ಕಿರಿಯ ಸಹೋದರ ಪುನೀತ್ ರಾಜ್‍ಕುಮಾರ್ ಅವರ ನಿಧನ ಅತ್ಯಂತ ಅನಿರೀಕ್ಷಿತವಾಗಿತ್ತು. ನಾವು ಪರಸ್ಪರ ಪ್ರೀತಿ ಹೊಂದಿದ್ದೇವೆ. ಅವರ ಕುಟುಂಬಕ್ಕೆ ಮತ್ತು ಕರ್ನಾಟಕದಲ್ಲಿರುವ ಅವರ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಕಾಲಿವುಡ್ ನಟ ಸೂರ್ಯ ಅವರು, ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆತ್ಮೀಯ ಪುನೀತ್ ರಾಜ್‍ಕುಮಾರ್ ಅವರು, ನನ್ನ ಸಹೋದರ ಮತ್ತು ಸಹ ಪ್ರಯಾಣಿಕ. ನಿಮ್ಮ ಪ್ರೀತಿಯ ಸ್ನೇಹ ಮತ್ತು ಸಹೋದರತ್ವವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್ ಅವರು, ನನ್ನ ಸ್ನೇಹಿತ ಪುನೀತ್ ನನ್ನ ಹೃದಯ ಹೊಡೆದು ಹೋಯಿತು. ನನ್ನ ಸ್ನೇಹಿತ ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ನೀವು ಉತ್ತಮ ಸ್ಥಳದಲ್ಲಿರುವಿರಿ ಎಂದು ಭಾವಿಸುತ್ತೇನೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಸಹೋದರ ಪುನೀತ್ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪುನೀತ್ ಜೊತೆ ಯುವರತ್ನ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ನಟಿ ಸಯೀಶಾ ಅವರು, ಪುನೀತ್ ಅವರು ನನ್ನ ಸ್ನೇಹಿತ, ನನ್ನ ಕುಟುಂಬ, ರತ್ನ. ನನಗೆ ಆಗುತ್ತಿರುವ ದುಃಖವನ್ನು ವಿವರಿಸಲು ನನ್ನಲ್ಲಿ ಪದಗಳಲ್ಲ. ಇದು ತುಂಬಲಾರದ ನಷ್ಟ. ಅವರ ಪತ್ನಿ ಅಶ್ವಿನಿ ಅಕ್ಕ ಮತ್ತು ಅವರ ಪುತ್ರಿಯರಿಗೆ ನನ್ನ ಆಳವಾದ ಸಂತಾಪಗಳು. ಅವರ ಕುಟುಂಬ, ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ನನ್ನ ಹೃದಯವು ಒಂದಾಗಿದೆ. ಪುನೀತ್ ಅವರೇ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಿದ ಗೌರವ ನನಗಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಯುವರತ್ನ ಪುನೀತ್ ಅಭಿನಯಿಸಿದ ಕೊನೆಯ ಚಿತ್ರವಾಗಿದೆ.

     

    View this post on Instagram

     

    A post shared by Sayyeshaa (@sayyeshaa)

    ಪವರ್ ಸಿನಿಮಾದಲ್ಲಿ ಪುನೀತ್ ಜೊತೆ ಅಭಿನಯಿಸಿದ್ದ ನಟಿ ತ್ರಿಷಾ ಅವರು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹೇಳಲು ನಿರಾಕರಿಸುತ್ತೇನೆ ಎಂದು ಬರೆದುಕೊಳ್ಳುವುದರ ಜೊತೆಗೆ ಹೊಡೆದು ಹೋಗಿರುವ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಪವರ್ ಸಿನಿಮಾದ ನಂತರ ತ್ರಿಷಾ ಪುನೀತ್ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಸಹಿಹಾಕಿದ್ದರು.

    trisha

    ಪುನೀತ್ ಜೊತೆ ಮಿಲನ ಹಾಗೂ ಪೃಥ್ವಿ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಪಾರ್ವತಿ ಮೆನನ್ ಅವರು, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಇದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

    ಬಿಂದಾಸ್ ಸಿನಿಮಾದಲ್ಲಿ ಪುನೀತ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ ನಟಿ ಹನ್ಸಿಕಾ ಮೊಟ್ವಾನಿ ಅವರು ಕೂಡ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದು ಹೃದಯ ವಿದ್ರಾವಕ. ಇದು ನಿಜವಾಗದಿರಲಿ ಎಂದು ನಾನು ಭಾವಿಸುತ್ತೇನೆ. ಪುನೀತ್ ರಾಜ್ ಕುಮಾರ್ ಅವರು ಇನ್ನೂ ಯುವಕರಾಗಿದ್ದಾರೆ ಎಂದು ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಬರೆದುಕೊಂಡಿದ್ದಾರೆ.

    puneeth 1

  • ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

    ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

    ಬೆಂಗಳೂರು: ಹೃದಯಾಘಾತದಿಂದ ನಟ ಪುನೀತ್ ರಾಜ್‍ಕುಮಾರ್ ನಿಧನರಾದ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಪುನೀತ್ ನಿಧನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದಲ್ಲಿ ತನ್ನ ಮಾರ್ಗದರ್ಶಕ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿರುವ ನಟ ದಾನಿಶ್ ಸೇಠ್ ಅವರು, ಪುನೀತ್ ರಾಜ್‍ಕುಮಾರ್ ಅವರ ಕೊನೆಗೂ ಈಡೇರದ ಒಂದು ಆಸೆಯ ಕುರಿತು ಇನ್‍ಸ್ಟಾ ಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    DANISH SAIT

    “ನಾನು ಛಿದ್ರಗೊಂಡಿದ್ದೇನೆ, ಹೃದಯ ಚೂರಾಗಿ ಹೋಗಿದೆ. ನನ್ನ ಬಾಯಲ್ಲಿ ಪದಗಳೇ ಹೊರಡದಾಗಿದೆ” ಎಂದು ದಾನಿಶ್ ನೋವಿನಿಂದ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    INSTA

    ನನ್ನ ಪುನೀತ್ ಅಣ್ಣ ಇನ್ನಿಲ್ಲ, ಆತ ವಿಶ್ವದಲ್ಲೇ ಒಬ್ಬ ಅತ್ಯುತ್ತಮ ಮಾನವೀಯ ವ್ಯಕ್ತಿ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: 30 ವರ್ಷದ ಒಡನಾಟ ಹೇಗೆ ಮರೆಯಲಿ: ಜಗ್ಗೇಶ್ ಕಣ್ಣೀರು

    ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್‍ನ ಬೆಂಬಲದೊಂದಿಗೆ ಫ್ರೆಂಚ್ ಬಿರಿಯಾನಿ ಕಳೆದ ವರ್ಷ ಜುಲೈನಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಯಿತು. ಪುನೀತ್ ರಾಜ್‍ಕುಮಾರ್ ಒಮ್ಮೆ ಜೆಫ್ ಬೆಜೋಸ್ ಜೊತೆ ಅಮೆಜಾನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದು ಸಿನಿಮಾ ತಾರೆಯರ ಗ್ಯಾಲಕ್ಸಿಯೊಂದಿಗಿನ ಕಾರ್ಯಕ್ರಮವಾಗಿದ್ದರಿಂದ ಎಲ್ಲರೂ ಪರಸ್ಪರ ಭೇಟಿಯಾಗುವುದು ಹಾಗೂ ಜೆಫ್ ಬೆಜೋಸ್ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದರು.

    PANKAJ TRIPATHI

    ಆದರೆ, ಆ ಸ್ಥಳದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಆಗ ಅಮೆಜಾನ್ ಪ್ರೈಮ್ ವಿಡಿಯೊ ತಂಡ ಪುನೀತ್ ಅವರ ಬಳಿಗೆ ಹೋಗಿ, “ಅಪ್ಪು, ನೀವು ಯಾಕೆ ಯಾರೊಂದಿಗೂ ಫೋಟೊ ತೆಗೆದುಕೊಳ್ಳುತ್ತಿಲ್ಲ? ಎಲ್ಲರಿಂದಲೂ ದೂರ ಹೋಗಿ ಸುಮ್ಮನೆ ಯಾಕೆ ನಿಂತಿದ್ದೀರಿ? ಯಾರ ಹೆಸರನ್ನಾದರೂ ಹೇಳಿ ಅವರನ್ನು ನಿಮ್ಮ ಬಳಿಗೆ ಫೋಟೊ ತೆಗೆಸಿಕೊಳ್ಳಲು ಕರೆತರುತ್ತೇವೆ” ಎಂದು ಕೇಳಿತಂತೆ. ಆಗ ಪುನೀತ್ ಅವರು ನಸು ನಗುತ್ತಲೇ, “ನಿಜವಾಗಿಯೂ? ನಾನು ನಟ ಪಂಕಜ್ ತ್ರಿಪಾಠಿ ಅವರನ್ನು ಭೇಟಿಯಾಗಬೇಕು” ಎಂದು ಮನದಾಸೆ ವ್ಯಕ್ತಪಡಿಸಿದ್ದರಂತೆ.  ಇದನ್ನೂ ಓದಿ: ಅಪ್ಪು ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ: ರಮ್ಯಾ

    ಸಿನಿಮಾರಂಗದಲ್ಲಿ ನಟ ಪಂಕಜ್ ತ್ರಿಪಾಠಿ ಇಂದು ಎಲ್ಲರಿಗೂ ಚಿರಪರಿಚಿತ. ಆದರೆ 2012ರಲ್ಲಿ ತೆರೆಕಂಡ “ಗ್ಯಾಂಗ್ಸ್ ಆಫ್ ವಸ್ಸೆಯ್‍ಪುರ” ಸಿನಿಮಾಗೂ ಮುಂಚೆ ತಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ್ದರು ಎಂಬುದು ಪುನೀತ್ ಅವರ ಅಭಿಪ್ರಾಯವಾಗಿತ್ತು.

    PUNEET

    “ನನ್ನ ಅಪ್ಪು ಅಣ್ಣ ಯಾವಾಗಲೂ ಕಿಕ್ಕಿರಿದ ಕೋಣೆಯಲ್ಲಿ ಪ್ರತಿಭೆಯನ್ನು ಗುರುತಿಸುತ್ತಿದ್ದರು” ಸೇಠ್ ಸ್ಮರಿಸಿದ್ದಾರೆ.

  • 30 ವರ್ಷದ ಒಡನಾಟ ಹೇಗೆ ಮರೆಯಲಿ: ಜಗ್ಗೇಶ್ ಕಣ್ಣೀರು

    30 ವರ್ಷದ ಒಡನಾಟ ಹೇಗೆ ಮರೆಯಲಿ: ಜಗ್ಗೇಶ್ ಕಣ್ಣೀರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ನಟ ಜಗ್ಗೇಶ್ ಭಾವನಾತ್ಮಕ ಸಾಲುಗಳನ್ನು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    Puneet Jaggesh

    ಪುನೀತ್ ನಿನ್ನ 30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ. ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ? ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ? ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ? ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ ಎಂದು ಪ್ರಶ್ನೆ ಮಾಡುತ್ತಾ ಜಗ್ಗೆಶ್ ಅವರು ಅಪ್ಪು ಇನ್ನಿಲ್ಲ ಎನ್ನುವ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ? ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ, ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ? ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ? ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಬೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೇ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ. ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ ಲವ್‍ಯೂ ಚಿನ್ನ ಎಂದು ಭಾರದ ಮನಸ್ಸಿನಿಂದ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ.

    ಚಂದನವನದ ಚಂದದ ನಟ ಪುನೀತ್‍ರಾಜ್ ಕುಮಾರ್ (46) ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ಸ್ಯಾಂಡ್‍ವುಡ್‍ನ ಅನೇಕ ಹಿರಿಯ ಕಿರಿಯ ಕಲಾವಿದರು ಅಪ್ಪು ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಗೆ ಕಂಬನಿ ಮೀಡಿಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನನ್ನು ನೋಡಲು ಬೇಗ ಹೋಗಿದ್ದಾನೆ: ರಾಘವೇಂದ್ರ ರಾಜ್ ಕುಮಾರ್

  • ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಮತ್ತೊಂದು ಹೊಸ ಸಿನಿಮಾಕ್ಕಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೈ ಜೋಡಿಸಲಿದ್ದಾರೆ.

    SANTHOSH medium

    2017ರಲ್ಲಿ ತೆರೆಕಂಡ ಪುನೀತ್ ಅಭಿನಯದ ರಾಜಕುಮಾರ ಸಿನಿಮಾಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಸದ್ದು ಮಾಡುವುದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರ ಮನ ಗೆದ್ದಿತ್ತು. ನಂತರ ಯುವರತ್ನ ಸಿನಿಮಾದ ಮೂಲಕ ಸಂತೋಷ್ ಆನಂದ್ ರಾಮ್ ಪುನೀತ್‍ಗೆ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿದ್ದರು. ವಿಶೇಷವೆಂದರೆ ಈ ಎರಡು ಸಿನಿಮಾಗಳು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿ ನಿರ್ಮಾಣವಾಗಿತ್ತು.

    puneeth 2

    ಇದೀಗ  ಸಂತೋಷ್ ಆನಂದ್ ರಾಮ್, ಪುನೀತ್ ಮತ್ತು ಹೊಂಬಾಳೆ ಫಿಲ್ಮ್ ಕಾಂಬಿನೇಷನ್‍ನಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರುತ್ತಿರುವ ಬಗ್ಗೆ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ

    yuvaratna

    ಈ ಕುರಿತಂತೆ ಸಂತೋಷ್ ಆನಂದ್ ರಾಮ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುನೀತ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪುನೀತ್ ಹಾಗೂ ನನ್ನ ಕಾಂಬಿನೇಷನ್‍ನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಯಾವಾಗಲೂ ಕೇಳುತ್ತಿದ್ದರು. ಮುಂದಿನ ವರ್ಷ ನಮ್ಮ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೊನೆಯಲ್ಲಿ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ನಿಮ್ಮ ಅಭಿಮಾನ ನಮಗೆ ಶ್ರೀ ರಕ್ಷೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ರಾಜಕುಮಾರ ಹಾಗೂ ಯುವರತ್ನ ಸಿನಿಮಾದ ಮೂಲಕ ಸಕ್ಸಸ್ ಕಂಡಿದ್ದ ಈ ತಂಡ ಇದೀಗ ಮತ್ತೊಮ್ಮೆ ಒಂದಾಗಿ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಯುಪಿ ಸಿಎಂ ಆಗಬೇಕಾ, ಬೇಡ್ವಾ ಅಂತ ಪ್ರಿಯಾಂಕಾ ಗಾಂಧಿ ನಿರ್ಧರಿಸ್ತಾರೆ: ಸಲ್ಮಾನ್ ಖುರ್ಷಿದ್

     

  • ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

    ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

    ಬೆಂಗಳೂರು: ಅಪ್ಪು ನೀವು ಫಾರ್ಮಲ್ ಎಜುಕೇಶನ್ ಬಗ್ಗೆ ಕಲಿಯಲಿಲ್ಲ ಅಂದರೂ ಪರವಾಗಿಲ್ಲ. ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ. ಜ್ಞಾನ ಬಹಳ ಮುಖ್ಯ. ಜ್ಞಾನದಿಂದಲೇ ವಿದ್ಯೆ. ನೀವೊಬ್ಬರು ಐಕಾನ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ್ದಾರೆ.

    puneeth rajkumar 2

    ನಗರದ ಖಾಸಗಿ ಹೋಟೆಲ್‍ನಲ್ಲಿ ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್‍ಕುಮಾರ್ ಲರ್ನಿಂಗ್ ಆಪ್‍ನನ್ನು ಲೋಕಾರ್ಪಣೆ ಮಾಡಿ ಬಸವರಾಜ್ ಬೊಮ್ಮಾಯಿ ಮಾತನಾಡಿದರು.

    ಪುನೀತ್ ರಾಜ್‌ಕುಮಾರ್‌ರವರು ಈ ಆ್ಯಪ್‍ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಿನ್ನ ರೆಕ್ಕೆ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಮಾನಸ ಸರೋವರದಲ್ಲಿ ನಿಮ್ಮ ಪರಮಹಂಸಕ್ಕೆ, ನಿಮ್ಮ ಆ್ಯಪ್‍ಗೆ ನಮ್ಮ ಅಪ್ಪಾಜಿ, ನಮ್ಮ ಅಮ್ಮ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

    rajkumar 1537854958

    ಡಾ. ರಾಜ್ ಕುಮಾರ್ ಎಂದರೆ ಒಬ್ಬ ಸಾಧಕ. ಸ್ವಾಮಿ ವಿವೇಕನಂದರವರು ಒಬ್ಬ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಹೇಳಿದ್ದಾರೆ. ಒಬ್ಬ ಸಾಧಕ ಸಾವಿನ ನಂತರವೂ ಬದುಕಬಲ್ಲ. ನಾವು ಎಂತಹ ಶ್ರೀಮಂತ ಬದುಕನ್ನು ಬದುಕಬೇಕು ಮತ್ತು ಎಂತಹ ಮೌಲಿಕ ಬದುಕನ್ನು ಬದುಕಬೇಕು ಎಂದರೆ ಸಾವಿನ ನಂತರವೂ ನಮ್ಮ ಬದುಕಿರಬೇಕು. ಜನ ಅದನ್ನು ನೆನಪಿಸಿಕೊಳ್ಳಬೇಕು. ಅಂತವರನ್ನು ಸಾಧಕರು ಎಂದು ಕರೆಯುತ್ತಾರೆ. ಅಂತಹ ಸಾಧನೆ ಮಾಡಿರುವಂತಹ ಸ್ಟಾರ್ ಅಂದರೆ ಆಕಾಶದಲ್ಲಿರುವಂತಹ ನಕ್ಷತ್ರ ಡಾ.ರಾಜ್‍ಕುಮಾರ್ ಎಂದು ಹೊಗಳಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    dr rajkumar

    ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು. ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ. ಮಿಲಿಯನ್ ಗಟ್ಟಲೇ ಮಿಂಚುತ್ತಿರುವ ತಾರೆಗಳ ನಡುವೆ ಹೆಚ್ಚು ಮಿನುಗುವ ತಾರೆಯೇ ಡಾ. ರಾಜ್ ಕುಮಾರ್. ಅವರ ನುಡಿ, ಮೌಲ್ಯ, ಸರಳತನ ನಾವೆಲ್ಲರೂ ಕಲಿಯಬೇಕು. ಅದರಲ್ಲಿಯೂ ಅಧಿಕಾರದಲ್ಲಿರುವವರು, ಬಹಳಷ್ಟು ಜನಪ್ರಿಯರಾಗಿರುವವರು ಯಾವ ರೀತಿ ಸರಳವಾಗಿರಬೇಕೆಂದು ಹಾಗೂ ಮಾನವೀಯತೆಯನ್ನು ಕಲಿಯಬೇಕು. ಡಾ ರಾಜ್ ಕುಮಾರ್‍ರವರು ಎಷ್ಟು ಎತ್ತರಕ್ಕೆ ಸ್ಟಾರ್ ಆಗಿದ್ದಾರೋ, ಅವರಷ್ಟು ವಿಶಾಲಹೃದಯತೆ ಯಾರಿಗೂ ಇರಲು ಸಾಧ್ಯವಿಲ್ಲ ಅಂತ ಭಾವಿಸುತ್ತೇನೆ ಎಂದಿದ್ದಾರೆ.

    parvathamm

    ಒಂದು ಚಿಕ್ಕ ಮಗುವಿನಲ್ಲಿರುವ ಮುಗ್ದತೆ ರಾಜ್‌ಕುಮಾರ್‌ರವರಲ್ಲಿ ಇತ್ತು. ಒಂದು ಮಗುವಿನಲ್ಲಿ ತಿಳಿದುಕೊಳ್ಳುವಂತಹ ಹಂಬಲವಿರುತ್ತದೆ. ಆ ಹಂಬಲಕ್ಕೆ ನಾವು ಜ್ಞಾನ, ಅರ್ಥವನ್ನು ನೀಡಬೇಕು. ರಾಜ್‌ಕುಮಾರ್‌ರವರಿಗೆ ಪ್ರತಿಯೊಂದನ್ನು ಕಲಿಯುವ ಹಂಬಲ ಇತ್ತು. ಆದರೆ ಅವರಲ್ಲಿ ಮುಗ್ಧತೆ ಎಂದು ಕೂಡ ಕಡಿಮೆಯಾಗಲಿಲ್ಲ. ಅವರೊಬ್ಬರು ಸ್ಫೂರ್ತಿದಾಯಕ ಮನುಷ್ಯ. ತದ್ವಿರುದ್ಧವಾದಂತಹ ಗುಣಗಳನ್ನು ಕಾಪಾಡಿಕೊಂಡು ಯಶಸ್ವಿಯಾಗುವಂತಹದು ಬಹಳ ಕಷ್ಟ. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟ. ಯಾವ ವ್ಯಕ್ತಿ ಎಲ್ಲವನ್ನು ಕಲಿಯುವ ಸಾಮರ್ಥ್ಯ ಹಾಗೂ ಮುಗ್ಧತೆಯನ್ನು ಹೊಂದಿರುವುದು ಬಹಳ ಕಷ್ಟ. ಆದರೆ ಅದನ್ನು ಅವರು ಸಾಧಿಸಿದ್ದಾರೆ. ಈ ಮಾತಗಳನ್ನು ನಾನು ಎಲ್ಲ ಸಿನಿಮಾ ತಾರೆಯರಿಗೆ, ಎಲ್ಲಾ ನಾಯಕರಿಗೆ ಹೇಳಲು ಸಾಧ್ಯವಿಲ್ಲ. ಈ ಗುಣ ಆತ್ಮ ಶುದ್ಧಿ ಇದ್ದಾಗ ಮಾತ್ರ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ

    ರಾಘಣ್ಣ ನನ್ನ ಆತ್ಮೀಯರು, ಪಾರ್ವತಮ್ಮನವರಿಗೂ ನನ್ನ ಮೇಲೆ ಬಹಳ ಪ್ರೀತಿ, ಅವರು ಒಂದು ದಿನ ನನಗೆ ಗ್ಯಾಸ್ ಕನೆಕ್ಷನ್ ಕಡಿಮೆಯಾಗಿದೆ ಏನಾದರೂ ಮಾಡಿಕೊಡಿಸಲು ಆಗುತ್ತಾ ಎಂದು ನನ್ನ ಬಳಿ ಕೇಳಿದ್ದರು. ಆಗ ಎಂಪಿ ಎಲೆಕ್ಷನ್ ನಡೆಯುತ್ತಿತ್ತು. ಆಗ ನಮ್ಮ ತಂದೆಯ ಕೋಟಾದಲ್ಲಿ ಒಂದು ಗ್ಯಾಸ್ ಕನೆಕ್ಷನ್ ಕೊಡಿಸಿದ್ದೆ. ಆ ಗ್ಯಾಸ್ ಕನೆಕ್ಷನ್ ಕೊಡಿಸಿದ ಎರಡು ದಿನಕ್ಕೆ ಪಾರ್ವತಮ್ಮನವರು ನೀನು ಕೊಡಿಸಿದ ಗ್ಯಾಸ್‍ನಲ್ಲಿ ಅಡುಗೆ ಮಾಡಿದ್ದೇನೆ ನಮ್ಮ ಮನೆಗೆ ಊಟಕ್ಕೆ ಬರಬೇಕು ಎಂದಿದ್ದರು. ಜೊತೆಗೆ ಹುಬ್ಬಳ್ಳಿಯಲ್ಲಿರುವ ಆಫೀಸ್ ನೋಡಿಕೊಳ್ಳಲು ರಾಘವೇಂದ್ರ ರಾಜ್‍ಕುಮಾರ್ ಹುಬ್ಬಳ್ಳಿಗೆ ಬರುತ್ತಾರೆ. ನೀವು ಅವರನ್ನು ನೋಡಿಕೊಳ್ಳಬೇಕು ಎಂದಿದ್ದರು. ಹಾಗೆಯೇ ಅಪ್ಪು ಹಾಗೂ ಶಿವಣ್ಣ ಕೂಡ ಬಹಳ ಆತ್ಮೀಯರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

  • ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರದ ಟೈಟಲ್ ಘೋಷಣೆಯಾಗಿದೆ. ಟೈಟಲ್ ಜೊತೆ ಚಿತ್ರತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ. ವಿಶೇಷ ಶೀರ್ಷಿಕೆಯಿಂದಲೇ ಗಾಂಧಿನಗರದಲ್ಲಿ ದ್ವಿತ್ವ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ ಟೈಟಲ್ ಬಗೆಗಿನ ಕುತೂಹಲ ಹೆಚ್ಚಾಗಿದೆ.

    dvitva 1 medium

    ದ್ವಿತ್ವ ಅಂದ್ರೆ ಎರಡು ಎಂದರ್ಥ. ದ್ವಿ ಪಾತ್ರದಲ್ಲಿ ಅಂದ್ರೆ ಲೂಸಿಯಾ ರೀತಿಯ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಆರಂಭಗೊಂಡಿವೆ. ಚಿತ್ರದ ಡ್ಯೂಯಲ್ ಪರ್ಸನಾಲಿಟಿಯ ಸುಳಿವು ನೀಡುತ್ತಿರುವ ಫಸ್ಟ್ ಲುಕ್ ಈ ಚರ್ಚೆಗಳಿಗೆ ಕಾರಣ. ಸೈಕಲಾಜಿಕಲ್ ಥ್ರಿಲ್ ಕಥೆಯನ್ನು ದ್ವಿತ್ವ ಹೊಂದಿದೆ. ಈ ಹಿಂದೆ ಲೂಸಿಯಾ ಮತ್ತು ಯೂಟರ್ನ್ ಎಂಬ ಅದ್ಭುತ್ ಚಿತ್ರಗಳನ್ನ ನೀಡಿದ ಪವನ್ ಕುಮಾರ್ ನಿರ್ದೇಶನದಲ್ಲಿಯೇ ದ್ವಿತ್ವ ಮೂಡಿ ಬರಲಿದೆ.

    ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿರಲಿದೆ. ಇದೇ ಸೆಪ್ಟೆಂಬರ್ ನಲ್ಲಿ ದ್ವಿತ್ವ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.