Sunday, 19th August 2018

Recent News

4 days ago

ಸೇನೆ ಸೇರಲು ಆಗದಿದ್ದರೂ ದೇಶ ಸೇವೆ ಮಾಡ್ತಿದ್ದಾರೆ ಹುಬ್ಬಳ್ಳಿಯ ಡಾ.ರಾಮಚಂದ್ರ

ಹುಬ್ಬಳ್ಳಿ: ಸೇನೆಗೆ ಸೇರಬೇಕು, ದೇಶ ಕಾಯಬೇಕು ಅನ್ನೋ ಆಸೆ ಹೊಂದಿದ್ದವರಿಗೆ ಅಪಘಾತವಾಗಿ ಮನೆ ಸೇರುವಂತಾಯ್ತು. ಆದರೆ, ಸೇನೆಗೆ ಸೇರಲಿಲ್ಲ ಅನ್ನೋ ಕೊರಗನ್ನ ಯೋಧರ ಸೇವೆ ಮೂಲಕ ಪರೋಕ್ಷವಾಗಿ ದೇಶ ಸೇವೆ ಮಾಡ್ತಿದ್ದಾರೆ ಪಬ್ಲಿಕ್ ಹೀರೋ ಧಾರವಾಡ ಡಾ. ರಾಮಚಂದ್ರ ಕಾರಟಗಿ. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ರಾಮಚಂದ್ರ ಅವರು, ಮಾನಸಿಕ ಅಸ್ವಸ್ಥರು ಮತ್ತು ವಯೋವೃದ್ಧರ ಜೊತೆಯಲ್ಲಿ ನಗುಮೊಗದೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸೇನೆಗೆ ಸೇರಬೇಕು ಎನ್ನುವ ಕನಸು ಕಂಡವರು. ಆದ್ರೆ ಕಾಲಿನ ಮೂಳೆ ಮುರಿದು ಸರ್ಜರಿ ಆದ ಕಾರಣ […]

6 days ago

ಏಡ್ಸ್ ಬಾಧಿತ ಮಕ್ಕಳಿಗೂ ಅಭಯ ನೀಡ್ತಿರೋ ರೇಣುಕಾ ಭೋಸಲೆ ಇವತ್ತಿನ ಪಬ್ಲಿಕ್ ಹೀರೋ

-ದಿಕ್ಕು ಕಾಣದವರಿಗೆ ದಾರಿದೀಪ ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಿಸುವ ನಿರುದ್ಯೋಗಿ, ಅನಾಥ, ವಿಧವೆಯರಿತೆ ಅನ್ನದಾತೆ ರೇಣುಕಾ ಭೋಸಲೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ಬೆಳಗಾವಿಯ ಇವರು ಸ್ವಾವಲಂಬಿಗಳಾಗಿ ಬದುಕೋದು ಹೇಗೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಬೆಳಗಾವಿಯ ಕಣಬಗಿರ್ ನಿವಾಸಿಯಾಗಿರುವ ರೇಣುಕಾ ಅವರ ಪತಿ ಪಾಶ್ರ್ವವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದ ಕುಟುಂಬದ ನೊಗ ರೇಣುಕಾ ಹೆಗಲಿಗೆ...

ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

2 weeks ago

ಗದಗ: ಸರ್ಕಾರಿ ಕೆಲಸ ತಿಂಗಳಿಗೆ ಸಂಬಳ ಎಣಿಸಿಕೊಂಡು ಮನೆಗೆ ಹೋಗೋವ್ರೇ ಜಾಸ್ತಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ರೋಣಾ ತಾಲೂಕಿನ ಕಳಕಾಪುರದ ಮೇಷ್ಟ್ರು ಶರಣಪ್ಪ ಅವರು ತಮ್ಮ ಅರ್ಧ ಸಂಬಳವನ್ನು ವಿದ್ಯಾರ್ಥಿಗಳಿಗಾಗಿ ಖರ್ಚು ಮಾಡ್ತಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ...

ಸರಿಯಾಗಿ ಮಾತು ಬರದೇ ಇದ್ರು ಸ್ನೇಹಿತೆಯ ರಕ್ಷಿಸಿದ ಬಾಲಕರು

2 weeks ago

ಚಿಕ್ಕಬಳ್ಳಾಪುರ: ಸರಿಯಾಗಿ ಮಾತು ಬಾರದ 6 ವರ್ಷದ ಬಾಲಕರಿಬ್ಬರು ಸಂಪ್‍ಗೆ ಬಿದ್ದು ಸಾವಿನಂಚಿನಲ್ಲಿದ್ದ 5 ವರ್ಷದ ಸ್ನೇಹಿತೆಯನ್ನ ರಕ್ಷಿಸಿದ್ದಾರೆ. ಈ ಇಬ್ಬರು ಪುಟಾಣಿಗಳೇ ನಮ್ಮ ಇವತ್ತಿನ ಪಬ್ಲಿಕ್ ಹೀರೋಗಳು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ನಿವಾಸಿಗಳಾದ ಐದು-ಐದೂವರೆ ವರ್ಷದವರಾದ ಸಾತ್ವಿಕ್...

ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

2 weeks ago

ತುಮಕೂರು: ಎಂಜಿನಿಯರ್, ಡಾಕ್ಟರ್ ಆಗಿ ಚೆನ್ನಾಗಿ ಸಂಪಾದನೆ ಮಾಡ್ಬೇಕು. ಲೈಫನ್ನ ಎಂಜಾಯ್ ಮಾಡ್ಬೇಕು. ಮಕ್ಕಳು ಮೊಮ್ಮಕ್ಕಳಿಗೂ ಕೂಡಿಡಬೇಕು ಅಂತಲೇ ಎಲ್ಲರ ಕನಸು ಕಾಣ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ.ಪ್ರಭಾಕರ್ ರೆಡ್ಡಿ ಅವರು ಮಾತ್ರ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ದಾನ...

ಕಡಿಮೆ ನೀರು, ಹೆಚ್ಚು ಆದಾಯ- ಇಸ್ರೇಲ್ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ್ರು ಚಿಕ್ಕೋಡಿಯ ಅಶೋಕ ಪಾಟೀಲ

3 weeks ago

ಚಿಕ್ಕೋಡಿ: ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕನಸು. ರಾಜ್ಯದಲ್ಲಿ ಈ ಪದ್ಧತಿ ಅಳವಡಿಸಲು ಪೈಲಟ್ ಯೋಜನೆಗೆ ಸರ್ಕಾರ ಮುಂದಾಗಿದೆ. ಆದ್ರೆ ಇದಕ್ಕೆ ಮೊದಲೇ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹುಕ್ಕೇರಿ ತಾಲೂಕಿನ ಬೆಣವಾಡ ರೈತ ಅಶೋಕ ಪಾಟೀಲರು...

ಪಬ್ಲಿಕ್ ಹೀರೋ ಆಗಿದ್ದ ಅನಿರುದ್ಧ್ ಶ್ರವಣ್ ಚಿಕ್ಕಬಳ್ಳಾಪುರದ ಹೊಸ ಜಿಲ್ಲಾಧಿಕಾರಿ

3 weeks ago

ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅನಿರುದ್ಧ್ ಶ್ರವಣ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅನಿರುದ್ಧ್ ಶ್ರವಣ್ ಅವರು, ಜಿಲ್ಲೆಯ ಸಮಸ್ತ ಅಭಿವೃದ್ಧಿ, ಹಾಗೂ ಪಾರದರ್ಶಕ ಆಡಳಿತ ನಡೆಸಲು ಎಲ್ಲಾ ಕಾನೂನಾತ್ಮಕ ಕ್ರಮಗಳನ್ನ ಕೈಗೊಳ್ಳುವುದಾಗಿ ಭರವಸೆ ನೀಡಿದರು....

ಕೆರೆ ಅಭಿವೃದ್ಧಿಗೆ ಕಂಕಣ ಕಟ್ಟಿನಿಂತ್ರು ದಾವಣಗೆರೆಯ ಬಿಸ್ತುವಳ್ಳಿ ಗ್ರಾಮಸ್ಥರು

4 weeks ago

ದಾವಣಗೆರೆ: ಕೆರೆ ಅಭಿವೃದ್ಧಿಯಾದರೆ ಅಂತರ್ಜಲ ವೃದ್ಧಿಸುತ್ತದೆ. ಆಮೇಲೆ ಇಡೀ ಗ್ರಾಮವೇ ಉದ್ಧಾರ ಆಗುತ್ತೆ. ಇದು ಎಲ್ಲಾ ಕಾಲಕ್ಕೂ ನಿಜವಾದ ಮಾತೇ. ಈ ಮಾತನ್ನ ಸಾಬೀತು ಮಾಡೋಕೆ ಕಂಕಣ ಕಟ್ಟಿರುವ ದಾವಣಗೆರೆಯ ಬಿಸ್ತುವಳ್ಳಿ ಗ್ರಾಮಸ್ಥರೇ ನಮ್ಮ ಪಬ್ಲಿಕ್ ಹೀರೋಗಳಾಗಿದ್ದಾರೆ. ದಾವಣಗೆರೆಯ ಜಗಳೂರು ತಾಲೂಕಿನ...