Wednesday, 18th September 2019

Recent News

6 days ago

ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

ಚಾಮರಾಜನಗರ: ಜಿಲ್ಲೆಯಲ್ಲಿರುವ ಜೈಲಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇಲ್ಲಿನ ಉಪಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ನೋಡಲು ಹಣ ಕೊಡಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚಕೊಟ್ಟರೆ ಮಾತ್ರ ಕೈದಿಗಳನ್ನು ನೋಡಲು ಅವಕಾಶ ನೀಡಲಾಗುತ್ತೆ. ಇಲ್ಲಿನ ಜೈಲಧಿಕಾರಿಗಳು ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಾರೆ. ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುವ ದೃಶ್ಯಗಳು ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿವೆ. ಈ ಉಪಕಾರಾಗೃಹದಲ್ಲಿ 125ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು ಪ್ರತಿ ದಿನ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಉಪಕಾರಾಗೃಹದಲ್ಲಿ ಸಿಸಿ.ಕ್ಯಾಮೆರಾಗಳನ್ನು ಅಳವಡಿಸಿದ್ದರೂ ರಾಜಾರೋಷವಾಗಿ ಹಣ […]

1 month ago

ಸಂಪುಟ ವಿಸ್ತರಣೆ ವಿಳಂಬ – ಜೈಲು ಹಕ್ಕಿಗಳಿಗೆ ಇಲ್ಲ ಬಿಡುಗಡೆ ಭಾಗ್ಯ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ. ಸನ್ನಡತೆ ಆಧಾರದ ಮೇಲೆ ಆಗಸ್ಟ್ 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಸುಮಾರು 72ಕ್ಕೂ ಹೆಚ್ಚು ಖೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ. ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ...

ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

2 months ago

ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್...

ಹುಬ್ಬಳ್ಳಿಯ ಸಬ್‍ಜೈಲಿನ ಎದುರೇ ಆರ್ಭಟಿಸಿದ ಲಾಂಗು, ಮಚ್ಚು, ತಲ್ವಾರ್

3 months ago

ಹುಬ್ಬಳ್ಳಿ: ಹಾಡಹಗಲೇ ಹುಬ್ಬಳ್ಳಿಯ ಸಬ್ ಜೈಲಿನ ಎದುರು ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು, ಎರಡು ಗುಂಪುಗಳು ತಲ್ವಾರ್, ಮಚ್ಚು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ...

ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

3 months ago

ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ಕೇಸಿನಲ್ಲಿ ಜೈಲು ಶಿಕ್ಷೆಯಲ್ಲಿರುವ ವರ್ಷಿಣಿ ತಮ್ಮ ತಂದೆ-ತಾಯಿಗೆ ಪತ್ರವೊಂದನ್ನು ಬರೆದಿದ್ದಾಳೆ. ವರ್ಷಿಣಿಗೆ ತಾನು ಮಾಡಿದ್ದ ತಪ್ಪಿನ ಬಗ್ಗೆ ಜ್ಞಾನೋದಯವಾದಂತಿದೆ. ಪತ್ರದಲ್ಲಿ ಪೋಷಕರಲ್ಲಿ ವರ್ಷಿಣಿ ಕ್ಷಮೆ ಕೇಳಿದ್ದಾಳೆ. ಜೂನ್ 4 ರಂದು ಆರೋಪಿ ವರ್ಷಿಣಿಯ ಹುಟ್ಟು ಹಬ್ಬವಿತ್ತು....

ಜೈಲಿನಲ್ಲಿದ್ದ ಸ್ವಾಮೀಜಿ ಹೆಸರಿಗೆ ಆಸ್ತಿ ಖಾತೆ – ಮೂವರು ಅಧಿಕಾರಿಗಳು ಸಸ್ಪೆಂಡ್

4 months ago

ಚಾಮರಾಜನಗರ: ಜೈಲಿನಲ್ಲಿರುವ ಸ್ವಾಮೀಜಿ ಹೆಸರಿಗೆ ಮಠದ ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದ ಮೂವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೊಳ್ಳೇಗಾಲ ಕಸಬಾ ಹೋಬಳಿ ರಾಜಸ್ವ ನಿರೀಕ್ಷರಾದ ನಿರಂಜನ್, ಸತೀಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹೇಮಾ ಮೂವರನ್ನು ಅಮಾನತು ಮಾಡುವಂತೆ ಚಾಮರಾಜನಗರ...

ಜೈಲಿನಿಂದ ಒಂದೇ ಬಾರಿ 100ಕ್ಕೂ ಹೆಚ್ಚು ಕೈದಿಗಳು ಪರಾರಿ

4 months ago

ಜಕಾರ್ತ: ಇಂಡೋನೇಷ್ಯಾ ಸುಮಾತ್ರಾ ದ್ವೀಪದಲ್ಲಿರುವ ಜೈಲಿನಿಂದ ನೂರಕ್ಕೂ ಹೆಚ್ಚು ಜನ ಕೈದಿಗಳು ಶನಿವಾರ ತಪ್ಪಿಸಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಸುಮಾತ್ರಾ ದ್ವೀಪದ ಸಿಯಾಕ್ ಜಿಲ್ಲೆಯ ಜೈಲಿನಲ್ಲಿ ಗಲಭೆ ಉಂಟಾಗಿದೆ. ನಂತರ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆ ಸಮಯದಲ್ಲಿ ಕೈದಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಸುಮಾರು...

ಪ್ರಿಯಕರನೊಂದಿಗೆ ಪತ್ನಿ ಮದ್ವೆ – ಮಗುವನ್ನೇ ಗಿಫ್ಟ್ ನೀಡಿದ ಪತಿ

5 months ago

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಬೇಕು ಎಂದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಎರಡೂವರೆ ವರ್ಷದ ಮಗುವನ್ನು ಉಡುಗೊರೆಯಾಗಿ ನೀಡಿರುವ ಘಟನೆ ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಭಾಗಲ್ಪುರದ ಬಳಿಯ ಸೋಲೇಪುರ ಗ್ರಾಮದಲ್ಲಿ...