Tuesday, 15th October 2019

Recent News

2 weeks ago

ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

– ಹೊನ್ನಾಂಬಿಕೆ ದೇವಿ ದರ್ಶನ ಪಡೆದ ಬಿಎಸ್‍ವೈ – ಸರ್ಕಾರ ಪೂರ್ಣಾವಧಿ ಪೂರೈಸಲೆಂದು ಪ್ರಾರ್ಥನೆ ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಲಯ ಅಮಾವಾಸ್ಯೆ ಪೂಜೆಯ ಮೊರೆ ಹೋದರಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಬಿಎಸ್‍ವೈ ಇಂದು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕೆ ದೇವಿ ಮೊರೆ ಹೋಗಿದ್ದು, ಯಡಿಯೂರಪ್ಪನವರು ಸಿಎಂ ಆಗುವುದಾಗಿ ಇದೇ ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು. ಈ ಕುರಿತು ಮೂರು ತಿಂಗಳ ಹಿಂದೆ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಯಡಿಯೂರಪ್ಪನವರ ಪರ ಭವಿಷ್ಯ […]

3 weeks ago

ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ ಮಾಡ್ತೀವಿ: ಬಿಜೆಪಿ ಶಾಸಕ

ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡಬೇಕೋ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾವಣಗೆರೆಯ ಗುಂಡಿ ಸರ್ಕಲ್‍ನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ರವೀಂದ್ರನಾಥ್ ಅವರು ಮಾತನಾಡಿದರು. ಬಿಜೆಪಿ ಪಕ್ಷ ಈಗಲೂ ಅಧಿಕಾರದಲ್ಲಿ ಇದೆ. ಹೀಗೆ ಅಧಿಕಾರದಲ್ಲಿ ಉಳಿಯಬೇಕಾದರೆ...

ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

2 months ago

ವಿಜಯಪುರ: ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ತೆಗೆದುಕೊಳ್ತೇನೆ. ಅಮಾವಾಸ್ಯೆ ಕಾರಣ ಆರೋಗ್ಯ ಸಚಿವ ಸ್ಥಾನದ ಚಾರ್ಜ್ ತೆಗೆದುಕೊಂಡಿಲ್ಲ ಎಂದು ನೂತನ ಆರೋಗ್ಯ ಸಚಿವ ಶ್ರೀರಾಮುಲು ವಿಜಯಪುರದಲ್ಲಿ ಹೇಳಿದರು. ಈ ಹೇಳಿಕೆಯಿಂದ ಸಚಿವ ಶ್ರೀರಾಮುಲುಗೆ ಅಮವಾಸ್ಯೆ ಭಯ ಕಾಡುತ್ತಿದಿಯಾ ಎಂಬ ಮಾತುಗಳು ಎಲ್ಲಡೆ...

ರಾಜಕೀಯವಾಗಿ ಬಿಜೆಪಿ ಪಾಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರ ಲಕ್ಕಿ

2 months ago

ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ರಾಜಕೀಯವಾಗಿ ಲಕ್ಕಿ ಎನ್ನಿಸಿದೆ. ಯಾಕಂದರೆ ಇಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸುತ್ತದೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಪ್ರತಿ ಬಾರಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ...

ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

3 months ago

ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟಿನ ತೀರ್ಪು ಯಾರ ಪರವೂ ಇಲ್ಲ ಯಾರ ವಿರುದ್ಧವೂ ಅಲ್ಲ. ನ್ಯಾಯಾಲಯ ಸ್ಪೀಕರ್ ಅವರ ಪರಮೋಚ್ಛ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ. ದೇವನಹಳ್ಳಿ ಬಳಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸುಪ್ರೀಂ ಕೋರ್ಟ್ ಕಾಲ...

ರೆಸಾರ್ಟ್ ರಾಜಕಾರಣ ಮಾಡಿದ್ರೆ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ: ಮಂಡ್ಯ ರೈತರು

3 months ago

ಮಂಡ್ಯ: ರೈತರ ಸಮಸ್ಯೆ ಬಗೆ ಹರಿಸೋದು ಬಿಟ್ಟು ಹೀಗೆ ರೆಸಾರ್ಟ್ ರಾಜಕಾರಣ ಮಾಡುತ್ತ ಕುಳಿತರೆ ನಿಮ್ಮ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಮಂಡ್ಯ ರೈತರು ಎಚ್ಚರಿಕೆ ನೀಡಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಮಂಡ್ಯದ ಪ್ರವಾಸಿ...

ರಾಜ್ಯದ ವಿವಿಧ ಭಾಗಗಳಲ್ಲಿ ರಾತ್ರಿಯಿಂದಲೇ ಸುರಿಯುತ್ತಿದೆ ಮಳೆ

4 months ago

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಬೆಳಗಾವಿಯ ಮಾರುತಿ...

ಸಿದ್ದರಾಮಯ್ಯ ಕನಸಿನ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕುಡಿಯೋಕೆ ನೀರಿಲ್ಲ

4 months ago

– ಕೋಟಿಗಟ್ಟಲೆ ಕರೆಂಟ್ ಬಿಲ್ ಕಟ್ಟೇ ಇಲ್ಲ ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಎಳ್ಳು ನೀರು ಬಿಡುವ ಸ್ಥಿತಿ ಎದುರಾಗಲಿದೆ. ಯಾಕಂದರೆ ಇಂದಿರಾ ಕ್ಯಾಂಟೀನ್ ಬಗ್ಗೆ ದೋಸ್ತಿ ನಾಯಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಜನಸಾಮಾನ್ಯರ ಇಂದಿರಾ ಕ್ಯಾಂಟೀನ್‍ನಲ್ಲಿ ನೀರಿಗಾಗಿ...