Wednesday, 22nd May 2019

2 days ago

ಸಮೀಕ್ಷೆ ಬೆನ್ನಲ್ಲೇ ದೆಹಲಿಯಲ್ಲಿ ಗರಿಗೆದರಿದ ರಾಜಕೀಯ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ಸಮೀಕ್ಷೆಗಳ ವರದಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆ ಕರೆದಿದ್ದಾರೆ. ಅಮಿತ್ ಶಾ ನಾಳೆ(ಮಂಗಳವಾರ) ಎನ್‍ಡಿಎ ಒಕ್ಕೂಟದ ನಾಯಕರ ಸಭೆ ಕರೆದಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿರುವ ಬಿಜೆಪಿಗೆ ಎನ್‍ಡಿಎ ಒಕ್ಕೂಟದ ಪಕ್ಷಗಳ ಬೆಂಬಲದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಶ್ವಾಸಕ್ಕೆ […]

2 weeks ago

ರಾಜಕಾರಣದಲ್ಲಿ ಪುಡಾರಿಗಳೇ ಮುನ್ನೆಲೆಯಲ್ಲಿದ್ದಾರೆ: ಬರಗೂರು ಕಿಡಿ

-ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವಿಲ್ಲ ಧಾರವಾಡ: ಇಂದಿನ ರಾಜಕಾರಣದಲ್ಲಿ ಎಲ್ಲ ಪುಡಾರಿಗಳೇ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಇಂದಿನ ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವೇ ಇಲ್ಲದಂತಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಕಿಡಿಕಾರಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಪುಂಡತನ, ಪುಡಾರಿತನ ಮುಂದೆ ಬಂದಾಗ ಗೌರವ ಇರುವ ವ್ಯಕ್ತಿಗಳಿಗೆ ಅಲ್ಲಿ ನಿಲ್ಲಲು ಸಾಧ್ಯವಿಲ್ಲ. ಇನ್ನು ಸಾಹಿತ್ಯಿಕ,...

ಈಗ ವೀರಶೈವರು ಹಾಗೂ ಲಿಂಗಾಯತರು ಒಂದೇ ಎನ್ನುವುದಕ್ಕೆ ಏನು ಕಾರಣ ಉತ್ತರಿಸಿ: ಕೈ ನಾಯಕರಿಗೆ ಕಡಗಂಚಿ ಸ್ವಾಮೀಜಿ ಪ್ರಶ್ನೆ

1 month ago

ಕಲಬುರಗಿ: ಧರ್ಮ ಒಡೆಯುವವರಿಗೆ ಜನ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡದೇ, ಧರ್ಮದ ಪದ್ಧತಿ ಪ್ರಕಾರ ನಡೆದುಕೊಂಡು ತೋರಿಸಿ, ಅಂದೇ ನೀವು ಗೆದ್ದುಬರುತ್ತೀರಿ ಎಂದು ಕಡಗಂಚಿ ಮಠದ ವೀರಭದ್ರ ಶಿವಾವಾರ್ಯ ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ...

ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆ ಹಾಕಲ್ಲ: ಸುದೀಪ್

1 month ago

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದ್ರೆ ಕಿಚ್ಚ ಸುದೀಪ್ ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆಹಾಕಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಾನು...

ಎಚ್‍ಡಿಡಿ ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ, ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ: ರೇವಣ್ಣ

2 months ago

ಹಾಸನ: ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ. ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ ಅದನ್ನೇ ಮಾಧ್ಯಮಗಳು ದೊಡ್ಡದು ಮಾಡಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಶಿವರಾಂ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ...

ಕೆಸರೆರಚಾಟ ಬಿಟ್ಟು ದೇಶಕ್ಕೆ ತಮ್ಮಿಂದಾದ ಒಳಿತಿನ ಬಗ್ಗೆ ಮಾತನಾಡಿ: ರಾಜಕಾರಣಿಗಳಿಗೆ ಮಂತ್ರಾಲಯ ಶ್ರೀಗಳ ಕಿವಿಮಾತು

2 months ago

ರಾಯಚೂರು: ರಾಜಕಾರಣಿಗಳು ವೈಯಕ್ತಿಕ ತೇಜೋವಧೆ ಬಿಡಬೇಕು. ಒಬ್ಬರ ಮೇಲೋಬ್ಬರು ಕೆಸರೆರಚಾಟ ಮಾಡುವುದನ್ನು ಬಿಟ್ಟು ದೇಶಕ್ಕೆ ತಮ್ಮಿಂದಾದ ಒಳಿತಿನ ಬಗ್ಗೆ ಮಾತನಾಡಬೇಕು ಎಂದು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಜಕಾರಣಿಗಳಿಗೆ ಕೀವಿಮಾತನ್ನು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು,...

ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕಿಲ್ಲ: ಅನಿತಾ ಕುಮಾರಸ್ವಾಮಿ

3 months ago

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸ್ಪರ್ಧೆ ವಿಚಾರವಾಗಿ ಕುಟುಂಬ ರಾಜಕಾರಣ ಎಂದಿದ್ದ ವಿರೋಧಿ ಪಕ್ಷಗಳ ಟೀಕೆಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಮಗ...

ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

3 months ago

ಮೈಸೂರು: ನಾನು ನನ್ನ ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಜನಸೇವೆ ಬಗ್ಗೆ ಯೋಚನೆ ಮಾಡ್ತೀನಿ. ಆದ್ರೆ ಕೆಲವರು ಮಕ್ಕಳು, ಮರಿಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾರೆ ಅಂತ ಸಂಸದ ಪ್ರತಾಪ್ ಸಿಂಹ ಅವರು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣಕ್ಕೆ...