Wednesday, 24th July 2019

19 hours ago

ಪತಿಯಿಂದ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಅಪ್ಲೋಡ್

ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ನಯಾಗಾರ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಈ ಕುರಿತು ನುಗಾಂವ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಪತಿ ಪತ್ನಿಯ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ. ಪತಿ ನನ್ನ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. […]

21 hours ago

ಅಮೆರಿಕದಲ್ಲಿ ಭಾರತದ ಯುವಕರ ಮದುವೆ: ಫೋಟೋ ವೈರಲ್

ವಾಷಿಂಗ್ಟನ್: ಭಾರತದ ಯುವಕರಿಬ್ಬರು ಅಮೆರಿಕದ ನ್ಯೂಜೆರ್ಸಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮಿತ್ ಹಾಗೂ ಆದಿತ್ಯ ಮದುವೆಯಾದ ಯುವಕರು. ಅಮಿತ್ ಹಾಗೂ ಆದಿತ್ಯ ಮನೆಯವರ ಒಪ್ಪಿಗೆ ಪಡೆದು ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಲಿಂಗಿ ಮದುವೆ ಆಗಿದ್ದಾರೆ. ಅಮಿತ್ ಹಾಗೂ ಆದಿತ್ಯ ತಮ್ಮ ಮೊದಲ...

ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

1 week ago

ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅಂದು ಅವರು ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸಮೀರಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಮೀರಾ ರೆಡ್ಡಿ ತನ್ನ...

ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

2 weeks ago

ಬೆಂಗಳೂರು: ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ...

ಎರಡನೇ ಬಾರಿ ತಾಯಿಯಾದ ಸಮೀರಾ – ಮಗುವಿನ ಕೈ ಹಿಡಿದುಕೊಂಡ ಫೋಟೋ ಪೋಸ್ಟ್

2 weeks ago

ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಎರಡನೇ ಬಾರಿ ತಾಯಿಯಾಗಿದ್ದು, ಇಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ ಮುಂಬೈನ ಬೀಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಸಮೀರಾ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಮೀರಾ...

ಹೆಚ್ ವಿಶ್ವನಾಥ್ ರಾಜೀನಾಮೆ- ಶ್ರದ್ಧಾಂಜಲಿ ಕೋರಿ ಜೆಡಿಎಸ್‍ನಿಂದ ಆಕ್ರೋಶ

2 weeks ago

ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಇದೀಗ ಹೆಚ್ ವಿಶ್ವನಾಥ್ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ. ಹೌದು, ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ...

ಬರೋಬ್ಬರಿ 7 ಕೋಟಿಯ ಕ್ಯಾರವ್ಯಾನ್ ಖರೀದಿಸಿದ ಅಲ್ಲು ಅರ್ಜುನ್ – ಫೋಟೋಗಳಲ್ಲಿ ನೋಡಿ

3 weeks ago

ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ದುಬಾರಿ ಬೆಲೆಯ ಕ್ಯಾರವ್ಯಾನ್ ಖರೀದಿಸಿದ್ದು, ಇದು ನೋಡಲು ಅತ್ಯಂತ ಆಕರ್ಷಣಿಯವಾಗಿದೆ. ನಟ ಅಲ್ಲು ಅರ್ಜುನ್ ಅವರು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಲವು ಹೊಸ ಹೊಸ ಅತ್ಯಾಧುನಿಕ ತಂತ್ರಜ್ಞಾನದಿಂದ...

ಮಾರ್ಕ್ಸ್‌ಗಾಗಿ ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್ ಕಾಮದಾಟ

3 weeks ago

ಗದಗ: ಕಾಲೇಜಿನ ಕಾಮುಕ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಖಾಸಗಿ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ. ಈತ ಕಾಲೇಜಿನ ವಿದ್ಯಾರ್ಥಿನಿ ಜೊತೆ ಚಿನ್ನ,...