Monday, 16th July 2018

5 months ago

ರಿಪೇರಿ ಮಾಡುತ್ತಿದ್ದ ವೇಳೆ ಎಂಐ ಮೊಬೈಲ್ ಬ್ಲಾಸ್ಟ್

ಚಿತ್ರದುರ್ಗ: ರಿಪೇರಿ ಮಾಡುತ್ತಿದ್ದ ವೇಳೆ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇಲ್ಲಿನ ಹೊಸದುರ್ಗ ಪಟ್ಟಣದ ಸಂಗಮ ಮೊಬೈಲ್ ಸೆಂಟರ್ ನಲ್ಲಿ ಎಂಐ ಕಂಪನಿಗೆ ಸೇರಿದ ಮೊಬೈಲ್ ರಿಪೇರಿ ಮಾಡುತ್ತಿದ್ದ ವೇಳೆ ಬ್ಲಾಸ್ಟ್ ಆಗಿದೆ. ಮೊಬೈಲ್ ನಿಂದ ಹೊಗೆ ಬರುತ್ತಿದ್ದಂತೆ ರಿಪೇರಿ ಮಾಡುತ್ತಿದ್ದ ವ್ಯಕ್ತಿ ಅದನ್ನು ದೂರ ಎಸೆದಿದ್ದು, ಅಂಗಡಿಯಿಂದ ಸಿಬ್ಬಂದಿ ಹೊರಗೆ ಓಡಿದ್ದಾರೆ. ಭಾರೀ ಪ್ರಮಾಣದಲ್ಲಿ ಹೊಗೆಯೊಂದಿಗೆ ಎಂಐ ಮೊಬೈಲ್ ಬ್ಲಾಸ್ಟ್ ಆಗಿದೆ. ಈ ಎಲ್ಲಾ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

9 months ago

ಇದ್ದಕ್ಕಿದ್ದಂತೆ ಕಿಸೆಯಲ್ಲಿದ್ದ ಸ್ಯಾಮ್ ಸಂಗ್ ಫೋನ್ ಬ್ಲಾಸ್ಟ್ ಆಯ್ತು! ವಿಡಿಯೋ ನೋಡಿ

ಜಕರ್ತಾ: ಈ ಹಿಂದೆ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡಿತ್ತು. ಈಗ ಸ್ಯಾಮ್ ಸಂಗ್ ಮತ್ತೊಂದು ಫೋನ್ ಸ್ಫೋಟಗೊಂಡಿದ್ದು ವಿಡಿಯೋ ವೈರಲ್ ಆಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಶರ್ಟ್ ಕಿಸೆಯಿಂದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸಿಸಿಟಿವಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್...