Saturday, 23rd February 2019

Recent News

1 year ago

ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

ಮಂಗಳೂರು: ಭೀಕರ ರೈಲ್ವೇ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವಿನಿಂದ ಬೇರ್ಪಟ್ಟಿದ್ದ ಎರಡೂ ಕಾಲುಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಮರುಜೋಡಿಸಿ ಪುನರ್ಜನ್ಮ ನೀಡಿದಿದ್ದಾರೆ. ಕಳೆದ ಎಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ಭೀಕರ ರೈಲ್ವೇ ಅಪಘಾತ ನಡೆದಿದ್ದು, ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೇ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪಯ್ಯನೂರಿನ ಆಸ್ಪತ್ರೆಯಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ […]

1 year ago

65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

ಆಲಿಘರ್: 65 ವರ್ಷದ ವ್ಯಕ್ತಿಯ ದೇಹದಲ್ಲಿ ಹೃದಯ ಹಾಗೂ ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆಲಿಘರ್ ನಿವಾಸಿಯಾದ ಹೇಮಂದ್ರ ಗುಪ್ತಾ ಶಸ್ತ್ರಚಿಕಿತ್ಸೆಗೆ ಒಳಗದ ವ್ಯಕ್ತಿ. ಇಲ್ಲಿನ ಎಎಮ್‍ಯು ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಂದು ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣ. ವ್ಯಕ್ತಿಗೆ ಹುಟ್ಟಿನಿಂದಲೂ ದೇಹದೊಳಗೆ ಗೆಡ್ಡೆ...

ವ್ಯಕ್ತಿಯ ಹೊಟ್ಟೆಯಿಂದ 600ಕ್ಕೂ ಹೆಚ್ಚು ಮೊಳೆ ಹೊರತೆಗೆದ ವೈದ್ಯರು!

1 year ago

ಕೊಲ್ಕತ್ತಾ: ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ವೈದ್ಯರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹೊಟ್ಟೆಯಿಂದ 600 ಕ್ಕೂ ಹೆಚ್ಚು ಕಬ್ಬಿಣದ ಮೊಳೆಗಳನ್ನ ಹೊರತೆಗೆದಿರೋ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ರಾಜ್ಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಶಸ್ತ್ರಚಿಕ್ತೆಯನ್ನು ಮಾಡಿ ಯಶಸ್ವಿಯಾಗಿದ್ದು, ಈಗ ರೋಗಿಗೆ ಯಾವುದೇ...

ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

1 year ago

ಬೆಂಗಳೂರು: ವಯೋವೃದ್ಧರೊಬ್ಬರು ಹೊಟ್ಟೆ ಹೊರೆಯೋದಕ್ಕೆ ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಅವರಿಗೆ ಇನ್ನಿಲ್ಲದ ಕಾಯಿಲೆಗಳು ಬಂದು ಬಡಪಾಯಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಆರೋಗ್ಯ ಸರಿ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಯಲಹಂಕ ನ್ಯೂಟೌನ್‍ನಲ್ಲಿರುವ ಉದ್ಯಮಿ...

ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

1 year ago

ಹೈದರಾಬಾದ್: ಲ್ಯಾಪ್‍ಟಾಪ್‍ನಲ್ಲಿ ಬಾಹುಬಲಿ ಸಿನಿಮಾವನ್ನು ನೋಡುತ್ತಲೇ ಬ್ರೇನ್ ಆಪರೇಷನ್ ಮಾಡಿಸಿಕೊಂಡಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಆಪರೇಷನ್‍ಗೆ ಒಳಗಾಗಿರುವ ಯುವತಿಯನ್ನು ವಿನಯಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚಿಗೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಎಂಆರ್‍ಐ ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ...

ಆಪರೇಷನ್‍ಗೆ ಹೋದ ಅಜ್ಜಿಯ ಹಲ್ಲು ಸೆಟ್ ಗಂಟಲಿಗಿಳಿಯಿತು- ಎಡವಟ್ಟು ಮುಚ್ಚಿಕೊಳ್ಳಲು ಕಥೆ ಕಟ್ಟಿದ್ರು ವೈದ್ಯರು

2 years ago

ಬೆಂಗಳೂರು: ಜೀವ ರಕ್ಷಿಸಿಕೊಳ್ಳೊಕೆ ಅಂತ ಆಸ್ಪತ್ರೆಗೆ ಹೋದ ಅಜ್ಜಿಯ ಹಲ್ಲು ಸೆಟ್ಟೇ ಅಂದರ್ ಆಗಿದ್ದು, ಮಾಡಿದ ಯಡವಟ್ಟನ್ನ ಮರೆಮಾಚೋಕೆ ಅಜ್ಜಿಯನ್ನು ಪರಲೋಕ ಸೇರಿಸೋಕೆ ವೈದ್ಯರು ಸಿದ್ಧರಾಗಿದ್ದ ಘಟನೆ ಬೆಳಕಿಗೆ ಬಂದಿದೆ.. ಬೆಂಗಳೂರಿನ ನಾಗರಬಾವಿಯಲ್ಲಿರೋ ಜಿಎಮ್ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ 68 ವರ್ಷದ...