Sunday, 19th May 2019

6 hours ago

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹೊಸ ದಾಖಲೆ

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ 10 ಕೋಟಿ ಹಿಂಬಾಲಕರನ್ನು ಹೊಂದುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ವಿವಿಧ ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್ (10 ಕೋಟಿ) ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದಾರೆ. ಫೇಸ್‍ಬುಕ್‍ನಲ್ಲಿ 3.7 ಕೋಟಿ, ಇನ್‍ಸ್ಟಾಗ್ರಾಮ್‍ನಲ್ಲಿ 3.35 ಕೋಟಿ, ಟ್ವಿಟ್ಟಿರಿನಲ್ಲಿ 2.94 ಕೋಟಿ ಮಂದಿ ಕೊಹ್ಲಿರನ್ನ ಹಿಂಬಾಲಿಸುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. The future looks bright! 😊 […]

8 hours ago

ಸಲಿಂಗಿ ಸಂಬಂಧದಲ್ಲಿದ್ದೇನೆ – ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

ನವದೆಹಲಿ: ಭಾರತದ ಓಟಗಾರ್ತಿ ದ್ಯುತಿ ಚಂದ್ ತಾವು ಗೆಳತಿಯೊಂದಿಗೆ ಸಲಿಂಗಿ ಸಂಬಂಧದಲ್ಲಿ ಇರುವುದಾಗಿ ಬಹಿರಂಗ ಪಡಿಸಿದ್ದಾರೆ. ಒಡಿಶಾ ರಾಜ್ಯದ ಓಟಗಾರ್ತಿ ಆಗಿರುವ ದ್ಯುತಿ ಚಂದ್ ತಮ್ಮದೇ ಗ್ರಾಮದ ನಿವಾಸಿ ಆಗಿರುವ ಗೆಳತಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಕೆಲ ಕಾರಣಗಳಿಂದ ನಾನು ಗೆಳತಿಯ ಹೆಚ್ಚಿನ ಮಾಹಿತಿಯನ್ನ ಬಹಿರಂಗ ಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ...

ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

1 day ago

ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ...

ಮೊದಲ ಸುದ್ದಿಗೋಷ್ಠಿಯಲ್ಲೂ ಪ್ರಶ್ನೆ ಎದುರಿಸದ ಪ್ರಧಾನಿ – ರಾಹುಲ್ ಗಾಂಧಿ ಲೇವಡಿ

2 days ago

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ್ದು, ಆದರೆ ಈ ವೇಳೆ ಯಾವುದೇ ಪ್ರಶ್ನೆಗಳನ್ನು ಮಾಧ್ಯಮಗಳಿಂದ ಎದುರಿಸದಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಸುದ್ದಿಗೋಷ್ಠಿ ಸಮಯದಲ್ಲೇ...

ಗೋವಾದಲ್ಲಿ ಕೊಹ್ಲಿ, ಮಾಲ್ಡೀವ್ಸ್‌ನಲ್ಲಿ ರೋಹಿತ್ ಸಖತ್ ಎಂಜಾಯ್!

2 days ago

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಐಪಿಎಲ್ ಬಳಿಕ ಸಿಕ್ಕ ವಿರಾಮದ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಗೋವಾಗೆ ಬಂದಿದ್ದರೆ, ರೋಹಿತ್ ಕುಟುಂಬದೊಂದಿಗೆ ಮಾಲ್ಡೀವ್ಸ್‍ಗೆ ತೆರಳಿದ್ದಾರೆ. ಇಬ್ಬರು...

10 ದಿನದೊಳಗೆ ಸ್ಪಷ್ಟನೆ ನೀಡಿ- ಗೋಡ್ಸೆ ಹೇಳಿಕೆ ನೀಡಿದ ನಾಯಕರಿಗೆ ಅಮಿತ್ ಶಾ ಸೂಚನೆ

2 days ago

ನವದೆಹಲಿ: ಬಿಜೆಪಿ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಪ್ರಜ್ಞಾಸಿಂಗ್ ಸಿಂಗ್ ಠಾಕೂರ್ ಹಾಗೂ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್ ಅವರು ಗೋಡ್ಸೆ ಕುರಿತ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಭಾರೀ ಟೀಕೆಗಳನ್ನು ಎದುರಿಸಿದೆ. ಇತ್ತ...

ತಡವಾಗಿ ಬಂದ್ರೆ ಎಲ್ಲರಿಗೂ 10 ಸಾವಿರ ದಂಡ ಹಾಕಿ – ಕ್ಲಿಕ್ ಆಯ್ತು ಧೋನಿ ಸಲಹೆ

3 days ago

ನವದೆಹಲಿ: ಸಮಯ ಪಾಲನೆ ವಿಚಾರದಲ್ಲಿ ಕಟ್ಟುನಿಟ್ಟಿನ ಸೂತ್ರ ಅಳವಡಿಸಿಕೊಂಡಿದ್ಧ ಧೋನಿ, ದೈಹಿಕ ತರಬೇತಿ ವೇಳೆ ನೀಡಿದ್ದ ಸಲಹೆ ಡ್ರೆಸ್ಸಿಂಗ್ ರೂಂ ವಾತಾವರಣವನ್ನೇ ಬದಲಾಯಿಸಿತ್ತು ಎಂದು ಟೀಂ ಇಂಡಿಯಾ ಪರವಾಗಿ ಕೆಲಸ ಮಾಡಿದ್ದ ಮಾನಸಿಕ ತಜ್ಞ ಪ್ಯಾಡಿ ಅಪ್ಟನ್ ತಿಳಿಸಿದ್ದಾರೆ. ಅಪ್ಟನ್ ತಮ್ಮ...

ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ಬಡಿದಾಟ – 1 ದಿನ ಮೊದಲೇ ಬಹಿರಂಗ ಪ್ರಚಾರಕ್ಕೆ ಆಯೋಗ ಬ್ರೇಕ್!

4 days ago

ನವದೆಹಲಿ: ಮೇ 19ರಂದು 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 7ನೇ ಹಂತದ ಮತದಾನಕ್ಕೆ 5 ದಿನ ಬಾಕಿ ಇದೆ. ಪಶ್ಚಿಮ ಬಂಗಾಳದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮತ್ತೊಂದೆಡೆ ಹಿಂಸಾಚಾರವೂ ಭುಗಿಲೆದ್ದಿದೆ. ಪರಿಣಾಮ ಚುನಾವಣಾ ಆಯೋಗ ಬಹಿರಂಗ ಪ್ರಚಾರಕ್ಕೆ ಒಂದು...