6 days ago

ಲೀಕ್ ಆಗ್ತಿದ್ದ ನೀರನ್ನು ಒಣಎಲೆಯಿಂದ ನಿಲ್ಲಿಸಲು ಕೋತಿಯಿಂದ ಪ್ರಯತ್ನ: ವಿಡಿಯೋ ವೈರಲ್

ಪೈಪ್‍ನಿಂದ ಲೀಕ್ ಆಗುತ್ತಿದ್ದ ನೀರನ್ನು ಕೋತಿಯೊಂದು ಒಣಎಲೆಯಿಂದ ನಿಲ್ಲಿಸಲು ಪ್ರಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಹಾರಿಕ ಸಿಂಗ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ 14 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರಾಣಿಗಳಿಗೆ ಇಂತಹ ಬುದ್ಧಿ ಇದೆ ಎಂದರೆ ನಮ್ಮಂತಹ ಮನುಷ್ಯರಿಗೆ ಯಾಕೆ ಇಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. If other beings of the #wild can have such #grace, #intelligence and #sensitivity …then […]

1 week ago

ಪೊಲೀಸ್ ತಲೆಯಲ್ಲಿ ಹೇನು ಹುಡುಕ್ತಿರೋ ಕೋತಿ ವಿಡಿಯೋ ವೈರಲ್

ಲಕ್ನೋ: ಮನುಷ್ಯನಿಗಿಂತ ಪ್ರಾಣಿಗಳೇ ಹೆಚ್ಚು ಬುದ್ಧಿವಂತವಾಗಿರುತ್ತವೆ ಎಂಬುದಾಗಿ ಕೆಲವೊಮ್ಮೆ ನಾವು ಮಾತನಾಡಿಕೊಳ್ಳುತ್ತೇವೆ. ಇದಕ್ಕೆ ಪೂರಕವೆಂಬಂತೆ ಪ್ರಾಣಿಗಳ ಕೆಲವೊಂದು ಕೆಲಸಗಳು ಮನುಷ್ಯನಿಗೆ ಮಾದರಿಯಾಗಿರುತ್ತವೆ. ಹೀಗೆ ಕೋತಿಯೊಂದು ಪೊಲೀಸ್ ಒಬ್ಬರ ಹೆಗಲ ಮೇಲೆ ಕುಳಿತು ಹೇನು ಹುಡುಕುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಪಿಲಿಭಿಟ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ....

ನೀರಿನ ಮಹತ್ವ ಸಾರಿದ ಕಪಿರಾಯ ಈಗ ಟ್ವಿಟ್ಟರ್ ಸ್ಟಾರ್

2 months ago

ನವದೆಹಲಿ: ಜೀವನಕ್ಕೆ ಬಹುಮುಖ್ಯವಾಗಿರುವ ನೀರನ್ನು ಉಳಿಸಿ ಎಂದು ಪ್ರತಿನಿತ್ಯ ನೂರಾರು ಜನ ಭಾಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ ನೀರಿನ ಮಹತ್ವ ಅರಿತು ಅದನ್ನು ಮಿತವಾಗಿ ಬಳಸುವ ಮಂದಿ ಕಡಿಮೆ. ಹೀಗಿರುವಾಗ ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿಯೊಂದು ನೀರನ್ನು ಪೋಲು ಮಾಡದೆ,...

ಸತ್ತ ಮರಿಯ ಅಸ್ಥಿಪಂಜರ ಹಿಡಿದು ಓಡಾಡುತ್ತಿರೋ ತಾಯಿ ಕೋತಿ

3 months ago

ಬಾಗಲಕೋಟೆ: ತನ್ನ ಮರಿ ಸತ್ತಿದ್ದರೂ ಇನ್ನು ಬದುಕಿದೆ ಎಂಬ ರೀತಿಯಲ್ಲಿ ತಾಯಿ ಕೋತಿಯೊಂದು ಮರಿಯ ಅಸ್ಥಿಪಂಜರವನ್ನು ಹಿಡಿದು ಓಡಾಡುತ್ತಿರುವ ಮನ ಮನಮಿಡಿಯುವ ಪ್ರಸಂಗವೊಂದು ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ತೇರದಾಳ ಪಟ್ಟಣದ ಕಾರ್ಪೊರೇಷನ್ ಕಾಲೋನಿಯಲ್ಲಿ ಕೋತಿಯೊಂದು ತನ್ನ ಮರಿ ಸತ್ತಿದ್ದರೂ...

ಬಿಸ್ಲೆರಿ ನೀರು, ಸಿಕ್ಕಲ್ಲೆಲ್ಲ ಊಟ- ಕೋತಿಯ ರಾಯಲ್ ನಗರ ವಾಸ

3 months ago

– ಯಾರಿಗೂ ಹೆದರಲ್ಲ, ಯಾರನ್ನೂ ಹೆದರಿಸಲ್ಲ – ಸ್ನೇಹಿತರಂತೆ ಮಾನವರೊಂದಿಗೆ ಕೋತಿಯ ವಾಸ ಚಿಕ್ಕಮಗಳೂರು: ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕೋತಿಯೊಂದು ನಗರ ಪ್ರದೇಶಕ್ಕೆ ಬಂದು ರಾಜರೋಷವಾಗಿ ಓಡಾಡುತ್ತಾ, ಯಾರಿಗೂ ಹೆದರದೆ-ಹೆದರಿಸದೆ ಎಲ್ಲರಲ್ಲೂ ಒಂದಾಗಿದೆ. ತರೀಕೆಯ ಬಿ.ಎಚ್.ರಸ್ತೆಯಲ್ಲಿರುವ ಕಟಿಂಗ್ ಶಾಪ್ ರಾಯಲ್ ಹೇರ್...

ಮಳೆಗಾಗಿ ಜನರ ಜೊತೆ ಮೆರವಣಿಗೆ ಹೋಗಿ ಮಂಗನ ಪ್ರಾರ್ಥನೆ

4 months ago

ರಾಯಚೂರು: ರಾಜ್ಯದಲ್ಲಿ ಬರಗಾಲ ಇರುವುದರಿಂದ ಜನರು ದೇವರ ಮೋರೆ ಹೋಗುತ್ತಿದ್ದಾರೆ. ಈಗ ರಾಯಚೂರಿನ ಜನರು ಮಳೆಗಾಗಿ ದೇವರ ಮೋರೆ ಹೋಗಿದ್ದು, ಇದರಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದೆ. ರಾಯಚೂರಿನ ಮಾನ್ವಿಯ ಆದಾಪುರದ ಜನರು ಮಳೆಗಾಗಿ ಮಣ್ಣೆತ್ತಿನ ಅಮವಾಸೆ ಪ್ರಯುಕ್ತ ಎತ್ತಿನ...

ಚೆಂಡಿನಂತೆ ಊಸರವಳ್ಳಿ ಹಿಡಿದು ಆಟ ಆಡಿದ ಕೋತಿಗಳು

4 months ago

ಚಿಕ್ಕಬಳ್ಳಾಪುರ: ಊಸರವಳ್ಳಿ ಹಿಡಿದು ಕೋತಿಗಳು ಚೆಂಡಿನಂತೆ ಆಟ ಆಡಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿ ನಡೆದಿದೆ. ಕೋತಿಗಳು ಊಸರವಳ್ಳಿವನ್ನು ಕ್ರಿಕೆಟ್ ಚೆಂಡಿನಂತೆ ಮನಸ್ಸೋ ಇಚ್ಚೆ ಕೈಯಲ್ಲಿ ಹಿಡಿದು ಅಟ್ಟಾಡಿಸಿದೆ. ಅಲ್ಲದೆ ಬಟ್ಟೆ ಒಗೆದ ರೀತಿಯಲ್ಲಿ...

ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

4 months ago

– ನೆರೆದವರಲ್ಲಿ ಅಚ್ಚರಿ ಚಿಕ್ಕಮಗಳೂರು: ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ...