Monday, 22nd July 2019

10 months ago

300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

ಜಮ್ಮು: ಚಾಲಕನ ನಿಯಂತ್ರಣ ತಪ್ಪಿ 300 ಅಡಿಯ ಕಣಿವೆಗೆ ಮಿನಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ 13 ಜನ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ 30 ಪ್ರಯಾಣಿಕರಿದ್ದ ಮಿನಿ ಬಸ್ಸು ಕಿಸ್ತ್ವಾರ್ ದಿಂದ ಕೆಶ್ವನ್ ಕಡೆಗೆ ಹೊರಟಿತ್ತು. ಈ ವೇಳೆ ಥಾಕ್ರೈ ಸಮೀಪ್ ದಾಂದರಬ್‍ಗೆ ಬರುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸು 300 ಅಡಿ ಆಳದ ಕಮರಿಗೆ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ ಚೆನಾಬ್ ನದಿ ಹರಿಯುತ್ತಿದ್ದು, ಅದೃಷ್ಟವಶಾತ್ […]

1 year ago

ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಬಸ್ ಮಲ್ಲೇಶ್ವರಂನಿಂದ ವಿಜಯನಗರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ....