Thursday, 20th February 2020

4 weeks ago

ಅತ್ತ ಇತ್ತ ನೋಡಿ ಹಾಲು ಕದ್ದ ಪೊಲೀಸ್ – ವೈರಲ್ ಆಯ್ತು ‘ಮಿಲ್ಕ್ ಚೋರ್’ ವಿಡಿಯೋ

– ಪೊಲೀಸ್ ಸಿಬ್ಬಂದಿಯಿಂದ್ಲೇ ಕಳ್ಳತನ ಲಕ್ನೋ: ಖದೀಮರಿಗೆ ಬುದ್ಧಿ ಕಲಿಸಬೇಕಾದ ಪೊಲೀಸ್ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಅಂಗಡಿಯೊಂದರ ಮುಂದೆ ಇಟ್ಟಿದ್ದ ಬಾಕ್ಸ್ ಗಳಲ್ಲಿ ಇದ್ದ 2 ಹಾಲಿನ ಪ್ಯಾಕೆಟ್‍ನನ್ನು ಕರ್ತವ್ಯ ನಿರತ ಪೊಲೀಸ್ ಪೇದೆ ಕದ್ದಿದ್ದಾರೆ. ಈ ದೃಶ್ಯವು ಅಂಗಡಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರೇ ಕಳ್ಳತನ ಮಾಡಿ ಸಾಕ್ಷಿ ಸಮೇತ […]

1 month ago

ಹಾಲು ಉತ್ಪಾದಕರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟ ಮೈಮುಲ್

ಮೈಸೂರು: ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್)  ಸಂಕ್ರಾಂತಿ ಉಡುಗೊರೆ ನೀಡಿದೆ. ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡಿದೆ. ಮೈಮುಲ್‍ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಕ್ಕೂಟವೂ ಹಾಲು ಉತ್ಪಾದಕ ಸಂಘಗಳಿಂದ ಶೇಖರಿಸುವ ಶೇ. 3.5 ಜಿಡ್ಡಿನಾಂಶ...

ಸಕ್ಕರೆ ನಾಡಿನ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ- ಖರೀದಿ ದರ ಏರಿಕೆ

2 months ago

ಮಂಡ್ಯ: ಹಾಲಿನ ಖರೀದಿ ದರವನ್ನು 3.50 ರೂಪಾಯಿ ಹೆಚ್ಚಳ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹೊಸ ವರ್ಷದ ಕೊಡುಗೆ ನೀಡಿದೆ. ಒಕ್ಕೂಟದ 394ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಹಾಲು ಉತ್ಪಾದಕರಿಗೆ...

ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ – ನಿರ್ದೇಶಕರ ಜಗಳದಲ್ಲಿ ಬಡವಾದ ರೈತರು

2 months ago

ಕಲಬುರಗಿ: ನಮ್ಮ ಮುಗ್ಧ ರೈತರು ಕಷ್ಟಪಟ್ಟು ಹೈನುಗಾರಿಕೆ ಮಾಡಿ ಕೆಎಂಎಫ್‍ಗೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಆದರೆ ಹೀಗೆ ಮಂಡಳಿಗೆ ಹೋದ ರೈತರ ಹಾಲು ಅಲ್ಲಿನ ಒಳ ರಾಜಕೀಯ ದ್ವೇಷದಿಂದ ಚರಂಡಿ ಪಾಲಾಗುತ್ತಿದೆ. ಇದು ಇದೀಗ ಕಲಬುರಗಿ-ಬೀದರ್-ಯಾದಗಿರಿ ಜಿಲ್ಲೆಯ ರೈತರ ಕೋಪ ನೆತ್ತಿಗೆರುವಂತೆ...

ದಿನಕ್ಕೆ ಕನಿಷ್ಠ 25 ಲೀಟರ್ ಹಾಲು ಕೊಡುವ ಜಾಫರಬಾದಿ, ಮುರ‌್ರಾ ಎಮ್ಮೆ

2 months ago

– ಹಾಲಿನಿಂದ ರೈತನ ಬೊಕ್ಕಸಕ್ಕೆ ಸ್ಥಿರ ಆದಾಯ – ಒಂದು ಎಮ್ಮೆಯಿಂದ ವಾರ್ಷಿಕ ಒಂದೂವರೆ ಲಕ್ಷ ರೂ. ಆದಾಯ ರಾಯಚೂರು: ರೈತರ ಕೈ ಹಿಡಿದರೆ ಹೈನುಗಾರಿಕೆ ಲಾಭದಾಯಕ ಆದರೆ ನಿರ್ವಹಣೆ ಕೊರತೆಯಿಂದ ಕೈಸುಟ್ಟುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಬೇಸಾಯದ ಜೊತೆ ಉಪ ಕಸುಬಾಗಿ...

ಶಾಲೆಯಲ್ಲಿ 1 ಲೀಟರ್ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿದ್ರು!

3 months ago

ಲಕ್ನೋ: ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಹಾಕಿ ಶಾಲೆಯ 81 ವಿದ್ಯಾರ್ಥಿಗಳಿಗೆ ಹಂಚಿದ ಪ್ರಕರಣವೊಂದು ಉತ್ತರಪ್ರದೆಶದ ಸೋನ್ಭದ್ರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಸೋನ್ಭದ್ರ ಉತ್ತರಪ್ರದೇಶದಲ್ಲಿರುವ ಅಭಿವೃದ್ಧಿ ಕಾಣದ ಪ್ರದೇಶಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ವಾಸವಿರುವ ಬಡ ಕುಟುಂಬಗಳ ಮಕ್ಕಳು...

ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

3 months ago

– ವಿಆರ್ ಗ್ಲಾಸ್ ಮೂಲಕ ಬೇಸಿಗೆ ವಾತಾವರಣ ನಿರ್ಮಾಣ – ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ ಮಾಸ್ಕೋ: ಬೇಸಿಗೆಯಲ್ಲಿ ದನದ ಆರೋಗ್ಯ ಉತ್ತಮವಾಗಿರಲು ಕೊಟ್ಟಿಗೆಯಲ್ಲಿ ರೈತರು ಫ್ಯಾನ್ ಅಳವಡಿಸಿರುವುದನ್ನು ನೀವು ಓದಿರಬಹುದು. ಆದರೆ ರಷ್ಯಾದ ರೈತರು ಈಗ ಇನ್ನು ಒಂದು ಹೆಜ್ಜೆ ಮುಂದೆ...

ಹುಟ್ಟಿದ 3 ಗಂಟೆಯಲ್ಲೇ ನವಜಾತ ಶಿಶು ಸಾವು – ತಾಯಿಯಿಂದ 63 ದಿನದಲ್ಲಿ 15 ಲೀ. ಎದೆಹಾಲು ದಾನ

3 months ago

ವಾಷಿಂಗ್ಟನ್: ಹುಟ್ಟಿದ್ದ ಮೂರು ಗಂಟೆಯಲ್ಲೇ ನವಜತ ಶಿಶು ಮೃತಪಟ್ಟ ಕಾರಣ ತಾಯೊಯೊಬ್ಬರು 63 ದಿನದಲ್ಲಿ 15 ಲೀಟರ್ ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ. ಅಮೆರಿಕ ಮೂಲದ ಸಿಯೆರಾ ಸ್ಟ್ರಾಂಗ್ಫೆಲ್ಡ್ ತಮ್ಮ ಮಗು ಹುಟ್ಟಿದ್ದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತದೆ ಎಂಬ ವಿಷಯ...