Tuesday, 23rd July 2019

Recent News

2 months ago

ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನ

ಬೆಳಗಾವಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಂಇಎಸ್ ಮಾಜಿ ಶಾಸಕ, ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಎಂಇಎಸ್‍ನಿಂದ ಒಂದು ಬಾರಿ ಶಾಸಕರಾಗಿದ್ದ ಸಂಭಾಜಿ ಪಾಟೀಲ್ ನಾಲ್ಕು ಬಾರಿ ಬೆಳಗಾವಿಯ ಮೇಯರ್ ಆಗಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಸಂಭಾಜಿ ಪಾಟೀಲ್ ಅವರು ತಮ್ಮ ಮಗನನ್ನು ಕಳೆದುಕೊಂಡಿದ್ದರು.

7 months ago

ಮಹಾರಾಷ್ಟ್ರದಿಂದ ಉಡುಪಿ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು – ಬೆಳಗಾವಿಯಲ್ಲಿ ಎಂಇಎಸ್, ಶೀವಸೇನೆ ಮುಖಂಡರ ಉದ್ಧಟತನ

ಬೆಳಗಾವಿ: ಎಂಇಎಸ್ ಪಕ್ಷ ಬೆಳಗಾವಿ ಅಧಿವೇಶನಕ್ಕೆ ವಿರೋಧ ವ್ಯಕ್ತಪಡಿಸಿ ಆಯೋಜಿಸಿದ್ದ ಮಹಾಮೇಳಾವ ಸಭೆಯಲ್ಲಿ ಮಹಾರಾಷ್ಟ್ರದಲ್ಲಿರುವ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು ಎಂದು ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ ದೇವನೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ನಗರದ ವ್ಯಾಕ್ಸಿನ್ ಡಿಪೋದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ...

ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧಗೊಂಡ ಕುಂದಾ ನಗರಿ ಬೆಳಗಾವಿ

9 months ago

ಬೆಳಗಾವಿ: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡ ನಾದ ಮೊಳಗುತ್ತದೆ. ಮಾತ್ರವಲ್ಲದೇ ಎಲ್ಲೆಲ್ಲೂ ಕನ್ನಡಮಯವಾಗಿ ಗೋಚರಿಸುತ್ತದೆ. ಆದರೆ ಗಡಿನಾಡು ಬೆಳಗಾವಿಯಲ್ಲಿ ಕರಾಳ ದಿನದ ಭೀತಿಯಲ್ಲೇ ಕನ್ನಡ ಹಬ್ಬದ ಸಡಗರ ಮನೆ ಮಾಡಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ದೊಡ್ಡ ದೊಡ್ಡ ದ್ವಾರ...

ನವೆಂಬರ್ 1ರಂದು ಎಂಇಎಸ್ ಆಚರಿಸೋ ಕರಾಳ ದಿನಕ್ಕೆ ಬ್ರೇಕ್ ಹಾಕ್ತಾರಾ ಸಿಎಂ?

9 months ago

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಆರಂಭವಾಗುತ್ತದೆ. ಕರಾಳ ದಿನಾಚರಣೆ ಸೇರಿದಂತೆ ಇನ್ನಿಲ್ಲದ ನಾಡ ವಿರೋಧಿ ಕೃತ್ಯಕ್ಕೆ ಕೈ ಹಾಕುತ್ತದೆ. ಇದಕ್ಕೆ ಪುಷ್ಟಿ ಎನ್ನುವಂತೆ ಬೆಳಗಾವಿ ಜಿಲ್ಲಾಡಳಿತ ಕಡೆ ಕ್ಷಣದವರೆಗೆ ಕಾದು ನೋಡುವ ತಂತ್ರ ಅನುಸರಿಸಿ ಕಡೆಗೆ...

ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

1 year ago

ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಎಂಇಎಸ್ ಪಕ್ಷದ ಅಭ್ಯರ್ಥಿಗೆ ಮರಾಠಿ ಯುವಕರೇ ಘೇರಾವ್ ಹಾಕಿದ್ದಾರೆ. ಎಂಇಎಸ್ ಅಭ್ಯರ್ಥಿ ಬಾಳಾಸಾಹೇಬ ಕಾಕತಕರ ಮತಯಾಚನೆಗಾಗಿ ಬೆಳಗಾವಿ ಪಟ್ಟಣದ ಶಿವಾಜಿ ನಗರಕ್ಕೆ ತೆರಳಿದ್ದರು. ಈ ವೇಳೆ ಬಾಳಾಸಾಹೇಬ ನಗರಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಕೆಲ ಮರಾಠಿ ಭಾಷಿಕ...

ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

1 year ago

ಬೆಳಗಾವಿ: ನಗರದಲ್ಲಿ ಮರಾಠಿಗರ ಪರ ಹೋರಾಟ ಮಾಡಿ ಪಕ್ಷೇತರರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ನಿಂತು ಗೆದ್ದಿದ್ದ ಶಾಸಕ ಅರವಿಂದ್ ಪಾಟೀಲ್‍ ಅವರಿಗೆ  ಈಗ ತನಿಖೆಯ ಬಿಸಿ ಕಾಣತೊಡಗಿದೆ. ಮರಾಠ ಪರ ಹೋರಾಟಗಾರ ಅಂತ ಹೇಳಿಕೊಂಡು ಬೆಳಗಾವಿಯನ್ನು ಮಹರಾಷ್ಟ್ರಕ್ಕೆ ಸೇರಿಸಬೇಕು ಅಂತ ಹೋರಾಟ ಮಾಡಿ...

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ- ದಶಕದ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

1 year ago

ಬೆಳಗಾವಿ: ದಶಕಗಳ ನಂತರ ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನ ಕನ್ನಡಿಗರ ಪಾಲಾಗಿದೆ. ಸರ್ಕಾರದ ಮೀಸಲಾತಿ ಆದೇಶದಿಂದಾಗಿ ಈ ಬಾರಿ ಬೆಳಗಾವಿ ಮೇಯರ್ ಪಟ್ಟ ಕನ್ನಡಿಗರ ಪಾಲಿಗೆ ಒಲಿದು ಬಂದಿದೆ. ಈ ಬಾರಿ ಮೇಯರ್ ಹುದ್ದೆಯನ್ನು ಎಸ್‍ಟಿ ಸಮುದಾಯಕ್ಕೆ ಮೀಸಲಿರಿಸಲಾಗಿತ್ತು. ಎಂಇಎಸ್ ಗುಂಪಿನಲ್ಲಿ...

ಕರ್ನಾಟಕ ಸರ್ಕಾರವನ್ನು ತಲೆ ಕೆಳಗೆ ಕಾಲು ಮೇಲೆ ಮಾಡ್ತೀವಿ: ಕೊಲ್ಲಾಪುರದಲ್ಲಿ ಶಿವಸೇನೆಯಿಂದ ಧಮ್ಕಿ

2 years ago

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‍ಗಳನ್ನ ತಡೆದು ಮಹಾರಾಷ್ಟ್ರ ಎಂದು ನಾಮಫಲಕ ಹಾಕಿ ಚಾಲಕರಿಗೆ ಧಮ್ಕಿ ಹಾಕಿದ್ದಾರೆ. ಈ ಘಟನೆಯಿಂದ ಬೆಳಗಾವಿ ಮಹಾರಾಷ್ಟ್ರ ಸಂಚಾರ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಹಾರಾಷ್ಟ್ರ ಪೊಲೀಸರ ಎದುರೇ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ...