Tag: Manju

  • ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಗನಿಂದ ಮನೆಮಂದಿ ಹಲವು ವಿಚಾರಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ. ಸದ್ಯ ನಿನ್ನೆ ಲ್ಯಾಗ್ ಮಂಜು ಇಷ್ಟು ದಿನ ಮುಚ್ಚಿಟ್ಟ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

    manju 2

    ಲೀವಿಂಗ್ ಏರಿಯಾದಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ವಿಶ್ವನಾಥ್ ಜೊತೆ ಕುಳಿತಿದ್ದ ಮಂಜು ತಮಗೆ ನಿದ್ರೆಗಣ್ಣಿನಲ್ಲಿ ಓಡಾಡುವ ಅಭ್ಯಾಸವಿದೆ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ನಾನು ಯಾವಾಗಲೂ ಒಂದೇ ರೀತಿ ಮಲಗಿರುವುದಿಲ್ಲ. ಯಾವಾಗಲೂ ಒದ್ದಾಡುತ್ತಲೆ ಇರುತ್ತೇನೆ. ಅಲ್ಲದೆ ನನಗೆ ನಿದ್ರೆ ಕಣ್ಣಿನಲ್ಲಿ ಓಡಾಡುವ ಅಭ್ಯಾಸವಿತ್ತು ಆದರೆ ಈಗ ಬಿಟ್ಟಿದ್ದೇನೆ ಅಷ್ಟೇ ಎಂದು ಹೇಳುತ್ತಾರೆ.

    manju 6 medium

    ಇದನ್ನು ಕೇಳಿ ಅಚ್ಚರಿಗೊಂಡ ದಿವ್ಯಾ ಸುರೇಶ್ ನಿಜಾನಾ ಎಂದು ಪ್ರಶ್ನಿಸಿದಾಗ, ಹೌದು ನಾನು ಚಿಕ್ಕವನಿದ್ದಾಗ ಊರಿನಲ್ಲಿ ನಿದ್ರೆ ಕಣ್ಣಿನಲ್ಲಿ ಹೋಗಿ ಬೇರೆಯವರ ಮನೆಯಲ್ಲಿ ಮಲಗಿದ್ದೇನೆ. ಬಾಗಿಲು ಹೇಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದು ದಿವ್ಯಾ ಸುರೇಶ್ ಕೇಳಿದಾಗ, ನಮ್ಮ ಊರಿನಲ್ಲಿ ಬೇಸಿಗೆ ಕಾಲದಲ್ಲಿ ಬಾಗಿಲು ಹಾಕಿಕೊಂಡು ಯಾರು ಮಲಗುತ್ತಿರಲಿಲ್ಲ. ಹೊರಗಡೆ, ಒಳಗಡೆ, ಅಲ್ಲಿ, ಇಲ್ಲಿ ಮಲಗಿಕೊಳ್ಳುತ್ತಿದ್ದರು ಈ ವೇಳೆ ನಾನು ನಿದ್ರೆ ಕಣ್ಣಿನಲ್ಲಿ ಹೋಗಿ ಮಲಗುತ್ತಿದ್ದೆ ಎಂದು ಹೇಳುತ್ತಾರೆ.

    FotoJet 5 5 medium

    ಬಳಿಕ ದಿವ್ಯಾ ಸುರೇಶ್ ಹಾಗಾದರೆ ಈಗಲಾದರೂ ಅದು ಸರಿ ಹೋಗಿದ್ಯಾ ಎಂದಾಗ, ಈಗ ಆ ಸಮಸ್ಯೆ ಇಲ್ಲ. ಆದರೆ ಯಾವಾಗಲಾದರೂ ಒಂದು ಸಾರಿ ಹೋದರೂ ಹೋಗಬಹುದೇನೋ ಎಂದು ಮಂಜು ಹಾಸ್ಯ ಮಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ವಿಶ್ವನಾಥ್, ದಿವ್ಯಾ ಸುರೇಶ್ ಜೋರಾಗಿ ನಗುತ್ತಾರೆ.

  • ಅರವಿಂದ್ ಎದೆ ಬಗೆದು, ವೈಷ್ಣವಿ ಲೆಕ್ಕಕ್ಕೆ ಇಲ್ಲ ಅಂದಿದ್ಯಾಕೆ ಮಂಜು!

    ಅರವಿಂದ್ ಎದೆ ಬಗೆದು, ವೈಷ್ಣವಿ ಲೆಕ್ಕಕ್ಕೆ ಇಲ್ಲ ಅಂದಿದ್ಯಾಕೆ ಮಂಜು!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ನಾಲ್ಕನೇ ವಾರಕ್ಕೆ ಮುನ್ನುಗ್ಗುತ್ತಿದೆ. ಈ ವೇಳೆ ಬಿಗ್‍ಬಾಸ್ ಮನೆಯ ಸದಸ್ಯರಿಗೆ ನಿನ್ನೆ ಚಟುವಟಿಕೆಯೊಂದನ್ನು ನೀಡಿದ್ದಾರೆ. ಅದರ ಅನುಸಾರ ಮನೆಯ ಸದಸ್ಯರಿಗೆ ಪ್ರತಿಸ್ಪರ್ಧಿ ನೀಡುವ ವ್ಯಕ್ತಿಯನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಿ ಅವರ ಫೋಟೋಗೆ ಡಾಟ್ ಚುಚ್ಚಬೇಕು. ಯಾರು ಪ್ರತಿಸ್ಪರ್ಧಿ ಎನಿಸುವುದಿಲ್ಲವೋ ಆ ಫೋಟೋವನ್ನು ಕಸದ ಬುಟ್ಟಿಗೆ ಹಾಕಬೇಕೆಂದು ಸೂಚಿಸುತ್ತಾರೆ.

    biggboss 13 medium

    ಮೊದಲಿಗೆ ಮಂಜು ನನ್ನ ಪ್ರತಿ ಸ್ಪರ್ಧಿ ಬಂದು ರಾಜೀವ್ ಹಾಗೂ ಅರವಿಂದ್, ಆದರೆ ನನಗಿಂತ ಅರವಿಂದ ನನಗಿಂತ ಹೆಚ್ಚು ಯೋಚಿಸುತ್ತಾನೆ. ಹಾಗಾಗಿ ಅವನ ಎದೆ ಬಗೆಯುತ್ತೇನೆ ಅಂತ ಹೇಳಿ ಡಾಟ್ ಚುಚ್ಚಿದ್ರು. ವೈಷ್ಣವಿಯವರು ನನಗೆ ಸ್ಪರ್ಧಿನೇ ಅಲ್ಲ. ಬೇರೆಯವರ ಆಟಗಳಿಗೆ ಹೋಲಿಸಿದರೆ ಲೆಕ್ಕಕ್ಕೆ ಇಲ್ಲ ಎನಿಸುತ್ತದೆ ಎಂದು ವೈಷ್ಣವಿ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಾರೆ.

    FotoJet 2 14 medium

    ಬಳಿಕ ರಾಜೀವ್ ಮಂಜು ನಾಲ್ಕು ಜನರನ್ನು ಸಂತೋಷವಾಗಿಡುವ ಮೂಲಕ ತನ್ನನ್ನು ತಾನು ಮಂಜು ಬಹಳ ಚೆನ್ನಾಗಿ ಗುರುತಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಮಂಜು ನನಗೆ ಕಾಂಪಿಟೇಟರ್ ಎಂದು ಸೂಚಿಸುತ್ತೇನೆ ಎಂದು ಹೇಳುತ್ತಾರೆ. ಟಾಸ್ಕ್ ವಿಚಾರವಾಗಿ ಆಯೋಚಿಸುವ ರೀತಿ, ಎಂಟರ್ಟೈನ್ಮೆಂಟ್, ಮನೆಯ ಸದಸ್ಯರ ಪ್ರೀತಿ ಹಾಗೂ ಜನರ ಪ್ರೀತಿ ವಿಶ್ವಾಸವನ್ನು ಹೇಗೆ ಗಳಿಸಬೇಕೆಂದು ಬಹಳ ಚೆನ್ನಾಗಿ ಮಂಜು ಅರಿತಿದ್ದಾರೆ. ಈ ಹಿನ್ನೆಲೆ ಮಂಜುರನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಪ್ರಶಾಂತ್, ರಘು, ಶಮಂತ್, ದಿವ್ಯಾ ಉರುಡುಗ ತಿಳಿಸುತ್ತಾರೆ.

    FotoJet 1 17 medium

    ಇನ್ನೂ ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಆಟದ ಬಗ್ಗೆ ಶಮಂತ್ ಉತ್ಸಾಹ ತೋರಿಸದೆ, ಇರುವುದರಿಂದ ಈಗ ಅವರನ್ನು ಕಾಂಪಿಟೇಟರ್ ಅಲ್ಲ ಎಂದು ಹೇಳಿದರೆ, ಇನ್ನೂ ಮುಂದೆ ಯಾದರೂ ಆಟವನ್ನು ಚೆನ್ನಾಗಿ ಆಡಬಹುದು ಅನಿಸುತ್ತದೆ ಅಂತ ರಾಜೀವ್ ಶಮಂತ್ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಬಳಿಕ ಬಂದ ವೈಷ್ಣವಿ, ಶುಭ, ದಿವ್ಯಾ ಸುರೇಶ್, ವಿಶ್ವನಾಥ್, ಶಮಂತ್ ಟಾಸ್ಕ್ ಹಾಗೂ ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಬೇರೆ ಸದಸ್ಯರಿಗೆ ಹೋಲಿಸಿದರೆ ಶಮಂತ್ ಪ್ರತಿ ಸ್ಪರ್ಧೆಯೇ ಅಲ್ಲ ಎಂದು ಸೂಚಿಸುತ್ತಾರೆ.

    shamnth medium

    ಒಟ್ಟಾರೆ ನಿನ್ನೆ ಬಿಗ್‍ಬಾಸ್ ಮನೆಯ ಸದಸ್ಯರಿಗೆ ತಮ್ಮ ಪ್ರತಿಸ್ಪರ್ಧಿಗಳು ಯಾರು ಎಂದು ತಿಳಿದುಕೊಳ್ಳಲು ಚಟುವಟಿಕೆ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು.

  • ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಹಳ್ಳಿಹೈದ ಮಂಜುದೇ ಹವಾ. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್‍ರನ್ನು ಪಟಾಯಿಸಿದ್ದ ಮಂಜು, ಮನೆಮಂದಿ ಮನಸ್ಸನ್ನು ಗೆದ್ದಿದ್ದಾರೆ. ಎಲ್ಲೆ ಹೋದರೂ, ಬಂದರೂ ಮಂಜು ಜಪ ಮಾಡುವ ದೊಡ್ಮನೆ ಸದಸ್ಯರು, ನಿಜಕ್ಕೂ ಮಂಜುರನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಕಿಚ್ಚ ತುಲಾಭಾರ ಕಾರ್ಯಕ್ರಮ ನಡೆಸಿದ್ದಾರೆ.

    biggboss 1 3

    ಅದರ ಅನುಸಾರ ತಕ್ಕಡಿಯ ಒಂದು ಭಾಗದಲ್ಲಿ ಮಂಜು ಕುಳಿತುಕೊಳ್ಳುತ್ತಾರೆ. ಇನ್ನೊಂದು ಭಾಗದಲ್ಲಿ ಮನೆಯ ಸದಸ್ಯರು ಬಹಳ ಇಷ್ಟಪಡುವಂತಹ ವಸ್ತುಗಳನ್ನು ತಂದು ಅದರೊಳಗೆ ಇಡಬೇಕು. ಅದು ವಸ್ತುವಾದರೂ ಸರಿ, ವ್ಯಕ್ತಿಯಾದರೂ ಸರಿ ಮತ್ತೆ ನಿಮಗೆ ವಾಪಸ್ ಸಿಗಲ್ಲ ಅಂತ ಸುದೀಪ್ ಸೂಚಿಸುತ್ತಾರೆ.

    FotoJet 5 4

    ಅದರಂತೆ ರಾಜೀವ್, ಅರವಿಂದ್ ತಾವು ಇಷ್ಟಪಡುವಂತಹ ಡಂಬಲ್ಸ್ ಹಾಕುತ್ತಾರೆ. ನಿಧಿ ಬೆಲ್ಟ್, ವೈಷ್ಣವಿ ಯೋಗ ಮ್ಯಾಟ್, ವಿಶ್ವನಾಥ್ ಶೂ, ರಘು ಪಫ್ಯೂಮ್, ಶುಭ ಪೂಂಜಾ ಬಾಯಿಲ್ಡ್ ರೈಸ್, ಪ್ರಶಾಂತ್ ಸಂಬರ್ಗಿ ಕಾಫಿ ಕಪ್, ದಿವ್ಯಾ ಉರುಡುಗ ಜಾಕೆಟ್ ಹಾಗೂ ಶೂ, ಗೀತಾ ಡ್ರಸ್, ಶಂಕರ್ ಅಶ್ವತ್ ಕರ್ಪೂರ, ಶಮಂತ್ ಭೀಮ್ ಬ್ಯಾಗ್, ಚಂದ್ರಕಲಾ ಟೀ ಕಪ್ ಇಡುತ್ತಾರೆ. ಆದರೆ ಎಲ್ಲರ ಮಧ್ಯೆ ದಿವ್ಯಾ ಸುರೇಶ್ ಮಾತ್ರ ನಾನು ಶಮಂತ್‍ನನ್ನು ಆ ಸ್ಥಳದಲ್ಲಿ ಕೂರಿಸಲು ಇಷ್ಟಪಡುತ್ತೇನೆ. ನನಗೆ ಅವರೆಂದರೆ ಇಷ್ಟವಿಲ್ಲ ಎಂದು ನೇರವಾಗಿ ನುಡಿಯುತ್ತಾರೆ.

    manju 2 3

    ಬಳಿಕ ನೀವು ಹಾಕಿರುವ ವಸ್ತುಗಳನ್ನು ಮತ್ತೆ ಉಪಯೋಗಿಸುವಂತಿಲ್ಲ ಎಂದು ಕಿಚ್ಚ ಸೂಚಿಸಿದಾಗ, ಅರವಿಂದ್ ನನಗೆ ಡಂಬಲ್ಸ್ ಎಂದರೆ ಬಹಳ ಇಷ್ಟ. ಒಂದು ದಿನ ಡಂಬಲ್ಸ್ ಇಲ್ಲದೇ ವರ್ಕ್ ಔಟ್ ಮಾಡದಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳುತ್ತಾರೆ. ಶುಭ ಪೂಂಜಾ ಕೂಡ ನನಗೆ ಬಾಯಿಲ್ಡ್ ರೈಸ್ ಅಂದರೆ ಇಷ್ಟ ಹಾಗಾಗಿ ಅದನ್ನು ಹಿಂಪಡೆದು ಅದರ ಬದಲಿಗೆ ಶೂ ಇಡುತ್ತೇನೆ ಎಂದು ಹೇಳುತ್ತಾರೆ.

    FotoJet 6 3

    ಹೀಗೆ ಮನೆಯ ಸದಸ್ಯರು ಮಂಜುರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದಕ್ಕೆ ತಾವು ಇಷ್ಟಪಡುವಂತಹ ವಸ್ತುಗಳನ್ನು ತಕ್ಕಡಿಯಲ್ಲಿ ಇಡುವ ಮೂಲಕ ತೋರಿಸುತ್ತಾರೆ. ಕೊನೆಗೆ ಸುದೀಪ್ ಅವರು ಮಂಜು ಅವರನ್ನು ತಕ್ಕಡಿಯಿಂದ ನಿದಾನವಾಗಿ ಇಳಿಯುವಂತೆ ಹೇಳಿದ್ದು, ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತಾರೆ.

  • ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಕಳೆದ ವಾರ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಚಂಡೇಶ್ವರ ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದರು. ಅದರಂತೆ ಬಜರ್ ಆದ ತಕ್ಷಣ ಪ್ಲಾಸ್ಮದಲ್ಲಿ ಬರುವ ಹೆಸರಿನ ಒಬ್ಬ ಸದಸ್ಯ ಗಾರ್ಡನ್ ಏರಿಯಾಗೆ ಹೋಗಿ, ಪೈಪ್‍ಲೈನ್‍ನಲ್ಲಿ ಬರುವ ಚೆಂಡನ್ನು ಹಿಡಿಯಬೇಕಿತ್ತು. ಆ ಚೆಂಡಿನಲ್ಲಿ ಒಂದು ಲಕ್ಷುರಿ ಐಟಂ ಹೆಸರಿದ್ದು, ಚೆಂಡನ್ನು ಸದಸ್ಯ ಹಿಡಿದರೆ ಅದರಲ್ಲಿರುವ ಐಟಂ ಮನೆಗೆ ದೊರೆಯುತ್ತದೆ. ಇಲ್ಲದಿದ್ದರೆ ಮನೆಯ ಸದಸ್ಯರು ಆ ಐಟಂನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.

    ball

    ಅದರಂತೆ ಒಂದು ವಾರದಿಂದ ಬಜರ್ ಆಗಿದ ತಕ್ಷಣ ಮನೆಯ ಸದಸ್ಯರು ಚೆಂಡನ್ನು ಹಿಡಿಯಲು ಹಲವಾರು ಸರ್ಕಸ್ ನಡೆಸುತ್ತಿದ್ದಾರೆ. ಈ ವಾರ ಕೆಲವು ಸದಸ್ಯರು ಚೆಂಡನ್ನು ಹಿಡಿದಿದ್ದಾರೆ. ಇನ್ನೂ ಕೆಲವರು ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿ ಲಕ್ಷುರಿ ಐಟಂ ಕಳೆದುಕೊಂಡಿದ್ದಾರೆ. ಅಂತೆಯೇ ನಿಧಿಸುಬ್ಬಯ್ಯ ಹೆಸರು ಪ್ಲಾಸ್ಮದಲ್ಲಿ ಬರುತ್ತದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿಧಿ ವೇಗವಾಗಿ ಗಾರ್ಡನ್ ಏರಿಯಾಗೆ ಓಡಿ ಹೋಗುತ್ತಾರೆ. ಎಷ್ಟೇ ವೇಗವಾಗಿ ಓಡಿದ್ರೂ ನಿಧಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ.

    FotoJet 2 11

    ಹೀಗಾಗಿ ಬಿಗ್‍ಬಾಸ್ ನಿಧಿಗೆ ವಿಭಿನ್ನವಾದ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ನಿಧಿಗೆ, ಬಿಗ್‍ಬಾಸ್ ಚಮಚವನ್ನು ಬಳಸಿ ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್ ನಲ್ಲಿರುವ ಕಪ್ಪು ಗುರುತಿನವರೆಗೂ ತುಂಬಿಸುವಂತೆ ಶಿಕ್ಷೆ ನೀಡಿದ್ದರು. ಅದರಂತೆ ಚಮಚ ಹಿಡಿದು ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್‍ಗೆ ತುಂಬಿಸಲು ನಿಧಿ, ನಿಂತುಕೊಂಡು, ಕುಳಿತುಕೊಂಡು ಹರಸಹಾಸ ಪಡುತ್ತಿರುತ್ತಾರೆ.

    nidhi 1

    ಈ ವೇಳೆ ಮನೆಯ ಸದಸ್ಯರು ನಿಧಿಗೆ ಪ್ರೋತ್ಸಾಹಿಸುತ್ತಿದ್ದರೆ, ಮಂಜು ಮಾತ್ರ ನೀನು ನೀರು ತುಂಬಿಸಿದ ತಕ್ಷಣ ಮತ್ತೊಮ್ಮೆ ನಿನ್ನ ಹೆಸರು ಬರಬೇಕು. ಮತ್ತೆ ಚೆಂಡು ಹಿಡಿಯಲಾಗದೇ ಅಯ್ಯಯ್ಯೋ ಮತ್ತೆ ನೀರು ತಂಬಿಸಬೇಕಲ್ಲ ಎಂದು ಹೇಳಬೇಕು. ವಾರ ಪೂರ್ತಿ ಇದೇ ಟಾಸ್ಕ್ ನೀಡಬೇಕು. ಹಾಗೇನಾದರೂ ಮಾಡಿದರೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಹಾಸ್ಯ ಮಾಡುತ್ತಾರೆ.

    FotoJet 3 9

    ಒಟ್ಟಾರೆಯಾಗಿ ಈ ಟಾಸ್ಕ್ ನೋಡಲು ಸುಲಭವಾಗಿ ಕಂಡರು, ಅದು ಬಹಳ ಕಷ್ಟ ಎಂದು ಹೇಳಬಹುದು.

  • ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೇನು 2 ವಾರ ಪೂರ್ಣಗೊಳ್ಳುತ್ತಿದೆ. ಈ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ತೋರಿಸಿದ ಸ್ಪರ್ಧಿಗಳನ್ನು ಸ್ವತಃ ಮನೆಯ ಸದಸ್ಯರು ಆಯ್ಕೆ ಮಾಡಿದರು.

    ಬಿಗ್‍ಬಾಸ್, ಮನೆಯ ಸದಸ್ಯರ ಪೈಕಿ ಈ ವಾರ ಉತ್ತಮ ಪ್ರದರ್ಶನ ನೀಡಿದ ಒಬ್ಬ ಸದಸ್ಯನ ಹೆಸರನ್ನು ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ಬಿಗ್‍ಬಾಸ್‍ಗೆ ತಿಳಿಸಬೇಕು ಎಂದು ಸೂಚಿಸಿದರು.

    biggboss 6

    ಅದರಂತೆ ಮೊದಲನೆಯದಾಗಿ ಮಾತನಾಡಿದ ಗೀತಾ, ನಾನು ಲ್ಯಾಗ್ ಮಂಜುರವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ. ಎಂಟರ್‍ಟೈನ್‍ಮೆಂಟ್ ವಿಷಯಕ್ಕೆ ಬಂದರೆ ನಮ್ಮೆಲ್ಲರನ್ನು ಬಹಳ ನಗಿಸುತ್ತಾರೆ ಎಂದರು. ದಿವ್ಯಾ ಉರುಡುಗ ಮಂಜುರವರು ಕ್ಯಾಪ್ಟನ್ ಸ್ಥಾನವನ್ನು ಬಹಳ ಚೆನ್ನಾಗಿ ನಿಭಾಯಿಸಿದರು ಹಾಗಾಗಿ ನಾನು ಕೂಡ ಮಂಜುರವರ ಹೆಸರನ್ನು ಸೂಚಿಸುತ್ತೇನೆ ಎಂದರೆ, ವಿಶ್ವನಾಥ್ ಸಹ ಮಂಜು ಹೆಸರನ್ನು ಸೂಚಿಸುತ್ತಾರೆ. ಎಂಟರ್ಟೈನ್ಮೆಂಟ್ ಬಿಗ್‍ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಚಂದ್ರಕಲಾ ತಿಳಿಸುತ್ತಾರೆ. ಟಾಸ್ಕ್‍ನಲ್ಲಿಯೇ ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದು ಅರವಿಂದ್ ಕೂಡ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ. ದಿವ್ಯಾ ಸುರೇಶ್ ಎಲ್ಲರೊಂದಿಗೆ ಮಾತನಾಡುವ ರೀತಿ, ಟಾಸ್ಕ್ ನನ್ನು ಹಾಗೂ ನಮ್ಮನ್ನೆಲ್ಲ ನಿಭಾಯಿಸುವ ರೀತಿ ಎಲ್ಲವೂ ಒಂದು ಮಟ್ಟಕ್ಕೆ ಮಂಜು ನಿಭಾಯಿಸುತ್ತಾರೆ ಹಾಗಾಗಿ ನಾನು ಕೂಡ ಮಂಜುರವರನ್ನು ಆಯ್ಕೆ ಮಾಡುತ್ತೇನೆ ಎಂದು ನುಡಿದರು.

    manju 2

    ಶುಭ ಪೂಂಜಾ, ಮಂಜು ಅರಂವಿಂದ್‍ರವರ ಹೆಸರನ್ನು ಆಯ್ಕೆ ಮಾಡಿದರೆ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಶಂಕರ್, ಪ್ರಶಾಂತ್ ಸಂಬರಗಿ, ರಘು, ರಾಜೀವ್ ಹೆಸರನ್ನು ಸೂಚಿಸುತ್ತಾರೆ. ಜೊತೆಗೆ ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯವರ ಹೆಸರನ್ನು ಸೂಚಿಸುತ್ತಾರೆ.

    FotoJet 1 10

    ಒಟ್ಟಾರೆ ಮನೆಯ ಸದಸ್ಯರ ಅಭಿಪ್ರಾಯವನ್ನೆಲ್ಲಾ ಪರಿಶೀಲಿಸಿದ ರಾಜೀವ್ ನಾನು ಕ್ಯಾಪ್ಟನ್ ಆಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಇನ್ನಷ್ಟು ಖುಷಿಯಾಗಿಡುತ್ತಿರುವ ಮಂಜುರವರಿಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

    manju 1 1

    ಬಳಿಕ ಮೆಡಲ್ ಸ್ವೀಕರಿಸಿದ ಮಂಜು ನನಗೆ ಬಹಳ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಿಗುತ್ತಿರುವ ಮೊದಲ ಮೆಡಲ್. ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾರೆ ಎಂದು ಮಂಜುರವರ ಹೆಸರನ್ನು ಘೋಷಿಸುತ್ತಾರೆ.

    ಈ ವಾರ ಕಳಪೆ ಪ್ರದರ್ಶನ ತೋರಿದ ಬ್ರೋ ಗೌಡರನ್ನು ಬಿಗ್‍ಬಾಸ್ ಸೆರೆವಾಸ ಮಾಡಲು ಸೂಚಿಸಿದರು.

  • ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.

    ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.

    manju

    ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

    shubha 2

    ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.

    shubha 1

    ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.

    bro gowda 1 1

    ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಗೊರಕೆಯದ್ದೇ ಸದ್ದು

    ಬಿಗ್‍ಬಾಸ್ ಮನೆಯಲ್ಲಿ ಗೊರಕೆಯದ್ದೇ ಸದ್ದು

    ಬೆಂಗಳೂರು: ಬಿಗ್‍ಬಾಸ್ ಸದಸ್ಯರೊಂದಿಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ಮುಂದುವರಿಸಿದ ಸುದೀಪ್ ಭಾನುವಾರ ವೈಟ್ ಆ್ಯಂಡ್ ವೈಟ್ ಲುಕ್‍ನಲ್ಲಿ ವೇದಿಕೆ ಮೇಲೆ ಪ್ರೇಕ್ಷಕರ ಮುಂದೆ ಎಂಟ್ರಿಕೊಟ್ಟರು. ವಾರದ ಪಂಚಾಯತಿ ಜೊತೆ ಜೊತೆಗೆ ಕಿಚ್ಚ ಈ ಮನೆಯಲ್ಲಿ ಅತೀ ಹೆಚ್ಚು ಗೊರಕೆ ಹೊಡೆಯುವವರು ಯಾರು ಎಂದು ಪ್ರಶ್ನಿಸುತ್ತಾರೆ.

    biggboss 1

    ಆಗ ಎಲ್ಲರೂ ಮಂಜು ಹಾಗೂ ರಾಘವೇಂದ್ರರವರು ಎಂದು ಹೇಳಿದರೆ, ಶಂಕರ್‍ರವರು ಪ್ರಶಾಂತ್ ಹಾಗೂ ಮಂಜು ಕೂಡ ಸ್ಟೀರಿಯೋ ಫೋನ್ ರೀತಿ ಗೊರಕೆ ಹೊಡೆಯುತ್ತಾರೆ ಜೊತೆಗೆ ಇಬ್ಬರೂ ಸದ್ದು ಮಾಡದಂತೆ ಮಲಗಿಬಿಡುತ್ತಾರೆ ಎಂದರು. ಬಳಿಕ ಕಿಚ್ಚ ಕ್ಷಮಿಸಿ ಸರ್ ಪ್ರಶಾಂತ್‍ರವರದ್ದು ಗೊರಕೆ ಸದ್ದು ಅಲ್ಲ. ಅದು ಲೋಕದ ಜ್ಞಾನ, ವಿಚಾರಣೆ, ಅವರ ಒಳಗಿನಿಂದ ಬರುತ್ತಿರುವುದು ಅವರ ಧ್ವನಿಯಲ್ಲ. ಕರ್ನಾಟಕದ ಧ್ವನಿ. ಅವರು ನಿದ್ದೆಯಲ್ಲಿ ಕೂಡ ಮಾಹಿತಿ ಹಂಚುತ್ತಿರುತ್ತಾರೆ. ಅದನ್ನು ನೀವು ಸದ್ದು ಎಂದು ಭಾವಿಸಿದ್ದಿರಾ ಎಂದು ಹಾಸ್ಯಮಯವಾಗಿ ನುಡಿದರು.

    biggboss 2

    ಬಳಿಕ ರಘುರವರು ನಿಧಿ ಸುಬ್ಬಯ್ಯರವರು ಕೂಡ ಗೊರಕೆ ಹೊಡೆಯುತ್ತಾರೆ. ನಾನು ಅಂದು ಸ್ವಲ್ಪ ಬೇಗ ಎದ್ದಿದ್ದೆ ಮೊಬೈಲ್ ಏನಾದರೂ ಸಿಕ್ಕಿದ್ದರೆ ರೆಕಾರ್ಡ್ ಮಾಡಿ ತೋರಿಸಿಬಿಡುತ್ತಿದ್ದೆ. ಆದರೆ ನನ್ನ ಬಳಿ ಮೊಬೈಲ್ ಇರಲಿಲ್ಲ. ಈ ವೇಳೆ ರಾಜೀವ್ ನಿಧಿಯವರು ಗೊರಕೆ ಹೊಡೆಯುವುದು ಬಹಳ ಚೆನ್ನಾಗಿರುತ್ತದೆ ಎಂದು ಹೇಳುವ ಮೂಲಕ ಗೊರಕೆ ಸದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ್ರು. ಇದಕ್ಕೆ ನಿಧಿ ಸುಬ್ಬಯ್ಯ ಮುಖ ಮುಚ್ಚಿಕೊಂಡು ನಾಚುತ್ತಾ ಮುಗುಳುನಗೆ ಬೀರಿದ್ರು. ಈ ಸದ್ದು ಕೇಳಿ ಮಂಜು ಹಾಗೂ ರಘು ಇಬ್ಬರು ಎರಡು ಬಾರಿ ರಾತ್ರಿ ಎದ್ದು ನನ್ನ ಮುಖ ನೋಡಿ ನಕ್ಕಿದ್ದಾರೆ ಎಂದರು. ಇನ್ನೂ ನಿಧಿ ಸುಬ್ಬಯ್ಯ ಗೊರಕೆ ಹೊಡೆಯುವ ಸೌಂಡ್ ಮಿಮಿಕ್ರಿ ನೋಡಿ ಕಿಚ್ಚ ಹಾಗೂ ಮನೆಯ ಸದಸ್ಯರು ಹೊಟ್ಟೆ ಹುಣ್ಣಾಗುವಂತೆ ನಕ್ಕರು.

    FotoJet 1 5

    ಬಳಿಕ ಲ್ಯಾಗ್ ಮಂಜು ಶಂಕರ್ ರಾತ್ರಿವಿಡೀ ಸ್ಕ್ರಿಪ್ಟ್ ಓದುತ್ತಾರೆ. ಒಮ್ಮೆ ನಿದ್ದೆ ಮಾಡುವ ವೇಳೆ ಶಂಕರ್‍ರವರು ಅಗರ್‍ವಾಲ್ ಎಂದು ಕರೆದರು. ರಾಜೀವ್ ನಿದ್ದೆಯಲ್ಲಿ ಮಾತನಾಡುತ್ತಿರಬಹುದು ಎಂದು ಹೇಳುತ್ತಾರೆ ಆದರೆ ಮಂಜು ಅವರು ನಿಮಗೆ ಗೊತ್ತಿಲ್ಲ. ಬಿಗ್‍ಬಾಸ್ ಎಲ್ಲೋ ಕನಸಿನಲ್ಲಿ ಸ್ಕ್ರಿಪ್ಟ್ ನೀಡಿರಬೇಕು ಅದನ್ನು ಓದುತ್ತಿದ್ದಾರೆ ಎಂದು ಹೇಳಿರುವುದಾಗಿ ರಾಜೀವ್ ತಿಳಿಸಿದರು.

    FotoJet 2 4

    ಒಮ್ಮೆ ನಾನು ಶಂಕರ್ ಅವರ ಪಕ್ಕದಲ್ಲಿ ಮಲಗಲೆಂದು ಹೋದೆ ಸರ್ ಆದರೆ ಐದು ನಿಮಿಷದ ನಂತರ ಶಂಕರ್‍ರವರು ಗೊರಕೆ ಹೊಡೆಯಲು ಆರಂಭಿಸಿದರು. ಅವರು ಹೊಡೆದ ಗೊರಕೆ ಸದ್ದು ಹೇಗಿತ್ತು ಎಂದರೆ ಅವರೆಲ್ಲೋ ನನಗೆ ಉಗುಳುತ್ತಿದ್ದಾರೆ ಎಂಬಂತೆ ಇತ್ತು. ಆಗ ತಕ್ಷಣ ಅವರ ಕಡೆ ಮುಖ ಮಾಡಿಕೊಂಡು ಮಲಗಿದ್ದ ನಾನು ಮತ್ತೊಂದೆಡೆ ತಿರುಗಿಸಿಕೊಂಡು ಮಲಗಿದೆ ಎಂದು ಹೇಳುವ ಮೂಲಕ ಮಂಜು ಹಾಸ್ಯಚಟಾಕಿ ಹರಿಸಿದರು.

    sudeep 2

    ಸದ್ಯ ಮನೆಯ ಸದಸ್ಯರ ಗೊರಕೆ ಕಥೆ ಕೇಳಿದ ಸುದೀಪ್ ವೇದಿಕೆ ಮೇಲೆ ಜೋರು ನಗೆಬೀರಿದರು. ನಂತರ ಇಂದು ಎಲ್ಲರೂ ಎಷ್ಟು ಚೆಂದದ ಬಟ್ಟೆಗಳನ್ನು ಧರಿಸಿ ಕುಳಿತಿದ್ದೀರಿ ಆದರೆ ಎಲ್ಲರ ಅಭಿಪ್ರಾಯಗಳೇ ಬದಲಾಗಿ ಹೋಯಿತು ಎಂದು ಹೇಳಿದರು.