Tag: Manju

  • ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

    ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

    ಬಿಗ್‍ಬಾಸ್ ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಮನೆಗೆ ತೆರಳಿ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆಡಲು ಬಿಗ್ ಮನೆಗೆ ಬಂದಿದ್ದಾರೆ. ಈ ಬಾರಿ ಮನೆಯೊಳಗೆ ಬರುವಾಗ ಕೆಲವರ ಬಗ್ಗೆ ಹಲವು ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು ಬಂದಿದ್ದಾರೆ. ಅದೇ ರೀತಿ ಇದೀಗ ಒಬ್ಬ ಸ್ಪರ್ಧಿ ದೊಡ್ಮನೆಗೆ ತಮ್ಮ ಬಟ್ಟೆಯನ್ನು ಒಗೆಯಲೆಂದೇ ತಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    BIGG BOSS 2 1 medium

    ಸ್ಪರ್ಧಿಗಳು ಎಂದಿನಂತೆ ಬರುವಾಗ ತಂದಿದ್ದ ಬಟ್ಟೆಗಳನ್ನು ಮನೆಯಲ್ಲಿ ತೆಗೆಯಲು ಪ್ರಾರಂಭಿಸಿದಾಗ ಹರಟೆಗಿಳಿದ ಮಂಜು, ಶುಭಾ, ದಿವ್ಯಾ ಸುರೇಶ್ ಮತ್ತು ನಿಧಿ ಈ ಕುರಿತು ಒಂದು ಚರ್ಚೆಗಿಳಿದಿದ್ದಾರೆ. ನಿಧಿ ಬಟ್ಟೆಗಳನ್ನು ತಂದು ಎಲ್ಲರಿಗೂ ಇದು ಚೆನ್ನಾಗಿ ಇದ್ಯಾ, ಇದು ಚೆನ್ನಾಗಿ ಇದ್ಯಾ ಎಂದು ತೋರಿಸುತ್ತಾರೆ ಹೊರತು ಹಾಕಿಕೊಳ್ಳುವುದಿಲ್ಲ. ಕೇವಲ ತೋರಿಸಲು ಮಾತ್ರ ತಂದಿದ್ದಾರೆ ಎಂದು ಮಂಜು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶುಭಾ ಕೂಡ ಹೌದು ಎಂದಿದ್ದಾರೆ.

    BOGG BOSS medium

    ಮಂಜು ಅವರು ಮನೆಗೆ ಹೋದ ಬಳಿಕ ಅವರ ತಾಯಿ, ನಿಧಿ ಯಾವತ್ತು ಬಟ್ಟೆ ಒಗಿತಾನೆ ಇರುತ್ತಾರೆ ಎಂದಿದ್ದರಂತೆ. ಇದನ್ನು ಹೇಳಿಕೊಂಡ ಮಂಜು, ನಿಧಿ ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಅಂತ ಬಟ್ಟೆ ತಂದಂತಿದೆ. ಬಟ್ಟೆ ವಾಶ್ ಮಾಡುತ್ತಾರೆ ಅದನ್ನು ಯಾವತ್ತು ಧರಿಸಿದ್ದು ನಾನು ನೋಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿರಬೇಕು, ಯಾರನ್ನು ಆಯ್ಕೆ ಮಾಡುತ್ತೀರಿ- DU ಗೆ ಕಿಚ್ಚನ ಪ್ರಶ್ನೆ

    BIGG BOSS 3 1 medium

    ಶುಭಾ ಕೂಡ ನಿಧಿ ಬಟ್ಟೆ ಒಗೆಯೊಕೆ ಬಟ್ಟೆ ತಂದಿದ್ದಾಳೆ ಎಂದಿದ್ದಾರೆ. ಬಳಿಕ ಮಂಜು ಜೊತೆ ನಿಧಿ, ಈ ಬಟ್ಟೆ ಹೇಗಿದೆ ಎಂದು ಒಂದು ಬಟ್ಟೆಯನ್ನು ಹಿಡಿದುಕೊಂಡು ಕೇಳಿದ್ದಾರೆ. ಇದಕ್ಕೆ ಮಂಜು ಚೆನ್ನಾಗಿದೆ ಈ ಬಟ್ಟೆಯನ್ನು ಇನ್ನು ಹೋಗಿ ಒಗಿ ಅದರ ಕಲರ್ ಶೇಡ್ ಆಗುವವರೆಗೆ ಬಿಡಬೇಡ ನಿನ್ನ ಕಲರ್ ಬರುವ ವರೆಗೆ ಒಗಿತಾನೇ ಇರು ಎಂದು ಕಾಲೆಳೆದಿದ್ದಾರೆ.

  • ಮಂಜು ಜೊತೆಗಿನ ಫ್ರೆಂಡ್‍ಶಿಪ್‍ಗೆ ಗುಡ್ ಬೈ ಹೇಳಿದ ದಿವ್ಯಾ ಸುರೇಶ್

    ಮಂಜು ಜೊತೆಗಿನ ಫ್ರೆಂಡ್‍ಶಿಪ್‍ಗೆ ಗುಡ್ ಬೈ ಹೇಳಿದ ದಿವ್ಯಾ ಸುರೇಶ್

    ಬಿಗ್‍ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ತುಂಬಾ ಅನ್ಯೂನ್ಯವಾಗಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಅವರ ಜೋಡಿ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ತಮ್ಮ ಫ್ರೆಂಡ್‍ಶಿಪ್‍ಗೆ ಗುಡ್ ಬೈ ಹೇಳಿದ್ದಾರೆ.

    DIVYA AND MANJA medium

    ಹೌದು. ಬಿಗ್‍ಬಾಸ್ ನೀಡಿದ ತಳ್ಳುಬಂಡಿ ಟಾಸ್ಕ್ ನಲ್ಲಿ ಕಾಲಿಗೆ ಗಾಯಮಾಡಿಕೊಂಡ ದಿವ್ಯಾ ಸುರೇಶ್ ಗಾಯಕ್ಕೆ ಔಷಧಿ ಹಚ್ಚಿಕೊಂಡ ಬಳಿಕ ಮಂಜು ಬಳಿ ಬಂದು ನಾನು ಗಾಯಮಾಡಿಕೊಂಡು ಒಳಬಂದಾಗ ನೀನು ಕೂತ ಜಾಗದಿಂದ ಎದ್ದು ಬಂದಿಲ್ಲ ಎಂದು ತಕಾರರು ಎತ್ತಿದ್ದಾರೆ.

    MANJA AND DIVYA 2 medium

    ಮಂಜ ನೀನು ಫ್ರೆಂಡ್‍ಶಿಪ್‍ಗೆ ಬೆಳೆ ಕೊಡುವವನಾಗಿದ್ದರೆ ಎದ್ದು ಬರುತ್ತಿದ್ದೆ ನೀನು ಬರಲಿಲ್ಲ ಎಂದು ಮಂಜನಿಗೆ ದಿವ್ಯಾ ಹೇಳಿದ್ದಾರೆ. ಆಗ ನಿಧಿ ನಾನು ಮಂಜನಿಗೆ ಎರಡು ಬಾರಿ ಎದ್ದು ಹೋಗು ನೋಡಿ ಸಮಾಧಾನ ಮಾಡಿ ಬಾ ಎಂದಿದ್ದೆ. ಆದರೆ ಮಂಜ ನೀನು ಸುಮ್ಮನಿರಮ್ಮ ಎಂದು ನನಗೆ ಹೇಳಿದ್ದ ಎಂದು ತಿಳಿಸಿದ್ದಾರೆ. ಇದನ್ನು ಕೇಳಿಸಿಕೊಂಡ ದಿವ್ಯಾ ಥೂ.. ಅಂತ ಉಗಿದು ನಿನಗು ನಿನ್ನ ಫ್ರೆಂಡ್‍ಶಿಪ್‍ಗೂ ಗುಡ್ ಬೈ ಎಂದಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಸಂಬಂಧಿಕರಿಬ್ಬರ ವಾರ್

    MANJA AND DIVYA 1 medium

    ಇದಕ್ಕೆ ಮಂಜು ನಮಗೆ ಎದೆ ಮೇಲೆ ಒದಿತೀರಿ ಅಂದ ಮೇಲೆ ನಿಮಗೆ ದೇವರು ಸರಿಯಾಗಿ ಶಿಕ್ಷೆ ಕೊಟ್ಟಿದ್ದಾನೆ ಎಂದಿದ್ದಾರೆ. ಈ ಮಾತಿಗೆ ದಿವ್ಯಾ ಕೂತ್ಕೂಳಯ್ಯ ಸುಮ್ಮನೆ ನೊಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿಗಳು ಮತ್ತೆ ಜಗಳ ಪ್ರಾರಂಭ ಮಾಡಿಕೊಂಡು ನೋಡುಗರನ್ನು ಮನರಂಜಿಸುತ್ತಿದೆ.

  • ಎಸ್‍ಎಸ್‍ಎಲ್‍ಸಿ ಇಂಗ್ಲಿಷ್ ಪರೀಕ್ಷೆಯಲ್ಲಿನ ಮಂಜು ಸ್ಕೋರ್ ರಿವೀಲ್

    ಎಸ್‍ಎಸ್‍ಎಲ್‍ಸಿ ಇಂಗ್ಲಿಷ್ ಪರೀಕ್ಷೆಯಲ್ಲಿನ ಮಂಜು ಸ್ಕೋರ್ ರಿವೀಲ್

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಮತ್ತೆ ಮೊದಲ ಇನ್ನಿಂಗ್ಸ್‍ನಲ್ಲಿ ಜೊತೆಯಾಗಿದ್ದ ಜೊಡಿ ಲ್ಯಾಗ್ ಮಂಜು ಮತ್ತು ದಿವ್ಯ ಸುರೇಶ್ ತಮ್ಮ ಹರಟೆಯನ್ನು ಪ್ರಾರಂಭಿಸಿದ್ದಾರೆ. ಈ ನಡುವೆ ಮಂಜು ತನ್ನ ಇಂಗ್ಲಿಷ್ ಭಾಷೆ ಬಳಕೆಯ ಸಂದರ್ಭ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿ ಪಡೆದುಕೊಂಡ ಅಂಕದ ಬಗ್ಗೆ ಮಾತನಾಡಿದ್ದಾರೆ.

    manju medium

    ದಿವ್ಯ ಜೊತೆ ಮಂಜು ಮಾತನಾಡುವ ವೇಳೆ ಕನ್ನಡ ಮತ್ತು ಇಂಗ್ಲಿಷ್ ಬಳಕೆಯ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಈ ಸಂದರ್ಭ ಮಂಜು ನನಗೆ ಎಸ್‍ಎಸ್‍ಎಲ್‍ಸಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ 40 ಅಂಕ ಪಡೆದಿದ್ದೆ. ನಾನು ಅಷ್ಟು ಅಂಕ ಬರುತ್ತದೆ ಎಂದು ಅಂದುಕೊಂಡಿರಲಿಲ್ಲಾ ನನಗೆ ಆಶ್ಚರ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

    manju 2 medium

    ನಾನು ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆಯುತ್ತಿದ್ದೆ. ಕನ್ನಡದಲ್ಲಿ ಮಾತ್ರ ತೊಂಬತ್ತು, ತೊಂಬತ್ತೆರಡು ಸ್ಕೋರ್ ಮಾಡುತ್ತಿದ್ದೆ. ಅದನ್ನು ಬಿಟ್ಟರೆ ಇತಿಹಾಸದಲ್ಲಿ ಉತ್ತಮ ಅಂಕ ಬರುತ್ತಿತ್ತು. ಆದರೆ ನನಗೆ ಇಂಗ್ಲಿಷ್‍ನಲ್ಲಿ 40 ಅಂಕ ಬಂದಿದ್ದು ಅರಗಿಸಿಕೊಳ್ಳಲು ಆಗಿಲ್ಲ ಎಂದರು. ಈ ಸಂದರ್ಭ ಜೊತೆಗಿದ್ದ ಅರವಿಂದ್ ಮತ್ತು ದಿವ್ಯ ಸುರೇಶ್ ಜೋರಾಗಿ ನಕ್ಕರು. ಇದನ್ನೂ ಓದಿ: ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ

    manju 1 medium

    ನನಗೆ 40 ಅಂಕ ಹೇಗೆ ಕೊಟ್ರು ಎಂದು ಭಾರೀ ಯೋಚನೆ ಮಾಡಿದೆ. ಬಳಿಕ ಮರು ಪರಿಶೀಲನೆಗೆ ಹಾಕಬೇಕು ಎಂದು ಅಂದುಕೊಂಡಿದ್ದೆ ಮತ್ತೆ ಬೇಡ ಎಂದು ಸುಮ್ಮನಿದ್ದೆ ಎಂದು ಮಂಜು ತಮಾಷೆ ಮಾಡಿದರು.

  • ದೊಡ್ಮನೆ ಮಂದಿಗೆ ‘ಕಾಲ ಕ್ಷಣಿಕ ಕಣೋ’ ಅಂದ ಬಿಗ್‍ಬಾಸ್

    ದೊಡ್ಮನೆ ಮಂದಿಗೆ ‘ಕಾಲ ಕ್ಷಣಿಕ ಕಣೋ’ ಅಂದ ಬಿಗ್‍ಬಾಸ್

    ಪ್ರತಿದಿನ ಮನೆಯ ಸ್ಪರ್ಧಿಗಳಿಗೆ ಹುರಿದುಂಬಿಸಲು ಬಿಗ್‍ಬಾಸ್ ಒಂದೊಂದು ಹಾಡುಗಳನ್ನು ಹಾಕುತ್ತಿದ್ದರು. ಸದ್ಯ ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ಮನೆಮಂದಿಗೆ ಅರ್ಥಪೂರ್ಣವಾದ ಹಾಡನ್ನು ಹಾಕಿದ್ದಾರೆ.

    FotoJet 5 11

    ಕೊರೊನಾದಿಂದ ರಾಜ್ಯಾದ್ಯಂತ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದು, ಇದೀಗ ಕಿರುತೆರೆಯ ಎಲ್ಲ ರಿಯಾಲಿಟಿ ಶೋ, ಧಾರಾವಾಹಿಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮ ಬಿಗ್‍ಬಾಸ್ ಕೂಡ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, 71ನೇ ದಿನ ಬಿಗ್‍ಬಾಸ್ ಮನೆ ಮಂದಿಗೆ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಹಾಡನ್ನು ಹಾಕಿದ್ದಾರೆ. ಅಲ್ಲದೆ ಕೊನೆಯಲ್ಲು ನಿಂತಾಗ ಬುಗುರಿಯ ಆಟ ಎಲ್ಲರೂ ಒಂದೇ ಓಟ ಕಾಲ ಕ್ಷಣಿಕ ಕಣೋ ಎಂದು ಹೇಳಿದ್ದಾರೆ.

    FotoJet 4 19

    ಪ್ರತಿದಿನ ಬೆಳಗ್ಗೆ ಸಾಂಗ್ ಪ್ಲೇ ಮಾಡಿದ ನಂತರ ಎಂದು ಕೂಡ ಮಾತನಾಡದ ಬಿಗ್‍ಬಾಸ್, ಕೊನೆಯ ದಿನ ಈ ಸಾಲುಗಳನ್ನು ಹೇಳಿದ್ದು, ಮನೆಮಂದಿಗೆ ಬಹಳ ಕೂತುಹಲ ಮೂಡಿಸಿತ್ತು. ಮಂಜು ಈ ಸಾಂಗ್‍ನನ್ನು ಮತ್ತೆ ಹಾಕುವಂತೆ ಕೇಳಿದರೆ, ಕೊನೆಯಲ್ಲಿ ಬಿಗ್‍ಬಾಸ್ ಮಾತನಾಡಿದ್ದಾರೆ ಎಂದು ಶಮಂತ್ ಚಕ್ರವರ್ತಿಗೆ ಹೇಳುತ್ತಾರೆ.

    FotoJet 2 19

    ಸಾಂಗ್ ಓಕೆ ಆದರೆ ಬಿಗ್‍ಬಾಸ್ ಏನಕ್ಕೆ ಹೇಳಿರಬಹುದು ಎಂದು ರಘು ತಲೆಕೆಡಿಸಿಕೊಳ್ಳುತ್ತಾರೆ. ಆಗ ಮನೆಯಿಂದ ಈ ಕಡೆಗೆ ಬಂದ ಶುಭಾ ಈ ಬಾರಿ ಟಿಟಿ ಫಿಕ್ಸ್ ಆಗಿದೆ ಎಂದರೆ, ಈ ವೇಳೆ ಮಂಜು ಶೇರ್ ಆಟೋ ಫಿಕ್ಸ್ ಆಗಿದೆ. ಕಾಲ ಕ್ಷಣಿಕ ಕಾನೋ ಅಂದು ಬಿಟ್ಟರಲ್ಲ. ಏನಪ್ಪಾ ಇದು ಎಂದು ಶುಭಾಗೆ ಕೇಳುತ್ತಾರೆ.

    FotoJet 3 16

    ಬಿಗ್‍ಬಾಸ್ ಮಾತನ್ನು ಕೇಳಿ ರಘು ತಮಗೆ ಗೊತ್ತಿಲ್ಲದೆಯೇ ಎಲ್ಲರನ್ನು ಒಟ್ಟಿಗೆ ಮನೆಯಿಂದ ಹೋಗಿ ಎಂದು ಹೇಳಿ ಬಿಡುತ್ತಾರಾ ಎನ್ನುತ್ತಾರೆ. ಒಟ್ಟಾರೆ ಕೊರೊನಾ ಮಾನವರಿಗೆ ಒಂದು ರೀತಿ ಜೀವನ ಪಾಠ ಕಲಿಸುತ್ತಿದ್ದು, ಬಿಗ್‍ಬಾಸ್ ಕೂಡ ಮನೆ ಮಂದಿಗೆ ಇಂದು ನಿಮ್ಮೆಲ್ಲರ ಪಯಣ ಬಿಗ್‍ಬಾಸ್ ಮನೆಯಲ್ಲಿ ಕೊನೆಯ ದಿನ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

  • ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ವಾರ ದೊಡ್ಮನೆ ಮಂದಿಗೆ ಕಣ್ಮಣಿ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕಾಮಿಡಿ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರಿಗೂ ಅವಾರ್ಡ್ ನೀಡುತ್ತಾ ಬಂದಿದೆ.

    bigg boss 4

    ಸದ್ಯ ಕಣ್ಮಣಿ ಈ ಮನೆಯಲ್ಲಿ ಸೋಮಾರಿ ಸುಬ್ಬಿ ಯಾರು ಎಂಬ ಪ್ರಶ್ನೆ ಕೇಳಿದೆ. ಈ ವೇಳೆ ಶುಭಾ ಪೂಂಜಾ ಸ್ವತಃ ತಾವೇ ಎಂದು ಹೇಳುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತುತ್ತಾರೆ. ಆಗ ಮನೆಯ ಸ್ಪರ್ಧಿಗಳು ಕೂಡ ಶುಭಾ ಕಡೆ ಬೆರಳು ಮಾಡಿದ್ದಾರೆ. ಇದರಲ್ಲಿ ಶುಭಾಗೆ ಕಾಂಪಿಟೇಷನ್ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಸೋಮಾರಿ ಸುಬ್ಬಿ ಶುಭಾ. ಇದಕ್ಕೆ ವೋಟು ಇಲ್ಲ. ಅಭಿಪ್ರಾಯವಿಲ್ಲ, ಏನು ಇಲ್ಲ. ಒಂದೇ ಬಾರಿಗೆ ಸುಗ್ರಿವಾಜ್ಞೆ, ಶುಭಾಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನುತ್ತಾರೆ.

    FotoJet 8 30

    ನಂತರ ರಘು ಕೂಡ, ಇವರೆಷ್ಟು ಸೋಮಾರಿ ಎಂದರೆ ಟ್ರೋಫಿನೂ ಯಾರಾದರೂ ಎತ್ತಿಕೊಂಡು ಬಂದು ಕೊಡಿ ಅಂದಾಗ ಯಾವುದೇ ಟಾಸ್ಕ್ ಕೊಟ್ಟರೂ ಇದು ಯಾಕೆ ಕೊಡಬೇಕಾಗಿತ್ತು. ಮೈಕ್ ಸರಿ ಮಾಡಿಕೊಳ್ಳಿ ಎಂದರೆ ಯಾಕೆ ಹಾಗೆ ಕೂಗಾಡುತ್ತೀರಾ ಬಿಗ್‍ಬಾಸ್, ಏನು ಗಂಟು ಹೋಗುತ್ತಾ ಎಂದು ಕೇಳುತ್ತಾರೆ. ಕೆಲಸದ ತಂಟೆಗೆ ಬರುವುದಿಲ್ಲ. ಅಡುಗೆ ಹೀಗೆ ಎಲ್ಲದರನ್ನು ನೆಗೆಲೆಟ್ ತೋರಿಸುತ್ತಾರೆ ಎಂದು ಮಂಜು ಹೇಳುತ್ತಾರೆ.

    FotoJet 3 9

    ಪ್ರಶಾಂತ್ ಕೂಡ ಬೆಳಗ್ಗೆ ಎದ್ದು ಕುಳಿತುಕೊಂಡ ನಂತರ ಟೀ ಮಾಡಿಕೊಳ್ಳುವುದರಿಂದ ಹಿಡಿದು, ಟೀ ಕಪ್ ಕೊಡುವವರೆಗೂ ಹುಡುಕಿಕೊಂಡು ಹೋಗಿ ಕೊಡಬೇಕು. ಒಳ್ಳೆ ರಾಣಿ ತರಹ ಇರುತ್ತಾರೆ, ಅವರದು ಹೊರಗಡೆಯೂ ರಾಣಿ ಜೀವನ, ಬಿಗ್‍ಬಾಸ್ ಮನೆಯಲ್ಲಿಯೂ ರಾಣಿ ಜೀವನ ಎಂದು ಹಾಸ್ಯ ಮಾಡುತ್ತಾರೆ.

    FotoJet 3 26

    ಈ ವೇಳೆ ನಿಧಿ ಸುಬ್ಬಯ್ಯ ಕೂಡ ಶುಭಾ ಹಾಗೂ ನಾನು ಇಬ್ಬರು ಒಂದು ವೇಳೆ ಬಾತ್ ರೂಮ್ ಡಿಪಾರ್ಟ್‍ಮೆಂಟ್‍ನಲ್ಲಿ ಒಟ್ಟಿಗೆ ಇದ್ದರೆ, ನಾನು ಇವತ್ತು ಬಾತ್ ರೂಮ್ ಕ್ಲೀನ್ ಮಾಡುತ್ತೇನೆ ಎಂದು ನಾಲ್ಕು ಜನರನ್ನು ಕರೆದುಕೊಂಡು ಬಂದು ತೋರಿಸುತ್ತಾರೆ. ಕ್ಲೀನ್ ಮಾಡಿದ ನಂತರ ಹೇಗಿದೆ ಕ್ಲೀನಿಂಗ್ ಎಂದು ಕೇಳಿ ಹೋದ ಬಳಿಕ, ನಾನು ಮತ್ತೊಮ್ಮೆ ಬಾತ್ ರೂಮ್ ಕ್ಲೀನ್ ಮಾಡುತ್ತೇನೆ. ಅಡುಗೆ ಮನೆಯಲ್ಲಿಯೂ ಹಾಗೆ ಗಲೀಜು ಮಾಡುತ್ತಾಳೆ. ಅವಳ ಬೆಡ್ ಹಾಗೂ ಬಟ್ಟೆ ಕ್ಲೀನ್ ಮಾಡಿಕೊಳ್ಳಲು ಹೇಳಿದರೂ ನಿನಗೇನು ಪ್ರಾಬ್ಲಂ ನಿನ್ನ ಬೆಡ್ ಸೈಡ್ ಕ್ಲೀನ್ ಇದ್ಯಾಲ್ಲಾ ಹೋಗಿ ಮಲಗಿಕೋ ಅಂತಾಳೆ ಎಂದು ರೇಗಿಸುತ್ತಾರೆ.

    nidhi

    ಇಂದು ಬೆಳಗ್ಗೆ ಎದ್ದು ಬ್ರಶ್ ಮಾಡುವಾಗ ಕೂಡ ಶುಭಾ ಸೋಫಾ ಮೇಲೆ ಕುಳಿತುಕೊಂಡು ಮಾಡುತ್ತಿದ್ದರು ಎಂದು ಅರವಿಂದ್ ಹೇಳುತ್ತಾ, ಮಿಮಕ್ರಿ ಮಾಡುತ್ತಾ ತೋರಿಸುತ್ತಾರೆ. ಅದನ್ನು ನೋಡಿ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ.

  • ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ರವಿಂದ್ ದಿವ್ಯಾ ಉರುಡುಗ ಜೊತೆ ಎಷ್ಟೇ ಇದ್ದರೂ ಎಲ್ಲರನ್ನೂ ಸಂಭಾಳಿಸುತ್ತಾನೆ, ಮಾತನಾಡಿಸುತ್ತಾನೆ, ನಮಗೂ ಟೈಮ್ ಕೊಡುತ್ತಾನೆ. ದಿವ್ಯಾ ಉರುಡುಗ ಬಂದ್ರೆ ಅರವಿಂದ್ ಸರಿ ಹೋಗಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಮತ್ತೆ ಬಿಗ್ ಮನೆಯಲ್ಲಿ ದಿವ್ಯಾ ನೆನಪಿಸಿಕೊಂಡಿದ್ದಾರೆ.

    bb aravind kp 1

    ಹುಡ್ಗ-ಹುಡ್ಗಿ ಜೋಡಿಯಾಗಿದ್ರೆ ಒಂದು ರೀತಿಯ ಪ್ಯಾಂಪರಿಂಗ್ ಇರುತ್ತೆ, ಹುರುಪಿನಿಂದ ಟಾಸ್ಟ್ ಮಾಡುತ್ತಾರೆ. ಆದರೆ ನಮಗೆ ಪೇರ್ ಇಲ್ಲದಕ್ಕೆ ಹೀಗೆ ಆಗುತ್ತಿದೆ. ಈಗ ದಿವ್ಯಾ ಇಲ್ಲದ್ದಕ್ಕೆ ಅರವಿಂದ್ ಎನರ್ಜಿ ಕುಸಿಯುತ್ತಿದೆ. ವೈಷ್ಣವಿ ಹಾಗೂ ಅರವಿಂದ್‍ಗೂ ಪೇರ್ ಆಗಲ್ಲ. ಈಗ ದಿವ್ಯಾ ಬಂದ್ರೆ ಅರವಿಂದ್ ಸರಿ ಹೋಗಬಹುದು. ಆದರೆ ಅರವಿಂದ್ ತುಂಬಾ ಒಳ್ಳೆ ಹುಡುಗ ಗುರು, ನನಗೆ ಒಬ್ಬಬ್ಬರ ಬಗ್ಗೆ ಹೇಳಿ ಎಂದು ಕೇಳಿದರೆ, ಸರಿಯಾಗಿ ಹೇಳುತ್ತೇನೆ. ಇವರೆಗೆಲ್ಲ ಹೆದರುವುದಿಲ್ಲ ಎಂದು ಚಕ್ರವರ್ತಿ ನೇರವಾಗಿ ಮಾತನಾಡಿದ್ದಾರೆ.

    divya uruduga 1

    ಮಂಜು ಪಾವಗಡ ಬಗ್ಗೆ ಸಹ ಚಕ್ರವರ್ತಿ ಅಸಮಾಧಾನ ಹೊರ ಹಾಕಿದ್ದಾರೆ. ಮನೆಯ ಎಂಟರ್‍ಟೈನರ್, ವಿದೂಷಕ ಎನ್ನುವುದು ತಿಳಿದ ವಿಚಾರ. ಆದರೆ ಮಂಜು ತಮ್ಮ ಹಾಸ್ಯ ಪ್ರಜ್ಞೆ ಬಗ್ಗೆ ಮೈಮರೆತಿದ್ದಾರೆ. ಹೀಗಾಗಿ ಮನೆಯಲ್ಲಿ ಗುಸುಗುಸು ಶುರುವಾಗಿದ್ದು, ಒಂದು ಹುಡುಗಿಗಾಗಿ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ.

    bb aravind kp 3

    ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರು ಎಲ್ಲ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿರುವಾಗ ಮಂಜು ಪಾವಗಡ ಬಗ್ಗೆ ಸಹ ಮಾತನಾಡಿದ್ದು, ವಿದೂಷಕರಾಗಿ ಕೆಲಸ ಮಾಡುವುದು ತುಂಬಾ ಕಷ್ಟ. ಮತ್ತೊಬ್ಬರನ್ನು ನಗಿಸುವುದು ಸುಲಭವಲ್ಲ, ಆದರೆ ಒಂದು ಹುಡುಗಿಗಾಗಿ ಮಂಜು ತನ್ನ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಚಕ್ರವರ್ತಿ ಮಾತ್ರವಲ್ಲ, ಈ ಹಿಂದೆ ಕಿಚ್ಚ ಸುದೀಪ್ ಸಹ ಮಂಜುಗೆ ನೇರವಾಗಿ ಹೇಳಿದ್ದರು. ನೀವು ಒಬ್ಬ ಎಂಟರ್‍ಟೈನರ್, ಹಾಸ್ಯ ಕಲಾವಿದರು ಎನ್ನುವುದನ್ನೇ ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ್ದರು. ಆದರೂ ಮಂಜು ಮಾತ್ರ ಎಚ್ಚರವಾಗಿಲ್ಲ.

    ಮಂಜು ಬಗ್ಗೆ ಮುಂದುವರಿದು ಮಾತನಾಡಿರುವ ಚಕ್ರವರ್ತಿ, ದಿವ್ಯಾ ಸುರೇಶ್ ಹೋದರೆ ಮಂಜು ಕಥೆ ಅಷ್ಟೇ ಎಂದು ಚಕ್ರವರ್ತಿ ಹೇಳುತ್ತಾರೆ. ಇಲ್ಲ ದಿವ್ಯಾ ಹೋದರೆ ಮತ್ತೊಬ್ಬರನ್ನು ಜೊತೆ ಮಾಡಿಕೊಳ್ಳುತ್ತಾನೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    vlcsnap 2021 05 09 08h23m54s230

    ಇಂದು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ ಕಣ್ಮಣಿ ಸಹ ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹಾಸ್ಯ ಕಲಾವಿದರಾಗಿ ಎಲ್ಲರನ್ನೂ ನಗಿಸಲು ಇನ್ನೂ ಎಷ್ಟು ದಿನಗಳು ಬೇಕು ಎಂದು ಪ್ರಶ್ನಿಸಿದ್ದಾರೆ. ಆಗ ನಾನು ಮನೆಯಲ್ಲಿದ್ದರೆ ಸೋಮವಾರದಿಂದ ನಗಿಸುತ್ತೇನೆ ಎಂದು ಮಂಜು ಹೇಳಿದ್ದಾರೆ. ಆದರೆ ಈಗ ಒಂದು ವಾರ ವೇಸ್ಟ್ ಆಯಿತಲ್ಲ ಎಂದು ಕಣ್ಮಣಿ ಬೇಸರ ವ್ಯಕ್ತಪಡಿಸಿದ್ದಾರೆ.

  • ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದಿವ್ಯಾ ಎದುರಾಳಿಯಾಗಿ ಮಂಜುವನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?

    ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದಿವ್ಯಾ ಎದುರಾಳಿಯಾಗಿ ಮಂಜುವನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಸೋಲಿಸುವ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಈ ನಡುವೆ ಕೆಲ ಸ್ಪರ್ಧಿಗಳು ತಮ್ಮ ಎದುರಾಳಿ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭ ಮೈಂಡ್‍ಗೇಮ್ ಆಡಲು ಶುರುಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟಂತಹ ಗಾಜಿನ ತೊಟ್ಟಿಗೆ ಗೋಲಿಗಳನ್ನು ಹಾಕುವ ಟಾಸ್ಕ್ ನಲ್ಲಿ ದಿವ್ಯಾ ಸುರೇಶ್ ಎದುರಾಳಿಯಾಗಿ ಮಂಜು ಪಾವಗಡ ಅವರನ್ನು ಆಯ್ಕೆ ಮಾಡಿ ನಂತರ ಅವರ ಮೈಂಡ್‍ಗೇಮ್ ಬಗ್ಗೆ ತಿಳಿಸಿದ್ದಾರೆ.

    manju 4 1

    ಗಾಜಿನ ತೊಟ್ಟಿಗೆ ಗೋಲಿಗಳನ್ನು ಹಾಕುವ ಟಾಸ್ಕ್ ನಲ್ಲಿ ದಿವ್ಯಾ ತಮ್ಮ ಎದುರಾಳಿ ಆಟಗಾರನಾಗಿ ಮಂಜು ಅವರನ್ನು ಆಯ್ಕೆ ಮಾಡಿ ಆಟಕ್ಕೆ ಸಜ್ಜಾಗಿದ್ದರು. ನಂತರ ಆಟದಲ್ಲಿ ಮೊದಲು ಮಂಜು ಒಂದು ಗೋಲಿಯನ್ನು ಗ್ಲಾಸ್‍ನೊಳಗೆ ಹಾಕಿದರೆ. ಇವರೊಂದಿಗೆ ದಿವ್ಯಾ ಕೂಡ ಒಂದು ಗೋಲಿಯನ್ನು ಹಾಕಿ ತೀವ್ರ ಪೈಪೋಟಿ ನೀಡಿದರು. ನಂತರ ಕಡೆಯದಾಗಿ ಒಂದು ಗೋಲಿ ಗ್ಲಾಸ್‍ಗೆ ಹಾಕಲು ಬಾಕಿ ಇದ್ದಾಗ ದಿವ್ಯಾ ಅವರು, ಮಂಜು ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು ಆದರೂ ಮಂಜು ಮಾತನಾಡಿಕೊಂಡೆ ಗೋಲಿಗಳನ್ನು ಗಾಜಿನ ಗ್ಲಾಸ್‍ನೊಳಗೆ ಹಾಕಿ ಜಯಗಳಿಸಿದರು. ಈ ಮೂಲಕ ದಿವ್ಯಾ ಅವರನ್ನು ಸೋಲಿಸಿ ಟಾಸ್ಕ್ ಗೆದ್ದುಕೊಂಡರು.

    manju 6 1

    ನಂತರ ಮಾತಿಗಿಳಿದ ದಿವ್ಯಾ ಮತ್ತು ಮಂಜು ಟಾಸ್ಕ್ ಬಗ್ಗೆ ವಿಮರ್ಶೆ ಮಾಡತೊಡಗಿದರು. ಮಂಜು ಮೀಸೆ ತಿರುಗಿಸಿಕೊಂಡು ನೀನು ನನ್ನನ್ನು ಸುಲಭವಾಗಿ ಸೋಲಿಸಬಹುದೆಂದು ಟಾಸ್ಕ್ ನಲ್ಲಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು ಅಲ್ವ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದಿವ್ಯಾ ಹಾಗೆನಿಲ್ಲ ನನಗೆ ಯಾರು ಗೆದ್ದರು ಕೂಡ ಸಂತೋಷವೆ. ಈ ಸಲ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನೀನು ವಿನ್ ಆಗಿ ತೋರಿಸು ಎಂದು ಸವಾಲು ಹಾಕಿದರು. ಇದಕ್ಕೆ ಮಂಜು ಹೌದು ಈ ವಾರ ಗೆಲ್ಲಲೇ ಬೇಕು ಎಂದರು. ಇದಕ್ಕೆ ದಿವ್ಯಾ ಈ ವಾರ ಕ್ಯಾಪ್ಟನ್ ಆದರೆ ಸುಲಭವಾಗಿ ಎರಡು ವಾರ ಕಳೆಯಬಹುದು ಎಂದು ಮಂಜುಗೆ ಟಿಪ್ಸ್ ಕೊಟ್ಟರು.

    divya 8

    ದಿವ್ಯಾ ಟಾಸ್ಕ್ ನಲ್ಲಿ ಮಂಜು ಅವರನ್ನು ಕೆರಳಿಸಿ ಗೆಲ್ಲಬಹುದೆಂದು ಅಂದುಕೊಂಡು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಆದರೆ ಮಂಜು ಮಾತ್ರ ತಲೆ ಉಪಯೋಗಿಸಿಕೊಂಡು ಟಾಸ್ಕ್ ನಲ್ಲಿ ವಿನ್ ಆದರು. ಆ ಬಳಿಕ ಮಂಜು ಜೊತೆ ದಿವ್ಯಾ ತನ್ನ ಮೈಂಡ್‍ಗೇಮನ್ನು ಬಿಚ್ಚಿಟ್ಟರು. ಇದನ್ನು ಗಮನಿಸಿದಾಗ ಬಿಗ್‍ಮನೆಯಲ್ಲಿ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚಾಗತೊಡಗಿದೆ ಎಂದು ಭಾಸವಾಗುತ್ತಿದೆ.

  • ಬಿಗ್‍ ಮನೆಯಲ್ಲಿ 55 ದಿನದ ಬಳಿಕ ಲ್ಯಾಗ್ ಮಂಜು ಹೇಳಿದ್ದೇನು ಗೊತ್ತಾ?

    ಬಿಗ್‍ ಮನೆಯಲ್ಲಿ 55 ದಿನದ ಬಳಿಕ ಲ್ಯಾಗ್ ಮಂಜು ಹೇಳಿದ್ದೇನು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಕಳೆದಂತೆ ಸ್ಪರ್ಧಿಗಳಿಗೆ ಬಿಗ್‍ಬಾಸ್ ಮನೆಯ ಅಸಲಿ ಕತೆ ಒಂದೊಂದಾಗಿ ಗೊತ್ತಾಗುತ್ತಿದೆ. ಬಿಗ್‍ಮನೆಗೆ ಬರುವ ಮುಂಚೆ ಇದ್ದಂತಹ ಕುತೂಹಲಗಳು ಇದೀಗ ಒಂದೊಂದಾಗಿ ಅನುಭವವಾಗಿ ಮಾರುತ್ತಿದೆ. ಈ ಮಧ್ಯೆ ಬಿಗ್‍ಬಾಸ್ ಮನೆಯಲ್ಲಿ 55 ದಿನ ಕಳೆದು ಮುನ್ನುಗ್ಗುತ್ತಿರುವ ಮಂಜು ಪಾವಗಡ ಅವರು ಮನೆಯ ಪರಿಸ್ಥಿತಿ ಹಾಗೂ ತಮ್ಮ ಅಭಿಪ್ರಾಯಾಗಳನ್ನು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ಬಿಚ್ಚಿಟ್ಟಿದ್ದಾರೆ.

    bigg boss 19

    ಮಧ್ಯರಾತ್ರಿ ಎದ್ದು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತ ಮಂಜು, ಬಿಗ್‍ಬಾಸ್ ಎರಡು ದಿನಗಳಿಂದ ನೀವು ಕೊಟ್ಟ ಟಾಸ್ಕ್ ನಿಂದಾಗಿ ಕೆಲವರು ತುಂಬಾನೆ ಕಷ್ಟಪಡುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ನನಗೆ ಈಗ ಸರಿಯಾಗಿ ಅರ್ಥವಾಗುತ್ತಿದೆ. ನಾನು ಬಿಗ್‍ ಮನೆಗೆ ಬರುವ ಮುಂಚೆ ಇಲ್ಲಿ ಯಾಕೆ ಈರೀತಿ ಜಗಳವಾಡಿಕೊಂಡು ಇರುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ಇದೀಗ ನನಗೆ ಇದೆಲ್ಲ ಯಾಕೆ ಎಂದು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.

    manju 2 2

    ಇಲ್ಲಿನ ಈಗಿನ ಸ್ಥಿತಿಯನ್ನು ಕಂಡು ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ನನಗೆ ವಾರನುಗಟ್ಟಲೆ ಸ್ನಾನ ಮಾಡದೆ ಎಲ್ಲ ಅಭ್ಯಾಸ ಇದೆ. ಆದರೆ ಇಲ್ಲಿರುವ ಕೆಲವು ಸ್ಪರ್ಧಿಗಳು ದೊಡ್ಡ ದೊಡ್ಡ ಮನೆತನದಿಂದ ಬಂದವರು ಅವರಿಗೆ ಒಂದು ದಿನ ಸ್ನಾನ ಮಾಡಿಲ್ಲ ಅಂದ್ರು ಆಗುವುದಿಲ್ಲ. ಹಾಗಾಗಿ ಅವರು ತುಂಬಾ ಕಷ್ಟಪಡುತ್ತಿದ್ದಾರೆ. ಆದರೆ ನನಗೆ ಇದೆಲ್ಲ ಅಭ್ಯಾಸ ಇದೆ ಹಲ್ಲು ಉಜ್ಜಿದರು ಆಗುತ್ತದೆ ಇಲ್ಲದಿದ್ದರು ಆಗುತ್ತದೆ. ಅವರೆಲ್ಲರು ಕೂಡ ಸ್ನಾನ ಮಾಡಿ ಫಫ್ರ್ಯೂಮ್ ಹಾಕುತ್ತಾರೆ. ನಾನು ಅವರಂತೆ ಇರುವುದಕ್ಕೋಸ್ಕರ ಹಾಕಿಕೊಳ್ಳುತ್ತಿದ್ದೇನೆ. ನಾನಂತು ಈ ದಿನಗಳನ್ನು ತುಂಬಾ ಖುಷಿಯಿಂದ ಕಳೆಯುತ್ತಿದ್ದೇನೆ ಅದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

    manju 1 2

    ಬಿಗ್‍ಮನೆಯಲ್ಲಿ ದಿನಗಳು ಕಳೆಯುತ್ತಿದೆ. ಅದರಂತೆ ಸ್ಪರ್ಧಿಗಳು ಕೂಡ ತಮ್ಮ ತಮ್ಮ ಆಟದಲ್ಲಿ ಹೆಚ್ಚಿನ ಗಮನವಿಟ್ಟುಕೊಂಡು ಮುಂದೆ ಹೋಗಳು ಬಯಸುತ್ತಿದ್ದಾರೆ. ಇದರೊಂದಿಗೆ ಸಣ್ಣ ಸಣ್ಣ ಜಗಳ, ಟಾಸ್ಕ್, ಜೋಡಿ ಹಕ್ಕಿಗಳ ಮಾತು, ಹರಟೆ ಹೀಗೆ ನೋಡುಗರಿಗೆ ಖುಷಿ ನೀಡುತ್ತಿದೆ.

  • ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    – ವೈಶು ಕಾಲಿಗೆ ನಮಸ್ಕರಿಸಿದ ರಾಜೀವ್

    ಬೆಂಗಳೂರು: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆಯೇ ದೊಡ್ಮನೆ ಮಂದಿ ವಾಕಿಂಗ್, ಜಾಗಿಂಗ್ ಅಂತಾ ಬ್ಯುಸಿಯಾಗುತ್ತಾರೆ. ಅದರಲ್ಲೂ ವೈಷ್ಣವಿ ಡಿಫರೆಂಟ್ ಆಗಿ ಯೋಗ, ಧ್ಯಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    FotoJet 9 23

    ಆದ್ರೆ ಇಷ್ಟು ದಿನ ವೈಷ್ಣವಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ ಮನೆಮಂದಿಗೆ ವೈಷ್ಣವಿಯ ಕಳ್ಳಾಟ ಬಹಿರಂಗಗೊಂಡಿದೆ.

    ಹೌದು ನಿನ್ನೆ ಲಿವಿಂಗ್ ಏರಿಯಾದ ಬಳಿ ಕುಳಿತುಕೊಂಡಿದ್ದ ವೈಷ್ಣವಿ ಇದ್ದಕ್ಕಿದಂತೆ ಧ್ಯಾನ ಮಾಡಲು ಶುರುಮಾಡುತ್ತಾರೆ. ಇದನ್ನು ನೋಡಿ ಪ್ರಿಯಾಂಕ, ಶಮಂತ್‍ಗೆ ಈ ರೀತಿಯ ಜಗಳ, ಗದ್ದಲದ ಮಧ್ಯೆ ಇವರು ಹೇಗೆ ಧ್ಯಾನ ಮಾಡುತ್ತಾರೆ ಎಂದು ಕೇಳುತ್ತಾರೆ. ಆಗ ಶಮಂತ್ ಮೊದಲಿಗೆ ಅವರು ಎಷ್ಟೇ ಗಲಾಟೆ ಇದ್ದರೂ ಏಕಾಗ್ರತೆ ಹೊಂದಿರುತ್ತಾರೆ. ಆದ್ರೆ ನಿಜವಾಗಿಯೂ ಅವರು ನಿದ್ದೆಯೇ ಮಾಡುತ್ತಾರೋ ಧ್ಯಾನವೇ ಮಾಡುತ್ತಾರೋ ಗೊತ್ತಿಲ್ಲ. ಮುಖ ಯಾವಗಲೂ ಹಸನ್ಮುಖಿಯಾಗಿಯೇ ಇರುತ್ತದೆ ಎನ್ನುತ್ತಾರೆ.

    FotoJet 8 32

    ಬಳಿಕ ಬಿಗ್‍ಬಾಸ್ ಈ ವೈಷ್ಣವಿಯವರು ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ. ಬೇಕಾದರೆ ಅವರ ಮುಖದ ಹಾವ-ಭಾವ ನೋಡಿ ಬಿಗ್‍ಬಾಸ್, ತೂಗಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.

    FotoJet 7 33

    ನಂತರ ವೈಷ್ಣವಿ ನಿದ್ದೆ ಮಾಡುತ್ತಿರುವುದನ್ನು ಕಂಡು ಎಂತಾ ನಾಟಕ ಎಂದು ಮನೆಮಂದಿಯೆಲ್ಲಾ ರೇಗಿಸುತ್ತಾರೆ. ಈ ವೇಳೆ ಶಮಂತ್, ರಾಜೀವ್ ಎದ್ದು ಬಂದು ವೈಷ್ಣವಿಗೆ ನಮಸ್ಕಾರ ಮಾಡಿ, ನಮಗೂ ಹೇಳಿದ್ದರೆ ಇಷ್ಟು ದಿನ ನಾವು ಹೀಗೆ ಮಾಡುತ್ತಿದ್ವಿ ಎಂದರೆ, ರಾಜೀವ್ ದೇವರೇ ಈ ರೀತಿಯ ಮೆಡಿಟೇಷನ್ ನಮಗೂ ಕಲಿಸಪ್ಪಾ ಎಂದಿದ್ದಾರೆ.

    FotoJet 10 18

    ಈ ವೇಳೆ ಮಂಜು ಬಿಗ್‍ಬಾಸ್ ಈ ಯಮ್ಮ ಮೋಸ ಮಾಡ್ತಿದ್ದಾಳೆ. ರಾತ್ರಿಯೆಲ್ಲಾ ಈ ಯಮ್ಮಾ ಅದೇ ಮಾಡುವುದು, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡಿ ನಿಮಗೆ ಯಾಮಾರಿಸುತ್ತಿದ್ದಾಳೆ ನೋಡಿಕೊಳ್ಳಿ ಅಂತಾರೆ. ಈ ವೇಳೆ ವೈಷ್ಣವಿ ಮನೆಯವರ ಮಾತನ್ನು ಕೇಳಿ ನಗುತ್ತಾರೆ.

  • ಮಾತಿನ ಮಧ್ಯೆ ಮೂಗು ತೂರಿಸಿದ ದಿವ್ಯಾ ಸುರೇಶ್‍ಗೆ ತರಾಟೆ ತೆಗೆದುಕೊಂಡ ಅರವಿಂದ್!

    ಮಾತಿನ ಮಧ್ಯೆ ಮೂಗು ತೂರಿಸಿದ ದಿವ್ಯಾ ಸುರೇಶ್‍ಗೆ ತರಾಟೆ ತೆಗೆದುಕೊಂಡ ಅರವಿಂದ್!

    ಬಿಗ್‍ಬಾಸ್ ನೀಡಿದ್ದ ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನಲ್ಲಿ ನಡೆದಿದ್ದ ಮೋಸದಿಂದ ಮನೆಯ ಸದಸ್ಯರು ನಿಧಿ, ಮಂಜು, ದಿವ್ಯಾ ಸುರೇಶ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    FotoJet 1 53

    ಸದ್ಯ ನಿನ್ನೆ ಮನೆಯಲ್ಲಿ ಕಳಪೆ ಸದಸ್ಯರನ್ನು ಆಯ್ಕೆ ಮಾಡುವ ವೇಳೆ, ಅರವಿಂದ್ ಹಾಗೂ ದಿವ್ಯಾ ಸುರೇಶ್ ಮಧ್ಯೆ ವಾಗ್ವಾದ ನಡೆದಿದೆ. ಮಂಜು ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ವೇಳೆ ನಾನು ಮಾಡಿದ್ದು ತಪ್ಪು. ನಾನು ನನ್ನ ತಪ್ಪನ್ನು ಹಾನೆಸ್ಟ್ ಆಗಿ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಆಡಿದ ಆಟ ಸರಿಯಾಗಿರಲಿಲ್ಲ. ದಯವಿಟ್ಟು ಎಲ್ಲರೂ ಕ್ಷಮಿಸಿ. ಇನ್ನೂ ಮುಂದೆ ಆ ರೀತಿ ಆಟ ಆಡುವುದಿಲ್ಲ. ಈಗಾಗಲೇ ನಾನು ತುಂಬಾ ಕೊರಗಿದ್ದೀನಿ, ತುಂಬಾ ಅನುಭವಿಸುತ್ತಿದ್ದೇನೆ. ಇದರ ಮೇಲೆ ಹೆಚ್ಚಿಗೆ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದು ಎಲ್ಲರಿಗೂ ಹೇಳುತ್ತಾರೆ. ಈ ವೇಳೆ ಮಂಜು ಮಾತು ಕೇಳಿ ಮನೆಯ ಮಂದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

    FotoJet 2 51

    ಆದರೆ ಅರವಿಂದ್ ಮಾತಿನಲ್ಲಿ ಹೇಳುವುದರಿಂದ ನಮಗೆ ಆ ಫೀಲಿಂಗ್ ಇನ್ನೂ ಬರುವುದಿಲ್ಲ. ನಾನು ಸತ್ಯವಾಗಿ ಹೇಳುತ್ತೇನೆ ಸರಿಹೋಗುವುದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತದೆ. ನಾನು ನಿನ್ನನ್ನು ಅಷ್ಟು ನಂಬಿದ್ದೇನೆ ಎಂದರೆ ಅದಕ್ಕೆ ತುಂಬಾ ತೂಕವಿರುತ್ತದೆ ಎಂದು ಹೇಳುತ್ತಾರೆ. ಆಗ ಮಂಜು ಒಂದು ಕ್ಷಣ, ಒಂದು ನಿಮಿಷ ಗೊತ್ತಿಲ್ಲದೇ ನಾನು ತಪ್ಪು ಮಾಡಿಬಿಟ್ಟಿದ್ದೇನೆ. ಅದೊಂದು ಯಾವಾಗ ಆಗ ಬಾರದಿತ್ತೋ ಆಗ ಆಗಿದೆ ಎಂದು ಅರವಿಂದ್ ಹೇಳುವ ವೇಳೆ ದಿವ್ಯಾ ಸುರೇಶ್, ಮಂಜುವನ್ನು ಮಾತನಾಡಿ ಮುಗಿಸಲು ಬಿಡಿ ಎಂದು ಹೇಳುತ್ತಾರೆ.

    FotoJet 9 20

    ಆಗ ಅರವಿಂದ್ ಅವನು ನನ್ನ ಹತ್ತಿರ ಮಾತನಾಡುತ್ತಿದ್ದಾನೆ. ನೀನು ಸುಮ್ಮನೆ ಇರಮ್ಮ ಎರಡು ನಿಮಿಷ, ನಾನು ಅವನು ಮಾತನಾಡುತ್ತಿದ್ದರೆ ನೀನಗೇನು ತೊಂದರೆಯಾಗುತ್ತಿದೆ. ನೀನು ಮಾತನಾಡಬೇಕು ಅಂದರೆ ಮಾತ್ರ ನನ್ನ ಜೊತೆ ಮಾತನಾಡು, ಅವನು ಮಾತನಾಡಬೇಕು ಅನಿಸಿದರೆ ಅವನು ಮಾತನಾಡುತ್ತಾನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಅಲ್ಲ ಒಬ್ಬರು ಮಾತನಾಡುವಾಗ ಕೇಳಿಸಿಕೊಳ್ಳೋಣ ಅಂತ ಹೇಳುತ್ತಾರೆ.

    FotoJet 3 49

     

    ಬಳಿಕ ಅರವಿಂದ್ ಕೋಪದಿಂದ ಅವನು ನನ್ನ ಫ್ರೆಂಡೇ, ನಾನು ಅವನು ಫ್ರೆಂಡೇ ನಾವು ಮಾತನಾಡುತ್ತಿದ್ದೀವಿ ಅಲ್ವಾ. ನೀನು ಸುಮ್ಮನೆ ಕೂರು ಎಂದು ಕಿಡಿಕಾರಿದ್ದಾರೆ.