Saturday, 23rd March 2019

1 day ago

ಓಮ್ನಿ ಕಾರು ಮರಕ್ಕೆ ಡಿಕ್ಕಿ – ಯುವ ಚಿತ್ರ ನಿರ್ದೇಶಕ ಸಾವು

ಮಂಗಳೂರು: ಓಮ್ನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತುಳು ಚಿತ್ರ ನಿರ್ದೇಶಕ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಶಿರ್ತಾಡಿಯಲ್ಲಿ ನಡೆದಿದೆ. ಹ್ಯಾರಿಸ್ ಹೌದಾಲ್(30) ಮೃತಪಟ್ಟ ಯುವ ಚಿತ್ರ ನಿರ್ದೇಶಕ. ಹ್ಯಾರಿಸ್ ಹೌದಾಲ್ ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತ ಹ್ಯಾರಿಸ್ ಹೌದಾಲ್ ಕಾರಿನಲ್ಲಿ ಮೂಡುಬಿದ್ರೆಯಿಂದ ಶಿರ್ತಾಡಿ ಕಡೆಗೆ ಬೆಳಗ್ಗಿನ ಜಾವ ಹೋಗುತ್ತಿದ್ದರು. ಈ ವೇಳೆ ಮೂಡುಬಿದ್ರೆಯ ಶಿರ್ತಾಡಿ ಬಳಿ ನಿದ್ದೆ ಮಂಪರಿನಲ್ಲಿ ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. […]

4 days ago

ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ. 18 ವರ್ಷದ ಪ್ರೀತಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಆಳ್ವಾಸ್ ಸಂಸ್ಥೆಯ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತುಮಕೂರು ಮೂಲದ ಪ್ರೀತಿ ಸೋಮವಾರ ಬೆಳಗ್ಗೆ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ....

ಕಾರಿಗೆ ಡಿಕ್ಕಿಯಾಗಿ, ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟರೂ, ಅಪಾಯದಿಂದ ಪಾರಾದ ಮಹಿಳೆಯರು

2 weeks ago

ಮಂಗಳೂರು: ಮಹಿಳೆಯರಿಬ್ಬರು ಹೈವೇ ರಸ್ತೆಗೆ ಸ್ಕೂಟರ್ ನುಗ್ಗಿಸುವ ಯತ್ನದಲ್ಲಿ ಇನ್ನೋವಾ ಕಾರಿಗೆ ಡಿಕ್ಕಿಯಾಗಿ, ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟರೂ ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಪೇಟೆ ಬಳಿಯ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಅಪಘಾತದ ದೃಶ್ಯ...

ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪವಾಡ

2 weeks ago

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶದ ಸಂಭ್ರಮದಲ್ಲಿದ್ದು, ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ ನಡೆದಿದೆ. ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ಅಚಾನಕ್ಕಾಗಿ ಪ್ರತ್ಯಕ್ಷವಾದ ಗರುಡವೊಂದು ದೇವಸ್ಥಾನದ ಮೇಲ್ಭಾಗದಿಂದ ಪ್ರದಕ್ಷಿಣೆ ಹಾಕಿದೆ. ಸೇರಿದ್ದ ಸಾವಿರಾರು ಭಕ್ತರು ಇದನ್ನು...

ಮೂರನೇ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಬಗ್ಗೆ ಸುಳಿವಿತ್ತ ಗೃಹಸಚಿವ ರಾಜನಾಥ್ ಸಿಂಗ್

2 weeks ago

– ಕರ್ನಾಟಕದ್ದು ಕಿಚಡಿ ಸರ್ಕಾರ ಮಂಗಳೂರು: ಉರಿ, ಬಾಲಕೋಟ್ ಸೇರಿದಂತೆ ಭಾರತ ಗಡಿ ದಾಟಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಉರಿ ಮತ್ತು ಬಾಲಕೋಟ್ ಬಗ್ಗೆ ನಿಮಗೆಲ್ಲ ಗೊತ್ತಿದೆ. ಆದ್ರೆ ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳಲಾರೆ ಎಂದು ಕೇಂದ್ರ...

ಶಿವರಾತ್ರಿಯಂದೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪಚಾರ

2 weeks ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿಯ ಶಿವರಾತ್ರಿಯಂದು ಅಪಚಾರ ನಡೆದಿದೆ. ಶಿವರಾತ್ರಿ ಉತ್ಸವ ಪ್ರಯುಕ್ತ ರಾತ್ರಿ ಬಲಿ ಉತ್ಸವ ನಡೆಯುತ್ತಿದ್ದಾಗ ದೇವರ ಮೂರ್ತಿಯನ್ನು ಹೊತ್ತ ಅರ್ಚಕರ ಶಿರದಿಂದ ಹಠಾತ್ತಾಗಿ ಉತ್ಸವ ಮೂರ್ತಿ ನೆಲಕ್ಕೆ...

ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

2 weeks ago

ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬ ಕೊನೆಗೆ ತಾನೇ ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ...

ಅಧಿಕಾರಿಯ ನಿದ್ರೆಗೆ ಭಂಗ-ಯಕ್ಷಗಾನ, ಭಜನೆ ನಿಲ್ಲಿಸುವಂತೆ ಪೊಲೀಸರಿಂದ ಒತ್ತಡ!

3 weeks ago

ಮಂಗಳೂರು: ಮಹಾಶಿವರಾತ್ರಿ ಜಾಗರಣೆಯ ಪ್ರಯುಕ್ತ ನಡೆಯುತ್ತಿದ್ದ ಭಜನೆ ಹಾಗೂ ಯಕ್ಷಗಾನವನ್ನು ನಿಲ್ಲಿಸಲು ಒತ್ತಡ ಹೇರಿದ್ದಾರೆ ಅನ್ನೋ ಆರೋಪವೊಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ವಿರುದ್ಧ ಕೇಳಿಬಂದಿದೆ. ಹೌದು, ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯ ಅಂಗವಾಗಿ ಭಜನೆಗಳು ಹಾಗೂ...