Tag: Malavalli

  • ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

    ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

    ಮಂಡ್ಯ: ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಹೆಸರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನಲ್ಲಿ ವ್ಯಕ್ತಿಯೊಬ್ಬ ವಂಚನೆ ಎಸಗಿರುವ ಆರೋಪವಿದೆ.

    ಅಪರಿಚಿತ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಆತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಮಳವಳ್ಳಿಯ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪೋಸ್ಟರ್ ವೈರಲಾಗಿತ್ತು. ಪೋಸ್ಟರ್‌ನಲ್ಲಿ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 4 ಲಕ್ಷ ರೂ., ತೃತೀಯ 3 ಲಕ್ಷ ರೂ., ನಾಲ್ಕನೇ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಎಂದು ನಮೂದಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 10 ಸಾವಿರ ರೂ. ಪ್ರವೇಶ ಶುಲ್ಕ, ಮುಂಗಡ 3500 ರೂ. ನೀಡಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ನ.20 ರಂದು ಬೆಳಗ್ಗೆ 8 ಗಂಟೆಗೆ ಮಳವಳ್ಳಿಯಲ್ಲಿ ಸ್ಪರ್ಧೆ ನಡೆಯುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ

    ಪೋಸ್ಟರ್‌ನಲ್ಲಿ ನಂಬರ್ ಹಾಕಿ ವಂಚಿಸಿದ್ದು, ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಪ್ಪು ಹೆಸರಲ್ಲಿ ಕೋಟ್ಯಂತರ ಜನರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡುತ್ತಿದ್ದಾನೆ. ಡಾ.ರಾಜ್ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಸ್ಪರ್ಧಾಳುಗಳಿಗೆ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದಾನೆ.

    ಮುಂಗಡ ಹಣ ನೀಡಿ ಯಾರೂ ಮೋಸ ಹೋಗಬಾರದು ಎಂದು ಜನರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ರಾಶಿರಾಪು ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸ್ಪರ್ಧೆ ಆಯೋಜಿಸಿರುವುದಾಗಿ ಪೋಸ್ಟರ್ ಬಿಡುಗಡೆ ಮಾಡಿರುವ ವ್ಯಕ್ತಿ ಬಗ್ಗೆ ಮಾಹಿತಿಯೇ ಇಲ್ಲ.

    ಅಪ್ಪು ಹೆಸರಿಗೆ ಕಳಂಕ ತರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಶಿರಾಪು ಸೇನಾ ಸಮಿತಿ ಅಧ್ಯಕ್ಷ ಚಿಕ್ಕಣ್ಣ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು – ಛಿದ್ರ ಛಿದ್ರವಾದ ದೇಹಗಳು

  • ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗ

    ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗ

    ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಮಳವಳ್ಳಿ (Malavalli) ಶಾಸಕ ನರೇಂದ್ರಸ್ವಾಮಿ (Narendraswamy) ಅವರ ತಂದೆ ಪಿ.ಎಸ್.ಮಲ್ಲಯ್ಯ ಚಿಕಿತ್ಸೆ ಫಲಿಸದೇ ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಪುರಗಾಲಿ ಗ್ರಾಮದವರಾದ ಮಲ್ಲಯ್ಯ (93) ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಲ್ಲಯ್ಯ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: MUDA Scam | ಆ.12ರ ಬಳಿಕ ರಾಜ್ಯಪಾಲರ ನಿರ್ಧಾರ ಪ್ರಕಟ?

    ಮಲ್ಲಯ್ಯ ತಾಲೂಕು ಬೋರ್ಡ್ ಸದಸ್ಯರಾಗಿ, ಪುರಿಗಾಲಿ ಗ್ರಾ.ಪಂ, ಹಾಲು ಉತ್ಪಾದಕರ ಸಂಘ, ಪ್ರಾಥಮಿಕ ಕೃಷಿ ಪರಿಷತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಶಾಸಕ ನರೇಂದ್ರಸ್ವಾಮಿ ಸೇರಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಹುಟ್ಟೂರು ಪುರಿಗಾಲಿಯಲ್ಲಿ ಮಲ್ಲಯ್ಯರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

  • ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ: ಸಿದ್ದರಾಮಯ್ಯ

    ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ: ಸಿದ್ದರಾಮಯ್ಯ

    ಮಂಡ್ಯ: ಯಾರೂ ಹಸಿದು ಮಲಗಬಾರದು ಎಂದು ಅನ್ನಭಾಗ್ಯ (Annabhagya) ಅಕ್ಕಿ ಕೊಟ್ಟವರು ಯಾರು? ಕೇಂದ್ರದ ಅಸಹಕಾರದ ನಡುವೆಯೂ ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಿದ್ದೇವೆ. ಬಡವರಿಗೆ ಅಕ್ಕಿ ಕೊಡದ ಬಿಜೆಪಿ (BJP), ಜೆಡಿಎಸ್‌ಗೆ (JDS) ಮತ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮಳವಳ್ಳಿಯಲ್ಲಿ (Malavalli) ನಡೆದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಕಾರ ಮಾಡಿದವರನ್ನ ಮರೆಯುತ್ತೀರ? 155 ಕೋಟಿ ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಹಿಂದೆ ಯಾರಾದ್ರೂ ಮಾಡಿದ್ದಾರಾ? ಬಿಜೆಪಿ, ಹೆಚ್‌ಡಿಕೆ, ದೇವೇಗೌಡರು ಮಾಡಿದ್ರಾ? ಇದನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ ಎಂದರು. ಇದನ್ನೂ ಓದಿ: ಡಿಸಿಎಂ ಹೊಗಳಿದ ಎಸ್‍ಟಿಎಸ್‍ಗೆ ವೇದಿಕೆಯಲ್ಲೇ ಮುನಿರತ್ನ ತಿರುಗೇಟು

    BJP JDS

    ಜಾತಿವಾದಿಗಳ ಜೊತೆ ಸೇರಿಸೋ ಇವರಿಗೆ ವೋಟ್ ಹಾಕಬೇಕಾ? ಮಂಡ್ಯ (Mandya) ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ. ಕಾಂಗ್ರೆಸ್ (Congress) ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಏನಪ್ಪ ಚಲುವರಾಯಸ್ವಾಮಿ, ರಮೇಶ್, ಉದಯ್, ರವಿಕುಮಾರ್ ಇದು ನಿಮ್ಮೆಲ್ಲರ ಜವಾಬ್ದಾರಿ. ನಾನು ಹಿಂದೆ ಸಿಎಂ ಆಗಿದ್ದಾಗ, 165 ಭರವಸೆ ಕೊಟ್ಟಿದ್ದೆವು. ಅದರಲ್ಲಿ 155 ಭರವಸೆ ಈಡೇರಿಸಿದ್ದೆವು. ನಮ್ಮ ಕಾರ್ಯಕರ್ತರು ಬಿಜೆಪಿ-ಜೆಡಿಎಸ್ ರೀತಿ ಸುಳ್ಳು ಹೇಳಬೇಡಿ. ಜನರಿಗೆ ಸತ್ಯ ಹೇಳಿ. ಜನ ನಮ್ಮ ಕೈ ಬಿಡುವುದಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ದೇವೇಗೌಡರು ಸಿಎಂ ಆಗಿದ್ದರು. ಬಡವರಿಗೆ ನಿಮ್ಮ ಕೊಡುಗೆ ಏನು? ಜನ ಸುಮ್ಮನೆ ನಿಮಗೆ ವೋಟ್ ಹಾಕಬೇಕಾ? ಬಿಜೆಪಿ ಅವರ ಕೊಡುಗೆ ಏನು? ಹಿಂದೆ ನಾನು ನರೇಂದ್ರ ಸ್ವಾಮಿ ಅವರಿಗೆ ಎಲ್ಲಾ ಕೆಲಸ ಮಾಡಿಕೊಟ್ಟಿದ್ದೆ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?

    ನಮ್ಮ ದೇಶದ ಪ್ರಧಾನ ಮಂತ್ರಿ ಇದ್ದಾರಲ್ಲ, ಅವರು ಬರೀ ಸುಳ್ಳನ್ನೇ ಹೇಳೋದು. ಬಿಜೆಪಿ ಸುಳ್ಳಿನ ಪಾರ್ಟಿ, ಬಿಜೆಪಿಯ ಅನರ್ಥನಾಮ ಸುಳ್ಳು. 100 ರೂ. ತೆರಿಗೆ ಕಲೆಕ್ಟ್ ಮಾಡಿ ಕೊಟ್ಟರೆ ನಮಗೆ ವಾಪಸ್ ಕೊಡೋದು ಕೇವಲ 13 ರೂ. ಕರ್ನಾಟಕ ಇಡೀ ದೇಶದಲ್ಲಿ ಎರಡನೇ ಅತಿದೊಡ್ಡ ತೆರಿಗೆ ಕಟ್ಟುವ ರಾಜ್ಯ. ಆದರೂ ನಮಗೆ ನಮ್ಮ ಪಾಲು ಕೊಡುತ್ತಿಲ್ಲ. ನಮಗೆ ಅನ್ಯಾಯ ಆಗುತ್ತಿದೆ. ನಮಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಇದು ಕನ್ನಡಿಗರಿಗೆ ಮಾಡಿರುವ ಅನ್ಯಾಯ ಅಲ್ವಾ? ಇಂಥವರಿಗೆ ನೀವು ವೋಟ್ ಹಾಕ್ತಿರಾ? ಲೋಕಸಭಾ ಚುನಾವಣೆಯಲ್ಲಿ (Lok Sabha Election) ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ದೇಶದ ಸಂಪತ್ತು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ; ಸಿದ್ದರಾಮಯ್ಯಗೆ ಮಹಾ ಅಧಿವೇಶನದಲ್ಲಿ ಅಮಿತ್ ಶಾ ತಿರುಗೇಟು

    ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ದೇವೇಗೌಡರು (HD Deve Gowda) ಹೇಳಿದ್ದರು. ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಮಿಸ್ಟರ್ ದೇವೇಗೌಡರೇ ಕುಮಾರಸ್ವಾಮಿಯನ್ನು ನಾನೇ ಬಿಜೆಪಿಗೆ ಸೇರಿಕೋ ಅಂದೆ ಎನ್ನುತ್ತೀರಿ. ದಯಾಮಾಡಿ ನಿಮ್ಮ ಜೆಡಿಎಸ್‌ನಲ್ಲಿನ ಜ್ಯಾತ್ಯತೀತ ಎನ್ನುವ ಪದ ತೆಗೆದುಹಾಕಿ. ಅದನ್ನು ಉಳಿಸಿಕೊಳ್ಳುವ ಯಾವುದೇ ನೈತಿಕತೆ ನಿಮಗಿಲ್ಲ. ನಿಮ್ಮದೊಂದು ರಾಜಕೀಯ ಪಕ್ಷ. ನೀವು 19 ಸ್ಥಾನಗಳನ್ನ ಪಡೆದಿದ್ದೀರಿ. ನಾವು 136 ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿಯವರು ಡೋಂಗಿ ತನದ ಮಾತುಗಳನ್ನು ಆಡುತ್ತಿದ್ದಾರೆ. ನಾವು 28 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಾರೆ, ಅದು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಈ ಬಾರಿ ಕನಿಷ್ಠ 20 ಸ್ಥಾನ ಗೆದ್ದೇಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆಶಿ, ಡಿ.ಕೆ ಸುರೇಶ್‍ಗೆ ಎಸ್.ಟಿ ಸೋಮಶೇಖರ್ ಅಭಿನಂದನೆ

    ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ನೀವು ಪುಕ್ಕಸಟ್ಟೆ ಕೊಡಬೇಡಿ ಹಣ ಕೊಡುತ್ತೇವೆ ಎಂದೆವು. ಆದರೂ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡದ ಈ ಬಿಜೆಪಿಗೆ ವೋಟ್ ಹಾಕುತ್ತೀರಾ? ಈಗ ಕುಮಾರಸ್ವಾಮಿ, ಅಶೋಕ್, ಜೊತೆಯಾಗಿಲ್ವಾ ಎಂದು ಲೇವಡಿ ಮಾಡಿದರು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದರು. ಇದು ವಿಫಲ ಆಗುತ್ತೆ, ಲೋಕಸಭಾ ಚುನಾವಣೆ ಆದಮೇಲೆ ನಿಲ್ಲಿಸುತ್ತಾರೆ ಎಂದರು. ಆದರೆ ಮೊನ್ನೆ ಬಜೆಟ್ ಮಂಡನೆ ಮಾಡಿದ್ದೇನೆ. 52 ಸಾವಿರ ಕೋಟಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ಮಿಸ್ಟರ್ ಅಶೋಕಾ ಬಜೆಟ್ ಪುಸ್ತಕ ಓದಿಕೊಳ್ಳಪ್ಪ. ಮಿಸ್ಟರ್ ಬೊಮ್ಮಾಯಿ ಬಜೆಟ್ ಪುಸ್ತಕ ಓದಪ್ಪ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಟಾಪ್‌ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?

    ಇಂದು ಮಳವಳ್ಳಿ ಕ್ಷೇತ್ರದಲ್ಲಿ ನರೇಂದ್ರ ಸ್ವಾಮಿ ನೇತೃತ್ವದಲ್ಲಿ 482 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನರೇಂದ್ರ ಸ್ವಾಮಿ ಶಾಸಕರಾಗಿ ಮಳವಳ್ಳಿ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಇದಕ್ಕೆ ಇವತ್ತಿನ ಕಾರ್ಯಕ್ರಮ ಸಾಕ್ಷಿ. ನರೇಂದ್ರ ಸ್ವಾಮಿ ಎಲ್ಲಾ ಮಂತ್ರಿಗಳ ಜೊತೆ ಚೆನ್ನಾಗಿದ್ದಾರೆ. ಇದನ್ನು ಉಪಯೋಗಿಸಿಕೊಂಡು ಮಳವಳ್ಳಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ಪಡೆದಿದ್ದಾರೆ. ನೀವೆಲ್ಲಾ ನರೇಂದ್ರ ಸ್ವಾಮಿ ಅವರನ್ನು ಮಂತ್ರಿ ಮಾಡಿ ಎಂದು ಕೇಳುತ್ತಿದ್ದೀರಿ. ಆದರೆ ಮಂತ್ರಿ ಸ್ಥಾನ ಖಾಲಿ ಇಲ್ಲ. ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆದಾಗ ಅವರಿಗೂ ಅವಕಾಶ ಸಿಗುತ್ತದೆ. ಆದರೆ ಅದನ್ನು ಕೇಳುವ ಸಮಯ ಇದಲ್ಲ ಎಂದು ನರೇಂದ್ರ ಸ್ವಾಮಿ ಅಭಿಮಾನಿಗಳಿಗೆ ಸಿಎಂ ಕಿವಿಮಾತು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಸೇರೋದು ಸರಿಯಲ್ಲ: ಪರಮೇಶ್ವರ್

    ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸರ್ಕಾರ ಬಂದಿದೆ. ಮಳವಳ್ಳಿ ಕ್ಷೇತ್ರದ ಜನ ನಾನು ಯಾವಾಗ ಹೇಳಿದರೂ ನಮಗೆ ಆಶೀರ್ವಾದ ಮಾಡುತ್ತೀರಿ. ನನ್ನ ಮೇಲೆ ವಿಶೇಷ ಪ್ರೀತಿ ಇಟ್ಟಿದ್ದೀರಿ. ಮಳವಳ್ಳಿ ಕ್ಷೇತ್ರ ನನ್ನ ಕ್ಷೇತ್ರ ಇದ್ದಹಾಗೆ. ಬಿಜೆಪಿ-ಜೆಡಿಎಸ್‌ನವರು ಎಷ್ಟೇ ಆಮಿಷ ಒಡ್ಡಿದರೂ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೀರಿ. ಕಳೆದ ಚುನಾವಣೆಯಲ್ಲಿ ನಾವು ಅನೇಕ ಭರವಸೆ ಕೊಟ್ಟಿದ್ದೆವು. ಅದರ ಅನುಗುಣವಾಗಿ ಇಂದು 470 ಕೋಟಿ ಅಂದಾಜಿನ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇವೆ. ಅಲ್ಲದೇ ನರೇಂದ್ರ ಸ್ವಾಮಿ ಕೆಲ ಮನವಿ ಕೊಟ್ಟಿದ್ದಾರೆ. ನಾನು ಮುಂದೆ ಆ ಮನವಿ ಸ್ವೀಕಾರ ಮಾಡಿ ಅನುದಾನ ಕೊಡುವ ಕೆಲಸ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ನಾವು 5 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ-ಜೆಡಿಎಸ್ ರೀತಿಯಲ್ಲಿ ಕೊಟ್ಟ ಮಾತಿಗೆ ನಾವು ತಪ್ಪಲ್ಲ. ನಾವು ಕೊಟ್ಟ ಮಾತನ್ನು 100ಕ್ಕೆ 100ರಷ್ಟು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ಖಾತೆಗಳನ್ನ ಬಿಜೆಪಿ ಸೀಜ್ ಮಾಡಿದೆ: ಪರಮೇಶ್ವರ್

  • ಹೆಣ್ಣು ಕರುಣಿಸೆಂದು ಮಾದಪ್ಪನ ಮೊರೆ ಹೋದ ಯುವಕರು

    ಹೆಣ್ಣು ಕರುಣಿಸೆಂದು ಮಾದಪ್ಪನ ಮೊರೆ ಹೋದ ಯುವಕರು

    ಚಾಮರಾಜನಗರ: ಹೆಣ್ಣು ಕರುಣಿಸೆಂದು ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (malavalli) ತಾಲೂಕಿನ ಅಂಚೆದೊಡ್ಡಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದಾರೆ.

    ನಗರದಲ್ಲಿರುವ ಮಲೆ ಮಾದೇಶ್ವರನ (Male Madeshwara) ಸನ್ನಿಧಿಗೆ ಅಂಚೆದೊಡ್ಡಿಯ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ಜನರು ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ್ದಾರೆ. ಊರಿಗೆ ಊರೇ ಸುಮಾರು 115 ಕಿಲೋಮೀಟರ್ ದೂರದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

    ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ ನೂರಕ್ಕೂ ಹೆಚ್ಚು ಗಂಡು ಮಕ್ಕಳಿದ್ದಾರೆ. ಕೃಷಿ ಮಾಡುವ ತಮ್ಮ ಗಂಡು ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಪೋಷಕರ ಅಳಲು ತೊಡಿಕೊಂಡಿದ್ದಾರೆ. ಮಕ್ಕಳಿಗೆ ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಪೋಷಕರಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಇದೇ ಹಿನ್ನೆಲೆಯಲಿ ಹೆಣ್ಣು ಕರುಣಿಸಪ್ಪ ಎಂದು ಪೋಷಕರು ಮಹದೇಶ್ವರನ ಮೊರೆ ಹೋಗಿದ್ದಾರೆ. ಚಿನ್ನದ ತೇರು ಎಳೆಸ್ತೀವಿ, ಹುಲಿವಾಹನ ಎಳೆಸ್ತೀವಿ, ಭಿಕ್ಷೆ ಎತ್ತಿ ಹುಂಡಿಗೆ ಹಣ ಹಾಕ್ತೀವಿ, ತಮ್ಮ ಶಕ್ತಿ ಇರುವವರೆಗೂ ಪಾದಯಾತ್ರೆ ಮಾಡಿ ನಿನ್ನ ಸೇವೆ ಮಾಡ್ತೀವಿ ಎಂದು ಹಲವಾರು ಹರಕೆಗಳನ್ನು ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಈ ಮೊದಲು ಶಿವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ಬದಲಾಗಿದ್ದು, ಈಗ ಬೇರೆ ಬೇರೆ ದಿನಗಳಲ್ಲೂ ಭಕ್ತ ಸಮೂಹ ಪಾದಯಾತ್ರೆ ಕೈಗೊಳ್ಳುತ್ತಿದೆ. ಇದನ್ನೂ ಓದಿ: ತೆರಿಗೆ ತಾರತಮ್ಯ; ರಾಜ್ಯಪಾಲರ ಭಾಷಣ ಮೂಲಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ

  • ಬದುಕಿದ್ದವನ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ 35 ಎಕರೆಗೆ ಸ್ಕೆಚ್ – ಐವರು ಅರೆಸ್ಟ್

    ಬದುಕಿದ್ದವನ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ 35 ಎಕರೆಗೆ ಸ್ಕೆಚ್ – ಐವರು ಅರೆಸ್ಟ್

    ಮಂಡ್ಯ: ಬದುಕಿದ್ದವನ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ಬರೋಬ್ಬರಿ 35 ಎಕರೆ ಭೂಮಿಯನ್ನು ಕಬಳಿಕೆ ಮಾಡಲು ಮುಂದಾಗಿದ್ದ ಗ್ಯಾಂಗ್‍ನ್ನು ಮಳವಳ್ಳಿ (Malavalli) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಮೈಸೂರು ಮೂಲದ ನಿವೃತ್ತ ಗ್ರಾಮಲೆಕ್ಕಿಗ ವೆಂಕಟೇಶ್, ದೇವರಾಜು, ಶ್ರೀನಿವಾಸ್, ಮುನಿರಾಜು, ಹಾಗೂ ಕೇಶವ ಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ಇರುವ ಬೆಂಗಳೂರು ಮೂಲದ ಗಿರೀಶ್‍ರಾಜ್ ಎಂಬುವವರ 35 ಎಕರೆ ಜಮೀನು ಕಬಳಿಸಲು ಹೊಂಚು ಹಾಕಿದ್ದರು. ಇದಕ್ಕೆ ಪೂರಕ ದಾಖಲೆಗಳನ್ನು ಒದಗಿಸಲು ಬದುಕಿರುವ ಗಿರೀಶ್‍ರಾಜ್ ಹೆಸರಿನಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿಸಿದ್ದಾರೆ. ಬಳಿಕ ಪೌತಿ ಖಾತೆಗೆ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಈ ವೇಳೆ ಗ್ರಾಮಲೆಕ್ಕಿಗ ಪ್ರವೀಣ್ ಸ್ಥಳ ಪರಿಶೀಲನೆಗೆ ಬಂದ ವೇಳೆ ಈ ವಂಚನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಠಾತ್ ಪ್ರವಾಹ ಮುನ್ಸೂಚನೆ – ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಸೂಚನೆ

    Mandya Arrest 1

    ಈ ವಿಚಾರವನ್ನು ಪ್ರವೀಣ್ ತಹಶಿಲ್ದಾರ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ತಹಶಿಲ್ದಾರ್ ಸೂಚನೆಯಂತೆ ಈ ವಂಚನೆಯ ಬಗ್ಗೆ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ಆಧರಿಸಿ ಮಳವಳ್ಳಿ ಪಟ್ಟಣ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

    ಮನೆಯಲ್ಲಿಯೇ ನಕಲಿ ಸರ್ಕಾರಿ ಸೀಲ್ ಬಳಸಿ ಡೆತ್ ಸರ್ಟಿಫಿಕೇಟ್ ಮಾಡಿದ್ದಾರೆ. ಬಳಿಕ ನಕಲಿ ಡೆತ್ ಸರ್ಟಿಫಿಕೇಟ್, ವಂಶವೃಕ್ಷ ಸಲ್ಲಿಸಿ ಗಿರೀಶ್‍ರಾಜ್ ಮಗಳ ಹೆಸರಿಗೆ ಪೌತಿ ಖಾತೆ ಮಾಡುವಂತೆ ಮಳವಳ್ಳಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗ ಸೇರಿದಂತೆ ಅಧಿಕಾರಿಗಳನ್ನು ಹಣಕೊಟ್ಟು ಡೀಲ್ ಮಾಡುವ ಪ್ಲಾನ್‍ನಲ್ಲಿ ಈ ವಂಚಕರು ಇದ್ದರು. ಸ್ಥಳ ಪರಿಶೀಲನೆಗೆ ವಿಎ ಪ್ರವೀಣ್ ತೆರಳಿದ ಸಂದರ್ಭದಲ್ಲಿ ಗಿರೀಶ್ ರಾಜ್ ಬದುಕಿರುವ ಸತ್ಯ ತಿಳಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

    ಈ ಗ್ಯಾಂಗ್‍ಗೆ ಕ್ರಿಮಿನಲ್ ಹಿನ್ನೆಲೆ ಉಳ್ಳ ಭಾಗ್ಯಮ್ಮ ಎಂಬಾಕೆ ಲೀಡರ್ ಎಂದು ಹೇಳಲಾಗುತ್ತಿದೆ. ಈಕೆಯ ಮಾರ್ಗದರ್ಶನದಲ್ಲಿ ಈ ವಂಚನೆಗೆ ಮುಂದಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ಹಲವು ಅಪರಾಧಿ ಕೃತ್ಯಗಳಲ್ಲಿ ಈ ತಂಡ ಭಾಗಿಯಾಗಿದೆ. ಈಗ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ತನ್ವಿರ್ ಸೇಠ್ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ: ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಬಿಸಿಯೂಟಕ್ಕೆ ಕನ್ನ – ಶಿಕ್ಷಕನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

    ಮಕ್ಕಳ ಬಿಸಿಯೂಟಕ್ಕೆ ಕನ್ನ – ಶಿಕ್ಷಕನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

    ಮಂಡ್ಯ: ಸರ್ಕಾರ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಕದ್ದು ಕೊಂಡೊಯ್ಯುತ್ತಿದ್ದ ಶಾಲಾ (School) ಶಿಕ್ಷಕನನ್ನು ಗ್ರಾಮಸ್ಥರು ರೆಡ್‍ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಮಳವಳ್ಳಿಯ (Malavalli) ತಂಗಳವಾದಿಯಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಶಿವರುದ್ರ ಮಕ್ಕಳಿಗೆ ನೀಡುತ್ತಿದ್ದ ಹಾಲು ಹಾಗೂ ಬೇಳೆ ಪ್ಯಾಕೆಟ್ ಕದ್ದೊಯ್ತಿದ್ದ. ಈ ವೇಳೆ ಗ್ರಾಮಸ್ಥರು ಹೋಗಿ ಬೈಕ್ ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಾಲಿನ ಪ್ಯಾಕ್‍ಗಳು ಹಾಗೂ ಬೇಳೆ ಪ್ಯಾಕ್‍ಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸರ್ಕಾರ ಸಂಬಳ ಹೆಚ್ಚಿಗೆ ಮಾಡಿದರೂ ನಿಮಗೆ ಯಾಕೆ ಈ ಬುದ್ದಿ ಬಂತು ಎಂದು ಛೀಮಾರಿ ಹಾಕಿದ್ದಾರೆ. ಇದನ್ನೂ ಓದಿ: ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ಬಳಿಕ ಶಿಕ್ಷಕನ ಸಮೇತ ಕದ್ದ ಸಾಮಾಗ್ರಿಗಳನ್ನು ಗ್ರಾಮಸ್ಥರು ವಿಡಿಯೋ ಮಾಡಿ ಬಿಇಒಗೆ ದೂರ ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್; ಲಿವಿಂಗ್ ರಿಲೇಷನ್‌ನಲ್ಲಿ ಇದ್ಕೊಂಡೇ ಮನೆ ದೋಚಿದ ಖತರ್ನಾಕ್ ಜೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    ಮಂಡ್ಯ: ಒಂದೇ ಗ್ರಾಮದ ದೇವಸ್ಥಾನ ಹಾಗೂ ಮನೆಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಮಳವಳ್ಳಿಯ (Malavalli) ಜಡಗನಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶ್ರೀನಿವಾಸ್ ಎಂಬುವವರ ಮನೆಯಲ್ಲಿ 2 ಲಕ್ಷ ರೂ. ನಗದು ಹಾಗೂ 250 ಗ್ರಾಂ. ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಬಳಿಕ ಗ್ರಾಮದ ಮುನೇಶ್ವರ ದೇವಸ್ಥಾನದ ಬಾಗಿಲು ಮುರಿದು ದೇವಾಲಯದ ಹುಂಡಿ ಹಣವನ್ನು ಕದ್ದೊಯ್ದಿದ್ದಾರೆ. ಅಲ್ಲದೇ ಮತ್ತೊಂದು ಮನೆ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಇದನ್ನೂ ಓದಿ: ಹಿರಿಯ ವಕೀಲ ಸಿ.ವಿ ನಾಗೇಶ್ ಪುತ್ರ ಅರುಣ್ ಹೃದಯಾಘಾತದಿಂದ ನಿಧನ

    ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್ಪಿ ತಿಮ್ಮಯ್ಯ ಹಾಗೂ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

  • ನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‍ಆರ್‌ಟಿಸಿ ಬಸ್ ಡೋರ್

    ನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‍ಆರ್‌ಟಿಸಿ ಬಸ್ ಡೋರ್

    ಮಂಡ್ಯ: ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಸ್ ಏರುವ ವೇಳೆ ನೂಕುನುಗ್ಗಲು ಉಂಟಾಗಿ ಬಸ್ (Bus) ಡೋರ್ ಮುರಿದ ಘಟನೆ ಮಳವಳ್ಳಿಯ (Malavalli) ಕೆಎಸ್‍ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಸೀಟು ಹಿಡಿಯುಲು ಜನರು ಏಕಾಏಕಿ ನುಗ್ಗಿದ್ದಾರೆ. ಇದರಿಂದ ಡೋರ್ ಮುರಿದು ಹೋಗಿದೆ. ನಂತರ ಬಸ್‍ನಿಂದ ಪ್ರಯಾಣಿಕರನ್ನು ಸಿಬ್ಬಂದಿ ಕೆಳಗಿಳಿಸಿದ್ದಾರೆ. ಕಿತ್ತು ಹೋದ ಡೋರ್‌ನ್ನು ಟಿಸಿಗೆ ಹಸ್ತಾಂತರಿಸಿದ್ದಾರೆ.ಇದನ್ನೂ ಓದಿ: ರೂಲ್ಸ್ ನೆಪದಲ್ಲಿ ಎಗ್‍ರೈಸ್ ಬಂಡಿ ವ್ಯಾಪಾರಿಗಳಿಂದ ಪೊಲೀಸರು ಲಂಚ!

    ರಾಜ್ಯದಲ್ಲಿ ಶಕ್ತಿ ಯೋಜನೆ ಘೋಷಣೆ ಆದಾಗಿನಿಂದ ಎಲ್ಲೆಡೆ ಕೆಎಸ್‍ಆರ್‌ಟಿಸಿ ಬಸ್‍ಗಳು ತುಂಬಿ ತುಳುಕುತ್ತಿವೆ. ಬಹುತೇಕ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಇದರಿಂದ ಎಷ್ಟೋ ಪ್ರಯಾಣಿಕರು ಬಸ್‍ನಲ್ಲಿ ಜಾಗ ಇಲ್ಲದೇ ಪರದಾಡಿದ್ದಾರೆ.

    ಶನಿವಾರ ಕೊಳ್ಳೆಗಾಲದಲ್ಲಿ ಕೆಎಸ್‍ಆರ್‌ಟಿಸಿ ಬಸ್ ಒಂದರ ಬಾಗಿಲು ಕಿತ್ತು ಬಂದಿತ್ತು. ಇದೀಗ ಅದೇ ರೀತಿಯ ಘಟನೆ ಮಳವಳ್ಳಿ ಪಟ್ಟಣದಲ್ಲಿ ಮರುಕಳಿಸಿದೆ. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೆಡರ್: ನವ್ಯಶ್ರೀ

  • ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ

    ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ

    ಮಂಡ್ಯ: ನಾನು ತಪ್ಪು ಅಥವಾ ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ಅಂದ್ರೆ ತನ್ನ ವಿರುದ್ಧ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲಿ ಎಂದು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಕ್ಷೇತ್ರದ ಬಿಜೆಪಿ (BJP) ಪರಾಜಿತ ಅಭ್ಯರ್ಥಿ ಮುನಿರಾಜು (Muniraju) ದೇವಸ್ಥಾನದ ಎದುರು ಕರ್ಪೂರ ಹಚ್ಚಿ ತೆಂಗಿನಕಾಯಿ ಒಡೆದಿದ್ದಾರೆ.

    ಮಳವಳ್ಳಿಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜು ಮತದಾನಕ್ಕೆ 3 ದಿನ ಇರುವಾಗ ಕೊನೆ ಕ್ಷಣದಲ್ಲಿ ಕ್ಷೇತ್ರದ ಜನರ ಕೈಗೆ ಸಿಗಲಿಲ್ಲ ಎಂದು ಕೆಲವರು ಸುದ್ದಿ ಹರಡಿಸಿದ್ದರು. ಅಲ್ಲದೇ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮುನಿರಾಜು ಮೇಲೆ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಮುನಿರಾಜು ಕೇವಲ 24 ಸಾವಿರ ಮತಗಳಷ್ಟೇ ಗಳಿಸಲು ಶಕ್ತರಾದರು ಎನ್ನಲಾಗಿದೆ.

    Mandya Muniraju

    ಇದೀಗ ಅಪಪ್ರಚಾರದ ವಿರುದ್ಧ ಸಿಡಿದೆದ್ದಿರುವ ಮುನಿರಾಜು ದೇವರ ಮೊರೆ ಹೋಗಿದ್ದು, ಮಳವಳ್ಳಿಯ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ಮುಂದೆ ಅಪಪ್ರಚಾರ ಗೈದವರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ತೆಂಗಿನ ಕಾಯಿಯ ಮೇಲೆ ಕರ್ಪೂರ ಹಚ್ಚಿ, ಈಡುಗಾಯಿ ಹೊಡೆದು ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ: ಸುಧಾಕರ್ ಬಾಂಬ್

    ನಾನು ಯಾವುದೇ ತಪ್ಪು, ಮೋಸ ಮಾಡಿಲ್ಲ. ಹಾಗೇನಾದ್ರು ತಪ್ಪು ಮಾಡಿದ್ದರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರೇ ಶಿಕ್ಷೆ ಕೊಡಲಿ ಎಂದು ಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಸಿಎಂ ರೇಸ್‌ ಫೈಟ್‌ – ಹೈಕಮಾಂಡ್‌ ನಾಯಕರಲ್ಲಿ ಯಾರು ಯಾರ ಪರ?

  • ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ

    ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ

    ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಅಖಾಡ‌ ದಿನದಿಂದ ದಿನಕ್ಕೆ ಗರಿಗೆದರುತ್ತಿದ್ದು, ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಮೂರು ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳ ಗೆಲುವಿಗೆ ಸರ್ಕಸ್ ನಡೆಸುತ್ತಿವೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿ (Malavalli) ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಳವಳ್ಳಿ ಕ್ಷೇತ್ರದ ಸದ್ಯದ ಚಿತ್ರಣ ಹೇಗಿದೆ ಎಂಬುದರ ಕಂಪ್ಲೀಟ್ ವರದಿ‌ ಇಲ್ಲಿದೆ ನೋಡಿ.

    ಒಕ್ಕಲಿಗ ಮತಗಳದ್ದೇ ಪ್ರಾಬಲ್ಯ
    ಮಳವಳ್ಳಿ ಕ್ಷೇತ್ರದಲ್ಲಿ 1,19,718 ಪುರುಷ ಮತದಾರರು ಇದ್ದು, 1,18,653 ಮಹಿಳಾ ಮತದಾರರು ಇದ್ದಾರೆ. ಈ ಕ್ಷೇತ್ರ ಒಟ್ಟು 2,38,687 ಮತದಾರರನ್ನು ಹೊಂದಿದೆ. ಇನ್ನೂ ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರು 70,000, ಲಿಂಗಾಯತರು 29,000, ಕುರುಬರು 19,000, ವಿಶ್ವಕರ್ಮ 4,000, ಪರಿಶಿಷ್ಟ ಪಂಗಡ 6,000, ಮುಸ್ಲಿಂ 12,000, ಪರಿಶಿಷ್ಟ ಜಾತಿ 62,000, ಬೆಸ್ತರು 10,000 ಹಾಗೂ ಇತರ ಸಮುದಾಯದ ಮತಗಳು 21,500 ಇವೆ. ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ: ಬೊಮ್ಮಾಯಿ

    Congress BJP JDS

    ತ್ರಿಕೋನ ಫೈಟ್‌
    ಪ್ರತಿ ಚುನಾವಣೆಯಲ್ಲಿ ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್ (Congress) ನಡುವೆ ನೇರ ಹಣಾಹಣಿ ನಡೆಯುತ್ತಾ ಇತ್ತು. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ‌ ಜೆಡಿಎಸ್ ಜೊತೆ ಬಿಜೆಪಿಯೂ ಸಹ ಪ್ರಬಲ ಪೈಪೋಟಿ ನಡೆಸುವ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಮೂಲಕ ಇಷ್ಟು ವರ್ಷಗಳ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಇದ್ದ ಸಾಂಪ್ರದಾಯಿಕ ಚುನಾವಣಾ ಹೋರಾಟದ ನಡುವೆ ಬಿಜೆಪಿ‌ (BJP) ಸೇರಿಕೊಂಡಿದೆ.

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
    ಸದ್ಯ ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ಅನ್ನದಾನಿ ಹಾಲಿ ಶಾಸಕರು ಇದ್ದಾರೆ. 2018ರ ಚುನಾವಣೆಯಲ್ಲಿ ಅನ್ನದಾನಿ 1,03,038 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು. ಈ ಗೆಲುವಿನ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ಮಾತು ಪ್ರಬಲವಾಗಿ ಇತ್ತು. ಈ ಬಾರಿಯ ಚುನಾವಣೆಯಲ್ಲಿ ಅನ್ನದಾನಿ ಮಾಡಿಕೊಂಡಿರುವ ಯಡವಟ್ಟುಗಳು ಒಂದಷ್ಟು ಹಿನ್ನಡೆಗೆ ಕಾರಣವಾಗಬಹುದು. ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಅನ್ನದಾನಿ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರ್ತಾ ಇವೆ. ಅಲ್ಲದೇ ಈ ಬಾರಿಯ ಅವಧಿಯಲ್ಲಿ ಕ್ಷೇತ್ರದ ಜನರು ಬಯಸಿದ ರೀತಿ ಕೆಲಸಗಳು ನಡೆದಿಲ್ಲ ಎಂಬ ಮಾತುಗಳು ಇವೆ. ಹೀಗಾಗಿ ಇವುಗಳು ಮಳವಳ್ಳಿಯಲ್ಲಿ ಜೆಡಿಎಸ್‌ಗೆ ಹಿನ್ನಡೆ ಆಗಬಹುದು. ಇವುಗಳನ್ನು ಹೊರತುಪಡಿಸಿ ಅನ್ನದಾನಿಗೆ ಶಕ್ತಿ ಅಂದ್ರೆ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು. ಅಲ್ಲದೇ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸಂಬಂಧ ಅನ್ನದಾನಿಗೆ ಇರುವುದು ದೊಡ್ಡ ಪ್ಲಸ್ ಆಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ

    kolkata vote

    2018ರಲ್ಲಿ 76,278 ಮತಗಳನ್ನು ತೆಗೆದುಕೊಂಡು ಸೋಲಿನ ಮುಖಭಂಗ ಎದುರಿಸಿದ್ದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯಡ ನರೇಂದ್ರಸ್ವಾಮಿ ಈ‌ ಬಾರಿ ಗೆದ್ದೆ ಗೆಲ್ಲಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ. ನರೇಂದ್ರಸ್ವಾಮಿ ಅವರ ವೈಖರಿಯ ಬಗ್ಗೆ ಸ್ವಪಕ್ಷೀಯರಲ್ಲಿ ಅಸಮಾಧಾನ ಇರುವುದು ದೊಡ್ಡ ಡ್ಯಾಮೇಜ್. ಜೊತೆಗೆ ನರೇಂದ್ರಸ್ವಾಮಿ ಕಳೆದ ಚುನಾವಣೆಯಲ್ಲಿ ಸೋತಾಗಿನಿಂದ ಕ್ಷೇತ್ರದಲ್ಲಿ ಹೆಚ್ಚು ಆಕ್ಟೀವ್ ಆಗದೇ ಇರುವುದು ಒಂದಷ್ಟು ಹೊಡೆತ ಬೀಳಬಹುದು. ಇನ್ನೂ ಇವರ ಪ್ಲಸ್ ಪಾಯಿಂಟ್, ಸದ್ಯ ಹಾಲಿ‌ ಇರುವ ಜೆಡಿಎಸ್ ಶಾಸಕ ಹೆಚ್ಚಿನ ಕೆಲಸ ಮಾಡದೇ ಇರುವುದು. ಸಿದ್ದರಾಮಯ್ಯ ಮೇಲೆ ಪ್ರೀತಿ ಇರುವ ಮತದಾರರು ಹೆಚ್ಚಿರುವುದು. ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯಕ್ಕಿಂತ ಹೆಚ್ಚಿರುವ ಇತರೆ ಸಮುದಾಯದ ಮತಗಳು‌ ಇವರಿಗೆ ವರದಾನ ಆಗಬಹುದು.

    ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿ ಎಂದು‌ ಮುನಿರಾಜು ಅವರನ್ನು ಘೋಷಣೆ ಮಾಡಿದೆ. ಮುನಿರಾಜು ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯನಾಗಿದ್ದು,‌ 2013ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ 26,397 ಮತಗಳನ್ನು ಪಡೆದಿದ್ದರು. ಮಳವಳ್ಳಿಯಲ್ಲಿ ಬಿಜೆಪಿಗೆ ಮೈನಸ್‌ ಅಂದ್ರೆ ಇಲ್ಲಿ ತಳಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಟ್ರಾಂಗ್ ಇರದೇ ಇರುವುದು. ಆದ್ರೆ ಇದೀಗ ದಿನ ಕಳೆದ ಹಾಗೆ ಪಕ್ಷವು ಸಹ ಇಲ್ಲಿ ಗಟ್ಟಿಯಾಗುತ್ತಿದೆ. ಮುನಿರಾಜು ಅವರ ಫೇಸ್‌ವ್ಯಾಲ್ಯೂ ಇಲ್ಲಿ ಚೆನ್ನಾಗಿ ಇದೆ. ಲಿಂಗಾಯತ ಮತಗಳು ಮಂಡ್ಯ ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ‌ ಹೋಲಿಸಿದರೆ ಇಲ್ಲಿ‌ ಚೆನ್ನಾಗಿ ಇವೆ. ಇಬ್ಬರು ನಾಯಕರನ್ನು ನೋಡಿರುವ ಮತದಾರರು ಹೊಸ ಮುಖಬೇಕು ಅಂತಾ ಸಹ ಬಯಸುತ್ತಿರುವುದು ಬಿಜೆಪಿಗೆ ವರದಾನವಾಗಲಿದೆ. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ

    ಮತದಾರ ಪ್ರಭುವಿನ ಚಿತ್ತ ಯಾರತ್ತ?
    ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ನೋಡುವುದಾದರೆ ಈ‌ ಬಾರಿ ಮಳವಳ್ಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳು‌ ದಟ್ಟವಾಗಿವೆ‌. ಮತದಾರರ ಪ್ರಭು ನಮಗೆ ಹಳೆಯ ಶಾಸಕ ಜೆಡಿಎಸ್‌ ಅಭ್ಯರ್ಥಿ ಅನ್ನದಾನಿ ಬೇಕು ಎನ್ನುತ್ತಾನಾ ಅಥವಾ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಸೂಕ್ತ ಎನ್ನುತ್ತಾನಾ. ಇಬ್ಬರು ಬೇಡಾ ಈ‌ ಬಾರಿ ಬಿಜೆಪಿ ಅಭ್ಯರ್ಥಿ ಮುನಿರಾಜುಗೆ ಅವಕಾಶ ನೀಡೋಣಾ ಎನ್ನುತ್ತಾನಾ ಕಾದುನೋಡಬೇಕಿದೆ.