Tuesday, 21st May 2019

Recent News

15 mins ago

ಮಳೆಗಾಲ ನೆನಪಿಸುವಂತೆ ಕೊಡಗಿನಲ್ಲಿ ಗುಡುಗು ಸಹಿತ ಭಾರೀ ಮಳೆ

ಮಡಿಕೇರಿ: ಮಂಗಳವಾರ ಮಧ್ಯಾಹ್ನದ ಬಳಿಕ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾಗುತ್ತಿದ್ದು, ಅನಿರೀಕ್ಷಿತ ಮಳೆಗೆ ಪ್ರಯಾಣಿಕರು ಮತ್ತು ಸವಾರರು ಪರದಾಡುತ್ತಿದ್ದಾರೆ. ಮಳೆಗಾಲ ನೆನಪಿಸುವಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಕೊಡಗು, ಚಾಮರಾಜನಗರ ಹಾಗೂ ಹಾಸನದಲ್ಲಿ ಮೇ 24 ಮತ್ತು 25ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇಲ್ಮೈ ಸುಳಿಗಾಳಿ ಹಾಗೂ ಗಾಳಿಯ ಒತ್ತಡ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡು ಭಾಗದ […]

1 day ago

ಮಾಲು ಸಮೇತ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದ!

ಮಡಿಕೇರಿ: ಅಕ್ರಮವಾಗಿ ಮಾರಾಟ ಮಾಡಲು ಲಾಟರಿಯನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಸೈನಾಫ್ (34) ಬಂಧಿತ ವ್ಯಕ್ತಿ. ಈತನನ್ನು ವಿಶೇಷ ಅಪರಾಧ ಪತ್ತೆದಳದ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದಾರೆ. ಈತ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಮೆಟ್ನಹಳ್ಳ ನಿವಾಸಿ ಮೊಹಮ್ಮದ್ ಎಂಬವರ ಮಗ ಎಂದು ತಿಳಿದುಬಂದಿದೆ. ಬಂಧಿತ...

ಸಿಎಂ ರೆಸಾರ್ಟ್ ವಾಸ್ತವ್ಯ ಬಗ್ಗೆ ಸಾ.ರಾ ಮಹೇಶ್ ಸ್ಪಷ್ಟನೆ

1 week ago

ಮಡಿಕೇರಿ: ಭೀಕರ ಬರಗಾಲದ ನಡುವೆಯೇ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿರುವ ಇಬ್ಬನಿ ರೆಸಾರ್ಟ್ ಗೆ ಹೋಗಿದ್ಯಾಕೆ? ಈ ಬಗ್ಗೆ ಜೆಡಿಎಸ್ ಸಚಿವರು ತಮ್ಮದೇ ವ್ಯಾಖ್ಯಾನ ಕೊಡುತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಸಾರಾ ಮಹೇಶ್, ಮುಖ್ಯಮಂತ್ರಿ ಇರಬಹುದು, ಸಚಿವರೇ ಇರಬಹುದು. ಎಲ್ಲರಿಗೂ ತಮ್ಮದೇ...

ಪತ್ನಿ, ಪುತ್ರನ ಜೊತೆಗೆ 2 ದಿನ ಸಿಎಂ ರೆಸಾರ್ಟ್ ವಾಸ್ತವ್ಯ!

1 week ago

– ರೆಸಾರ್ಟ್ ಒಳಗಡೆ ಮೊಬೈಲ್ ಜಾಮರ್ – ಶುಕ್ರವಾರ ರಾತ್ರಿ ರೆಸಾರ್ಟ್ ತಲುಪಿದ ಸಿಎಂ ಕುಟುಂಬ ಮಡಿಕೇರಿ: ಪುತ್ರನ ನಿಖಿಲ್ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದ ಸಿಎಂ ಎಲೆಕ್ಷನ್ ಮುಗಿದು 15 ದಿನ ಕಳೆದರೂ ರಿಲ್ಯಾಕ್ಸ್ ಮೂಡ್‍ನಿಂದ ಹೊರಬರುವ ಲಕ್ಷಣ...

ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ – ಮನೆ ಖಾಲಿ ಮಾಡ್ತಿರುವ ಮಂದಿಗೆ ಬಾಡಿಗೆ ಮನೆಗಳೇ ಸಿಗ್ತಿಲ್ಲ

2 weeks ago

ಮಡಿಕೇರಿ: ಕಳೆದ ವರ್ಷ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಕೊಡಗು ಜಿಲ್ಲೆಯನ್ನು ಅಕ್ಷರಶಃ ನೀರಿನಲ್ಲಿ ಮುಳುಗಿಸಿತ್ತು. ಆದರೆ ಈಗ ಮತ್ತೆ ಕೊಡಗಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಶತಮಾನದಲ್ಲಿ ಕಂಡು ಕೇಳರಿಯದ ಮಳೆಗೆ ಮಂಜಿನ ನಗರಿಯ ಜನತೆ ತತ್ತರಿಸಿ ಹೋಗಿದ್ದರು. ಮಡಿಕೇರಿ ನಗರದ ಸುತ್ತಮುತ್ತಲಿರುವ...

ಮಡಿಕೇರಿ ರೆಸಾರ್ಟಿನಲ್ಲಿ ಪುತ್ರನ ಜೊತೆ ಸಿದ್ದರಾಮಯ್ಯ ವಿಶ್ರಾಂತಿ!

2 weeks ago

ಮಡಿಕೇರಿ: ಲೋಕಸಭಾ ಚುನಾವಣೆಯ ಬಳಿಕ ಸಿಎಂ ಉಡುಪಿಯಲ್ಲಿ ವಿಶ್ರಾಂತಿ ಪಡೆದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಸಮೀಪದ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿ ಮೈಸೂರು ರಸ್ತೆಯಲ್ಲಿರುವ ಇಬ್ಬನಿ ರೆಸಾರ್ಟಿಗೆ ಭಾನುವಾರ ಸಂಜೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ...

ಮಳೆಗೆ ಹೆದರಿ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಸೇರುತ್ತಿರುವ ಕೊಡಗು ಸಂತ್ರಸ್ತರು

2 weeks ago

ಮಡಿಕೇರಿ: ಈ ಬಾರಿಯ ಮಳೆಯಿಂದಾಗಿ ಮತ್ತೆ ಮನೆಗಳಿಗೆ ಹಾನಿ ಆಗಬಹುದು ಎಂದು ಆತಂಕಕ್ಕೆ ಒಳಗಾಗಿರುವ ಮಂಜಿನ ನಗರಿ ಮಡಿಕೇರಿಯ ಕೆಲವು ಸಂತ್ರಸ್ತರು, ಅಪಾಯದ ಪರಿಸ್ಥಿತಿಯಲ್ಲಿರುವ ತಮ್ಮ ಸ್ವಂತ ಮನೆಗಳನ್ನು ಸ್ವಯಂ ಪ್ರೇರಿತರಾಗಿ ಖಾಲಿ ಮಾಡಿ ಬಾಡಿಗೆ ಮನೆಗೆ ತೆರಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ...

ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ!

3 weeks ago

ಮಡಿಕೇರಿ: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಎಂಬವರು ಕಿರುಕುಳ ನೀಡಿದ್ದಾರೆ. ಗುರುವಾರ ರೆಸಾರ್ಟ್ ನಲ್ಲಿ...