Thursday, 19th July 2018

Recent News

1 week ago

ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯಿತಿ ಬಸ್ ಪಾಸ್ ರದ್ದಾಗಿದೆ. ಆರ್ಥಿಕ ಹೊರೆಯಿಂದ ಕಂಗಾಲಾಗಿರುವ ಬಿಎಂಟಿಸಿಯಿಂದ ನಷ್ಟ ಕಡಿಮೆ ಮಾಡಲು ರಿಯಾಯಿತಿ ಪಾಸ್ ಅನ್ನು ರದ್ದುಗೊಳಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬಿಬಿಎಂಪಿ ಸಾರ್ವಜನಿಕರಿಗೆ ನೀಡುವ ಮಾಸಿಕ ಪಾಸ್ ಗಳನ್ನು ಪಡೆಯುವಂತೆ ನೌಕರರಿಗೆ ಸೂಚಿಸಿದೆ. ಬಿಎಂಟಿಸಿಯಿಂದ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ರವಾನೆಯಾಗಿದೆ. 2011-2012 ರಿಂದ 2016-17ರವರೆಗಿನ ಅವಧಿಯಲ್ಲಿ ಬಿಎಂಟಿಸಿಗೆ […]

1 week ago

ಆಕಸ್ಮಿಕ ಅಗ್ನಿ ಅವಘಡ: 300 ಕ್ವಿಂಟಾಲ್ ಹತ್ತಿ ಭಸ್ಮ

ಹಾವೇರಿ: ನಗರದ ಹೊರವಲಯದಲ್ಲಿರುವ ಜಿನ್ನಿಂಗ್ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾಗಿದೆ. ನಗರದ ಫಕ್ಕೀರಗೌಡ ಹೊಸಗೌಡರ ಎಂಬವರಿಗೆ ಸೇರಿದ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಫ್ಯಾಕ್ಟರಿಯಲ್ಲಿ ಶೇಖರಿಸಿಟ್ಟಿದ್ದ ಸುಮಾರು 300 ಕ್ವಿಂಟಾಲ್ ಹತ್ತಿ ಸುಟ್ಟು ಕರಕಲಾಗಿದೆ. ಸುಮಾರು ಹದಿನೈದು ಲಕ್ಷ ರೂಪಾಯಿ ಮೌಲ್ಯದ...

ಮೀನುಗಾರರ ಬೋಟ್‍ನಲ್ಲಿ ಅಡುಗೆ ಮಾಡುವಾಗ ಬೆಂಕಿ ಅವಘಡ

7 months ago

ಉಡುಪಿ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಹಿಮಾಲಯ ಎಂಬ ಹೆಸರಿನ ಪರ್ಸಿನ್ ಬೋಟು ಬೆಂಕಿಗಾಹುತಿಯಾಗಿದೆ. ಅನ್ವರ್ ಸಾಹೇಬ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ....

ಭತ್ತದ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು- 3 ಬೃಹತ್ ಬಣವೆಗಳು ಸಂಪೂರ್ಣ ಭಸ್ಮ

7 months ago

ತುಮಕೂರು: ಕಿಡಿಗೇಡಿಗಳು ಭತ್ತದ ಬಣವೆಗೆ ಬೆಂಕಿ ಇಟ್ಟ ಪರಿಣಾಮ ಮೂರು ಬೃಹತ್ ಬಣವೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರಿನಲ್ಲಿ ನಡೆದಿದೆ. ಗೋವಿಂದಯ್ಯ, ನಟರಾಜ ಹಾಗೂ ಚಂದ್ರಪ್ಪ ಎನ್ನುವವರಿಗೆ ಈ ಬಣವೆ ಸೇರಿದೆ. ಪ್ರತ್ಯೇಕ ಸ್ಥಳದಲ್ಲಿ ಕೃತ್ಯ...

ಸರಳ ಬಹುಮತವೂ ಸಿಗಲ್ಲ, ಗುಜರಾತ್‍ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ರಾಜ್ಯಸಭಾ ಸದಸ್ಯ

7 months ago

ಪುಣೆ: ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಹೇಳಿದರೆ, ಬಿಜೆಪಿಯ ರಾಜ್ಯ ಸಭಾ ಸದಸ್ಯ ಸಂಜಯ್ ಕಾಕಡೆ ಮಾತ್ರ ನಮ್ಮ ಪಕ್ಷ ಸೋಲಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ನಮ್ಮ...

3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

9 months ago

– ಹಳಿ ತಪ್ಪಿದ ಅನ್ನದಾತರ ಬದುಕು ಕಲಬುರಗಿ: ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆ. ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಭಾನುವಾರದಂದು ಲೋಕಾರ್ಪಣೆ ಮಾಡಲಿದ್ದಾರೆ. ಇದು ಉತ್ತರ ಕರ್ನಾಟಕದ ಮಂದಿಗೆ ಸಂತಸದ ಸುದ್ದಿಯಾದ್ರೂ...

ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

9 months ago

ಮಂಡ್ಯ: ಸತತವಾಗಿ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಪಡಿತರ ಅಕ್ಕಿ ಮತ್ತು ಬೇಳೆ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಆರ್ ಪೇಟೆ ಸೊಸೈಟಿಯಿಂದ ನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಾರಿಯಲ್ಲಿ...

ಕ್ಯಾಂಟರ್ ಪಲ್ಟಿಯಾಗಿ 5 ಸಾವಿರ ಕೆ.ಜಿ ಟೊಮೆಟೋ ರಸ್ತೆಪಾಲು- ಟೋಲ್ ಸಿಬ್ಬಂದಿ ವಿರುದ್ಧ ರೈತರ ಆಕ್ರೋಶ

10 months ago

ಮಂಡ್ಯ: ಟೊಮೆಟೋ ತುಂಬಿಕೊಂಡು ಸಾಗಿಸುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿ ಬಿದ್ದು ಸುಮಾರು 5 ಸಾವಿರ ಕೆ.ಜಿ ಟೊಮೆಟೋ ರಸ್ತೆ ಪಾಲಾದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದೆ.   ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಚನ್ನರಾಯಪಟ್ಟಣದಿಂದ...