Tuesday, 22nd October 2019

Recent News

5 months ago

ನಾನು ಮಾತನಾಡಲ್ಲ – ಮಾಧ್ಯಮಗಳ ಪ್ರಶ್ನೆಗೆ ಮೌನಕ್ಕೆ ಶರಣಾದ ಸಿಎಂ

ಬೆಂಗಳೂರು: ಇಂದು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿಎಂ ಮೌನಕ್ಕೆ ಜಾರಿದ್ದು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ತಮ್ಮ ಮುನಿಸನ್ನು ಮುಂದುವರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಅವರ ಪ್ರತಿಕ್ರಿಯೆ ಕೇಳಿದ್ದಾಗ ಕೈಯಲ್ಲೇ ಸನ್ನೇ ಮಾಡಿ ಮಾತನಾಡಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ಮೇಲೆ ಸಿಎಂ ಮುನಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಂಡ್ಯ ರಾಜಕಾರಣದ ಬಗ್ಗೆ ಪ್ರಶ್ನಿಸಿದ್ದಾಗಲೂ ಕೂಡ ಸಿಎಂ ಗರಂ ಆಗಿದ್ದರು. ಮಾಧ್ಯಮಗಳಿಗೆ ಈಗ ಉತ್ತರ ನೀಡಲ್ಲ. ಮೇ 23ಕ್ಕೆ […]

5 months ago

ಜನರನ್ನ ವಶೀಕರಣ ಮಾಡ್ಕೊಂಡು ಮೋದಿ ಗೆದ್ದಿದ್ದಾರೆ – ದೋಸ್ತಿ ವಿರುದ್ಧ ಆಂಜನೇಯ ಕಿಡಿ

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲವೆಂದು ಮಾಜಿ ಸಚಿವ ಹಾಗೂ ಸಿದ್ದರಾಮಯ್ಯನವರ ಆಪ್ತ ಹೆಚ್. ಆಂಜನೇಯ ಅವರು ದೋಸ್ತಿ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ. ಚಿತ್ರದುರ್ಗ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಮಾಜಿ ಸಂಸದ ಚಂದ್ರಪ್ಪನೊಂದಿಗೆ ಇಂದು ಆಂಜನೇಯ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಆಂಜನೇಯ ಅವರು...

ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ- ಆರ್‌ಎಸ್‌ಎಸ್

5 months ago

ನವದೆಹಲಿ: ಲೋಕಸಮರದಲ್ಲಿ ಸ್ಪಷ್ಟ ಬಹುಮತ ಪಡೆದು ಭರ್ಜರಿ ಗೆಲುವನ್ನು ಬಿಜೆಪಿ ಸಾಧಿಸಿರುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ. ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ ಎಂದು ಆರ್‌ಎಸ್‌ಎಸ್ ವಿಭಿನ್ನವಾಗಿ ಬಣ್ಣಿಸಿದೆ. ಕಮಲದ ಈ ಭರ್ಜರಿ ಗೆಲುವಿಗೆ ಕಾರಣರಾದ...

ಶಿವಕುಮಾರ ಉದಾಸಿ ಹ್ಯಾಟ್ರಿಕ್ ಸಾಧನೆ

5 months ago

ಹಾವೇರಿ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ 1,40,882 ಮತಗಳ ಅಂತರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶಿವಕುಮಾರ ಉದಾಸಿ ಅವರು 6,83.660 ಮತಗಳನ್ನು ಪಡೆದಿದ್ದು, ಡಿ.ಆರ್.ಪಾಟೀಲ್ 5,42,778 ಮತಗಳನ್ನು ಗಳಿಸಿದ್ದಾರೆ. ಹಾವೇರಿಯಲ್ಲಿ ಒಟ್ಟು 8...

ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

5 months ago

ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್‍ಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಭರ್ಜರಿ ಜಯ ಗಳಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು...

ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

5 months ago

ಕೋಲಾರ: ಸತತ 7 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮೋದಿ ಅಲೆಯಿಂದಾಗಿ ಸೋತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ 7 ಬಾರಿ ಗೆಲುವನ್ನು ಸಾಧಿಸಿದಂತೆ ಈ ಬಾರಿ...

4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

5 months ago

ಕಾರವಾರ: ಕಳೆದ ಐದು ಬಾರಿಯೂ ಹಿಂದುತ್ವದ ಅಲೆಯಿಂದ ಜಯಗಳಿಸಿದ್ದ ಅನಂತಕುಮಾರ್ ಅವರು ಎರಡನೇ ಬಾರಿ ಮೋದಿ ಅಲೆ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ. ಹೌದು. ಉತ್ತರ ಕನ್ನಡದಲ್ಲಿ ಒಟ್ಟೂ 11,54,390...

ಕೊಪ್ಪಳದಲ್ಲಿ ಹಿಟ್ನಾಳ ಹಿಟ್‍ಔಟ್ – ಸಂಗಣ್ಣ ಕರಡಿಗೆ ಭರ್ಜರಿ ಜಯ

5 months ago

ಕೊಪ್ಪಳ: ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರನ್ನು ಹಿಂದಿಕ್ಕಿ ಭರ್ಜರಿ ಜಯ ಗಳಿಸಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಈ ಪ್ರತಿಷ್ಠೆಯ ಓಟದಲ್ಲಿ...